News Kadaba Desk

ಮಂಗಳೂರು: ಮೂವರು ಮದ್ರಸ ವಿದ್ಯಾರ್ಥಿಗಳ ಅತ್ಯಾಚಾರ, ಕೊಲೆ ಯತ್ನ ➤ ಮೂವರ ಬಂಧನ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.12. ಮದ್ರಸಕ್ಕೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಮೂವರು ಆರೋಪಿಗಳನ್ನು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸ್ ತಂಡ ಬಂಧಿಸಿದ ಘಟನೆ ಕೊಣಾಜೆ ಸಮೀಪದ ಮಲಾರ್ ಉಗ್ಗನಬೈಲ್ ಎಂಬಲ್ಲಿ ನಡೆದಿದೆ. ಬಂಧಿತರನ್ನು ಪಾವೂರು ಉಗ್ಗನಬೈಲು ಸಮೀಪದ ಗುಣಪಾಲ (25), ಕಿರಣ್ ಕುಮಾರ್ (26) ಹಾಗೂ ನೀರುಮಾರ್ಗದ ಸುಭಾಷ್ (29) ಎಂದು ಗುರುತಿಸಲಾಗಿದೆ. ಆರೋಪಿಗಳು ಸೋಮವಾರ ಸಂಜೆ ಮಲಾರ್‌ನ ನೂರುಲ್ ಇಸ್ಲಾಮ್ […]

ಮಂಗಳೂರು: ಮೂವರು ಮದ್ರಸ ವಿದ್ಯಾರ್ಥಿಗಳ ಅತ್ಯಾಚಾರ, ಕೊಲೆ ಯತ್ನ ➤ ಮೂವರ ಬಂಧನ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ ಪೊಲೀಸರು ಮಾನವೀಯತೆ ಇಲ್ಲದ ಕುರುಡರಾಗಿದ್ದರು ➤ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಆಕ್ರೋಶ ➤ ಕಡಬದ ಆ್ಯಸಿಡ್ ಸಂತ್ರಸ್ತೆಯನ್ನು ಭೇಟಿಯಾದ ಕುಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.12. ಕಡಬದಲ್ಲಿ ಇತ್ತೀಚೆಗೆ ಮಹಿಳೆ ಮತ್ತು ಮಗುವಿನ ಮೇಲೆ ಆ್ಯಸಿಡ್ ದಾಳಿ ನಡೆದ ಸಂದರ್ಭದಲ್ಲಿ ಕಡಬ ಪೊಲೀಸರು ಮಾನವೀಯತೆ ಇಲ್ಲದ ಕುರುಡರಾಗಿದ್ದರು ಎಂದು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಶ್ಯಾಮಲಾ ಕುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ್ಯಸಿಡ್ ದಾಳಿ ಸಂತ್ರಸ್ತೆಯನ್ನು ಮಂಗಳವಾರದಂದು ಭೇಟಿಯಾಗಿ ಸಮಸ್ಯೆ ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆ ಆ್ಯಸಿಡ್ ಉರಿ ತಾಳದೇ ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು

ಕಡಬ ಪೊಲೀಸರು ಮಾನವೀಯತೆ ಇಲ್ಲದ ಕುರುಡರಾಗಿದ್ದರು ➤ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಆಕ್ರೋಶ ➤ ಕಡಬದ ಆ್ಯಸಿಡ್ ಸಂತ್ರಸ್ತೆಯನ್ನು ಭೇಟಿಯಾದ ಕುಂದರ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

Breaking ಉಪ್ಪಿನಂಗಡಿ: ಕಾರು – ಟ್ಯಾಂಕರ್ ನಡುವೆ ಢಿಕ್ಕಿ ➤ ಒಂದೇ ಕುಟುಂಬದ ಇಬ್ಬರು ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.09. ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು ಇಬ್ಬರು ಮೃತಪಟ್ಟು ಒರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮೃತರನ್ನು ನೆಲ್ಯಾಡಿಯ ಉದ್ಯಮಿ ಯು.ಪಿ ವರ್ಗೀಸ್ ಅವರ ಸೊಸೆ ಕಾಂಚನ ನಿವಾಸಿ ಶಾಜಿ ಎಂಬವರ ಪತ್ನಿ ಜೈನೀ ಶಾಜಿ (30) ಮತ್ತು ಅವರ ಸಹೋದರ ಜಿಸನ್ (40) ಎಂಬವರು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ

Breaking ಉಪ್ಪಿನಂಗಡಿ: ಕಾರು – ಟ್ಯಾಂಕರ್ ನಡುವೆ ಢಿಕ್ಕಿ ➤ ಒಂದೇ ಕುಟುಂಬದ ಇಬ್ಬರು ಮೃತ್ಯು, ಓರ್ವ ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪಂಪ್ ವೆಲ್ ಫ್ಲೈಒವರ್ ನಿಂದ ಕೆಳಗೆ ಬಿದ್ದ ಕಾರು ➤ ಓರ್ವ ಮೃತ್ಯು, ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.08. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಂಪ್ ವೆಲ್ ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ ಪ್ರಯಾಣಿಕರೋರ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಸ್ವಾಗತ್ ಗ್ಯಾರೇಜ್‌ನ ಮುಖ್ಯಸ್ಥ ಪ್ರವೀಣ್ ಫೆರ್ನಾಂಡಿಸ್ (45) ಎಂದು ಗುರುತಿಸಲಾಗಿದೆ. ನಂತೂರಿನಿಂದ ಉಳ್ಳಾಲ ಕಡೆಗೆ ತೆರಳುತ್ತಿದ್ದ ಮಾರುತಿ ಆಲ್ಟೋ 800 ಕಾರು ಚಾಲಕನ ನಿಯಂತ್ರಣ ತಪ್ಪಿ ಪಂಪ್ವೆಲ್ ಫ್ಲೈಓವರ್ ಕೊನೆಯಲ್ಲಿ ವಿರುದ್ದ ದಿಕ್ಕಿನಿಂದ ಆಗಮಿಸುತ್ತಿದ್ದ ಡಸ್ಟರ್ ಕಾರಿಗೆ ಢಿಕ್ಕಿ ಹೊಡೆದು

ಪಂಪ್ ವೆಲ್ ಫ್ಲೈಒವರ್ ನಿಂದ ಕೆಳಗೆ ಬಿದ್ದ ಕಾರು ➤ ಓರ್ವ ಮೃತ್ಯು, ಇಬ್ಬರು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರ ಮೃತ್ಯು, ಸಹ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.08. ಬೈಕ್ ಮತ್ತು ಬಸ್ ನಡುವೆ ಢಿಕ್ಕಿ ಉಂಟಾದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಎಂಬಲ್ಲಿ ನಡೆದಿದೆ. ಮೃತ ಸವಾರನನ್ನು ಜೋಡುಪಾಲ ಸಮೀಪದ ನಿವಾಸಿ ವಿನುತ್ ಎಂದು ಗುರುತಿಸಲಾಗಿದ್ದು, ಗಾಯಾಳುವನ್ನು ರಾಜಪ್ಪ ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ರಾಜಪ್ಪರವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸುಳ್ಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಸುಳ್ಯ: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರ ಮೃತ್ಯು, ಸಹ ಸವಾರ ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ನಾದಿನಿಯ ಮೇಲೆ ಆ್ಯಸಿಡ್ ಎರಚಿದ ಪ್ರಕರಣ ➤ ಕರ್ತವ್ಯ ಲೋಪ ಎಸಗಿದ ಎಎಸ್ಐ ಚಂದ್ರಶೇಖರ್ ಅಮಾನತು

ಆರೋಪಿ ಜಯಾನಂದ (ನ್ಯೂಸ್ ಕಡಬ) newskadaba.com ಕಡಬ, ಫೆ‌.08. ಮಹಿಳೆಯೋರ್ವರ ಮುಖಕ್ಕೆ ಆಕೆಯ ಬಾವ ಆ್ಯಸಿಡ್ ಎರಚಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಕಡಬ ಠಾಣಾ ಎಎಸೈ ಯನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಆದೇಶಿಸಿದ್ದಾರೆ. ಕೋಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂಬಾತ ತನ್ನ ತಮ್ಮನ ಪತ್ನಿ ವಿಧವೆ ಸ್ವಪ್ನಾ(35) ಹಾಗೂ ಆಕೆಯ ಹೆಣ್ಣುಮಗಳ ಮುಖಕ್ಕೆ ಆ್ಯಸಿಡ್ ಎರಚಿದ್ದ ವೇಳೆ ಕಡಬ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಚಂದ್ರಶೇಖರ್ ಎಂಬವರು

ಕಡಬ: ನಾದಿನಿಯ ಮೇಲೆ ಆ್ಯಸಿಡ್ ಎರಚಿದ ಪ್ರಕರಣ ➤ ಕರ್ತವ್ಯ ಲೋಪ ಎಸಗಿದ ಎಎಸ್ಐ ಚಂದ್ರಶೇಖರ್ ಅಮಾನತು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಷ್ಟ್ರಮಟ್ಟದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಕಡಬದ ಮೋಹನ್ ಕೆರೆಕೋಡಿ ➤ ಕಡಬದಿಂದ ಜಪಾನ್ ತಲುಪಿದ ಕ್ರೀಡಾ ಸಾಧಕನಿಗೊಂದು ಸಲಾಂ

(ನ್ಯೂಸ್ ಕಡಬ) newskadaba.com ಕಡಬ, ಫೆ.08. ಭಾರತೀಯ ಮಾಸ್ಟರ್ ಫೆಡರೇಷನ್ ವತಿಯಿಂದ ಗುಜರಾತಿನ ವಡೋದರದಲ್ಲಿ ಫೆಬ್ರವರಿ 5 ರಿಂದ 9 ರವರೆಗೆ ನಡೆದ ರಾಷ್ಟ್ರಮಟ್ಟದ ಅತ್ಲೇಟಿಕ್ಸ್ ನಲ್ಲಿ ಕಡಬದ ಮೋಹನ್ ಕೆರೆಕೋಡಿ 800 ಮೀಟರ್ ಓಟದಲ್ಲಿ ಕಂಚಿನ ಪದಕ 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇದರೊಂದಿಗೆ 2021ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 1 ಚಿನ್ನ, 2 ಬೆಳ್ಳಿ, 1 ಕಂಚಿನ

ರಾಷ್ಟ್ರಮಟ್ಟದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಕಡಬದ ಮೋಹನ್ ಕೆರೆಕೋಡಿ ➤ ಕಡಬದಿಂದ ಜಪಾನ್ ತಲುಪಿದ ಕ್ರೀಡಾ ಸಾಧಕನಿಗೊಂದು ಸಲಾಂ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ನಿಧನ ನ್ಯೂಸ್ ➤ ನೆಲ್ಯಾಡಿ: ಕೊಣಾಲು ಪುದುಕಾಟಿಲ್ ನಿವಾಸಿ ಜಾರ್ಜ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ ಫೆ.08. ಕೊಣಾಲು ಪುದುಕಾಟಿಲ್ ನಿವಾಸಿ, ಹಿರಿಯರಾದ ಜಾರ್ಜ್ (97) ರವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಕೊಣಾಲಿನ ಸ್ವಗೃಹದಲ್ಲಿ ನಿಧನರಾದರು. ಆರಂಭಿಕ ಕಾಲದಲ್ಲಿ ನೆಲ್ಯಾಡಿಯ ಆರ್ಲದಲ್ಲಿ ವ್ಯಾಪಾರಸ್ಥರಾಗಿದ್ದ ಇವರು ಕೊಣಾಲು ಸಂತ ತೋಮಸ್ ಜಾಕೋಬೈಟ್ ಚರ್ಚಿನ ನಿರ್ಮಾಣ ರೂವಾರಿಗಳಲ್ಲಿ ಓರ್ವರಾಗಿದ್ದರು. ಹಲವಾರು ಸಮಾಜಮುಖಿ ಸೇವೆಗಳು, ದಾನ ಧರ್ಮಗಳ ಮೂಲಕ ನೆಲ್ಯಾಡಿ ಪರಿಸರದಲ್ಲಿ ಚಿರಪರಿಚಿತರು. ಮೃತರ ಮನೆಗೆ ವಿವಿಧ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಆಗಮಿಸಿ ಅಂತಿಮ ದರ್ಶನ ಮಾಡುತ್ತಿದ್ದು, ಮೃತರ ಅಂತಿಮ

ನಿಧನ ನ್ಯೂಸ್ ➤ ನೆಲ್ಯಾಡಿ: ಕೊಣಾಲು ಪುದುಕಾಟಿಲ್ ನಿವಾಸಿ ಜಾರ್ಜ್ Read More »

ಕರಾವಳಿ

ಕಾಸರಗೋಡು: ಬೈಕ್ ಹಾಗೂ ವ್ಯಾನ್ ನಡುವೆ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com, ಕಾಸರಗೋಡು. ಫೆ. 7. ಬೈಕ್ ಹಾಗೂ ವ್ಯಾನ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟು ಸಹ ಸವಾರ ಗಾಯಗೊಂಡ ಘಟನೆ ಬಂದ್ಯೋಡು ಸಮೀಪದ ಮುಟ್ಟ ಎಂಬಲ್ಲಿ ಇಂದು ನಡೆದಿದೆ. ಮೃತರನ್ನು ಕಾಸರಗೋಡು ಸಿರಿಬಾಗಿಲು ನಿವಾಸಿ ಮುಹಮ್ಮದ್ ಶಾಬಿಲ್ (22) ಎಂದು ಗುರುತಿಸಲಾಗಿದೆ. ಈತ ಮಂಗಳೂರು ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಗಾಯಗೊಂಡ ಸಹಸವಾರ ಆಶಿಮ್ (22) ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಕಾಸರಗೋಡು: ಬೈಕ್ ಹಾಗೂ ವ್ಯಾನ್ ನಡುವೆ ಢಿಕ್ಕಿ ➤ ಸವಾರ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊರೊನೊ ವೈರಸ್ ➤ 20,000 ಕ್ಕೂ ಅಧಿಕ ರೋಗಿಗಳ ಸಾಮೂಹಿಕ ಹತ್ಯೆಗೆ ಮುಂದಾದ ಚೀನಾ

(ನ್ಯೂಸ್ ಕಡಬ)newskadaba.com, ಚೀನಾ. ಫೆ.7. ಮಾರಕವಾಗಿ ಪರಿಣಮಿಸುತ್ತಿರುವ ಮಾರಣಾಂತಿಕ ಕೊರೊನೊ ವೈರಸ್ ಇನ್ನಷ್ಟು ಹರಡುವುದನ್ನು ತಪ್ಪಿಸಲು 20,000ಕ್ಕೂ ಅಧಿಕ ಕೊರೊನೊ ವೈರಸ್ ಬಾಧಿತ ರೋಗಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಚೀನಾ ಸರಕಾರ ನ್ಯಾಯಾಲಯದ ಅನುಮತಿಗೆ ಕಾಯುತ್ತಿದೆ ಎಂಬ ಬೆಚ್ಚಿಬೀಳಿಸುವ ಆತಂಕಕಾರಿ ಸುದ್ದಿ ಬಹಿರಂಗವಾಗಿದೆ. ಕೊರೊನೊ ವೈರಸ್ ಗೆ ಒಳಗಾದ ರೋಗಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಚೀನಾದ ಅತ್ಯುನ್ನತ ಮಟ್ಟದ ನ್ಯಾಯಾಲಯ, ಸುಪ್ರೀಂ ಪೀಪಲ್ಸ್ ಕೋರ್ಟ್ ಇಂದು ಅನುಮತಿ ನೀಡುವ ನಿರೀಕ್ಷೆಯಿದೆ. ವೈರಸ್ ವಿರುದ್ಧದ ಹೋರಾಟದಲ್ಲಿ ಯಾವುದೇ ಭರವಸೆಯಿಲ್ಲದ

ಕೊರೊನೊ ವೈರಸ್ ➤ 20,000 ಕ್ಕೂ ಅಧಿಕ ರೋಗಿಗಳ ಸಾಮೂಹಿಕ ಹತ್ಯೆಗೆ ಮುಂದಾದ ಚೀನಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top