News Kadaba Desk

ರಾಜ್ಯದಲ್ಲೂ ಪೌರತ್ವ ಕಾನೂನು ಶೀಘ್ರದಲ್ಲೇ ಜಾರಿ ➤ ಈ ಬಗ್ಗೆ ಸಿಎಂ ಬಿಎಸ್ವೈಗೆ ಕರೆ ಮಾಡಿದ ಪಿಎಂ ಮೋದಿ ಹೇಳಿದ್ದೇನು.?

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.15. ರಾಜ್ಯದಲ್ಲೂ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ. ಶನಿವಾರದಂದು ಸಿಎಂಗೆ ಕರೆ ಮಾಡಿ ಉಪ ಚುನಾವಣೆಯಲ್ಲಿ 12 ಸ್ಥಾನ ಗೆದ್ದು ಕರ್ನಾಟಕದಲ್ಲಿ ಸದೃಢ ಬಿಜೆಪಿ ಸರಕಾರವನ್ನು ಹೊಂದಿರುವುದಕ್ಕೆ ಅಭಿನಂದನೆ ಹೇಳಿದ ಪ್ರಧಾನಿ ಮೋದಿ, ಪೌರತ್ವ ಕಾಯ್ದೆ ಅನುಷ್ಠಾನದತ್ತ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ. ಪೌರತ್ವ ಕಾಯ್ದೆಯು ಬಿಜೆಪಿ ಪಕ್ಷದ ಮಹತ್ವದ […]

ರಾಜ್ಯದಲ್ಲೂ ಪೌರತ್ವ ಕಾನೂನು ಶೀಘ್ರದಲ್ಲೇ ಜಾರಿ ➤ ಈ ಬಗ್ಗೆ ಸಿಎಂ ಬಿಎಸ್ವೈಗೆ ಕರೆ ಮಾಡಿದ ಪಿಎಂ ಮೋದಿ ಹೇಳಿದ್ದೇನು.? Read More »

ಕರ್ನಾಟಕ

ಪೌರತ್ವ ಕಾನೂನು ಪರಿಶೀಲನೆಯ ಬಗ್ಗೆ ಅಮಿತ್ ಶಾ ಭರವಸೆ ➤ ಮೇಘಾಲಯ ಸಿಎಂ ಸಾಂಗ್ಮಾ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.15. ಹೊಸದಾಗಿ ಜಾರಿಗೆ ಬಂದ ಪೌರತ್ವ ಕಾನೂನಿಗೆ ಸಂಬಂಧಿಸಿದಂತೆ ಮೇಘಾಲಯದ ಕಳವಳಗಳನ್ನು ಪರಿಶೀಲಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ. ಶಿಲ್ಲಾಂಗ್‌ನಿಂದ 250 ಕಿ.ಮೀ ದೂರದಲ್ಲಿರುವ ವಿಲಿಯಮ್‌ನಗರ ಪಟ್ಟಣದಲ್ಲಿ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಾಪರ್‌ನಿಂದ ಇಳಿಯುತ್ತಿದ್ದಾಗ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಾಂಗ್ಮಾ ಅವರನ್ನು ಸುತ್ತುವರಿದಿದ್ದು, ಪೊಲೀಸರು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಈ ವೇಳೆ ಅವರು ಮೇಲಿನಂತೆ ನುಡಿದಿದ್ದಾರೆ. ಮೇಘಾಲಯವು ಈಶಾನ್ಯ ರಾಜ್ಯಗಳಲ್ಲಿ

ಪೌರತ್ವ ಕಾನೂನು ಪರಿಶೀಲನೆಯ ಬಗ್ಗೆ ಅಮಿತ್ ಶಾ ಭರವಸೆ ➤ ಮೇಘಾಲಯ ಸಿಎಂ ಸಾಂಗ್ಮಾ Read More »

ರಾಷ್ಟ್ರೀಯ ನ್ಯೂಸ್

ಕುಕ್ಕೇಯನ್ನು ತಿರುಪತಿಗೆ ಹೋಲಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದ್ದೇಕೆ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.15. ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತಿರುಪತಿಯಲ್ಲಿ ನೀಡುವ ಸಂಬಳವನ್ನು ನೀಡಲಾಗುವುದಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕೆಲಸ ಮಾಡುವ ‘ಡಿ’ ಗ್ರೂಪ್​​ ನೌಕರರಿಗೆ ನೀಡುತ್ತಿರುವ ವೇತನವನ್ನು ತಮಗೂ ನೀಡುವಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 20 ಮಂದಿ ಸಿಬ್ಬಂದಿಗಳು ಹೈಕೋರ್ಟ್​ನಲ್ಲಿ ದಾವೆ ಸಲ್ಲಿಸಿದ್ದರು. ಈ ದಾವೆಯನ್ನು ತಿರಸ್ಕರಿಸಿದ ಹೈಕೋರ್ಟ್, ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳೇ ಬೇರೆಯಾಗಿರುವುದರಿಂದ ತಿರುಪತಿಯ ವೇತನವನ್ನು ಸಾಧ್ಯವಿಲ್ಲ ಎಂದು ಅರ್ಜಿಯನ್ನು

ಕುಕ್ಕೇಯನ್ನು ತಿರುಪತಿಗೆ ಹೋಲಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದ್ದೇಕೆ..? Read More »

ಕರ್ನಾಟಕ

ಮಂಗಳೂರು: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ‌.15. ಮಹಿಳೆಯೋರ್ವರ ತಲೆಗೆ ಕಲ್ಲು ಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ನಗರದ ಹೊರವಲಯದ ಶಿಮಂತೂರು ಪರಂಕಿಲ ಎಂಬಲ್ಲಿ ಶನಿವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆಯನ್ನು ಶಿಮಂತೂರು ಪರಂಕಿಲ ನಿವಾಸಿ ಶಾರದಾ ಶೆಟ್ಟಿ ಎಂದು ಗುರುತಿಸಲಾಗಿದೆ. ಮಹಿಳೆ ಒಬ್ಬರೇ ಮನೆಯಲ್ಲಿ ಇದ್ದ ವೇಳೆ ಕೊಲೆ ಮಾಡಿ ಮೃತದೇಹವನ್ನು ಎಳೆದು ತಂದು ಬಾವಿಯ ಕಟ್ಟೆಯ ಬಳಿ ಹಾಕಲಾಗಿದೆ. ಮೃತದೇಹದ ತಲೆಗೆ ಕಲ್ಲು ಎತ್ತಿಹಾಕಿದ ರೀತಿ ಭಾಸವಾಗುತ್ತಿದ್ದು, ತಲೆ ಜಜ್ಜಿದ ಸ್ಥಿತಿಯಲ್ಲಿದೆ.

ಮಂಗಳೂರು: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಕೊಲೆ Read More »

ಕರಾವಳಿ

ಬಸ್- ಟ್ರ್ಯಾಕ್ಟರ್ ಢಿಕ್ಕಿ: 15 ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಡಿ.15. ಚಿಕ್ಕ ಬಳ್ಳಾಪುರ. ಖಾಸಗಿ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದು 15ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನಹಳ್ಳಿ ಸಮೀಪ ಶನಿವಾರ ತಡರಾತ್ರಿ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಅಪಘಾತಕ್ಕೆ ಬಸ್ ಮುಂಭಾಗ ಜಖಂಗೊಂಡಿದ್ದು, ಘಟನಾ ಸ್ಥಳಕ್ಕೆ ಚಿಂತಾಮಣಿ ಆಗಮಿಸಿದ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್- ಟ್ರ್ಯಾಕ್ಟರ್ ಢಿಕ್ಕಿ: 15 ಕ್ಕೂ ಅಧಿಕ ಮಂದಿಗೆ ಗಾಯ Read More »

ಕರಾವಳಿ

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ

ಯಾದಗಿರಿ, ಡಿಸೆಂಬರ್.14. ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 7ರಂದು ಸಹಾಯಕ ಮತದಾರರ ನೋಂದಣಾಧಿಕಾರಿ, ತಹಸೀಲ್ದಾರ್ ಕಚೇರಿ ಮತ್ತು ನಿಗದಿತ ಸ್ಥಳಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಹ ಮತದಾರರು ಡಿಸೆಂಬರ್ 23ರವರೆಗೆ ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. 01.11.2019ರ ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಅರ್ಹಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಈ ಹಿಂದೆ ನವೆಂಬರ್

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ Read More »

ಕರ್ನಾಟಕ

ವಿಖಾಯ ತಂಡದ ಸದಸ್ಯರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com ಕಡಬ ಡಿ.13. ತೀರಾ ಹದಗೆಟ್ಟಿದ್ದ ಆತೂರಿನಿಂದ ಆತೂರು ಬೈಲ್ ಸಂಪರ್ಕಿಸುವ ರಸ್ತೆಯನ್ನು ವಿಖಾಯದ ಆತೂರು ತಂಡವು ಶ್ರಮದಾನದ ಮೂಲಕ ದುರಸ್ತಿಗೊಳಿಸಿ, ಸಮಾಜಕ್ಕೆ ಮಾದರಿ ಸೇವೆ ನೀಡಿದರು. ಮಸೀದಿ, ಶಾಲೆ ಹಾಗೂ ದೇವಸ್ಥಾನಗಳಿಗೆ ಹೋಗುವ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ನಡೆದಾಡಲೂ ಕೂಡ ಪ್ರಯಾಸಪಡುವುದನ್ನು ಮನಗಂಡು ಆತೂರು ಕ್ಲಸ್ಟರ್ ವಿಖಾಯ ತಂಡವು ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿದರು. ಇದರಲ್ಲಿ ವಿಖಾಯ ಆ್ಯಕ್ಟೀವ್ ವಿಂಗ್ ಸದಸ್ಯರಾದ ಝೈನ್ ಆತೂರು, ಫಾರೂಕ್ ಆತೂರು, ಶರೀಫ್ ಆತೂರು, ಜಲೀಲ್

ವಿಖಾಯ ತಂಡದ ಸದಸ್ಯರಿಂದ ಶ್ರಮದಾನ Read More »

ಕರಾವಳಿ

ಶಿಬಾಜೆ: ಶಾಲಾ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣ ➤ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಡಿ.13. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಶಾಲೆಯ ಮಕ್ಕಳು ಕುಡಿಯುವ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಕ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಹಾಗೂ ಮಕ್ಕಳು ಶಾಲಾ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಡಿಸೆಂಬರ್ 2 ರಂದು ಈ ಘಟನೆ ನಡೆದಿದ್ದು, ಬೆಳಗ್ಗೆ ಶಾಲೆಗೆ ಬಂದ ಮಕ್ಕಳು ಶಾಲೆಯ ಮುಂಭಾಗದಲ್ಲಿರುವ ಬಾವಿಯಿಂದ ನೀರನ್ನು ಕುಡಿದಿದ್ದರು. ಇದರಲ್ಲಿ ಸುಮಾರು ಎಂಟು ವಿದ್ಯಾರ್ಥಿಗಳು ತಕ್ಷಣ ಅಸ್ವಸ್ಥರಾಗಿದ್ದು, ಇವರ

ಶಿಬಾಜೆ: ಶಾಲಾ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣ ➤ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ Read More »

ಕರಾವಳಿ

ಚಿಕ್ಕಮ್ಮನ ಮದುವೆಗೆಂದು ಬಂದಿದ್ದ ಪುಟ್ಟ ಮಗು ಕೆರೆಗೆ ಬಿದ್ದು ಮೃತ್ಯು ➤ ಮದುವೆ ಮನೆಯಲ್ಲಿ ಆವರಿಸಿದ ಸೂತಕದ ಛಾಯೆ

(ನ್ಯೂಸ್ ಕಡಬ) newskadaba.com ಕಡಬ, ಡಿ.13. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಮಗುವೊಂದು ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದ ನಗ್ರಿ ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತ ಮಗುವನ್ನು ಪುತ್ತೂರು ತಾಲೂಕು ಆರ್ಲಪದವು ನಿವಾಸಿ ಗುರುರಾಜ್ ಹಾಗೂ ಗೀತಾ ದಂಪತಿಗಳ ಪುತ್ರಿ ಚಿಂತನಾ(3ವ) ಎಂದು ಗುರುತಿಸಲಾಗಿದೆ. ಮಗುವಿನ ತಾಯಿಯ ಸಹೋದರಿಯ ಮದುವೆಯು ಗುರುವಾರದಂದು ಆಲಂಕಾರು ಗ್ರಾಮದ ನಗ್ರಿಯಲ್ಲಿ ನಡೆದಿತ್ತು. ಮದುವೆ ಸಮಾರಂಭದಲ್ಲಿ ಕುಟುಂಬ ಸಮೇತರಾಗಿ ಗುರುರಾಜ್ ದಂಪತಿಗಳು ಆಗಮಿಸಿದ್ದರು. ಶನಿವಾರ ನಗ್ರಿಯಲ್ಲಿ

ಚಿಕ್ಕಮ್ಮನ ಮದುವೆಗೆಂದು ಬಂದಿದ್ದ ಪುಟ್ಟ ಮಗು ಕೆರೆಗೆ ಬಿದ್ದು ಮೃತ್ಯು ➤ ಮದುವೆ ಮನೆಯಲ್ಲಿ ಆವರಿಸಿದ ಸೂತಕದ ಛಾಯೆ Read More »

ಕರಾವಳಿ
Scroll to Top