ಕಡಬ: ಉಪ್ಪಿನಂಗಡಿ ಪೇಟೆಗೆಂದು ತೆರಳಿದ ವ್ಯಕ್ತಿ ನಾಪತ್ತೆ
(ನ್ಯೂಸ್ ಕಡಬ) newskadaba.com ಕಡಬ, ಡಿ.25. ಉಪ್ಪಿನಂಗಡಿಗೆಂದು ತೆರಳಿದ ವ್ಯಕ್ತಿಯೋರ್ವರು ಮನೆಗೆ ಬಾರದೆ ನಾಪತ್ತೆಯಾಗಿರುವ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕು ಕೊಯಿಲ ಗ್ರಾಮದ ಹೊಸಮಜಲು ಆನೆಗುಂಡಿ ನಿವಾಸಿ ಡಿಂಬಯ್ಯ ಮುಗೇರ ಎಂಬವರು ಭಾನುವಾರದಂದು ಉಪ್ಪಿನಂಗಡಿ ಪೇಟೆಗೆಂದು ಹೋದವರು ಹಿಂತಿರುಗದೆ ನಾಪತ್ತೆಯಾಗಿದ್ದು, ಈ ಬಗ್ಗೆ ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದ ಕಾರಣ ಅವರ ಪುತ್ರ ದುರ್ಗಾ ಪ್ರಸಾದ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ: ಉಪ್ಪಿನಂಗಡಿ ಪೇಟೆಗೆಂದು ತೆರಳಿದ ವ್ಯಕ್ತಿ ನಾಪತ್ತೆ Read More »
ಕರಾವಳಿ








