News Kadaba Desk

ಕಡಬ: ಆಟೋರಿಕ್ಷಾ ಹಾಗೂ ಡಿಯೋಗೆ ಢಿಕ್ಕಿ ಹೊಡೆದ ಜೀಪು ➤ ಮಹಿಳೆ, ಮಗು ಸೇರಿದಂತೆ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಫೆ.02. ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ಹೋಂಡಾ ಡಿಯೋ ಹಾಗೂ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಮೂವರು ಗಂಭೀರ ಗಾಯಗೊಂಡ ಘಟನೆ ಕಡಬ ಪೇಟೆಯಲ್ಲಿ ಭಾನುವಾರದಂದು ಸಂಭವಿಸಿದೆ. ಆಲಂಕಾರಿನ ಜೀಪೊಂದು ಕಡಬ ಪೇಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಎದುರುಗಡೆ ಇದ್ದ ಹೋಂಡಾ ಡಿಯೋ ಹಾಗೂ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ತಾಯಿ, ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ […]

ಕಡಬ: ಆಟೋರಿಕ್ಷಾ ಹಾಗೂ ಡಿಯೋಗೆ ಢಿಕ್ಕಿ ಹೊಡೆದ ಜೀಪು ➤ ಮಹಿಳೆ, ಮಗು ಸೇರಿದಂತೆ ಮೂವರಿಗೆ ಗಾಯ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಾಣಿ: ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಢಿಕ್ಕಿ ➤ ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.02. ಟೊಯೋಟಾ ಇಟಿಯೋಸ್ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಮಾಣಿ ಜಂಕ್ಷನ್‌ ನಲ್ಲಿ ಭಾನುವಾರದಂದು ಸಂಭವಿಸಿದೆ. ಬುಡೋಳಿ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಹಾಗೂ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಮಾಣಿ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸವಾರರಾದ ಅಬ್ದುಲ್ ರಜಾಕ್ ಹಾಗೂ ಅವರ ಪತ್ನಿ ಖತೀಜಮ್ಮ ಗಾಯಗೊಂಡಿದ್ದು, ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಣಿ: ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಢಿಕ್ಕಿ ➤ ಸವಾರರಿಬ್ಬರಿಗೆ ಗಾಯ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೆಮ್ಮಾಯಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿಯ ಮಹಾ ಸಭೆ ➤ ಎ.ಕೆ. ಬಶೀರ್ ಹಾಜಿ ಅಧ್ಯಕ್ಷರಾಗಿ ಪುನರಾಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜ.30. ಕೆಮ್ಮಾಯಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿಯ ವಾರ್ಷಿಕ ಮಹಾ‌ಸಭೆಯು ಗೌರವಾಧ್ಯಕ್ಷರಾದ ಪುತ್ತೂರು ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಮಿಟಿಯ ಜೊತೆ ಕಾರ್ಯದರ್ಶಿ ಹಕೀಂ ಡಿ.ಕೆ ಗತವರ್ಷದ ವರದಿ ವಾಚಿಸಿದರು. ಸಭೆಯು ಸರ್ವಾನುಮತದಿಂದ ವರದಿಯನ್ನು ಅಂಗೀಕರಿಸಿತು. ನಂತರ 2020-21 ಮುಂದಿನ ಒಂದು ವರ್ಷದ ಅವಧಿಗೆ ಪ್ರಸ್ತುತ ಕಮಿಟಿಯನ್ನು ಮುಂದುವರೆಸಲಾಯಿತು. ಗೌರವಾಧ್ಯಕ್ಷರಾಗಿ ಪುತ್ತೂರು ತಂಙಳ್, ಅಧ್ಯಕ್ಷರಾಗಿ ಬಶೀರ್ ಹಾಜಿ, ಉಪಾಧ್ಯಕ್ಷರಾಗಿ ಶರೀಫ್ (ಸಮುನು), ಕಾರ್ಯದರ್ಶಿ ಹಸನ್ ಹಾಜಿ, ಜೊತೆ ಕಾರ್ಯದರ್ಶಿಯಾಗಿ ಹಕೀಂ ಡಿ.ಕೆ.,

ಕೆಮ್ಮಾಯಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿಯ ಮಹಾ ಸಭೆ ➤ ಎ.ಕೆ. ಬಶೀರ್ ಹಾಜಿ ಅಧ್ಯಕ್ಷರಾಗಿ ಪುನರಾಯ್ಕೆ Read More »

ಕರಾವಳಿ

ಆಂಬ್ಯುಲೆನ್ಸ್ – ಸ್ಕೂಟರ್ ಢಿಕ್ಕಿ ➤ ಮಹಿಳೆ ಮೃತ್ಯು, ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.30. ಆಂಬುಲೆನ್ಸ್ ಒಂದು ಸ್ಕೂಟರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟು, ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರಿನಲ್ಲಿ ಗುರುವಾರದಂದು ನಡೆದಿದೆ. ಮೃತ ಮಹಿಳೆಯನ್ನು ಗುರುಪುರ ನಿವಾಸಿ ಸುಜಾತ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಆಸ್ಪತ್ರೆಯಿಂದ ಕೇರಳಕ್ಕೆ ಮೃತದೇಹವನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ನಗರದ ಕೆಪಿಟಿ ಸಿಗ್ನಲ್ ಬಳಿ ಸ್ಕೂಟರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದು ಸುಮಾರು 50 ಮೀಟರ್ ನಷ್ಟು ದೂರ ಎಳೆದೊಯ್ದಿದೆ. ಘಟನೆಯಲ್ಲಿ ಸ್ಕೂಟರ್ ಸವಾರ

ಆಂಬ್ಯುಲೆನ್ಸ್ – ಸ್ಕೂಟರ್ ಢಿಕ್ಕಿ ➤ ಮಹಿಳೆ ಮೃತ್ಯು, ಸವಾರ ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಹು ನಿರೀಕ್ಷಿತ ‘ನಮೋ’ ಚಲನಚಿತ್ರ ನಾಳೆ(ಜ.31) ತೆರೆಗೆ ➤ ಕಡಬದ ನಟ ಮಹೇಶ್ ರಾಜ್ ನಟಿಸಿರುವ ಚಿತ್ರ

(ನ್ಯೂಸ್ ಕಡಬ) newskadaba.com ಕಡಬ, ಜ.30. ಕಡಬದ ನಟ ಮಹೇಶ್ ರಾಜ್ ಅಭಿನಯಿಸಿರುವ ‘ನಮೋ’ ಚಿತ್ರ ನಾಳೆ (ಜ.31) ತೆರೆಗೆ ಬರಲಿದೆ. ಕಡಬ ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ನಿವಾಸಿಯಾಗಿರುವ ಮಹೇಶ್ ರಾಜ್ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ‌. ಮಾಮು ಟೀ ಅಂಗಡಿ, ಜಗತ್ ಕಿಲಾಡಿ, ಪಾನಿಪುರಿ ಚಿತ್ರಗಳಲ್ಲಿ ಅಭಿನಯಿಸಿದ್ದು, ನಮೋ ಚಿತ್ರವು ನಾಳೆ ತೆರೆಗೆ ಬರಲಿದೆ. ಸರ್ವಸ್ಯ ನಾಟ್ಯಂ ಹಾಗೂ ಹ್ಯಾಬಿಟ್ ಚಿತ್ರದ ಚಿತ್ರೀಕರಣವು ನಡೆಯುತ್ತಿದೆ. ನಮೋ ಚಿತ್ರವನ್ನು ಪುಟ್ಟರಾಜ ಸ್ವಾಮಿ

ಬಹು ನಿರೀಕ್ಷಿತ ‘ನಮೋ’ ಚಲನಚಿತ್ರ ನಾಳೆ(ಜ.31) ತೆರೆಗೆ ➤ ಕಡಬದ ನಟ ಮಹೇಶ್ ರಾಜ್ ನಟಿಸಿರುವ ಚಿತ್ರ Read More »

ಕರ್ನಾಟಕ, ವಿಶೇಷ ಲೇಖನಗಳು

ಉಪ್ಪಿನಂಗಡಿ: ರಿಕ್ಷಾ – ಕಾರು – ಬೈಕ್ ನಡುವೆ ಸರಣಿ ಅಪಘಾತ ➤ ಐವರು ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.29. ಕಾರು, ಬೈಕ್ ಹಾಗೂ ಆಟೋರಿಕ್ಷಾ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೆರಿಯಡ್ಕ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ಫೋರ್ಡ್ ಕಾರು ಹಾಗೂ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಆಟೋರಿಕ್ಷಾ ಮತ್ತು ಬೈಕ್ ನಡುವೆ ಸರಣಿ ಅಪಘಾತವಾಗಿದೆ. ಘಟನೆಯಲ್ಲಿ ಮೂರೂ ವಾಹನಗಳು ಜಖಂಗೊಂಡಿದ್ದು, ಗಂಭೀರ ಗಾಯಗಿರುವ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಿನಂಗಡಿ: ರಿಕ್ಷಾ – ಕಾರು – ಬೈಕ್ ನಡುವೆ ಸರಣಿ ಅಪಘಾತ ➤ ಐವರು ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಗದ್ದೆಗೆ ಉರುಳಿದ ಆಟೋ ರಿಕ್ಷಾ ➤ ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.26. ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ಪುಳಿತ್ತಡಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿದ ಆಪೆ ಆಟೋರಿಕ್ಷಾ ಹೆದ್ದಾರಿ ಪಕ್ಕದ ಗದ್ದೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಿನಂಗಡಿ: ಗದ್ದೆಗೆ ಉರುಳಿದ ಆಟೋ ರಿಕ್ಷಾ ➤ ಮೂವರು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮರ್ಧಾಳ: ‘ಹೊಟೇಲ್ ಸಾಂತಪ್ಪ’ ವಿಷ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜ.25. ಕಳೆದ ಕೆಲವು ದಶಕಗಳಿಂದ ಕಡಬ ತಾಲೂಕಿನ ಮರ್ಧಾಳದಲ್ಲಿ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದ ಸಾಂತಪ್ಪ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ. ಹೊಟೇಲ್ ಸಾಂತಪ್ಪ ಎಂದೇ ಚಿರಪರಿಚಿತರಾಗಿದ್ದ ಸಾಂತಪ್ಪರವರು ಶುಕ್ರವಾರ ಸಂಜೆ ವೇಳೆಗೆ ಐತ್ತೂರು ಗ್ರಾಮದ ಭ್ರಾಂತಿಕಟ್ಟೆ ಎಂಬಲ್ಲಿ ಅರಣ್ಯ ಇಲಾಖೆಯ ಜಮೀನಿನಲ್ಲಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ತಡರಾತ್ರಿ ವೇಳೆ ಮೃತದೇಹವು ಕಂಡುಬಂದಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಆತ್ಮಹತ್ಯೆಗೆ ನಿಖರ

ಮರ್ಧಾಳ: ‘ಹೊಟೇಲ್ ಸಾಂತಪ್ಪ’ ವಿಷ ಸೇವಿಸಿ ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಮೈದುನನಿಂದ ಆ್ಯಸಿಡ್ ದಾಳಿ ➤ ಮಹಿಳೆ ಮತ್ತು ಮಗು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜ.24. ಹಣಕಾಸು ಹಾಗೂ ಭೂ ವಿವಾದಕ್ಕೆ ಸಂಬಂಧಿಸಿ ಮಹಿಳೆಯೋರ್ವರ ಮುಖಕ್ಕೆ ಆಕೆಯ ಬಾವ ಆ್ಯಸಿಡ್ ಎರಚಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಆಸಿಡ್ ಎರಚಿದ ಆರೋಪಿಯನ್ನು ಕೋಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂದು ಗುರುತಿಸಲಾಗಿದೆ. ಕೃಷಿಕರಾಗಿರುವ ಜಯಾನಂದ ತನ್ನ ತಮ್ಮನ ಪತ್ನಿ ವಿಧವೆ ಸ್ವಪ್ನಾ(35) ಹಾಗೂ ಆಕೆಯ ಹೆಣ್ಣುಮಗಳ ಮುಖಕ್ಕೆ ರಬ್ಬರ್ ಶೀಟ್ ಗೆ ಬಳಸುವ ಆ್ಯಸಿಡ್ ಎರಚಿದ್ದಾರೆ‌. ಗಾಯಗೊಂಡಿರುವ ತಾಯಿ

ಕಡಬ: ಮೈದುನನಿಂದ ಆ್ಯಸಿಡ್ ದಾಳಿ ➤ ಮಹಿಳೆ ಮತ್ತು ಮಗು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದೆಹಲಿ ಚುನಾವಣಾ ಪ್ರಚಾರಕ್ಕೆ ಆಯ್ಕೆಯಾದ ಕಡಬದ ಯುವಕ ➤ ರಾಜ್ಯದ ಹತ್ತು ಜನರಲ್ಲಿ ಸ್ಥಾನ ಪಡೆದ ಅಬ್ದುಲ್ ರಝಾಕ್ ಮರ್ಧಾಳ

(ನ್ಯೂಸ್ ಕಡಬ) Newskadaba.com ಕಡಬ. ಜ.24. ಫೆಬ್ರವರಿ 08ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಕರ್ನಾಟಕದಿಂದ ಆಯ್ಕೆಯಾದ ಹತ್ತು ಜನರ ಪೈಕಿ ಮರ್ಧಾಳದ ಅಬ್ದುಲ್ ರಝಾಕ್ ಸೇರಿದ್ದಾರೆ. ಜನವರಿ 24ರಿಂದ ಫೆಬ್ರವರಿ 04ರ ವರೆಗೆ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಇವರು ಈ ಬಾರಿಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರಿನ ಸಂತ ಫಿಲೋಮಿನಾ

ದೆಹಲಿ ಚುನಾವಣಾ ಪ್ರಚಾರಕ್ಕೆ ಆಯ್ಕೆಯಾದ ಕಡಬದ ಯುವಕ ➤ ರಾಜ್ಯದ ಹತ್ತು ಜನರಲ್ಲಿ ಸ್ಥಾನ ಪಡೆದ ಅಬ್ದುಲ್ ರಝಾಕ್ ಮರ್ಧಾಳ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top