ಇಚಿಲಂಪಾಡಿ ಸೇತುವೆಯ ಅಡಿಭಾಗದಲ್ಲಿ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ..!! ► ಪ್ರತಿದಿನ ರಾತ್ರಿಯಾಗುತ್ತಿದ್ದಂತೆ ಸಾಗುತ್ತದೆ ಲೋಡುಗಟ್ಟಲೆ ಮರಳು..!! ► ಅಧಿಕಾರಿಗಳೇ ನೇರವಾಗಿ ಶಾಮೀಲಾಗಿ ನಡೆಯುತ್ತದಂತೆ ಈ ದಂಧೆ..??
(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.20. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿ ಹಾದು ಹೋಗಿರುವ ಇಚಿಲಂಪಾಡಿ ಸೇತುವೆಯ ಅಡಿಭಾಗದಲ್ಲಿ ಕಳೆದೆರಡು ತಿಂಗಳುಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದಲಿತ ಮುಖಂಡ ವಸಂತ ಕುಬುಲಾಡಿ ನೇರ ಆರೋಪ ಮಾಡಿದ್ದಾರೆ. ‘ನ್ಯೂಸ್ ಕಡಬ’ದೊಂದಿಗೆ ಮಾತನಾಡಿದ ಅವರು, ಇಚಿಲಂಪಾಡಿ ಸೇತುವೆಯ ಅನತಿ ದೂರದಲ್ಲೇ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಕತ್ತಲು ಆವರಿಸುತ್ತಿದಂತೆಯೇ ಅಕ್ರಮ ಮರಳುಗಾರಿಕೆ ನಡೆಯಲು ಅರಂಭವಾಗುತ್ತದೆ. ರಾತ್ರೆಯಾಗುತ್ತಿದ್ದಂತೆಯೇ ಸುಮಾರು ಹತ್ತಿಪ್ಪತ್ತು ಮಂದಿ ನದಿಗೆ […]









