News Kadaba Desk

ಬೆಳ್ಳಾರೆ: ಮದರಂಗಿ ಶಾಸ್ತ್ರ ಮುಗಿಸಿದ ಮದುಮಗಳು ನಾಪತ್ತೆ ➤ ಬೆಳ್ಳಂಬೆಳಗ್ಗೆ ಮದುವೆ ಮನೆಯವರಿಗೆ ಬಿಗ್ ಶಾಕ್

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.26. ಹಸೆಮನೆ ಏರಬೇಕಾಗಿದ್ದ ಮದುಮಗಳು ಬೆಳ್ಳಂಬೆಳಗ್ಗೆ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಬುಧವಾರದಂದು ನಡೆದಿದೆ. ಕೊಳ್ತಿಗೆ ಗ್ರಾಮದ ಯುವತಿಯ ಮದುವೆಯು ಬುಧವಾರದಂದು ಪುತ್ತೂರಿನ ಪರ್ಪುಂಜದ ಹಾಲ್ ವೊಂದರಲ್ಲಿ ನಡೆಯಲಿತ್ತು. ಮಂಗಳವಾರ ರಾತ್ರಿ ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮದುವೆಗೆ ತಯಾರಾಗಿದ್ದ ಮದುಮಗಳು ಬೆಳ್ಳಂಬೆಳಗ್ಗೆ ಮದುವೆ ಮನೆಯಿಂದ ತಪ್ಪಿಸಿಕೊಂಡಿದ್ದಾಳೆ ಎನ್ನಲಾಗಿದೆ. ಬೆಳಿಗ್ಗೆ ಎದ್ದು ನೋಡುವಾಗ ಮದುಮಗಳು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ […]

ಬೆಳ್ಳಾರೆ: ಮದರಂಗಿ ಶಾಸ್ತ್ರ ಮುಗಿಸಿದ ಮದುಮಗಳು ನಾಪತ್ತೆ ➤ ಬೆಳ್ಳಂಬೆಳಗ್ಗೆ ಮದುವೆ ಮನೆಯವರಿಗೆ ಬಿಗ್ ಶಾಕ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಕಳ್ಳತನ ಮಾಡಲೆಂದು ಮನೆಗೆ ನುಗ್ಗಿ ನಿದ್ದೆಗೆ ಜಾರಿದ ಕಳ್ಳ ➤ ಮನೆ ಮಾಲೀಕನ ಬೆತ್ತದೇಟಿಗೆ ಎದ್ದು ಪೊಲೀಸರ ಅತಿಥಿಯಾದ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.26. ಕಳ್ಳತನ ಮಾಡಲೆಂದು ಮನೆಯ ಒಳನುಗ್ಗಿದ ಕಳ್ಳನೋರ್ವ ನಿದ್ದೆಗೆ ಜಾರಿ ಬೆಳಿಗ್ಗೆ ಸುಲಭವಾಗಿ ಮನೆಯೊಡೆಯನ ಕೈಗೆ ಸಿಕ್ಕಿ ಪೊಲೀಸರ ಅತಿಥಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ಪ್ರಸಿದ್ಧ ಉದ್ಯಮಿಯೋರ್ವರ ಹಳೆಯ ಕಾಲದ ಮನೆಯ ಸುಮಾರು 20 ಅಡಿ ಎತ್ತರದ ಗೋಡೆ ಏರಿ ಒಳ ನುಗ್ಗಿದ ಕಳ್ಳ ಕಪಾಟಿನಲ್ಲಿಟ್ಟಿದ್ದ ಬೀಗದ ಕೀಗಳನ್ನು ಜಾಲಾಡಿ ಮನೆಯ ನಡು ಕೋಣೆಯಲ್ಲಿದ್ದ ದಿವಾನದಲ್ಲಿ ನಿದ್ದೆಗೆ ಜಾರಿದ್ದಾನೆ. ಮುಂಜಾನೆ ಮನೆಯವರು ಎದ್ದು ನೋಡಿದಾಗ ಅಪರಿಚಿತ ವ್ಯಕ್ತಿ ಮಲಗಿರುವುದು ಕಂಡು

ಉಪ್ಪಿನಂಗಡಿ: ಕಳ್ಳತನ ಮಾಡಲೆಂದು ಮನೆಗೆ ನುಗ್ಗಿ ನಿದ್ದೆಗೆ ಜಾರಿದ ಕಳ್ಳ ➤ ಮನೆ ಮಾಲೀಕನ ಬೆತ್ತದೇಟಿಗೆ ಎದ್ದು ಪೊಲೀಸರ ಅತಿಥಿಯಾದ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಸ್ಫೋಟಕ ತಿಂದು ಹಸು ಮೃತಪಟ್ಟ ಪ್ರಕರಣ ➤ ಆರೋಪಿಯನ್ನು ಬಂಧಿಸದಿದ್ದಲ್ಲಿ ಫೆ.27 ರಂದು ಠಾಣೆಯ ಮುಂಭಾಗ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಹಂದಿ ಬೇಟೆಗೆಂದು ಇಟ್ಟಿದ್ದ ಸ್ಫೋಟಕವನ್ನು ತಿಂದ ಹಸು ಮಾರಣಾಂತಿಕ ಗಾಯವಾಗಿ ಅದರ ಸಾವಿಗೆ ಕಾರಣನಾದ ಆರೋಪಿಯನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು, ತಪ್ಪಿದಲ್ಲಿ ಫೆ 27 ರಂದು ಕಡಬ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹಸುವಿನ ಮಾಲಕಿ ವಿಜಯಲಕ್ಷ್ಮೀ ಬಾಲಚಂದ್ರ ಎಚ್ಚರಿಸಿದ್ದಾರೆ. ಸೋಮವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಸುವಿನ ಮಾಲಕಿ, ನಾವು ಕೂಲಿ ಹಾಗೂ ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸಿಕೊಂಡಿದ್ದೇವೆ. ಫೆಬ್ರವರಿ 17 ರಂದು ಬೆಳಿಗ್ಗೆ

ಕಡಬ: ಸ್ಫೋಟಕ ತಿಂದು ಹಸು ಮೃತಪಟ್ಟ ಪ್ರಕರಣ ➤ ಆರೋಪಿಯನ್ನು ಬಂಧಿಸದಿದ್ದಲ್ಲಿ ಫೆ.27 ರಂದು ಠಾಣೆಯ ಮುಂಭಾಗ ಪ್ರತಿಭಟನೆ Read More »

ಕರಾವಳಿ

ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಗೆ ನೂತನ ಸಾರಥ್ಯ ➤ ಅಧ್ಯಕ್ಷರಾಗಿ ಎಫ್.ಎಚ್ ಮಿಸ್ಬಾಹಿ, ಪ್ರ.ಕಾರ್ಯದರ್ಶಿಯಾಗಿ ಮುಸ್ತಫಾ ಯು.ಪಿ ಆಯ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.24. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಡಿವಿಶನ್ ಇದರ ವಾರ್ಷಿಕ ಕೌನ್ಸಿಲ್, ಡಿವಿಷನ್ ಅಧ್ಯಕ್ಷರಾಗಿದ್ದ ಮಸ್ ಹೂದ್ ಸಅದಿ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಜುಲ್ ಉಲಮಾ ಎಜುಕೇಶನಲ್ ಸೆಂಟರ್ ಕರುವೇಲಿನಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ ಉದ್ಘಾಟಿಸಿದರು. ಡಿವಿಷನ್ ಕಾರ್ಯದರ್ಶಿಯಾಗಿದ್ದ ರಹ್ಮಾನ್ ಪದ್ಮುಂಜ ವರದಿ ವಾಚಿಸಿ, ಕೋಶಾಧಿಕಾರಿಯಾಗಿದ್ದ ಎಫ್.ಎಚ್ ಮಿಸ್ಭಾಹಿ ಲೆಕ್ಕ ಪತ್ರ ಮಂಡಿಸಿದರು. ಜಿಲ್ಲಾ ಎಸ್ಸೆಸ್ಸೆಫ್ ಕೋಶಾಧಿಕಾರಿ ಅಲೀ ತುರ್ಕಳಿಕೆ ಸಾಂಘಿಕ ಕಾರ್ಯಚಟುವಟಿಕೆಯ ಕುರಿತಾಗಿ ಮಾತನಾಡಿದರು.

ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಗೆ ನೂತನ ಸಾರಥ್ಯ ➤ ಅಧ್ಯಕ್ಷರಾಗಿ ಎಫ್.ಎಚ್ ಮಿಸ್ಬಾಹಿ, ಪ್ರ.ಕಾರ್ಯದರ್ಶಿಯಾಗಿ ಮುಸ್ತಫಾ ಯು.ಪಿ ಆಯ್ಕೆ Read More »

ಕರಾವಳಿ

ಆತೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ದೇಶದಲ್ಲಿನ ಯಾವುದೇ ದೊಡ್ಡ ಶಕ್ತಿಯನ್ನು ಮಟ್ಟಹಾಕುವ ತಾಕತ್ತು ಜನಾಂದೋಲನಕ್ಕೆ ಇದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನಿಸಿದಾಗ ಜಯ ನಮ್ಮದಾಗಲಿದೆ ಎಂದು ಕಡೂರಿನ ಮಾಜಿ ಶಾಸಕ, ಹಿರಿಯ ಹೋರಾಟಗಾರ ವೈ.ಎಸ್.ವಿ ದತ್ತ ಹೇಳಿದರು. ಅವರು ಸಂವಿಧಾನ ಸಂರಕ್ಷಣಾ ಒಕ್ಕೂಟ ಆತೂರು ಇದರ ವತಿಯಿಂದ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಂವಿಧಾನ ಉಳಿಸಿ – ದೇಶ ರಕ್ಷಿಸಿ ಎಂಬ ಧ್ಯೇಯದೊಂದಿಗೆ ಭಾನುವಾರದಂದು ಆತೂರು ಜಂಕ್ಷನ್‌

ಆತೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ Read More »

ಕರ್ನಾಟಕ

ಪುತ್ತೂರು: ಓಮ್ನಿ ಮತ್ತು ಲಾರಿ ನಡುವೆ ಢಿಕ್ಕಿ ➤ ಓಮ್ನಿ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.23. ಕಾರು ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಭಾನುವಾರದಂದು ಸಂಭವಿಸಿದೆ. ಮೃತರನ್ನು ಕೊಡಿಪ್ಪಾಡಿ ನಿವಾಸಿ ನಾರಾಯಣ ಜೋಯಿಷ ಎಂದು ಗುರುತಿಸಲಾಗಿದೆ. ನಾರಾಯಣ ಜೋಯಿಷರು ಪೆರ್ಲಂಪಾಡಿ ತರವಾಡು ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ತನ್ನ ಓಮ್ನಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ‌ ಮಂಗಳೂರಿಗೆ‌

ಪುತ್ತೂರು: ಓಮ್ನಿ ಮತ್ತು ಲಾರಿ ನಡುವೆ ಢಿಕ್ಕಿ ➤ ಓಮ್ನಿ ಚಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಸ್ ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ.23. ಮದ್ರಸದಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಸ್ಸು ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ಮೃತಪಟ್ಟವಳನ್ನು ಅಲ್ಹಾನ್(8) ಎಂದು ಗುರುತಿಸಲಾಗಿದೆ. ಸಮೀಪದ ಮದ್ರಸದ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅಲ್ಹಾನ್ ಇಂದು ಬೆಳಗ್ಗೆ ಮದ್ರಸ ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಸಂದರ್ಭ ಬಾಲಕಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದ್ದರಿಂದ ಗಂಭೀರ ಗಾಯಗೊಂಡ ಅಲ್ಹಾನ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ

ಬಸ್ ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಂದು ಆತೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸಮಾವೇಶ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಸಂವಿಧಾನ ಸಂರಕ್ಷಣಾ ಒಕ್ಕೂಟ ಆತೂರು ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ಪೌರತ್ವ ನೀತಿ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶವು ಇಂದು ಮಧ್ಯಾಹ್ನ 02:30 ಕ್ಕೆ ಆತೂರು ಜಂಕ್ಷನ್ ನಲ್ಲಿ ನಡೆಯಲಿದೆ. ಪ್ರಮುಖ ಭಾಷಣಕಾರರಾಗಿ ಮಾಜಿ ಶಾಸಕರಾದ Y.S.ದತ್ತ, C. ದ್ವಾರಕನಾಥ್, ಭಾಸ್ಕರ್ ಪ್ರಸಾದ್ ಬೆಂಗಳೂರು, ಶಶಿಧರ್ ಭಟ್, ಸುಧೀರ್ ಕುಮಾರ್ ಮುರೋಳಿ, U.T.ಖಾದರ್ ಗವಹಿಸಲಿದ್ದಾರೆ‌. ಮುಖ್ಯ ಅತಿಥಿಗಳಾಗಿ ಫಾ| ವಿಲಿಯಂ ಮಾರ್ಟಿಸ್, ಬಹು. ಸುಫ್ಯಾನ್ ಸಖಾಫಿ, ಬಹು.ಅನೀಸ್ ಕೌಸರಿ, ಜ.ರಿಯಾಝ್

ಇಂದು ಆತೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸಮಾವೇಶ Read More »

ಕರಾವಳಿ

ಪ್ರವಾದಿ ನಿಂದನೆ ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ವಲಯದಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ. ಫೆ.22. ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರನ್ನು ನಿಂದಿಸಿ ಅವಹೇಳನಕಾರಿ ಪದಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಬಗ್ಗೆ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಎಸ್ಕೆಎಸ್ಸೆಸ್ಸೆಪ್ ಉಪ್ಪಿನಂಗಡಿ ವಲಯ ಸಮಿತಿ ವತಿಯಿಂದ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್ ಬುಕ್ ಪೇಜೊಂದರಲ್ಲಿ ಮದುಗಿರಿ ಮೋದಿ ಯಾನೆ ಅತುಲ್ ಕುಮಾರ್ ಎಂಬಾತ ಹಲವು ಬಾರಿ ಇದೇ ರೀತಿ ಜಾಲತಾಣದಲ್ಲಿ ಅನಾವಶ್ಯಕ ಆರೋಪಗಳನ್ನು ಮಾಡಿ ಮುಸ್ಲಿಂ ಧರ್ಮಕ್ಕೆ ಅವಮಾನ

ಪ್ರವಾದಿ ನಿಂದನೆ ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ವಲಯದಿಂದ ದೂರು ದಾಖಲು Read More »

ಕರಾವಳಿ

ಶಿರಾಡಿ: ಮೀನು ಹಿಡಿಯಲೆಂದು ತೆರಳಿದ ಯುವಕ ಕಣ್ಮರೆ ➤ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಆರಂಭ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.22. ಮೀನು ಹಿಡಿಯಲೆಂದು ತೆರಳಿದ‌ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಶನಿವಾರದಂದು ನಡೆದಿದೆ. ನಾಪತ್ತೆಯಾಗಿರುವವರನ್ನು ಶಿರಾಡಿ ಗ್ರಾಮದ ಬಾಕಿಲ ಗದ್ದೆ ನಿವಾಸಿ ಚೋಮ ಮುಗೇರ ಎಂಬವರ ಪುತ್ರ ಹರೀಶ್(26) ಎಂದು ಗುರುತಿಸಲಾಗಿದೆ. ಹರೀಶ್ ಮೀನು ಹಿಡಿಯಲೆಂದು ಗುಂಡ್ಯ ಹೊಳೆಗೆ ತೆರಳಿದ್ದು, ಆ ಬಳಿಕ ನಾಪತ್ತೆಯಾಗಿರುವುದಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಹೊರಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿದ್ದು, ಹುಡುಕಾಟ ಆರಂಭಿಸಿದ್ದಾರೆ.

ಶಿರಾಡಿ: ಮೀನು ಹಿಡಿಯಲೆಂದು ತೆರಳಿದ ಯುವಕ ಕಣ್ಮರೆ ➤ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಆರಂಭ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top