News Kadaba Desk

ಕಡಬ ಕ್ರಿಶ್ಚಿಯನ್‌ ಯೂನಿಯನ್ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಅನೀಶ್ ಲೋಬೋ, ಕಾರ್ಯದರ್ಶಿಯಾಗಿ ಜೇಮ್ಸ್ ಕ್ರಿಶಲ್ ಡಿಸೋಜಾ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜ.23. ಕಡಬ ಕ್ರಿಶ್ಚಿಯನ್ ಯೂನಿಯನ್ ನ 2019 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅನೀಶ್ ಲೋಬೋ ಹಾಗೂ ಕಾರ್ಯದರ್ಶಿಯಾಗಿ ಜೇಮ್ಸ್ ಕ್ರಿಶಲ್ ಡಿಸೋಜಾ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಬೆಂಜಮೀನ್ ಡಿಸೋಜಾ, ಕೋಶಾಧಿಕಾರಿ ಯಾಗಿ ಜೋಕಿಮ್ ಮಾರ್ಟಿಸ್ ರವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಜೋಕಿಮ್ ರೊಡ್ರಿಗಸ್, ಶ್ಯಾಮ್ ಥೋಮಸ್, ಡೇನ್ನಿಸ್ ಫೆರ್ನಾಂಡಿಸ್, ಲೂವಿಸ್ ಮಸ್ಕರೇನ್ಹಸ್, ಪ್ರಕಾಶ್ ಡಿಸೋಜಾ ಮೊದಲಾದವರು ಹಾಜರಿದ್ದರು.

ಕಡಬ ಕ್ರಿಶ್ಚಿಯನ್‌ ಯೂನಿಯನ್ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಅನೀಶ್ ಲೋಬೋ, ಕಾರ್ಯದರ್ಶಿಯಾಗಿ ಜೇಮ್ಸ್ ಕ್ರಿಶಲ್ ಡಿಸೋಜಾ ಆಯ್ಕೆ Read More »

ಕರಾವಳಿ

ಕಡಬ: ಸ್ತ್ರೀ ಶಕ್ತಿ ಮಹಿಳೆಯರಿಗೆ ಪುನರ್ಚೇತನ ತರಬೇತಿ ಕಾರ್ಯಗಾರ ►ಸ್ತ್ರೀ ಶಕ್ತಿಯ ಸದ್ಭಳಕೆಯಿಂದ ಸಧೃಢ ಸಮಾಜ ನಿರ್ಮಾಣ – ಪಿ.ಪಿ.ವರ್ಗೀಸ್

(ನ್ಯೂಸ್ ಕಡಬ) newskadaba.com .ಕಡಬ,ಜ.23. ಕಡಬ: ದ.ಕ. ಜಿಲ್ಲಾ ಪಂಚಾಯಿತಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪುತ್ತೂರು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಮೂರು ದಿನ ನಡೆಯುವ ಗೊಂಚಲು ಸದಸ್ಯರ ಬಲವರ್ಧನೆಗಾಗಿ ಸ್ತ್ರೀ ಶಕ್ತಿ ಗೊಂಚಲು ಸದಸ್ಯರಿಗೆ ಪುನರ್ಚೇತನಾ ತರಬೇತಿ ಕಾರ್ಯಗಾರದ ಉದ್ಘಾಟನೆ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಉದ್ಘಾಟಿಸಿ ಮಾತನಾಡಿ, ಸ್ತ್ರೀಯರ ಶಕ್ತಿ ಸದ್ಭಳಕೆ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಬದುಕಿದಾಗ ಸಧೃಢ ಸಮಾಜ ನಿರ್ಮಾಣವಾಗುತ್ತದೆ . ಸರಕಾರ ಸ್ತ್ರೀ ಶಕ್ತಿ

ಕಡಬ: ಸ್ತ್ರೀ ಶಕ್ತಿ ಮಹಿಳೆಯರಿಗೆ ಪುನರ್ಚೇತನ ತರಬೇತಿ ಕಾರ್ಯಗಾರ ►ಸ್ತ್ರೀ ಶಕ್ತಿಯ ಸದ್ಭಳಕೆಯಿಂದ ಸಧೃಢ ಸಮಾಜ ನಿರ್ಮಾಣ – ಪಿ.ಪಿ.ವರ್ಗೀಸ್ Read More »

ಕರಾವಳಿ

ಆಲಂಕಾರು :  ಜೇಸಿಐ ನೂತನ ಘಟಕಾಧ್ಯಕ್ಷರಾಗಿ► ಹೇಮಲತಾ ಪ್ರದೀಪ್ ಆಯ್ಕೆ

(ನ್ಯೂಸ್ ಕಡಬ) newskadaba.com .ಕಡಬ,ಜ.23.  ಜೇಸಿಐ ಆಲಂಕಾರು ಘಟಕದ 10ನೇ ವರ್ಷದ ನೂತನ ಘಟಕಾಧ್ಯಕ್ಷರಾಗಿ ಹೇಮಲತಾ ಪ್ರದೀಪ್ ಆಯ್ಕೆಯಾಗಿದ್ದಾರೆ.ನೂತನ ಘಟಕದ ಪದಗ್ರಹಣ ಕಾರ್ಯಕ್ರಮವು ಜನವರಿ 25ರಂದು ಆಲಂಕಾರು ಗ್ರಾಮ ಪಂಚಾಯಿತಿ  ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ  ಆಲಂಕಾರು ಜೇಸಿಐ ಘಟಕದ ಕಾರ್ಯದರ್ಶಿಯಾಗಿ ಸತೀಶ್.ಜಿ.ಆರ್, ಜೇಸಿರೇಟ್ ಅಧ್ಯಕ್ಷೆಯಾಗಿ ಮಮತಾ ಆಂಬರಾಜೆ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷರಾಗಿ ಯೋಗೀಶ್‍ರವರು  ಅಧಿಕಾರ ಸ್ವೀಕರಿಸಲಿರಸಲಿದ್ದಾರೆ.

ಆಲಂಕಾರು :  ಜೇಸಿಐ ನೂತನ ಘಟಕಾಧ್ಯಕ್ಷರಾಗಿ► ಹೇಮಲತಾ ಪ್ರದೀಪ್ ಆಯ್ಕೆ Read More »

ಕರಾವಳಿ

ಲಿಂಗೈಕ್ಯರಾದ ಕಾಯಕ ಯೋಗಿ ಶ್ರೀ ಶಿವಕುಮಾರ್ ಸ್ವಾಮೀಜಿ ► ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.21. ನಡೆದಾಡುವ ದೇವರೆಂದೇ ಖ್ಯಾತಿಯ ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ (111) ಸೋಮವಾರದಂದು ನಿಧನರಾಗಿದ್ದು, ಶ್ರೀಗಳ ಗೌರವಾರ್ಥ ಮಂಗಳವಾರದಂದು ರಾಜ್ಯಾದ್ಯಂತ ಸರಕಾರಿ ರಜೆ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಸ್ವಾಮೀಜಿಯವರಿಗೆ ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು‌. ಭಾನುವಾರ ರಾತ್ರಿಯಿಂದ ಅವರ ಆರೋಗ್ಯದಲ್ಲಿ ಭಾರೀ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಮಠದಲ್ಲೇ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಯಿತಾದರೂ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ.

ಲಿಂಗೈಕ್ಯರಾದ ಕಾಯಕ ಯೋಗಿ ಶ್ರೀ ಶಿವಕುಮಾರ್ ಸ್ವಾಮೀಜಿ ► ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ:ಚಿನ್ನದ ನಕ್ಲೇಸ್ ಇದ್ದ ವ್ಯಾನಿಟಿ ಬ್ಯಾಗ್ ಎಗರಿಸಿದ ಕಳ್ಳರು ►ಸಿಸಿ ಕ್ಯಾಮರಾದಿಂದ ಇಬ್ಬರನ್ನು ಬಂಧಿಸಿದ ಪೋಲಿಸರು

 (ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜ.19. ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮಧ ರವರು ಅಮರ್‌ಜಾಲ್ ಮನೆ, ಗುರುವಾಯನಕೆರೆ ನಿವಾಸಿಯಾಗಿರುವ   ಶ್ರೀಮತಿ ದಯಾ ರವರು ಅವರ ದಿನಸಿ ಅಂಗಡಿಯಲ್ಲಿದ್ದ ಸಮಯದಲ್ಲಿ  ಮೂವರು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ  ಬಂದರು. ಅದರಲ್ಲಿ ಓರ್ವನು ಕೋಲ್ಡ್‌ ಕೊಡುವಂತೆ ಕೇಳಿದನು. ದಯಾರವರು ಅಪರಿಚಿತ ವ್ಯಕ್ತಿಗೆ  ಕೋಲ್ಡ್‌ ನೀಡಿದರು. ನಂತರ ಇತರ ಗಿರಾಕಿಗಳಿಗೆ ಸಾಮಾನುಗಳನ್ನು ನೀಡಿದರು.ನಂತರ ಸುಮಾರು 11:20 ಗಂಟೆಗೆ ಅವರ ಗೂಂಪಿನಲ್ಲಿ  ಓರ್ವನು ಬಟಾಟೆ ಹಾಗೂ ಈರುಳ್ಳಿ ನೀಡುವಂತೆ ಕೇಳಿದಾಗ ದಯಾರವರು  ನೀಡಿದರು. ನಂತರ  ಆ ಅಪರಿಚಿತ ವ್ಯಕ್ತಿ

ಬೆಳ್ತಂಗಡಿ:ಚಿನ್ನದ ನಕ್ಲೇಸ್ ಇದ್ದ ವ್ಯಾನಿಟಿ ಬ್ಯಾಗ್ ಎಗರಿಸಿದ ಕಳ್ಳರು ►ಸಿಸಿ ಕ್ಯಾಮರಾದಿಂದ ಇಬ್ಬರನ್ನು ಬಂಧಿಸಿದ ಪೋಲಿಸರು Read More »

ಕರಾವಳಿ

ರಾಮಕುಂಜ: ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ರಾಮಕುಂಜ ಅಮೈ ಕೆರೆ ವೀಕ್ಷಣೆ

 (ನ್ಯೂಸ್ ಕಡಬ) newskadaba.com.ಮಂಗಳೂರು,ಜ.19.ಕಡಬ ಪ್ರವಾದಲ್ಲಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿಯವರು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೈ ಯಲ್ಲಿ ನಿರ್ಮಾಣವಾದ ಕೆರೆಯನ್ನು ವೀಕ್ಷಣೆ ಮಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ, ರಾಮಕುಂಜ ಗ್ರಾಮ ಪಂಚಾಯತಿ ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಅವರ ಅನುದಾನದಿಂದ ಸುಮಾರು ಐವತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಬಹುಉಪಯೋಗಿ ಕೆರೆಯನ್ನು ವೀಕ್ಷಣೆ ಮಾಡಿದ ಸೆಲ್ವಮಣಿಯವರು ಪಂಚಾಯತಿ ಈ ಸಾಧನೆಯನ್ನು ಶ್ಲಾಘಿಸಿದರು. ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ ಹಾಗೂ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ

ರಾಮಕುಂಜ: ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ರಾಮಕುಂಜ ಅಮೈ ಕೆರೆ ವೀಕ್ಷಣೆ Read More »

ಕರಾವಳಿ

ದ.ಕ ಜಿಲ್ಲಾ ಕೆ.ಡಿ.ಪಿ ಸಭೆ ► ನಿಗಮಗಳಲ್ಲಿ ಗುರಿ, ಸಾಧನೆ ಹೆಚ್ಚಿಸಿ ಮೀನಾಕ್ಷಿ ಶಾಂತಿಗೋಡು

  (ನ್ಯೂಸ್ ಕಡಬ) newskadaba.com.ಮಂಗಳೂರು,ಜ.19.ವಿವಿಧ ನಿಗಮಗಳಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸ್ವಸಹಾಯ ಸಂಘಗಳಿಗೆ ನೀಡುವ ಸಹಾಯಧನ ಹಾಗೂ ನೆರವಿನ ಗುರಿ ಹಾಗೂ ಸಾಧನೆಯನ್ನು ಹೆಚ್ಚಿಸಿ ಎಂದು ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಸಲಹೆ ಮಾಡಿದರು.  ಅವರಿಂದು ನೇತ್ರಾವತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಿಗಮದಿಂದ ದೊರಕುವ ಕಿರುಸಾಲ ಯೋಜನೆಗೆ(ಪ್ರೇರಣಾ) ಜಿಲ್ಲೆಯಲ್ಲಿ ಸ್ವಸಹಾಯ ಸಂಸ್ಥೆಗಳಿಂದ ಸಾಕಷ್ಟು ಬೇಡಿಕೆ ಇದ್ದರೂ  ಮಾಹಿತಿ ಹಾಗೂ ಹೆಚ್ಚಿನ ಗುರಿ ನಿಗದಿಯ ಅಗತ್ಯವಿದೆ ಎಂದು ಅಧ್ಯಕ್ಷರು ಹೇಳಿದರು.

ದ.ಕ ಜಿಲ್ಲಾ ಕೆ.ಡಿ.ಪಿ ಸಭೆ ► ನಿಗಮಗಳಲ್ಲಿ ಗುರಿ, ಸಾಧನೆ ಹೆಚ್ಚಿಸಿ ಮೀನಾಕ್ಷಿ ಶಾಂತಿಗೋಡು Read More »

ಕರಾವಳಿ

ಇನ್ಮುಂದೆ ಪ್ರತಿಭಟನೆ ನಡೆಸಬೇಕಾದರೆ ಶುಲ್ಕ ಪಾವತಿ ಮಾಡಬೇಕಂತೆ ► ಸದ್ಧಿಲ್ಲದೆ ಕಾನೂನು ಜಾರಿಗೊಳಿಸಿದ ಪೋಲಿಸ್ ಇಲಾಖೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.19.ಬೇಡಿಕೆ, ಅನ್ಯಾಯ, ಹಕ್ಕುಗಳಿಗಾಗಿ ಹೋರಾಟದ ಮೂಲಕ ಸಂಬಂಧಪಟ್ಟವರನ್ನು ಎಚ್ಚರಿಸಲು ಸಂತ್ರಸ್ತರಿಗೆ ಸಂವಿಧಾನ ಅವಕಾಶ ಕಲ್ಪಿಸಿದೆ. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ದುಬಾರಿ ದರ ವಿಧಿಸುವ ಮೂಲಕ ಹೋರಾಟಗಳನ್ನು ಹತ್ತಿಕ್ಕಲು ಮುಂದಾಗಿದೆ.ರಾಜ್ಯದಲ್ಲಿ ನಡೆಯುತ್ತಿರುವ ರೆಸಾರ್ಟ್ ರಾಜಕೀಯ ಖಂಡಿಸಿ, ಜಿಲ್ಲೆಯ ಶಾಸಕರು ಸಾರ್ವಜನಿಕರ ಭೇಟಿಗೆ ಸಿಗದೇ ಇರುವುದನ್ನು ವಿರೋಧಿಸಿ ಡಿವೈಎಫ್‌ಐ ಜಿಲ್ಲಾ ಸಮಿತಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಧ್ವನಿವರ್ಧಕ ಇಲ್ಲದೆ ಶಾಂತಿಯುತ ಸಾಂಕೇತಿಕ ಪ್ರತಿಭಟನೆ ಆಯೋಜಿಸಿತ್ತು. 50 ಮಂದಿ ಇದರಲ್ಲಿ ಭಾಗವಹಿಸಿದ್ದರು. ಇದಕ್ಕೆ

ಇನ್ಮುಂದೆ ಪ್ರತಿಭಟನೆ ನಡೆಸಬೇಕಾದರೆ ಶುಲ್ಕ ಪಾವತಿ ಮಾಡಬೇಕಂತೆ ► ಸದ್ಧಿಲ್ಲದೆ ಕಾನೂನು ಜಾರಿಗೊಳಿಸಿದ ಪೋಲಿಸ್ ಇಲಾಖೆ Read More »

ಕರಾವಳಿ

ಅಲ್ಲಲಿ ವರದಿಯಾಗುತ್ತಿರುವ ಮಂಗನಖಾಯಿಲೆ ►ಮುಂಜಾಗ್ರತೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

  (ನ್ಯೂಸ್ ಕಡಬ) newskadaba.com.ಮಂಗಳೂರು,ಜ.19. ನೆರೆ ಜಿಲ್ಲೆಗಳಲ್ಲಿ ಮಂಗನಖಾಯಿಲೆ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಮತ್ತು ಅರಣ್ಯದಂಚಿನಲ್ಲಿ ಈಗಾಗಲೇ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಣಾಧಿಕಾರಿ, ವಲಯ ಅರಣ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದರು.ಇಂದು ಜಿಲ್ಲಾ ಪಂಚಾಯತ್‍ನ ವಿಡಿಯೊ ಕಾನ್ಫರೆನ್ಸ್ ಹಾಲ್‍ನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮುಂಜಾಗ್ರತ  ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಿರಂತರವಾಗಿ ಪರಿಸ್ಥಿತಿಯ ಮೇಲೆ ಕಣ್ಣಿರಿಸಲು ಸಮಿತಿ ರಚನೆ

ಅಲ್ಲಲಿ ವರದಿಯಾಗುತ್ತಿರುವ ಮಂಗನಖಾಯಿಲೆ ►ಮುಂಜಾಗ್ರತೆ ವಹಿಸಲು ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ಮುಂದಿನ ವರ್ಷದಿಂದ ಶಾಲಾ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡು ಡ್ಯಾನ್ಸ್ ನಿಷೇಧ

(ನ್ಯೂಸ್ ಕಡಬ) newskadaba.com. ಬೆಂಗಳೂರು,ಜ.18. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಸಿನಿಮಾ ಹಾಡು ಹಾಡುವಂತಿಲ್ಲ ಹಾಗೂ ಯಾವುದೇ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುವಂತಿಲ್ಲ.ಈ ಸಿನಿಮಾ ಹಾಡುಗಳಿಂದ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಲಿದೆ, ಈ ಎಲ್ಲಾ ನಿಯಮಗಳು ರಾಜ್ಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯಿಸಲಿದೆ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಅವರ ಆಸಕ್ತಿಗಳನ್ನು ಪರಿಗಣಿಸಿಲ್ಲ, ಸಣ್ಣ ಮಕ್ಕಳು ದೊಡ್ಡ ವಯಸ್ಸಿನವರ ಹಾಡುಗಳಿಗೆ ಡ್ಯಾನ್ಸ್ ಮಾಡುವುದು ಸರಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಮುಂದಿನ ವರ್ಷದಿಂದ ಶಾಲಾ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡು ಡ್ಯಾನ್ಸ್ ನಿಷೇಧ Read More »

ಕರಾವಳಿ
Scroll to Top