ಕೊಲೆ ಪ್ರಕರಣದ ಆರೋಪಿ ಕೇರಳದ ಜೈಲಿನಿಂದ ಸುಳ್ಯ ನ್ಯಾಯಾಲಯಕ್ಕೆ ಹಾಜರಿ ► ಹಿಂತಿರುಗುವಾಗ ಸುಳ್ಯ ಬಸ್ ನಿಲ್ದಾಣದಲ್ಲಿ ಕೇರಳ ಪೊಲೀಸರನ್ನು ತಳ್ಳಿ ಪರಾರಿ
(ನ್ಯೂಸ್ ಕಡಬ) newskadaba.com ಸುಳ್ಯ, ಸೆ.14. ಕೇರಳದ ಕಾಸರಗೋಡಿನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸುಳ್ಯ ನಿವಾಸಿಯನ್ನು ಹಳೆಯ ಕಳವು ಪ್ರಕರಣಕ್ಕೆ ಸಂಬಂದಿಸಿ ನ್ಯಾಯಲಯಕ್ಕೆ ಹಾಜರುಪಡಿಸಲೆಂದು ಸುಳ್ಯಕ್ಕೆ ಕರೆತಂದು ಹಿಂದಿರುಗುವ ಪೊಲೀಸರನ್ನು ದೂಡಿ ಪರಾರಿಯಾದ ಘಟನೆ ಶುಕ್ರವಾರದಂದು ಸುಳ್ಯದಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಅಜ್ಜಾವರ ಬೊಳಂಬ ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಝೀಝ್(35) ಇತ್ತೀಚೆಗೆ ಕೇರಳದ ಕಾಸರಗೋಡಿನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಕೇರಳದ ಹೊಸದುರ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾನೆ. ಶುಕ್ರವಾರದಂದು ಸುಳ್ಯ ಪೊಲೀಸ್ ಠಾಣೆಯ ಹಳೆಯ […]










