News Kadaba Desk

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೆರೆನೀರು ► ರಸ್ತೆ ತಡೆಯಿಂದಾಗಿ ಕಿ.ಮೀ. ಗಟ್ಟಲೆ ಸಾಲುಗಟ್ಟಿ‌ ನಿಂತ ವಾಹನಗಳು ► ಉದನೆ ಪೇಟೆ, ಅಡ್ಡಹೊಳೆ ಕಾಲನಿ ಜಲಾವೃತ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.09. ನಿನ್ನೆಯಿಂದ‌ ಸುರಿಯುತ್ತಿರುವ ಭಾರೀ ಮಳೆಗೆ ನೆರೆ ನೀರಿನ ಪ್ರವಾಹ ಹೆಚ್ಚಾಗಿದ್ದು, ನೆರೆ‌ ನೀರು ರಾಷ್ಟ್ರೀಯ ಹೆದ್ದಾರಿಗೆ ಬಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ತಡೆ ಉಂಟಾಗಿದೆ. ಕೆಂಪುಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಉದನೆ ಪೇಟೆ, ಶಿರಾಡಿ ಹಾಗೂ ನೇಲ್ಯಡ್ಕ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೆರೆ ನೀರು ನುಗ್ಗಿದೆ. ಪರಿಣಾಮ ವಾಹನಗಳು ಮುಂದೆ ಸಾಗಲಾರದೆ ಅಲ್ಲಲ್ಲಿ ಕಿ.ಮೀ. ಗಟ್ಟಲೆ ಸಾಲು ನಿಂತಿವೆ. ಅಡ್ಡಹೊಳೆ ಬಳಿ ದಲಿತ ಕಾಲೋನಿಗೆ ನೆರೆ […]

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೆರೆನೀರು ► ರಸ್ತೆ ತಡೆಯಿಂದಾಗಿ ಕಿ.ಮೀ. ಗಟ್ಟಲೆ ಸಾಲುಗಟ್ಟಿ‌ ನಿಂತ ವಾಹನಗಳು ► ಉದನೆ ಪೇಟೆ, ಅಡ್ಡಹೊಳೆ ಕಾಲನಿ ಜಲಾವೃತ Read More »

ಕರ್ನಾಟಕ

ಮೂರು ವರ್ಷಗಳ ಹಿಂದಿನ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ► ಅಂತಿಮ ವರದಿ ಸಲ್ಲಿಸಲಾಗಿದ್ದ ಪ್ರಕರಣಕ್ಕೆ ಮರುಜೀವ ನೀಡಿದ ಉಪ್ಪಿನಂಗಡಿ ಪೊಲೀಸರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.08. ಇಬ್ಬರು ಆರೋಪಿಗಳನ್ನು ಬಂಧಿಸಿ ಮೂರು ವರ್ಷಗಳ ಹಿಂದೆ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸುವ ಮೂಲಕ ನ್ಯಾಯಾಲಯದಲ್ಲಿ `ಸಿ’ ಅಂತಿಮ ವರದಿ ಸಲ್ಲಿಸಲಾಗಿದ್ದ ಪ್ರಕರಣವೊಂದಕ್ಕೆ ಮರುಜೀವ ನೀಡುವುದರೊಂದಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಉಪ್ಪಿನಂಗಡಿ ಪೊಲೀಸರು ಸಾಬೀತುಪಡಿಸಿದ್ದಾರೆ. ನೆಲ್ಯಾಡಿ ಸಮೀಪದ ಗೋಳಿತೊಟ್ಟು ಗ್ರಾಮದ ಹೊಸಮನೆ ನಿವಾಸಿ ಕುಂಞಲಿ ಅಬ್ದುಲ್ ನಾಸೀರ್ ಎಂಬವರ ಮನೆಯಲ್ಲಿ 2015 ಡಿಸೆಂಬರ್ 03 ರಂದು ಲಕ್ಷಾಂತರ ರೂಪಾಯಿ ನಗ- ನಗದು ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಿನಂಗಡಿ ಪೊಲೀಸರು

ಮೂರು ವರ್ಷಗಳ ಹಿಂದಿನ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ► ಅಂತಿಮ ವರದಿ ಸಲ್ಲಿಸಲಾಗಿದ್ದ ಪ್ರಕರಣಕ್ಕೆ ಮರುಜೀವ ನೀಡಿದ ಉಪ್ಪಿನಂಗಡಿ ಪೊಲೀಸರು Read More »

ಕರ್ನಾಟಕ

ನೇರಳಕಟ್ಟೆ: ಚಲಿಸುತ್ತಿದ್ದ ಬಸ್ ಗೆ ಹಿಂದಿನಿಂದ ಕಾರು ಢಿಕ್ಕಿ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.08. ಚಲಿಸುತ್ತಿದ್ದ ಬಸ್ಸಿಗೆ ಹಿಂದಿನಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಬುಧವಾರ ರಾತ್ರಿ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪ ಸಂಭವಿಸಿದೆ. ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಮಹೇಶ್ ಸಂಸ್ಥೆಯ ಖಾಸಗಿ ಬಸ್ ನೇರಳಕಟ್ಟೆ ಸಮೀಪದ ಗಣೇಶ ನಗರ ಎಂಬಲ್ಲಿ ತಲುಪಿದಾಗ ಮಾರುತಿ ಆಲ್ಟೋ ಕಾರು ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ

ನೇರಳಕಟ್ಟೆ: ಚಲಿಸುತ್ತಿದ್ದ ಬಸ್ ಗೆ ಹಿಂದಿನಿಂದ ಕಾರು ಢಿಕ್ಕಿ ► ಇಬ್ಬರಿಗೆ ಗಾಯ Read More »

ಕರಾವಳಿ

ಸುಳ್ಯ: ಹೆದ್ದಾರಿ ಮಧ್ಯದ ಬೃಹತ್ ಗುಂಡಿ ಮುಚ್ಚಿದ ಪೊಲೀಸ್ ಅಧಿಕಾರಿ ► ಲಾಠಿ ಹಿಡಿಯುವ ಕೈ ಹಾರೆ ಹಿಡಿದಾಗ ಹರಿದು ಬಂತು ಪ್ರಶಂಸೆಯ ಸುರಿಮಳೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ.08. ಲಾಠಿ ಹಿಡಿಯುವ ಕೈ ಹಾರೆ ಹಿಡಿದು ರಸ್ತೆಯಲ್ಲಿನ ಬೃಹತ್ ಹೊಂಡವೊಂದನ್ನು ಮುಚ್ಚಿದ ಘಟನೆ ಸುಳ್ಯದಲ್ಲಿ ಬುಧವಾರದಂದು ನಡೆದಿದೆ. ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯದಿಂದ ಸಂಪಾಜೆಯ ಮಧ್ಯೆ ಬರುವ ಪೆರಾಜೆಯಲ್ಲಿ ಅನೇಕ ದಿನಗಳಿಂದ ಮರಣಗುಂಡಿಯೊಂದು ಬಾಯ್ದೆರೆದಿತ್ತು. ಸ್ಪಂದಿಸಬೇಕಾಗಿದ್ದವರು ಸುಮ್ಮನಿದ್ದುದರಿಂದ ಪ್ರಯಾಣಿಕರು ಕಷ್ಟ ಪಡುತ್ತಿದ್ದರು. ಸಂಚಾರದಲ್ಲಿ ಸಂಚಕಾರ ಎದುರಾಗಿರುವುದನ್ನರಿತ ಸುಳ್ಯ ಠಾಣಾ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಸ್ವತಃ ಕೈಯಲ್ಲಿ ಹಾರೆ ಹಿಡಿದು ಕಾರ್ಯಾಚರಣೆಗೆ ಇಳಿದಿದ್ದಾರೆ. ಲಾಠಿ ಹಿಡಿಯುವ ಕೈ ಹಾರೆ

ಸುಳ್ಯ: ಹೆದ್ದಾರಿ ಮಧ್ಯದ ಬೃಹತ್ ಗುಂಡಿ ಮುಚ್ಚಿದ ಪೊಲೀಸ್ ಅಧಿಕಾರಿ ► ಲಾಠಿ ಹಿಡಿಯುವ ಕೈ ಹಾರೆ ಹಿಡಿದಾಗ ಹರಿದು ಬಂತು ಪ್ರಶಂಸೆಯ ಸುರಿಮಳೆ Read More »

ಕರಾವಳಿ

ಕಡಬ ನೂತನ ತಾಲೂಕು ಉದ್ಘಾಟನೆ ಮುಂದೂಡಿಕೆ ► ಕಾರಣವೇನು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಆ.08. ಹಲವು ಬಾರಿ ಉದ್ಘಾಟನೆಗೆ ದಿನಾಂಕ ನಿಗದಿಗೊಂಡು ಕೊನೆಯ ಕ್ಷಣದಲ್ಲಿ ರದ್ದಾಗುತ್ತಿದ್ದ ಕಡಬ ತಾಲೂಕು ಉದ್ಘಾಟನಾ ದಿನಾಂಕವು ಈ ಬಾರಿಯೂ ರದ್ದಾಗಿದ್ದು, ತಾಲೂಕಿನ ಬಗ್ಗೆ ಹಲವು ಕನಸನ್ನಿಟ್ಟುಕೊಂಡಿದ್ದ ಜನರನ್ನು ನಿರಾಸೆಗೊಳಿಸಿದೆ. ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು ನೂತನ ಕಡಬ ತಾಲೂಕು ಉದ್ಘಾಟನೆಗೊಳ್ಳಲಿದ್ದು, ಕೊನೆಗೂ ಕಡಬ ಪರಿಸರದ ಜನರ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ ಎನ್ನಲಾಗಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯವರು ಜಂಟಿಯಾಗಿ ಹೇಳಿಕೆ ನೀಡಿದ್ದರು. ಆದರೆ ಕಡಬ ತಾಲೂಕು

ಕಡಬ ನೂತನ ತಾಲೂಕು ಉದ್ಘಾಟನೆ ಮುಂದೂಡಿಕೆ ► ಕಾರಣವೇನು ಗೊತ್ತೇ..? Read More »

ಕರ್ನಾಟಕ

ಮರ್ದಾಳ ಶಾಲೆಯಲ್ಲಿ ಮಳೆ ನೀರು ಕೊಯ್ಲು ಹಾಗೂ ಜಲ ಮರುಪೂರಣ ಘಟಕದ ಉದ್ಘಾಟನೆ

ಕಡಬ: ಮಂಗಳೂರು ವಿಜಯ ಗ್ರಾಮೀಣ ಪ್ರತಿಷ್ಠಾನ, ಮರ್ದಾಳ ವಿಜಯ ಗ್ರಾಮೀಣ ಪ್ರತಿಷ್ಠಾನ ವತಿಯಿಂದ ಬಂಟ್ರ ಮರ್ದಾಳ ಶಾಲೆಯಲ್ಲಿ ಮಳೆ ನೀರು ಕೊಯ್ಲು ಹಾಗೂ ಜಲ ಮರುಪೂರಣ ಘಟಕವನ್ನು ದ್ಘಾಟಿಸಲಾಯಿತು. ಪ್ರಗತಿಪರ ಕೃಷಿಕ ಸುಭಾಷ್ ರೈ ಉದ್ಘಾಟಿಸಿ ಮಾತನಾಡಿ, ಜಲ ಜೀವನಕ್ಕೆ ಮೂಲಾಧಾರ. ಜಲ ಸಂರಕ್ಷಣೆ ಮಾಡುವುದು ನಮ್ಮ ಪೀಳಿಗೆಗೆ ನೀಡುವ ಮಹತ್ತರ ಕೊಡುಗೆಯಾಗಿದೆ. ಈ ನಿಟ್ಟನಲ್ಲಿ ಜಲಮರುಪೂರಣದ ಬಗ್ಗೆ ಹೆಚ್ಚಿ ಕಾಳಜಿ ವಹಿಸಬೇಕು ಎಂದರು. ಮಂಗಳೂರು ವಿಜಯ ಪ್ರತಿಷ್ಠಾನದ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಮಾತನಾಡಿ, 1990ರಲ್ಲಿ ವಿಜಯ ಗ್ರಾಮೀಣ

ಮರ್ದಾಳ ಶಾಲೆಯಲ್ಲಿ ಮಳೆ ನೀರು ಕೊಯ್ಲು ಹಾಗೂ ಜಲ ಮರುಪೂರಣ ಘಟಕದ ಉದ್ಘಾಟನೆ Read More »

ಕರಾವಳಿ

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಟಿದ ಕೂಟೊ ಲೇಸ್ – ಸನ್ಮಾನ

ಕಡಬ: ಹಿರಿಯರ ಮಾರ್ಗದರ್ಶನದೊಂದಿಗೆ ನಾವೆಲ್ಲರೂ ಮುಂದುವರಿಯಬೇಕು. ಆಧುನಿಕತೆಯ ಅಬ್ಬರದಲ್ಲಿ ನಮ್ಮ ಸಾಮಾಜಿಕ, ಸಾಂಸ್ಕøತಿಕ ಪಾರಂಪರಿಕ ಕಟ್ಟುಕಟ್ಟಲೆಗಳಿಗೆ ಧಕ್ಕೆಯಾಗದಂತೆ, ಯುವ ಪೀಳಿಗೆಗೆ ನಮ್ಮತನದ ಕುರಿತು ತಿಳಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಹಾಗೂ ಕಾಣಿಯೂರು ಪಿಂಗಾರ ತುಳು ಕೂಟ ಆಶ್ರಯದಲ್ಲಿ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಆಟಿದ ಕೂಟೊ ಲೇಸ್ ಕಾರ್ಯಕ್ರಮದಲ್ಲಿಅತಿಥಿಯಾಗಿ ಮಾತನಾಡಿದರು. ತುಳುನಾಡಿನ ಪರಂಪರೆಗೆ ತನ್ನದೆ ಆದ ವೈಜ್ಞಾನಿಕತೆಯಿದೆ. ನಮ್ಮ ಹಿರಿಯರು ಆಚರಿಸುಕೊಂಡು ಬರುತ್ತಿದ್ದ ವಿವಿಧ ಆಚರಣೆಗಳ ಮೂಲಸ್ವರೂಪ

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಟಿದ ಕೂಟೊ ಲೇಸ್ – ಸನ್ಮಾನ Read More »

ಕರಾವಳಿ

ರಸ್ತೆಯಲ್ಲಿ ಕೋಳಿತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ► ಆಲಂಕಾರು ಗ್ರಾಮ ಸಭೆಯಲ್ಲಿ ಆಗ್ರಹ

ಕಡಬ: ಕೋಳಿತ್ಯಾಜ್ಯ ರಸ್ತೆಯಲ್ಲಿಯೇ ಎಸೆಯಲಾಗುತ್ತಿದ್ದು ಗ್ರಾಮ ಪಂಚಾಯಿತಿಯಿಂದ ಸ್ವಚ್ಚತೆಗೆ ಹೆಚ್ಚು ಒತ್ತುಕೊಡಬೇಕೆಂದು ಆಲಂಕಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಭೆ ಗ್ರಾ.ಪಂ.ಅಧ್ಯಕ್ಷೆ ಸುನಂದ ಬಾರ್ಕುಳಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್.ರವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ನೆಕ್ಕಿಲಾಡಿಯಲ್ಲಿ ಕೋಳಿತ್ಯಾಜ್ಯ ರಸ್ತೆಯಲ್ಲಿಯೇ ಎಸೆಯಲಾಗುತ್ತಿದೆ. ಸ್ವಚ್ಚತೆಗೆ ಆದ್ಯತೆ ಕೊಟ್ಟು ಕೋಳಿತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಜನಾರ್ದನ ಗೌಡ ಕಯ್ಯಪೆ ಆಗ್ರಹಿಸಿದರು. ಸ್ವಚ್ಚತೆ ಬಗ್ಗೆ ಗ್ರಾ.ಪಂ.ನಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ದಯಾನಂದ ಗೌಡ ಬಡ್ಡಮೆ ಹಾಗೂ ಇತರರು

ರಸ್ತೆಯಲ್ಲಿ ಕೋಳಿತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ► ಆಲಂಕಾರು ಗ್ರಾಮ ಸಭೆಯಲ್ಲಿ ಆಗ್ರಹ Read More »

ಕರಾವಳಿ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ► ಸಬಳೂರು ಶಾಲೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ

ಕಡಬ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಅಭಿವೃದ್ದಿ ಇಲಾಖೆಯ ಘಟಕ 5 ರ ವತಿಯಿಂದ ಪುತ್ತೂರು ತಾಲೂಕು ಕೊೈಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಘಟಕದ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಮುಖ್ಯಗುರು ವಾರಿಜ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 75 ಕ್ಕೂ ಹೆಚ್ಚು ಗೇರು ಗಿಡ ಇತರೆ ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು. ಜಲಾನಯನ ಇಲಾಖಾ ಘಟಕ 5 ರ ನಾಯಕ ಚಿದಾನಂದ ಪಾನ್ಯಾಲು,

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ► ಸಬಳೂರು ಶಾಲೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ Read More »

ಕರಾವಳಿ

ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಆತೂರು ರೇಂಜ್ ಘಟಕ ಅಸ್ತಿತ್ವಕ್ಕೆ► ಅಧ್ಯಕ್ಷರಾಗಿ ಅನಸ್ ಅಲ್‍ಹಾದಿ ತಂಙಳ್ ಆಯ್ಕೆ

ಕಡಬ: ಆತೂರು ಜಂಇಯ್ಯತ್ತುಲ್ ಮುಅಲ್ಲಿಮೀನ್ ಆತೂರು ಘಟಕದ ಅದ್ಯಕ್ಷರಾಗಿ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಅನಸ್ ಹಾದಿ ತಂಙಳ್ ಅಲ್ ಅಝ್‍ಹರಿ, ಪ್ರಧಾನ ಕಾರ್ಯದರ್ಶಿಯಾಗಿ ಆತೂರು ಮದ್ರಸದ ಸದರ್ ಮುಅಲ್ಲಿಂ ಸಿದ್ದಿಕ್ ಫೈಝಿ ಆಯ್ಕೆ ಆಗಿದ್ದಾರೆ. ಉಪಾದ್ಯಕ್ಷರಾಗಿ ಮುರ್ಶಿದ್ ಫೈಝಿ ಕೊೈಲ, ಉಮರ್ ದಾರಿಮಿ ಪೆರಿಯಡ್ಕ , ಕೋಶಾದಿಕಾರಿಯಾಗಿ ಬಿ.ಕೆ. ಅಝೀಝ್ ಆತೂರು , ಜೊತೆಕಾರ್ಯದರ್ಶಿಯಾಗಿ ಅಬ್ದುಲ್ ರಜಾಕ್ ದಾರಿಮಿ ಹಳೆನೇರೆಂಕಿ, ಬದ್ರುದ್ದೀನ್ ಮುಸ್ಲಿಯಾರ್ ಆತೂರುಬೈಲ್, ರಂಜ್ ಚಯರ್‍ಮೆನ್ ಆಗಿ ಅಬ್ದುಲ್ ರಜಾಕ್ ದಾರಿಮಿ

ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಆತೂರು ರೇಂಜ್ ಘಟಕ ಅಸ್ತಿತ್ವಕ್ಕೆ► ಅಧ್ಯಕ್ಷರಾಗಿ ಅನಸ್ ಅಲ್‍ಹಾದಿ ತಂಙಳ್ ಆಯ್ಕೆ Read More »

ಕರಾವಳಿ
Scroll to Top