News Kadaba Desk

ಮಂಗಳೂರು: ಯುವಕನಿಗೆ ಇರಿದು ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.30. ಬರ್ಬರವಾಗಿ ಇರಿದು ಕೊಲೆಗೈದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹವೊಂದು ನಗರದ ಹೊರವಲಯದ ತೊಕ್ಕೊಟ್ಟು ಬಳಿ ಕಂಡುಬಂದಿದೆ. ತೊಕ್ಕೊಟ್ಟು ಕಾಪಿಕಾಡ್ ನ ರೈಲ್ವೆ ಹಳಿ ಸಮೀಪ ಯುವಕನ ಮೃತದೇಹ ಪತ್ತೆಯಾಗಿದ್ದು, ಬೆನ್ನು ಮತ್ತು ಎದೆಗೆ ಇರಿದ ಗಾಯಗಳು ಕಂಡುಬಂದಿದೆ. ಘಟನೆಯು ಇಂದು ನಡೆದಿರಬಹುದೆಂದು ಶಂಕಿಸಲಾಗಿದೆ‌. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಯಾರು, ಯಾಕಾಗಿ ಕೊಂದರೆಂದು ತನಿಖೆಯ […]

ಮಂಗಳೂರು: ಯುವಕನಿಗೆ ಇರಿದು ಬರ್ಬರ ಕೊಲೆ Read More »

ಕರಾವಳಿ

ಕಡಬ: ಯುವಕ ನಾಪತ್ತೆ ➤ ಅಪಹರಣ ಶಂಕೆ ವ್ಯಕ್ತಪಡಿಸಿದ ಪೋಷಕರು

(ನ್ಯೂಸ್ ಕಡಬ) newskadaba.com ಕಡಬ, ನ.29. ದನ ಮೇಯಿಸಲೆಂದು ಗುಡ್ಡೆಗೆ ತೆರಳಿದ್ದ ಯುವಕನೋರ್ವ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಆಲಂಕಾರಿನಿಂದ ವರದಿಯಾಗಿದೆ. ನಾಪತ್ತೆಯಾಗಿರುವ ಯುವಕನನ್ನು ಆಲಂಕಾರು ಗ್ರಾಮದ ಉಜುರುಳಿ ನಿವಾಸಿ ಗೋಪಾಲಕೃಷ್ಣ ಉಪಾಧ್ಯಾಯ ಎಂಬವರ ಪುತ್ರ ಶಿವಕುಮಾರ್ (17) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ದನ ಮೇಯಿಸಲೆಂದು ಗುಡ್ಡೆಗೆ ತೆರಳಿದ್ದ ಈತ ಹಿಂತಿರುಗದೆ ಇದ್ದುದರಿಂದ ಹುಡುಕಾಡಿದ ಪೋಷಕರು ತನ್ನ ಮಗನನ್ನು ಯಾರೋ ಅಪಹರಿಸಿರುವ ಶಂಕೆ ವ್ಯಕ್ತಪಡಿಸಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ: ಯುವಕ ನಾಪತ್ತೆ ➤ ಅಪಹರಣ ಶಂಕೆ ವ್ಯಕ್ತಪಡಿಸಿದ ಪೋಷಕರು Read More »

ಕರಾವಳಿ

ಬಂಟ್ವಾಳ: ಬೆಳ್ಳಂಬೆಳಗ್ಗೆ ಪತಿ, ಪತ್ನಿಗೆ ತಲವಾರಿನಿಂದ ಇರಿತ ➤ ಮೂವರ ತಂಡದಿಂದ ಕೃತ್ಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.29. ಮನೆಗೆ ನುಗ್ಗಿದ ತಂಡವೊಂದು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಆತನ ಪತ್ನಿಗೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಪರಾರಿಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಗಾಯಾಳುಗಳನ್ನು ಫರಂಗಿಪೇಟೆ ಸಮೀಪದ ಮೇರಮಜಲು ನಿವಾಸಿ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಹಾಗೂ ಅವರ ಪತ್ನಿ ಶೋಭಾ ಎಂದು ಗುರುತಿಸಲಾಗಿದೆ. ಮುಂಜಾನೆ 4 ಗಂಟೆಯ ವೇಳೆ ಮೇರಮಜಲು ನಿವಾಸಿ ಪ್ರಸಾದ್ ಬೆಳ್ಚಾಡ ಮತ್ತು ಅತನ ಇಬ್ಬರು ಸ್ನೇಹಿತರು ಯೋಗೀಶ್ ಪ್ರಭು ಅವರ ಮನೆಗೆ

ಬಂಟ್ವಾಳ: ಬೆಳ್ಳಂಬೆಳಗ್ಗೆ ಪತಿ, ಪತ್ನಿಗೆ ತಲವಾರಿನಿಂದ ಇರಿತ ➤ ಮೂವರ ತಂಡದಿಂದ ಕೃತ್ಯ Read More »

ಕರಾವಳಿ
Astrology

ನ.29: ಇಂದಿನ ದಿನ ಭವಿಷ್ಯ

ಸಹೋದರ ವರ್ಗದೊಡನೆ ಪದೇಪದೇ ಕಲಹ ಆಗುತ್ತಿದ್ದರೆ ಅಥವಾ ಆಸ್ತಿ ಹಣಕಾಸಿನ ವಿಚಾರಗಳಿಂದ ನಿಮ್ಮಲ್ಲಿ ವೈಮನಸ್ಸು ತುಂಬಿದ್ದರೆ ಬೇಗನೆ ಇತ್ಯರ್ಥವಾಗಲು ಗುರುವಾರದಂದು ಹಾಲನ್ನು ಶಕ್ತಿ ದೇವತೆಗೆ ನೈವೇದ್ಯವಾಗಿ ನೀಡಿ. ಶ್ರೀ ಅನ್ನಪೂರ್ಣೇಶ್ವರಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ

ನ.29: ಇಂದಿನ ದಿನ ಭವಿಷ್ಯ Read More »

ಭವಿಷ್ಯ

➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ನವೆಂಬರ್ 28)

➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ನವೆಂಬರ್ 28) ವೀಡಿಯೋಗಾಗಿ??ಕ್ಲಿಕ್ ಮಾಡಿ  

➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ನವೆಂಬರ್ 28) Read More »

ಕರಾವಳಿ

ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೊಸ ಬೈಕ್ ಕೊಳ್ಳುವ ಆಸೆಯೇ..? ➤ ಚಂಪಾ ಷಷ್ಠಿ ಪ್ರಯುಕ್ತ ಕಡಬದ ‘ಶ್ರೀ ಯಮಹಾ’ ದಲ್ಲಿ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ನ.28. ಬಹು ಬೇಡಿಕೆಯ ಯಮಹಾ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರ ಕಡಬದ ಪಂಜ ರಸ್ತೆಯ ಸರಸ್ವತೀ ಶಾಲೆಯ ಬಳಿ ಕಾರ್ಯಾಚರಿಸುತ್ತಿರುವ ‘ಶ್ರೀ ಮೋಟಾರ್ಸ್’ ನಲ್ಲಿ ಚಂಪಾ ಷಷ್ಠಿ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ. ಕೇವಲ 4999 ರೂ. ಗಳನ್ನು ಪಾವತಿಸುವ ಮೂಲಕ ತಮಗಿಷ್ಟವಾದ ಯಮಹಾ ದ್ವಿಚಕ್ರ ವಾಹನವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. 95 ಶೇಕಡದವರೆಗೆ ಅತೀ ಕಡಿಮೆ ಬೆಲೆಯಲ್ಲಿ ಮಾಸಿಕ ಕಂತು ಯೋಜನೆಯಡಿ ಸಾಲ ಸೌಲಭ್ಯಗಳನ್ನು ಗ್ರಾಹಕರಿಗಾಗಿ

ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೊಸ ಬೈಕ್ ಕೊಳ್ಳುವ ಆಸೆಯೇ..? ➤ ಚಂಪಾ ಷಷ್ಠಿ ಪ್ರಯುಕ್ತ ಕಡಬದ ‘ಶ್ರೀ ಯಮಹಾ’ ದಲ್ಲಿ ವಿಶೇಷ ಆಫರ್ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

ಕಡಬ: ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ನ.28. ಕೆಲಸಕ್ಕೆಂದು ತೆರಳಿದ್ದ ಕಡಬದ ಯುವತಿಯೋರ್ವಳು ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು, ಈ ಬಗ್ಗೆ ಆಕೆಯ ತಾಯಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾದ ಯುವತಿಯನ್ನು ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಬೇರಿಕೆ ನಿವಾಸಿ ಮೋನಪ್ಪ ಕುಂಬಾರ ಎಂಬವರ ಪುತ್ರಿ ಕು| ಶ್ವೇತಾ ಎಂದು ಗುರುತಿಸಲಾಗಿದೆ. ಈಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ತನಗೆ ಕೆಲಸ‌ ಸಿಕ್ಕಿದೆಯೆಂದು ಹೇಳಿ ಕಳೆದ ಆಗಸ್ಟ್ 12 ರಂದು ಮನೆಯಿಂದ ತೆರಳಿದ್ದು, ಆ ಬಳಿಕ ತಿಂಗಳಲ್ಲಿ ಒಂದು

ಕಡಬ: ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ Read More »

ಕರಾವಳಿ

ನೆಲ್ಯಾಡಿ: ರಸ್ತೆಗುರುಳಿದ ಬೈಕ್ ➤ ಶಾಲಾ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.28. ಬೈಕೊಂದು ಸ್ಕಿಡ್ ಆಗಿ ರಸ್ತೆಗುರುಳಿದ ಪರಿಣಾಮ ಸಹ ಸವಾರ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಗುರುವಾರದಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕೋಲ್ಪೆ ನಿವಾಸಿ, ನೆಲ್ಯಾಡಿಯ ಖಾಸಗಿ ವಿದ್ಯಾಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿ ಕಿರಣ್ ಎಂದು ಗುರುತಿಸಲಾಗಿದೆ. ಕಿರಣ್ ಸಹ ಸವಾರನಾಗಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಗೋಳಿತೊಟ್ಟು ಸಮೀಪ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಸಹ ಸವಾರ ಗಂಭೀರ ಗಾಯಗೊಂಡಿದ್ದಾನೆ. ಕಿರಣ್ ನನ್ನು ತಕ್ಷಣವೇ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ

ನೆಲ್ಯಾಡಿ: ರಸ್ತೆಗುರುಳಿದ ಬೈಕ್ ➤ ಶಾಲಾ ವಿದ್ಯಾರ್ಥಿ ಮೃತ್ಯು Read More »

ಕರಾವಳಿ

ಉಡುಪಿ: ಪತ್ನಿ, ಇಬ್ಬರು ಪುತ್ರರನ್ನು ಕೊಚ್ಚಿ ಬರ್ಬರ ಕೊಲೆ ➤ ಬಳಿಕ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

(ನ್ಯೂಸ್ ಕಡಬ) newskadaba.com ಉಡುಪಿ, ನ.27. ವ್ಯಕ್ತಿಯೋರ್ವರು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ವೆ ಎಂಬಲ್ಲಿ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ.   ಬೆಳ್ವೆ ಗ್ರಾಮದ ಸೂರ್ಗೊಳಿ ಸಮೀಪದ ಸೆತ್ತೋಳಿ ನಿವಾಸಿ ಸೂರ್ಯ ನಾರಾಯಣ ಭಟ್ ಅಲ್ಸೆ (52) ಎಂಬವರು ತನ್ನ ಪತ್ನಿ ಮಾನಸ(50), ಪುತ್ರರಾದ ಸುಧೀಂದ್ರ(14) ಮತ್ತು ಸುದೇಶ್ (8) ಎಂಬವರನ್ನು ಮಾರಕಾಯುಧದಿಂದ ಕೊಚ್ಚಿ ಕೊಂದು ನಂತರ

ಉಡುಪಿ: ಪತ್ನಿ, ಇಬ್ಬರು ಪುತ್ರರನ್ನು ಕೊಚ್ಚಿ ಬರ್ಬರ ಕೊಲೆ ➤ ಬಳಿಕ ಆತ್ಮಹತ್ಯೆಗೆ ಶರಣಾದ ವ್ಯಕ್ತಿ Read More »

ಕರ್ನಾಟಕ

ವ್ಯಾಪಾರದಲ್ಲಿ ಹೆಚ್ಚಿನ ಲಾಭಕ್ಕಾಗಿ ಹೀಗೆ ಮಾಡಿ

ವ್ಯಾಪಾರದಲ್ಲಿ ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದರೆ ಹಾಗೂ ಗ್ರಾಹಕರು ನಿಮ್ಮತ್ತ ಸೆಳೆಯಬೇಕು ಎಂಬ ಭಾವನೆ ನಿಮ್ಮಲ್ಲಿದ್ದರೆ ಗುರುವಾರದಂದು ಇರುವೆಗೆ ಸಿಹಿ ಆಹಾರವನ್ನು ನೀಡಿ ಒಳಿತಾಗುತ್ತದೆ. ಶ್ರೀ ಸಾಯಿರಾಂ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು

ವ್ಯಾಪಾರದಲ್ಲಿ ಹೆಚ್ಚಿನ ಲಾಭಕ್ಕಾಗಿ ಹೀಗೆ ಮಾಡಿ Read More »

ಭವಿಷ್ಯ
Scroll to Top