News Kadaba Desk

ಮಂಗಳೂರು: ಲಾರಿ – ಬೈಕ್ ಢಿಕ್ಕಿ ► ಸವಾರ ಮೃತ್ಯು, ಸಹ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.29. ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಪಂಪ್‌ವೆಲ್ ನಲ್ಲಿ ಭಾನುವಾರದಂದು ನಡೆದಿದೆ. ಮೃತ ಸವಾರನನ್ನು ತೊಕ್ಕೊಟ್ಟು ಸಮೀಪದ ಕುಂಪಲ ಮೂರುಕಟ್ಟೆ ನಿವಾಸಿ ಅಕ್ಷಯ್ (26) ಎಂದು ಗುರುತಿಸಲಾಗಿದೆ. ಸಹ ಸವಾರ ಪುನೀತ್ ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಸರಕು ಸಾಗಾಟದ ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ […]

ಮಂಗಳೂರು: ಲಾರಿ – ಬೈಕ್ ಢಿಕ್ಕಿ ► ಸವಾರ ಮೃತ್ಯು, ಸಹ ಸವಾರ ಗಂಭೀರ Read More »

ಕರಾವಳಿ

ನಾಳೆ (ಎಪ್ರಿಲ್ 30) ದ್ವಿತೀಯ ಪಿಯುಸಿ ಫಲಿತಾಂಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.29. ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವು ಏ.30 ಸೋಮವಾರದಂದು ಪ್ರಕಟವಾಗಲಿದ್ದು, ಮೇ 01 ರಂದು ಕಾಲೇಜುಗಳಲ್ಲಿ ಫಲಿತಾಂಶದ ಸಂಪೂರ್ಣ ವಿವರ ದೊರೆಯಲಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಒಟ್ಟು 6.80 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, ಉತ್ತರ ಪತ್ರಿಕೆ ಮೌಲ್ಯಮಾಪನ ಪೂರ್ಣಗೊಂಡಿದೆ. ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಿಕೊಂಡಿದ್ದು, ಫಲಿತಾಂಶವನ್ನು ಶಿಕ್ಷಣ ಇಲಾಖೆಯ ವೆಬ್‌ಸೈಟ್

ನಾಳೆ (ಎಪ್ರಿಲ್ 30) ದ್ವಿತೀಯ ಪಿಯುಸಿ ಫಲಿತಾಂಶ Read More »

ಕರ್ನಾಟಕ

ಕಾಪು: ಅಲೆಗಳ ಸೆಳೆತಕ್ಕೆ ಯುವಕ ಸಮುದ್ರ ಪಾಲು

(ನ್ಯೂಸ್ ಕಡಬ) newskadaba.com ಕಾಪು, ಎ.29. ಪ್ರವಾಸಕ್ಕೆಂದು ಆಗಮಿಸಿದ್ದ ತಂಡವೊಂದು ನೀರಿನಲ್ಲಿ ಆಡುತ್ತಿದ್ದಾಗ ಯುವಕನೋರ್ವ ನೀರು ಪಾಲಾದ ಘಟನೆ ಕಾಪು ಬೀಚ್ ನಲ್ಲಿ ಶನಿವಾರದಂದು ಸಂಜೆ ನಡೆದಿದೆ. ನೀತು ಪಾಲಾದ ಯುವಕನನ್ನು ಕಿಶೋರ್ (17) ಎಂದು ಗುರುತಿಸಲಾಗಿದೆ. ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರ ತಂಡ ಕಾಪು ಬೀ‍ಚ್ ನಲ್ಲಿ ಸಮುದ್ರಕ್ಕಿಳಿದು ನೀರಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕಿಶೋರ್ ಹಾಗೂ ಭರತ್ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಕಿಶೋರ್ ನೀರು ಪಾಲಾಗಿದ್ದು, ಭರತ್ ನನ್ನು ರಕ್ಷಿಸಲಾಗಿದೆ‌. ಕಿಶೋರ್ ದೇಹಕ್ಕೆ

ಕಾಪು: ಅಲೆಗಳ ಸೆಳೆತಕ್ಕೆ ಯುವಕ ಸಮುದ್ರ ಪಾಲು Read More »

ಕರಾವಳಿ

ಕಡಬ: ಜೀವಾವಧಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ► ಚಿಕ್ಕಮಗಳೂರಿನಿಂದ ಬಂದು ಕಡಬದಲ್ಲಿ ಮದುವೆಯಾಗಿದ್ದ ಕೊಲೆ ಆರೋಪಿ

(ನ್ಯೂಸ್ ಕಡಬ) newskadaba.com ಕಡಬ, ಎ.28. ಕೊಲೆ‌ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ 2006 ರಲ್ಲಿ ಪೆರೋಲ್ ಮೇಲೆ ಬಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಠಾಣಾ ಪೊಲೀಸರ ಸಹಕಾರದೊಂದಿಗೆ ಚಿಕ್ಕಮಗಳೂರು ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಠಾಣಾ ವ್ಯಾಪ್ತಿಯಲ್ಲಿ 2002 ರಲ್ಲಿ ಕೊಲೆ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ಮಹಮ್ಮದ್ ಕಾಸಿಂ ಎಂಬವರ ಪುತ್ರ ಅಬ್ದುಲ್ ಘನಿ (40) ಪೆರೋಲ್ ಮೇಲೆ ಬಂದಿದ್ದು, ಆ ನಂತರ

ಕಡಬ: ಜೀವಾವಧಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ► ಚಿಕ್ಕಮಗಳೂರಿನಿಂದ ಬಂದು ಕಡಬದಲ್ಲಿ ಮದುವೆಯಾಗಿದ್ದ ಕೊಲೆ ಆರೋಪಿ Read More »

ಕರಾವಳಿ

ಮುಂಬೈನಲ್ಲಿ ರೈಲಿನಿಂದ ಬಿದ್ದು ಮಂಗಳೂರಿನ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಎ.28. ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಂಗಳೂರಿನ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಮುಂಬಯಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೊಣಾಜೆ ಸಮೀಪದ ಕೋಡಿಜಾಲು ನಿವಾಸಿ ಮುಹಮ್ಮದ್ ಹನೀಫ್ ಕೋಡಿಜಾಲ್(42) ಎಂದು ಗುರುತಿಸಲಾಗಿದೆ. ಹನೀಫ್ ಕಳೆದ ಹಲವು ವರ್ಷಗಳಿಂದ ಮುಂಬೈಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಇತ್ತೀಚೆಗೆ ತನ್ನ ಕುಟುಂಬಸ್ಥರನ್ನು ಮುಂಬೈಗೆ ಕರೆಸಿಕೊಂಡಿದ್ದರು. ತನ್ನ ಕುಟುಂಬಸ್ಶರ ಜೊತೆ ಸುತ್ತಾಡಿದ ನಂತರ ತನ್ನ ರೂಂನಲ್ಲಿ ಬಿಟ್ಟು ಇನ್ನೊಂದು ಕಡೆಗೆ ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಬಾಗಿಲ ಬಳಿ

ಮುಂಬೈನಲ್ಲಿ ರೈಲಿನಿಂದ ಬಿದ್ದು ಮಂಗಳೂರಿನ ವ್ಯಕ್ತಿ ಮೃತ್ಯು Read More »

ಕರಾವಳಿ

ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಹೈಜಾಕ್‌ ಮಾಡಿದ ನಾಲ್ವರು ದುಷ್ಕರ್ಮಿಗಳು ► ಬಸ್ಸನ್ನು ಅಡಗಿಸಿ ಇಟ್ಟಿದ್ದಾದರೂ ಎಲ್ಲಿ ಎಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.28. ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಹೈಜಾಕ್ ಮಾಡಿದ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಮೈಸೂರ್‌ ರೋಡ್‌ನ‌ ಆರ್‌ವಿ ಕಾಲೇಜ್‌ ಬಳಿ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳ ತಂಡ ಚಾಲಕನನ್ನು ಕೆಳಗಿಳಿಸಿ ಬಸ್ಸನ್ನು ಹೈಜಾಕ್‌ ಮಾಡಿ ಆರ್‌.ಆರ್‌.ನಗರದ ಗೋದಾಮೊಂದರಲ್ಲಿ ಇರಿಸಿದ್ದಾರೆ. ಬಸ್‌ ಗೋದಾಮಿನಲ್ಲಿ ಇರುವುದನ್ನು ಕಂಡು ಕಂಗಾಲಾದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಪಶ್ಚಿಮ

ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಹೈಜಾಕ್‌ ಮಾಡಿದ ನಾಲ್ವರು ದುಷ್ಕರ್ಮಿಗಳು ► ಬಸ್ಸನ್ನು ಅಡಗಿಸಿ ಇಟ್ಟಿದ್ದಾದರೂ ಎಲ್ಲಿ ಎಂದು ಗೊತ್ತೇ…? Read More »

ಕರ್ನಾಟಕ

ಜಿಲ್ಲೆಯಲ್ಲಿ 8 ಕ್ಷೇತ್ರಗಳಿಗೆ 58 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

(ನ್ಯೂಸ್ ಕಡಬ) newskadaba.com ಮಂಗಳೂರು ಎ.27. ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿಗೆ ಅಂತಿಮವಾಗಿ 58 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದು, ಅಭ್ಯರ್ಥಿಗಳ ವಿವರ ಇಂತಿವೆ. ಬೆಳ್ತಂಗಡಿ ಕ್ಷೇತ್ರ (6 ಅಭ್ಯರ್ಥಿಗಳು): ಕೆ. ವಸಂತ ಬಂಗೇರ(ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್), ಹರೀಶ್ ಪೂಂಜಾ (ಬಿ.ಜೆ.ಪಿ), ವೆಂಕಟೇಶ್ ಬೆಂಡೆ (ಪಕ್ಷೇತರ), ಜಗನ್ನಾಥ(ಎಂಇಪಿ), ಸೈಯದ್ ಹಸನ್(ಪಕ್ಷೇತರ) ಮೂಡಬಿದ್ರ್ರೆ ಕ್ಷೇತ್ರ (7 ಅಭ್ಯರ್ಥಿಗಳು): ಕೆ. ಅಭಯಚಂದ್ರ(ಕಾಂಗ್ರೆಸ್), ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ), ಜೀವನ್ ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ), ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ), ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ),

ಜಿಲ್ಲೆಯಲ್ಲಿ 8 ಕ್ಷೇತ್ರಗಳಿಗೆ 58 ಅಭ್ಯರ್ಥಿಗಳು ಅಂತಿಮ ಕಣದಲ್ಲಿ Read More »

ಕರಾವಳಿ

ನೆಲ್ಯಾಡಿ: ಮನೆಗೆ ನುಗ್ಗಿದ ಕಳ್ಳರು ► ಒಂದು ಲಕ್ಷ ರೂ. ಹಣದೊಂದಿಗೆ ಪರಾರಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.27. ಯಾರೂ ಇಲ್ಲದ ವೇಳೆ ಮನೆಯ ಒಳನುಗ್ಗಿರುವ ಕಳ್ಳರು ಮನೆಯಲ್ಲಿಟ್ಟಿದ್ದ ಒಂದು ಲಕ್ಷ ಹಣವನ್ನು ಲಪಟಾಯಿಸಿರುವ ಘಟನೆ ಠಾಣಾ ವ್ಯಾಪ್ತಿಯ ನೆಲ್ಯಾಡಿಯಲ್ಲಿ ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ. ನೆಲ್ಯಾಡಿ ಬಸ್ ನಿಲ್ದಾಣ ಬಳಿಯ ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ ಶೇಖ್ ಇಮಾಂ ಸಾಹೇಬ್ ಎಂಬವರು ಕುಟುಂಬ ಸಮೇತ ಬುಧವಾರದಂದು ಪುತ್ತೂರಿನ ಸಂಬಂಧಿಕರ ಮನೆಗೆ ಹೋಗಿದ್ದರು. ಶುಕ್ರವಾರ ಸಂಜೆ ಮನೆಗೆ ಬಂದಾಗ ಮನೆಯಲ್ಲಿಟ್ಟಿದ್ದ ಒಂದು ಲಕ್ಷ ರೂ.ಗಳನ್ನು ಕಳ್ಳರು ದೋಚಿರುವುದು ಬೆಳಕಿಗೆ ಬಂದಿದೆ.

ನೆಲ್ಯಾಡಿ: ಮನೆಗೆ ನುಗ್ಗಿದ ಕಳ್ಳರು ► ಒಂದು ಲಕ್ಷ ರೂ. ಹಣದೊಂದಿಗೆ ಪರಾರಿ Read More »

ಕರಾವಳಿ

ಮರಳು ಸಾಗಾಟದ ಲಾರಿ ಢಿಕ್ಕಿ ► ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಎ.27. ಮರಳು ಸಾಗಾಟದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಶುಕ್ರವಾರದಂದು ನಡೆದಿದೆ. ಮೃತ ಸವಾರನನ್ನು ಕುಂಪಲ ಆಶ್ರಯ ಕಾಲನಿ ನಿವಾಸಿ ವಿನೀತ್ ರಾಜ್(25) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟುವಿನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆಚ್ಚಿನ ಘನ ವಾಹನಗಳು ಇಲ್ಲಿನ ಬಸ್ ನಿಲ್ದಾಣದ ರಸ್ತೆಯಲ್ಲೇ ಸಂಚರಿಸುತ್ತಿದ್ದು, ಇದರಿಂದಾಗಿ ಟಿಪ್ಪರ್ ಬೈಕಿಗೆ ಢಿಕ್ಕಿ ಹೊಡೆದಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ

ಮರಳು ಸಾಗಾಟದ ಲಾರಿ ಢಿಕ್ಕಿ ► ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಎಪ್ರಿಲ್ 30 ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.27. ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೆ ದಿನ ನಿಗದಿಯಾಗಿರುವಂತೆಯೇ ಬಿಜೆಪಿ ಪ್ರಣಾಳಿಕೆ ಎಪ್ರಿಲ್ 30 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ‌. ನಾಲ್ಕು ದಿನಗಳ ಕರ್ನಾಟಕ ಪ್ರವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಕೈಗೊಳ್ಳಬೇಕಾಗಿದ್ದ ಬಳ್ಳಾರಿ ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದಾಗಿದ್ದು, ಶುಕ್ರವಾರ ಸಂಜೆ ಕೊಪ್ಪಳಕ್ಕೆ ಭೇಟಿ ನೀಡಿ ರೋಡ್ ಶೋದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ಪಕ್ಷದ ಪ್ರಣಾಳಿಕೆ ಸಿದ್ಧವಾಗುತ್ತಿದ್ದು, ಎಪ್ರಿಲ್ 30 ರಂದು ಬಿಡುಗಡೆಯಾಗುವ ಸಾಧ್ಯತೆ ಕಂಡುಬಂದಿದೆ.

ಎಪ್ರಿಲ್ 30 ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ Read More »

ಕರ್ನಾಟಕ
Scroll to Top