News Kadaba Desk

ಕಬಕ: 21 ವಯಸ್ಸಿನ ಯುವಕ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.10. ಇಲ್ಲಿನ ಕಬಕದ ಯುವಕನೋರ್ವ ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗಿನ ಜಾವ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಪುತ್ತೂರು ತಾಲೂಕಿನ ಕಬಕ ಸಮೀಪದ ಕೊಡಿಪ್ಪಾಡಿ ಬಳಿಯ ಅರ್ಕ ವಿದ್ಯಾಪುರ ನಿವಾಸಿ ಅಬೂಬಕರ್ ಎಂಬವರ ಪುತ್ರ ಸಿನಾನ್(21) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿದ್ದು, ಭಾನುವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಸೋಮವಾರ ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತದೇಹವನ್ನು ಊರಿಗೆ ತರುವ ಪ್ರಯತ್ನ ಸಾಗಿದೆ.

ಕಬಕ: 21 ವಯಸ್ಸಿನ ಯುವಕ ಹೃದಯಾಘಾತದಿಂದ ಮೃತ್ಯು Read More »

ಕರ್ನಾಟಕ

ಕಡಬ: ಮೋದಿಕೇರ್ ಸ್ವದೇಶಿ ವಸ್ತುಗಳ ವಿತರಣಾ ಕೇಂದ್ರ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.10. ಮೋದಿಕೇರ್ ಸ್ವದೇಶಿ ವಸ್ತುಗಳ ನೂತನ ವಿತರಣಾ ಕೇಂದ್ರವು ಕಡಬದ ಸೈಂಟ್ ಜೋಕಿಮ್ಸ್ ವಾಣಿಜ್ಯ ಸಂಕೀರ್ಣದಲ್ಲಿ ರವಿವಾರದಂದು ಉದ್ಘಾಟನೆಗೊಂಡಿತು. ಲಿಲ್ಲಿ  ಲೋಬೋ ಅರ್ಪಾಜೆ ಅವರು ಕೇಂದ್ರವನ್ನು ಉದ್ಘಾಟನೆಗೈದರು. ದೀಪ ಬೆಳಗಿಸಿ ಮಾತನಾಡಿದ ಮೋದಿಕೇರ್ ಕ್ರೌನ್ ಡೈಮಂಡ್ ಡೈರೆಕ್ಟರ್ ದಿನಕರ ಬಿ.ಎಸ್. ಅವರು ದೇಶದ ಆರ್ಥಿಕ ಸಂಪತ್ತು ದೇಶದೊಳಗೆಯೇ ಸದ್ಬಳಕೆಯಾಗುವುದರೊಂದಿಗೆ ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಸದುದ್ದೇಶದಿಂದ ಮೋದಿಕೇರ್ ಸಂಸ್ಥೆ ಕೆಲಸ ಮಾಡುತ್ತಿದೆ. ಆರೋಗ್ಯಕ್ಕೆ ಹಾನಿಕರವಲ್ಲದ ಸ್ವದೇಶಿ ದಿನಬಳಕೆಯ ವಸ್ತುಗಳನ್ನು ಸ್ವತಃ ಬಳಸುವುದರೊಂದಿಗೆ

ಕಡಬ: ಮೋದಿಕೇರ್ ಸ್ವದೇಶಿ ವಸ್ತುಗಳ ವಿತರಣಾ ಕೇಂದ್ರ ಶುಭಾರಂಭ Read More »

ರಾಷ್ಟ್ರೀಯ ನ್ಯೂಸ್

ನೂಜಿಬಾಳ್ತಿಲ: ಬೆಥನಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ, ಸಮ್ಮಾನ ► ಸಾಧಕರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಎಸ್.ಅಬ್ದುಲ್‍ಖಾದರ್

(ನ್ಯೂಸ್ ಕಡಬ) newskadaba.com ಕಡಬ, ಡಿ.10. ಪ್ರತಿಯೊಬ್ಬ ಸಾಧಕನ ಸಾಧನೆಯ ಹಿಂದೆ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ನಿರಂತರ ಪ್ರಯತ್ನ ಅಡಗಿರುತ್ತದೆ. ಆದುದರಿಂದ ಸಾಧಕರ ಸಾಧನೆಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು ಸಾಮಾಜಿಕ ಮುಂದಾಳು, ಕಡಬದ ರಹ್ಮಾನಿಯಾ ಟೌನ್ ಜುಮ್ಮಾ ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಅವರು ನುಡಿದರು. ಅವರು ಶನಿವಾರ ರಾತ್ರಿ ಜರಗಿದ ನೂಜಿಬಾಳ್ತಿಲದ ಬೆಥನಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ನಿವೃತ್ತ ಶಿಕ್ಷಕರಿಗೆ ಸಮ್ಮಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಕಲಿಕೆಯ ವಿಚಾರದಲ್ಲಿ ಸ್ಪಷ್ಟವಾದ

ನೂಜಿಬಾಳ್ತಿಲ: ಬೆಥನಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ, ಸಮ್ಮಾನ ► ಸಾಧಕರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಎಸ್.ಅಬ್ದುಲ್‍ಖಾದರ್ Read More »

ಕರಾವಳಿ

ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ► ಪಿಜಕಳ ಶಾಲಾ ಮುಖ್ಯ ಶಿಕ್ಷಕಿ ಚೇತನಾ ರಾಜ್ಯಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ.10. ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ದ.5ರಂದು ನಡೆದ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಿಲೇ ಹಾಗೂ ಟ್ರಿಪ್ಪಲ್ ಜಂಪ್ ಪಂದ್ಯಾಟದಲ್ಲಿ ಪಿಜಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚೇತನಾ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ದ.ಕ.ಜಿಲ್ಲಾಡಳಿತ ಮತ್ತು ಜಿ.ಪಂ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ

ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ► ಪಿಜಕಳ ಶಾಲಾ ಮುಖ್ಯ ಶಿಕ್ಷಕಿ ಚೇತನಾ ರಾಜ್ಯಮಟ್ಟಕ್ಕೆ ಆಯ್ಕೆ Read More »

ಕರ್ನಾಟಕ

ಬಂಟ್ವಾಳ: ಇಂದಿರಾ ಕ್ಯಾಂಟೀನ್ ಉದ್ಘಾಟನೆ ► ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.09. ಬಂಟ್ವಾಳ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗಿದ್ದು, ಪೊಲೀಸರ ಸಕಾಲಿಕ ಕ್ರಮದಿಂದಾಗಿ ಹತೋಟಿಗೆ ಬಂದಿದೆ. ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬಾರದಂತೆ ಬಿಜೆಪಿ ಮುಖಂಡರು ತಹಶೀಲ್ದಾರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರೆನ್ನಲಾಗಿದ್ದು, ಇದನ್ನು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ. ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಇಂದಿರಾ ಕ್ಯಾಂಟೀನ್ ಉದ್ಘಾಟನೆ ► ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ Read More »

ಕರ್ನಾಟಕ

ಬಲ್ಯ: ದೈವ ಚಾವಡಿಯ ತ್ರಿಶೂಲ ಕದ್ದು ರಸ್ತೆ ಬದಿಯಲ್ಲಿ ಹಾಕಿದ ಕಿಡಿಗೇಡಿಗಳು ► ತ್ರಿಶೂಲವನ್ನು ಸಂಬಂಧಿತರಿಗೆ ಹಸ್ತಾಂತರಿಸಿದ ಕಡಬ ಠಾಣಾ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಡಿ.09. ಇಲ್ಲಿಗೆ ಸಮೀಪದ ಬಲ್ಯ ಎಂಬಲ್ಲಿ ರಸ್ತೆ ಬದಿಯಲ್ಲಿ ಶನಿವಾರದಂದು ತ್ರಿಶೂಲವೊಂದು ಕಂಡುಬಂದಿದ್ದು, ಸ್ಥಳೀಯರೋರ್ವರು ಕಡಬ ಠಾಣೆಗೆ ಹಸ್ತಾಂತರಿಸಿದ್ದರು. ತ್ರಿಶೂಲ ಸಿಕ್ಕಿರುವ ಬಗ್ಗೆ ಕಡಬ ಠಾಣಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗರವರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದ ಹಿನ್ನೆಲೆಯಲ್ಲಿ ತ್ರಿಶೂಲವು ಇಲ್ಲಿಗೆ ಸಮೀಪದ ಬಲ್ಯ ಪಡ್ನೂರು ರಾಜನ್ ದೈವ ಚಾವಡಿಯ ಬಳಿಯಲ್ಲಿದ್ದ ಗುಳಿಗ ಕಟ್ಟೆಯದ್ದೆಂದು ತಿಳಿದು ಬಂದಿದ್ದು, ತ್ರಿಶೂಲವನ್ನು ಯಾರೋ ಕಿಡಿಗೇಡಿಗಳು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ

ಬಲ್ಯ: ದೈವ ಚಾವಡಿಯ ತ್ರಿಶೂಲ ಕದ್ದು ರಸ್ತೆ ಬದಿಯಲ್ಲಿ ಹಾಕಿದ ಕಿಡಿಗೇಡಿಗಳು ► ತ್ರಿಶೂಲವನ್ನು ಸಂಬಂಧಿತರಿಗೆ ಹಸ್ತಾಂತರಿಸಿದ ಕಡಬ ಠಾಣಾ ಪೊಲೀಸರು Read More »

ಕರಾವಳಿ

ಮಂಗಳೂರು: ಯುವತಿಯರನ್ನಿಟ್ಟು ಅನೈತಿಕ ಚಟುವಟಿಕೆ ► ಆರೋಪಿಯ ಬಂಧನ, ಮೂವರು ಯುವತಿಯರ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09. ನಗರದ ಹೊರವಲಯದ ಸುರತ್ಕಲ್ ಠಾಣಾ ವ್ಯಾಪ್ತಿಯ ಕಟ್ಟಡವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಅರಿತ ಸುರತ್ಕಲ್ ಪೊಲೀಸರ ತಂಡ ದಾಳಿ ನಡೆಸಿ ಓರ್ವನನ್ನು ವಾಹನ ಸಮೇತ ಬಂಧಿಸಿದ್ದು, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಬಂಧಿತ ಆರೋಪಿಯನ್ನು ಪುನೀತ್ ಕುಮಾರ್ ಬಂಧಿತ ಎಂದು ಗುರುತಿಸಲಾಗಿದೆ. ಸುರತ್ಕಲ್ ಠಾಣಾ ವ್ಯಾಪ್ತಿಯ ಇಡ್ಯಾ ಗ್ರಾಮದ ಕಟ್ಟಡವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ

ಮಂಗಳೂರು: ಯುವತಿಯರನ್ನಿಟ್ಟು ಅನೈತಿಕ ಚಟುವಟಿಕೆ ► ಆರೋಪಿಯ ಬಂಧನ, ಮೂವರು ಯುವತಿಯರ ರಕ್ಷಣೆ Read More »

ಕರಾವಳಿ

►► ಉದ್ಯೋಗ ಮಾಹಿತಿ ‘ಕೌಶಲ್ಯ ಕರ್ನಾಟಕ’ ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ ► ಸ್ವಯಂ ಉದ್ಯೋಗ ಹೊಂದಲು ಸುವರ್ಣ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ‌‌.09. ಕ.ರ.ರ.ಸಾ.ಸಂಸ್ಥೆ, ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ ಇಲ್ಲಿ ಸರ್ಕಾರದ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿರುದ್ಯೋಗಿ ಯುವಕ-ಯುವತಿಯವರಿಗೆ ಉಚಿತವಾಗಿ ಭಾರಿ ವಾಹನ, ಲಘುವಾಹನ ಹಾಗೂ ತಾಂತ್ರಿಕ ವೃತ್ತಿಗಳಲ್ಲಿ (ಆಟೋ, ವೆಲ್ಡರ್, ಆಟೋ, ಮೆಕ್ಯಾನಿಕ್, ಆಟೋ ಎಲೆಕ್ಟ್ರೀಷಿಯನ್, ಟೈರ್ ಫಿಟ್ಟರ್) ತರಬೇತಿ ನೀಡಿ ನಿರುದ್ಯೋಗಿಗಳಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ/ಅರೆ ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ, ಸ್ವಯಂ ಉದ್ಯೋಗವನ್ನು ಹೊಂದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಅವಧಿಯಲ್ಲಿ ಉಚಿತ ಊಟೋಪಚಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಅಭ್ಯರ್ಥಿಗಳು

►► ಉದ್ಯೋಗ ಮಾಹಿತಿ ‘ಕೌಶಲ್ಯ ಕರ್ನಾಟಕ’ ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ ► ಸ್ವಯಂ ಉದ್ಯೋಗ ಹೊಂದಲು ಸುವರ್ಣ ಅವಕಾಶ Read More »

ಉದ್ಯೋಗ, ಲೈಫ್‍ಸ್ಟೈಲ್

ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕುಟ್ರುಪಾಡಿ ಗ್ರಾಮ ಸಮಿತಿ ರಚನೆ ► ಅಧ್ಯಕ್ಷರಾಗಿ ಮೇದಪ್ಪ ಗೌಡ, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆಯ ವಿಜಯ ಕುಮಾರ್

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕುಟ್ರುಪಾಡಿ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು, ಅಧ್ಯಕ್ಷರಾಗಿ ಮೇದಪ್ಪ ಗೌಡ ನವದುರ್ಗ ಮತ್ತು ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ವಿಜಯಕುಮಾರ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರುಗಳಾಗಿ ಕುಂಞಪ್ಪ ಗೌಡ ಕೊಡೆಂಕಿರಿ, ಕುಶಾಲಪ್ಪ ಗೌಡ ಬಜೆತ್ತಡ್ಕ, ತಿಮ್ಮಪ್ಪ ಗೌಡ ಕೆಳಗಿನ ಮನೆ, ಮೋನಪ್ಪ ಗೌಡ ನಾಡೋಳಿ, ಉಪಾಧ್ಯಕ್ಷರುಗಳಾಗಿ ಆನಂದ ಗೌಡ ಉಳಪ್ಪು, ಪುಟ್ಟಣ್ಣ ಗೌಡ ಹೊಸ್ಮಠ, ಚಿದಾನಂದ ಕೊಡೆಂಕಿರಿ, ಗುಡ್ಡಪ್ಪ ಗೌಡ, ಖಜಾಂಜಿಯಾಗಿ

ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕುಟ್ರುಪಾಡಿ ಗ್ರಾಮ ಸಮಿತಿ ರಚನೆ ► ಅಧ್ಯಕ್ಷರಾಗಿ ಮೇದಪ್ಪ ಗೌಡ, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆಯ ವಿಜಯ ಕುಮಾರ್ Read More »

ಕರಾವಳಿ

ನೆಟ್ಟಣ: ನಾಡಿಗೆ ಲಗ್ಗೆಯಿಟ್ಟ ಕಾಡಾನೆ ► ತೆಂಗಿನ ಮರ, ಮನೆಯ ತಡೆಗೋಡೆ ಧ್ವಂಸ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಳೆದ ಕೆಲವು ದಿನಗಳಿಂದ ನಾಡಿನಿಂದ ದೂರ ಉಳಿದಿದ್ದ ಕಾಡಾನೆಯು ಶುಕ್ರವಾರದಂದು ನಾಡಿಗೆ ಲಗ್ಗೆ ಇಟ್ಟಿದ್ದು, ನೆಟ್ಟಣ, ಬಿಳಿನೆಲೆ ಪರಿಸರ ನಿವಾಸಿಗಳು ಭಯಭೀತರಾಗಿದ್ದಾರೆ. ನೆಟ್ಟಣ ಪೇಟೆಯಲ್ಲಿನ ಅಬ್ದುಲ್ ರಹಿಮಾನ್ ಹಾಜಿ ಎಂಬವರ ಮನೆಯ ಪಕ್ಕದ ತೋಟದ ಬೇಲಿಯನ್ನು ಧ್ವಂಸಗೊಳಿಸಿರುವ ಕಾಡಾನೆಯು ತೆಂಗಿನ ಮರವನ್ನು ಹಾನಿಗೆಡವಿದೆ. ಇನ್ನೊಂದೆಡೆ ಬಿಳಿನೆಲೆಯಲ್ಲಿಯೂ ಕಾಡಾನೆಯ ಪುಂಡಾಟ ಜೋರಾಗಿದ್ದು, ಮನೆಯೊಂದರ ತಡೆಗೋಡೆಯನ್ನೇ ಪುಡಿಗಟ್ಟಿದೆ. ಬಿಳಿನೆಲೆ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದು, ಶುಕ್ರವಾರ ರಾತ್ರಿ ವೇಳೆಗೆ ಪೋಷಕರೋರ್ವರು ಶಾಲೆಗೆ ತೆರಳಿ

ನೆಟ್ಟಣ: ನಾಡಿಗೆ ಲಗ್ಗೆಯಿಟ್ಟ ಕಾಡಾನೆ ► ತೆಂಗಿನ ಮರ, ಮನೆಯ ತಡೆಗೋಡೆ ಧ್ವಂಸ Read More »

ಕರಾವಳಿ
Scroll to Top