News Kadaba Desk

ಸುಬ್ರಹ್ಮಣ್ಯ: ಒಬ್ಬಂಟಿಯಾಗಿದ್ದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ► ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.08. ಒಬ್ಬಂಟಿಯಾಗಿ ಜೀವನ‌ ಸಾಗಿಸುತ್ತಿದ್ದ ವ್ಯಕ್ತಿಯೋರ್ವರನ್ನು ಮನೆಯ ಕೊಠಡಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಅವರ ಮೃತದೇಹವು ಶನಿವಾರದಂದು ಕಂಡು ಬಂದಿದೆ. ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕಲ್ಲಾರು ನಿವಾಸಿ ಸುಬ್ರಹ್ಮಣ್ಯ ಕೆ.(58) ಕೊಲೆಗೀಡಾದ ದುರ್ದೈವಿ. 2007 ರಲ್ಲಿ ಹೆಂಡತಿಯನ್ನು ತೊರೆದಿದ್ದ ಇವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸುಬ್ರಹ್ಮಣ್ಯರು ಕೆಲವು ದಿನಗಳಿಂದ ಕಾಣದೆ ಇದ್ದುದರಿಂದ ಅನುಮಾನಗೊಂಡ ನೆರೆಯ ನಿವಾಸಿ ರಾಮಚಂದ್ರ ಎಂಬವರು ಮೃತರ ಸಹೋದರನಿಗೆ ಕರೆ‌ಮಾಡಿ ವಿಚಾರ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರದಂದು ಮನೆಗೆ […]

ಸುಬ್ರಹ್ಮಣ್ಯ: ಒಬ್ಬಂಟಿಯಾಗಿದ್ದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ► ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ Read More »

ಕರಾವಳಿ

ಕರಾವಳಿ ಕ್ರೈಸ್ತರ ವಿಶೇಷ ಹಬ್ಬ ‘ಮೋಂತಿ ಫೆಸ್ಟ್’ ✍? ರೇಷ್ಮಾ ವೀರ ಕ್ರಾಸ್ತಾ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಸೆ.08. ಭರತ ಭೂಮಿ ಪುಣ್ಯ ಭೂಮಿ, ಈ ಮಾತೃ ಭೂಮಿಯಲ್ಲಿ ಜನ್ಮ ತಾಳಿದ ನಾವೇ ಧನ್ಯರು. ಭಾರತ ಮಾತೆ ತನ್ನ ಬಾಹುಗಳಲ್ಲಿ ಹಲವಾರು ವೈಶಿಷ್ಠಗಳನ್ನು ಮೈಗೂಡಿಸಿಕೊಂಡಿದ್ಧಾಳೆ. ಈ ಭೂಮಿಯಲ್ಲಿ ಆಚರಿಸಲ್ಪಡುವ ಸಂಸ್ಕತಿ, ಸಂಪ್ರದಾಯ, ಆಚಾರ-ವಿಚಾರಗಳು ಒಂದಕ್ಕೊಂದು ಬೆಸೆದುಕೊಂಡಿದೆ ಎಂದರೆ ತಪ್ಪಾಗಲಾರದು. ಅದರಲ್ಲಿ ಕರಾವಳಿಯ ಕ್ರೈಸ್ತ ಬಾಂಧವರು ಆಚರಿಸುವ ಮೋಂತಿ ಫೆಸ್ಟ್ ಕೂಡ ಈ ಮಣ್ಣಿನ ಸೊಗಡಿನ ಜೊತೆ ಬೆರೆತು ಹೋಗಿದೆ. ಕನ್ನಡದಲ್ಲಿ ಹೊಸತೆನೆಯ ಹಬ್ಬ, ತುಳುವಿನಲ್ಲಿ ವೃದ್ದರ್, ಕೊಂಕಣಿಯಲ್ಲಿ ಮೊಂತಿ

ಕರಾವಳಿ ಕ್ರೈಸ್ತರ ವಿಶೇಷ ಹಬ್ಬ ‘ಮೋಂತಿ ಫೆಸ್ಟ್’ ✍? ರೇಷ್ಮಾ ವೀರ ಕ್ರಾಸ್ತಾ Read More »

ವಿಶೇಷ ಲೇಖನಗಳು

ಕುಲ್ಕುಂದ: ಚಾಲಕನ ನಿಯಂತ್ರಣ ತಪ್ಪಿ ಧರೆಗಿಳಿದ ಕಾರು ► ಬಿಳಿನೆಲೆ ಶಾಲೆಯ ಮುಖ್ಯ ಶಿಕ್ಷಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.08. ವಾಹನವೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿದ ಕಾರೊಂದು ರಸ್ತೆಯ ಎಡಬದಿಯಲ್ಲಿದ್ದ ಧರೆಗೆ ಢಿಕ್ಕಿಯಾಗಿ ನಜ್ಜುಗುಜ್ಜಾಗಿದ್ದು, ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಲ್ಕುಂದ ಸಮೀಪ ಶನಿವಾರದಂದು ನಡೆದಿದೆ. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಶರ್ಮರವರು ತನ್ನ ಮಾರುತಿ ಬ್ರೆಝಾ ಕಾರಿನಲ್ಲಿ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದಾಗ ಕುಲ್ಕುಂದ ಸಮೀಪ ಎದುರಿನಿಂದ ಬರುತ್ತಿದ್ದ ಕಾರೊಂದು ಢಿಕ್ಕಿಯಾಗುವುದನ್ನು ತಪ್ಪಿಸುವುದಕ್ಕಾಗಿ ರಸ್ತೆಯ ಎಡ ಬದಿಗೆ ತಿರುಗಿಸಿದ್ದಾರೆ. ತಕ್ಷಣವೇ

ಕುಲ್ಕುಂದ: ಚಾಲಕನ ನಿಯಂತ್ರಣ ತಪ್ಪಿ ಧರೆಗಿಳಿದ ಕಾರು ► ಬಿಳಿನೆಲೆ ಶಾಲೆಯ ಮುಖ್ಯ ಶಿಕ್ಷಕ ಅಪಾಯದಿಂದ ಪಾರು Read More »

ಕರಾವಳಿ

ಉಪ್ಪಿನಂಗಡಿ: ಹಗಲು ಹೊತ್ತಿನಲ್ಲಿ ಜವಳಿ ಅಂಗಡಿಯಿಂದ ಜರ್ಕೀನ್ ಕದ್ದ ► ರಾತ್ರಿಯಲ್ಲಿ ಅದೇ ಜರ್ಕೀನ್ ತೊಟ್ಟು ಜವಳಿ ಅಂಗಡಿಯ ಮಾಲಕರಲ್ಲಿ ಲಿಫ್ಟ್ ಕೇಳಿದ ► ಕೊನೆಗೇನಾಯ್ತು ಗೊತ್ತೇ…?? ಸ್ವಾರಸ್ಯಕರ ಘಟನೆ..!!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.08. ಮಾರಾಟಕ್ಕೆಂದು ಅಂಗಡಿಯ ಮುಂದೆ ತೂಗುಹಾಕಿದ್ದ ಬೆಲೆಬಾಳುವ ಜರ್ಕೀನ್ ಕದ್ದ ಕಳ್ಳನೋರ್ವ ಅದೇ ಅಂಗಡಿಯ ಮಾಲಕರ ಕಾರಿಗೆ ಕೈ ಹಿಡಿದು ಲಿಫ್ಟ್ ಕೇಳಿ ಪೊಲೀಸರ ಅತಿಥಿಯಾದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ‌. ಕರ್ವೇಲ್ ನಿವಾಸಿ ಅಬೂಬಕ್ಕರ್ ಎಂಬವರ ‘ನಿಹಾ ಡ್ರೆಸ್ಸಸ್ಸ್’ ಎಂಬ ಜವಳಿ ಅಂಗಡಿಯೆದುರು ಉತ್ತಮ ಗುಣಮಟ್ಟದ ಜರ್ಕಿನ್‌ವೊಂದನ್ನು ತೂಗು ಹಾಕಲಾಗಿತ್ತು. ಸಂಜೆ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದ ಕಾರಣ, ಖತರ್ನಾಕ್ ಕಳ್ಳನೋರ್ವ ಇದನ್ನು ಎಗರಿಸಿದ್ದ. ರಾತ್ರಿ ಅಂಗಡಿ

ಉಪ್ಪಿನಂಗಡಿ: ಹಗಲು ಹೊತ್ತಿನಲ್ಲಿ ಜವಳಿ ಅಂಗಡಿಯಿಂದ ಜರ್ಕೀನ್ ಕದ್ದ ► ರಾತ್ರಿಯಲ್ಲಿ ಅದೇ ಜರ್ಕೀನ್ ತೊಟ್ಟು ಜವಳಿ ಅಂಗಡಿಯ ಮಾಲಕರಲ್ಲಿ ಲಿಫ್ಟ್ ಕೇಳಿದ ► ಕೊನೆಗೇನಾಯ್ತು ಗೊತ್ತೇ…?? ಸ್ವಾರಸ್ಯಕರ ಘಟನೆ..!! Read More »

ಕರ್ನಾಟಕ

ಮರ್ಧಾಳ: ಕಂಠಪೂರ್ತಿ ಮದ್ಯಪಾನಿಯಿಂದ ಸಾಹಸಮಯ ವಾಹನ ಸವಾರಿ ► ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಬಾರಿ ರಸ್ತೆಗೆ ಬಿದ್ದ ಸವಾರ ► ಸಾರ್ವಜನಿಕರಿಗೆ ಪುಕ್ಕಟೆ ಮನೋರಂಜನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.08. ವಿಪರೀತ ಮದ್ಯ ಸೇವಿಸಿದ್ದ ಯುವಕನೋರ್ವ ದ್ವಿಚಕ್ರ ವಾಹನ ಚಲಾಯಿಸಿ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ಘಟನೆ ಇಲ್ಲಿನ ಮರ್ಧಾಳ ಸಮೀಪದ ಕೋಲಂತಾಡಿ ಎಂಬಲ್ಲಿ ಶನಿವಾರದಂದು ನಡೆದಿದೆ. ಮರ್ಧಾಳದ ಚಾಕೋಟೆಕೆರೆಯಲ್ಲಿನ ಬಾರೊಂದರಲ್ಲಿ ಕಂಠಪೂರ್ತಿ ಮದ್ಯಪಾನ ಮಾಡಿದ ನೆಟ್ಟಣದ ಶ್ರೀನಿವಾಸ್ ಎಂಬಾತ ತನ್ನ ಹೋಂಡಾ ಡಿಯೋ ವಾಹನವನ್ನು ಚಲಾಯಿಸಲೆತ್ನಿಸಿ ರಸ್ತೆಗೆ ಬಿದ್ದಿದ್ದಾನೆ. ಸ್ಥಳದಲ್ಲಿದ್ದವರು ವಾಹನವನ್ನು ಎತ್ತಿಕೊಟ್ಟು ಈತನನ್ನು ಮೇಲೆತ್ತಿದರಾದರೂ ಎರಡನೇ ಸಲವೂ ವಾಹನ ಚಲಾಯಿಸಲು ವಿಫಲನಾಗಿ ರಸ್ತೆಗೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ. ತದನಂತರ ಹೊರಡಲನುವಾದ

ಮರ್ಧಾಳ: ಕಂಠಪೂರ್ತಿ ಮದ್ಯಪಾನಿಯಿಂದ ಸಾಹಸಮಯ ವಾಹನ ಸವಾರಿ ► ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಬಾರಿ ರಸ್ತೆಗೆ ಬಿದ್ದ ಸವಾರ ► ಸಾರ್ವಜನಿಕರಿಗೆ ಪುಕ್ಕಟೆ ಮನೋರಂಜನೆ Read More »

ಕರಾವಳಿ

ಲೀಟರಿಗೆ 87.77 ರೂ. ಗೆ ಏರಿದ ಪೆಟ್ರೋಲ್ ► ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ದರ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.08. ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರುತ್ತಿದ್ದು, ಶನಿವಾರದಂದು ಮುಂಬಯಿಯಲ್ಲಿ ಪೆಟ್ರೋಲ್ ಲೀಟರಿಗೆ 87.77 ಹಾಗೂ ಡೀಸೆಲ್ ದರ 76.98 ರೂ. ಗಳಿಗೆ ತಲುಪಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 80.38 ರೂ., ಬೆಂಗಳೂರಿನಲ್ಲಿ 82.94 ರೂ.ಗೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಪ್ರತೀ ಲೀಟರ್ ಡೀಸೆಲ್ಗೆ 72.51 ರೂ., ಬೆಂಗಳೂರಿನಲ್ಲಿ 74.79 ರೂ. ಗೆ ಏರಿಕೆಯಾಗಿದೆ. ತೈಲ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರವು ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಬೊಬ್ಬಿಡಲು

ಲೀಟರಿಗೆ 87.77 ರೂ. ಗೆ ಏರಿದ ಪೆಟ್ರೋಲ್ ► ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ದರ Read More »

ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ವ್ಯಕ್ತಿಯ ಕೊಲೆಗೈದು ನದಿಗೆಸೆದ ಪ್ರಕರಣ ► ಪ್ರಮುಖ ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.07. ಇತ್ತೀಚೆಗೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿ ನದಿಯಲ್ಲಿ ಗಂಡಸಿನ ಮೃತದೇಹ ಪತ್ತೆಯ ಜಾಡು ಹಿಡಿದ ಡಿಸಿಐಬಿ ಪೊಲೀಸರು ಘಟನೆಗೆ ಸಂಬಂಧಿಸಿ ಕುಖ್ಯಾತ ರೌಡಿಗಳಿಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಅಳುವ ಕೊಟ್ಟಕ್ಕಾಕಾತ್‌ ನಿವಾಸಿ ಕೆ.ಎ ಸಿದ್ದಿಕ್‌ ಎಂಬವರ ಪುತ್ರ ಔರಂಗಝೀಬ್‌ (37) ಹಾಗೂ ಪಾಲಕ್ಕಾಡು ಜಿಲ್ಲೆಯ ಆಲೆತ್ತೂರು ತಾಲೂಕಿನ ಕೊಕ್ರತ್ತಲ್‌ ನಿವಾಸಿ ಮೊಯ್ದೀನ್‌ ಕುಟ್ಟಿ ಎಂಬವರ ಪುತ್ರ ಮಹಮ್ಮದ್‌ ಶಮನಾಝ್‌(23) ಎಂದು ಗುರುತಿಸಲಾಗಿದೆ. ಆರೋಪಿಗಳು ಕೇರಳದ

ಉಪ್ಪಿನಂಗಡಿ: ವ್ಯಕ್ತಿಯ ಕೊಲೆಗೈದು ನದಿಗೆಸೆದ ಪ್ರಕರಣ ► ಪ್ರಮುಖ ಆರೋಪಿಗಳಿಬ್ಬರ ಬಂಧನ Read More »

ರಾಷ್ಟ್ರೀಯ ನ್ಯೂಸ್

ಕಿನ್ನಿಗೋಳಿ: ಆ್ಯಕ್ಟಿವಾ – ಟಿಪ್ಪರ್ ಢಿಕ್ಕಿ ► ಕಾಲೇಜು ವಿದ್ಯಾರ್ಥಿ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಆ್ಯಕ್ಟಿವಾ ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ಕಿನ್ನಿಗೋಳಿಯಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಯುವಕನನ್ನು ಕಿನ್ನಿಗೋಳಿ ಪೊಂಪೈ ಕಾಲೇಜಿನ ಅಂತಿಮ ವರ್ಷದ ಬಿಬಿಎಮ್ ವಿದ್ಯಾರ್ಥಿ, ಕಾರ್ನಾಡು ನಿವಾಸಿ ವರ್ಶಿತ್(21) ಎಂದು ಗುರುತಿಸಲಾಗಿದೆ. ದ್ವಿತೀಯ ಬಿಬಿಎಮ್ ವಿದ್ಯಾರ್ಥಿ ಡೆರಿಕ್ ವಾಸ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರೂ ಜೊತೆಯಾಗಿ ಶುಕ್ರವಾರ ಮಧ್ಯಾಹ್ನ ಊಟಕ್ಕೆಂದು ಹೊರಟ ಸಂದರ್ಭದಲ್ಲಿ ಟಿಪ್ಪರ್

ಕಿನ್ನಿಗೋಳಿ: ಆ್ಯಕ್ಟಿವಾ – ಟಿಪ್ಪರ್ ಢಿಕ್ಕಿ ► ಕಾಲೇಜು ವಿದ್ಯಾರ್ಥಿ ಮೃತ್ಯು, ಓರ್ವ ಗಂಭೀರ Read More »

ಕರಾವಳಿ

ಸುಳ್ಯ: 13 ವರ್ಷದ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಭೂಪ ► ಬುದ್ಧಿವಂತರ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.07. ಹದಿಮೂರು ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಬಾಲಕಿ ಗರ್ಭಿಣಿಯಾದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯ ಸಂಪಾಜೆಯಲ್ಲಿ ನಡೆದಿದೆ. ಕಳೆದ ಸುಮಾರು ಎರಡು ತಿಂಗಳುಗಳಿಂದ ಸಂಪಾಜೆಯ ಬಾಲಕಿಯ ಮನೆಯಲ್ಲಿಯೇ ವಾಸವಿದ್ದ ಅವರ ದೂರದ ಸಂಬಂಧಿ ಗೋಪಾಲಕೃಷ್ಣ ಎಂಬಾತ ರಾತ್ರಿ ಮನೆಯವರೆಲ್ಲರೂ ಮಲಗಿದ ನಂತರ ಬಲಾತ್ಕಾರವಾಗಿ ಬಾಲಕಿಯ ಮೇಲೆ ಅತ್ಯಾಚಾರಗೈದುದರಿಂದ ಬಾಲಕಿಯು ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ‌. ಕೆಲವು ಸಮಯಗಳಿಂದ ಬಾಲಕಿಯು ಮನೆಯವರೊಂದಿಗೆ ಸರಿಯಾಗಿ ಮಾತನಾಡದೇ ಇದ್ದುದರಿಂದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿ, ಬಾಲಕಿಯನ್ನು

ಸುಳ್ಯ: 13 ವರ್ಷದ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಭೂಪ ► ಬುದ್ಧಿವಂತರ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ Read More »

ಕರಾವಳಿ

ಅಡಿಕೆ ಮರಕ್ಕೆ ಕೊಳೆರೋಗ ಬಾಧಿಸಿದೆಯೇ..? ► ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದೆಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಈ ವರ್ಷ ಮಳೆ ಬೇಗನೆ ಆರಂಭವಾಗಿದ್ದಲ್ಲದೇ ಬಿರುಸಿನ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆರೋಗ ಕಂಡುಬಂದಿದೆ. ನಿರಂತರ ಸುರಿದ ಮಳೆಯಿಂದ ರೈತರಿಗೆ ಸಕಾಲದಲ್ಲಿ ಔಷಧ ಸಿಂಪರಣೆ ಮಾಡಲಾಗದೇ ಕೊಳೆ ರೋಗ ಉಲ್ಭಣಿಸಿ ಹಾನಿ ಅನುಭವಿಸುವಂತಾಗಿದೆ. ಮಳೆ ಕಡಿಮೆಯಾಗುತ್ತಿದ್ದರೂ ಕೊಳೆ ರೋಗದ ಹಾನಿ ಇಲ್ಲಿಗೆ ಮುಗಿದಿಲ್ಲ. ಹೀಗೆ ಉದುರಿದ ಕಾಯಿಗಳನ್ನು ಮತ್ತು ಸತ್ತ ಅಡಿಕೆ ಸಿಂಗಾರಗಳನ್ನು ತೋಟದಿಂದ ಹೊರ ಹಾಕಬೇಕು. ಅಡಿಕೆ ಗೊನೆಗಳಿಗೆ ಬೋರ್ಡೋದ್ರಾವಣ ಸಿಂಪಡಣೆಯಾಗಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಾಗಿದ್ದಲ್ಲಿ, ಅವಶ್ಯಕತೆಯಿದ್ದಲ್ಲಿ ಮತ್ತೊಮ್ಮೆ

ಅಡಿಕೆ ಮರಕ್ಕೆ ಕೊಳೆರೋಗ ಬಾಧಿಸಿದೆಯೇ..? ► ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದೆಂದು ತಿಳಿಯಬೇಕೇ..? Read More »

ಕರ್ನಾಟಕ
Scroll to Top