News Kadaba Desk

ಡೆಂಗ್ಯು : ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಲು ಸಂಘ ಸಂಸ್ಥೆಗಳಿಗೆ ಕರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮನೆ ಮನೆ ಭೇಟಿ ನೀಡಿ ಮಂಗಳೂರು ನಗರದ ಸುತ್ತಮುತ್ತ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣ ಆಗುವ ಯಾವುದೇ ರೀತಿಯ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ, ಸಂಪೂರ್ಣ ಸ್ವಚ್ಛತಗೊಳಿಸಲು ಅಭಿಯಾನ ನಡೆಸಲು ಎಲ್ಲಾ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ನಗರಪಾಲಿಕೆ ಜಂಟಿ ಆಯುಕ್ತರಾದ ಗಾಯತ್ರಿ ನಾಯಕ್ ಹೇಳಿದರು. ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆ ಸಭಾಂಗಣದಲ್ಲಿ ನಡೆದ ಸಾಂಕ್ರಮಿಕ ರೋಗಗಳ ನಿಯಂತ್ರಣ ಕುರಿತು ಜನಜಾಗೃತಿ ಸರ್ಕಾರೇತರ ಸಂಸ್ಥೆಗಳ (ಎನ್‍ಜಿಓ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿಮ್ಮ […]

ಡೆಂಗ್ಯು : ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಲು ಸಂಘ ಸಂಸ್ಥೆಗಳಿಗೆ ಕರೆ Read More »

ಕರಾವಳಿ

ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ತ್ವರಿತ ಕ್ರಮಕ್ಕೆ ಸೂಚನೆ ➤ ಎಸ್. ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತವಾದ ಸಮಿತಿಗಳ ರಚನೆ ಆಗಬೇಕು ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಹೇಳಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಮಂಗಳಮುಖಿಯರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಂಗಳಮುಖಿಯರ ಗುಂಪುಗಳನ್ನು ಮಾಡಿ ಅದರಲ್ಲಿ ನಿಪುಣತೆ ಹೊಂದಿದ ವ್ಯಕಿಯನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಬೇಕು. ಗುರುತಿನ

ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ತ್ವರಿತ ಕ್ರಮಕ್ಕೆ ಸೂಚನೆ ➤ ಎಸ್. ಸಸಿಕಾಂತ್ ಸೆಂಥಿಲ್ Read More »

ಕರಾವಳಿ

ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮೂಡಬಿದ್ರೆ ತಾಲೂಕು ಮಂಟ್ರಾಡಿ ಗ್ರಾಮದ ಅರಂತ್ ಹೌಸ್ ಎಂಬಲ್ಲಿನ ನಿವಾಸಿ ಆಶಾ(21) ವರ್ಷ ಜುಲೈ 16 ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೋದವರು, ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಮೂಡಬಿದ್ರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದವರ ಚಹರೆ ಇಂತಿವೆ: ಎತ್ತರ – 4.5 ಅಡಿ, ಕಪ್ಪು ಮೈಬಣ್ಣ, ಸಣ್ಣ ತೆಳ್ಳಗೆ ಕಪ್ಪು ಕೂದಲು, ಸಾಧಾರಣಾ ಮೈಕಟ್ಟು, ಕೆಂಪು ಟಾಪ್, ಕಪ್ಪು ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಭಾಷೆ

ಕಾಣೆಯಾಗಿದ್ದಾರೆ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಗ್ರೂಪ್ ‘ಡಿ’ ನೌಕರರ ಮಕ್ಕಳಿಗೆ ➤ ಪ್ರತಿಭಾ ಪುರಸ್ಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಜುಲೈ 13 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ‘ಡಿ’ ಗ್ರೂಪ್ ನೌಕರರ ಸುಮಾರು 28 ಮಕ್ಕಳು ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ 2018-19 ನೇ ಸಾಲಿನ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದು, ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಾಂಕಿ ಪ್ರಾನ್ಸಿಸ್ ಕುಟ್ಹಿನ ವಹಿಸಿದ್ದರು. ಜಿಲ್ಲಾ ಸರ್ಜನ್ ಡಾ|| ರಾಜೇಶ್ಚರಿ ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ನಗರಾಭಿವೃದ್ಧಿ ಕೋಶದ

ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಗ್ರೂಪ್ ‘ಡಿ’ ನೌಕರರ ಮಕ್ಕಳಿಗೆ ➤ ಪ್ರತಿಭಾ ಪುರಸ್ಕಾರ Read More »

ಕರಾವಳಿ

ಆ.4 – ಪಿಲಿಕುಳ ಗುತ್ತು ಮನೆಯಲ್ಲಿ ಆಟಿಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಪಿಲಿಕುಳದ ಗುತ್ತು ಮನೆಯಲ್ಲಿ ವಿಜಯಾ ಬ್ಯಾಂಕ್‍ಮಾಂಡೋವಿ ಮೋಟಾರ್ಸ್ ಪ್ರೈ.ಲಿ., ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ರೋಟರಿ ಕ್ಲಬ್ ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಆಗಷ್ಟ್ 4ರಂದು ಬೆಳಿಗ್ಗೆ 10 ಗಂಟೆಯಿಂದ ಪಿಲಿಕುಳ ಆಟಿಕೂಟವನ್ನು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಸೀತಾರಾಮ್‍ಕುಮಾರ್ ಕಟೀಲ್ ಇವರ ಸಾರಥ್ಯದಲ್ಲಿ “ಯಕ್ಷ, ನೃತ್ಯ ಮತ್ತು ಹಾಸ್ಯ ವೈಭವ” ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಸದಸ್ಯರಿಂದ

ಆ.4 – ಪಿಲಿಕುಳ ಗುತ್ತು ಮನೆಯಲ್ಲಿ ಆಟಿಕೂಟ Read More »

ಕರಾವಳಿ

ರಾಷ್ಟ್ರೀಯ ಶಿಕ್ಷಣ ಕರಡು ನೀತಿ-2019 ➤ ಸಂವಾದ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ರಾಷ್ಟ್ರೀಯ ಶಿಕ್ಷಣ ನೀತಿಯು ಖಾಸಗೀಕರಣ, ಜಾಗತೀಕರಣ ಬಂಡವಾಳಶಾಹಿಗಳ ಪರವಾಗಿದೆ ಇದು ರಚನಾತ್ಮಕ ಕ್ರಿಯೆ ಮಾತ್ರ ಎಂದು ಶಿಕ್ಷಣ ಚಿಂತಕ, ಮಂಗಳೂರು ವಿವಿಯ ನಿವೃತ್ತ ಆಂಗ್ಲ ಬಾಷೆ ಪ್ರಾದ್ಯಾಪಕ ಪ್ರೊ. ಸುಕುಮಾರ ಗೌಡ ಆರೊಪಿಸಿದರು. ಇಂದು ಮಂಗಳೂರು ವಿಶ್ವವಿದ್ಯಾನಿಲಯ, ಮತ್ತು ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನಗಳ ಕೇಂದ್ರ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ”ರಾಷ್ಟ್ರೀಯ ಶಿಕ್ಷಣ ಕರಡು ನೀತಿ”ಯ ಉನ್ನತ ಶಿಕ್ಷಣದ ಕಾಳಜಿಗಳು ಮತ್ತು ಸವಾಲುಗಳ ಬಗ್ಗೆ ಮುಕ್ತ ಸಂವಾದ ಕಾರ್ಯಕ್ರಮವು ಮಂಗಳೂರು

ರಾಷ್ಟ್ರೀಯ ಶಿಕ್ಷಣ ಕರಡು ನೀತಿ-2019 ➤ ಸಂವಾದ ಕಾರ್ಯಕ್ರಮ Read More »

ಕರಾವಳಿ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರ ಪರಿಷ್ಕರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರಗಳನ್ನು ದಿನಾಂಕ: 01-04-2019 ರಿಂದ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ. 0-8 ಕಿಲೋ ಲೀಟರ್‍ಗೆ ರೂ 7 ಪ್ರತೀ ಕಿ.ಲೀ ಗೆ, 8 ಕಿ.ಲೀ ನಿಂದ 15 ಕಿ.ಲೀ ವರೆಗೆ ಪ್ರತೀ ಕಿ.ಲೀ ಗೆ ರೂ 9/-, 15 ಕಿ.ಲೀ ನಿಂದ 25 ಕಿ.ಲೀ ವರೆಗೆ ಪ್ರತೀ ಕಿ.ಲೀ ಗೆ ರೂ 11., 25 ಕಿ.ಲೀ ಕ್ಕಿಂತ ಅಧಿಕ ನೀರು ಉಪಯೋಗಿಸಿದಲ್ಲಿ ಪ್ರತೀ ಕಿ.ಲೀ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರ ಪರಿಷ್ಕರಣೆ Read More »

ಕರಾವಳಿ

ಕರಾವಳಿಯಲ್ಲಿ ಮುಂದುವರಿದ ಮಳೆ ➤ ನಾಳೆ (ಮಂಗಳವಾರ) ಶಾಲಾ ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.22. ಕರ್ನಾಟಕದ ಕರಾವಳಿ ಭಾಗದಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 25 ರ ವರೆಗೆ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ಹೊರಡಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ಮುಂದುವರಿದ ಮಳೆ ➤ ನಾಳೆ (ಮಂಗಳವಾರ) ಶಾಲಾ ಕಾಲೇಜುಗಳಿಗೆ ರಜೆ Read More »

ಕರಾವಳಿ

ಶಿರಾಡಿ ಘಾಟ್ ರೈಲ್ವೇ ಹಳಿಯಲ್ಲಿನ ಅಪಾಯಕಾರಿ ಬಂಡೆ ತೆರವು ಹಿನ್ನೆಲೆ ➤ ಇಂದು ಮತ್ತು ನಾಳೆ ಮಂಗಳೂರು – ಬೆಂಗಳೂರು ರೈಲು ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.20. ಶಿರಾಡಿ ಘಾಟ್‌ ರೈಲು ಮಾರ್ಗದಲ್ಲಿ ಸಿರಿಬಾಗಿಲು ಸಮೀಪದ ಮಣಿಭಾಂಡ ಬಳಿ ರೈಲು ಹಳಿಗೆ ಹೊಂದಿಕೊಂಡಿದ್ದ ಅಪಾಯಕಾರಿ ಬಂಡೆಯನ್ನು ತೆರವುಗೊಳಿಸುವ ಸಲುವಾಗಿ ಎರಡು ದಿನಗಳ ಕಾಲ ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಿರಾಡಿ ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯಕಾರಿ ಬಂಡೆ ಯಾವುದೇ ಕ್ಷಣದಲ್ಲಿ ರೈಲು ಹಳಿಯ ಮೇಲೆ ಉರುಳಿ ಬಿಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ರೈಲ್ವೇ ಇಲಾಖೆಯು ಬಂಡೆ ತೆರವು ಕಾರ್ಯ ಆರಂಭಿಸಿದ್ದು, ಅದರಂತೆ ಶನಿವಾರ

ಶಿರಾಡಿ ಘಾಟ್ ರೈಲ್ವೇ ಹಳಿಯಲ್ಲಿನ ಅಪಾಯಕಾರಿ ಬಂಡೆ ತೆರವು ಹಿನ್ನೆಲೆ ➤ ಇಂದು ಮತ್ತು ನಾಳೆ ಮಂಗಳೂರು – ಬೆಂಗಳೂರು ರೈಲು ಸಂಚಾರ ಸ್ಥಗಿತ Read More »

ಕರ್ನಾಟಕ

ಕಡಬ: ಕಲ್ಲಂತಡ್ಕ ಸರಕಾರಿ ಜಾಗದಲ್ಲಿದ್ದ ಅಕ್ರಮ ಕಟ್ಟಡಗಳ ತೆರವು

(ನ್ಯೂಸ್ ಕಡಬ) newskadaba.com ಕಡಬ, ಜು.19. ಕಡಬ ಗ್ರಾ.ಪಂ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ಎಂಬಲ್ಲಿರುವ ಸಾರ್ವಜನಿಕ ಸ್ಮಶಾನದ ಬಳಿಯ ಸರಕಾರಿ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವುದನ್ನು ಕಂದಾಯ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು. ಪುತ್ತೂರು ಸಹಾಯಕ ಆಯುಕ್ತರು ಎಚ್.ಕೆ ಕೃಷ್ಣಮೂರ್ತಿ ಆದೇಶದಂತೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರೀಗಸ್ ಅವರ ನೇತೃತ್ವದ ಕಂದಾಯ ಅಧಿಕಾರಿಗಳ ತಂಡದ ಉಪಸ್ಥಿತಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ ಜನರೇ ಸ್ವಯಂಪ್ರೇರಿತವಾಗಿ ಅಕ್ರಮ ಕಟ್ಟಡ ತೆರವು ಕಾರ್ಯಚರಣೆ ನೇರವೇರಿಸಿದರು. ಈಗಾಗಲೇ ಆಕ್ರಮ ಕಟ್ಟಡ

ಕಡಬ: ಕಲ್ಲಂತಡ್ಕ ಸರಕಾರಿ ಜಾಗದಲ್ಲಿದ್ದ ಅಕ್ರಮ ಕಟ್ಟಡಗಳ ತೆರವು Read More »

ಕರಾವಳಿ
Scroll to Top