News Kadaba Desk

ಕರ್ನಾಟಕದಲ್ಲಿ ಕೊರೋನಾ ಎಫೆಕ್ಟ್ ➤ ಇಂದಿನಿಂದ ರಾಜ್ಯದ ಕೆಲವೆಡೆ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.11. ಚೀನಾ ದೇಶದಿಂದ ಆರಂಭಗೊಂಡ ಕೊರೋನಾ ವೈರಸ್‌ ಜಗತ್ತಿನ ವಿವಿಧೆಡೆ ವ್ಯಾಪಿಸಿದ್ದು, ಕರ್ನಾಟಕದಲ್ಲೂ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಗುರುವಾರದಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಸಚಿವ […]

ಕರ್ನಾಟಕದಲ್ಲಿ ಕೊರೋನಾ ಎಫೆಕ್ಟ್ ➤ ಇಂದಿನಿಂದ ರಾಜ್ಯದ ಕೆಲವೆಡೆ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬದಲ್ಲಿ ಒಂದು ಕೆಜಿ ಚಿಕನ್ ದರ ಕೇವಲ 25 ರೂ. ಮಾತ್ರ..!! ➤ ಕ್ಷಣಮಾತ್ರದಲ್ಲಿ ಕೋಳಿ ಫಾರಂ ಮುಂದೆ ಜನಸಾಗರ

(ನ್ಯೂಸ್ ಕಡಬ) newskadaba.com ಕಡಬ, ಮಾ.12. ಮಾರಕ ಕೊರೋನಾ ವೈರಸ್ ದಿನೇ ದಿನೇ ವಿಶ್ವದೆಲ್ಲೆಡೆ ಹಬ್ಬುತ್ತಿರುವಂತೆಯೇ ಹಲವೆಡೆ ಕೋಳಿ ಬೆಲೆಯಲ್ಲಿ ಇಳಿಮುಖ ಆಗತೊಡಗಿದೆ. ಪಕ್ಕದ ರಾಜ್ಯ ಕೇರಳದಲ್ಲಿ ಹಕ್ಕಿಜ್ವರವೂ ಕಂಡುಬಂದಿದ್ದು, ಈ ನಡುವೆ ಕೆಲವರು ಕೋಳಿ ಮಾಂಸ ಸೇವನೆಯಿಂದ ಕೊರೋನಾ, ಹಕ್ಕಿಜ್ವರ ಹರಡುತ್ತದೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರಿಂದ ಮಾಂಸದ ಕೋಳಿಯನ್ನು ಕೇಳುವವರು ಇಲ್ಲದಂತಾಗಿದೆ. ಬುಧವಾರದಂದು ಕಡಬದಲ್ಲೂ ಕೋಳಿ ದರದಲ್ಲಿ ಭರ್ಜರಿ ಆಫರ್ ಹಾಕಿದ ಕಾರಣ ಕ್ಷಣಮಾತ್ರದಲ್ಲಿ ಸಾವಿರಗಟ್ಟಲೆ ಕೋಳಿ ಮಾರಾಟವಾಗಿದೆ. ಕಡಬದ ನೆಕ್ಕಿತ್ತಡ್ಕ‌ ಎಂಬಲ್ಲಿನ

ಕಡಬದಲ್ಲಿ ಒಂದು ಕೆಜಿ ಚಿಕನ್ ದರ ಕೇವಲ 25 ರೂ. ಮಾತ್ರ..!! ➤ ಕ್ಷಣಮಾತ್ರದಲ್ಲಿ ಕೋಳಿ ಫಾರಂ ಮುಂದೆ ಜನಸಾಗರ Read More »

ಕರಾವಳಿ, ಕರ್ನಾಟಕ

‘ಕಡಬದಲ್ಲಿ ಕೊರೋನಾ’ ಬಗ್ಗೆ ವೈದ್ಯಾಧಿಕಾರಿ ಹೇಳಿದ್ದೇನು ಗೊತ್ತೇ..?

➤➤ ವೀಡಿಯೋ | Video ‘ಕಡಬದಲ್ಲಿ ಕೊರೋನಾ’ ಬಗ್ಗೆ ವೈದ್ಯಾಧಿಕಾರಿ ಹೇಳಿದ್ದೇನು ಗೊತ್ತೇ..? ವೀಡಿಯೋ ಗಾಗಿ??ಕ್ಲಿಕ್ ಮಾಡಿ

‘ಕಡಬದಲ್ಲಿ ಕೊರೋನಾ’ ಬಗ್ಗೆ ವೈದ್ಯಾಧಿಕಾರಿ ಹೇಳಿದ್ದೇನು ಗೊತ್ತೇ..? Read More »

ಕರ್ನಾಟಕ

ಕೊರೋನಾ ವೈರಸ್ ಗೆ ಕರ್ನಾಟಕದಲ್ಲಿ ಮೊದಲ ಬಲಿ ➤ ಬೆಚ್ಚಿಬಿದ್ದ ಕರುನಾಡು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.11. ಸಾವಿರಾರು ಜನಗಳ ಪ್ರಾಣಕ್ಕೆ ಕುತ್ತು ತಂದು ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಕರ್ನಾಟಕದಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಮೃತ ವ್ಯಕ್ತಿಯನ್ನು ಕಲಬುರಗಿ ನಿವಾಸಿ ಮಹಮ್ಮದ್ ಸಿದ್ದೀಕಿ (76) ಎಂದು ಗುರುತಿಸಲಾಗಿದೆ. ಕೆಲವು ಸಮಯಗಳ ಹಿಂದೆ ದುಬೈನಿಂದ ಆಗಮಿಸಿದ್ದ ಇವರಲ್ಲಿ ಶಂಕಿತ ಕೊರೋನಾ ವೈರಸ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೊರೋನಾ ವೈರಸ್ ಗೆ ಕರ್ನಾಟಕದಲ್ಲಿ ಮೊದಲ ಬಲಿ ➤ ಬೆಚ್ಚಿಬಿದ್ದ ಕರುನಾಡು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚೀನಾಕ್ಕೆ ತೆರಳಿ ಹುಟ್ಟೂರಿಗೆ ಹಿಂತಿರುಗಿದ ಕಡಬದ ವ್ಯಕ್ತಿ ➤ ಕಡಬದಲ್ಲೂ ‘ಕೊರೋನಾ’ದ್ದೇ ಸುದ್ದಿ..!!

(ನ್ಯೂಸ್ ಕಡಬ) newskadaba.com ಕಡಬ, ಮಾ.11. ಚೀನಾ ದೇಶದಿಂದ ಆರಂಭಗೊಂಡ ಕೊರೋನಾ ವೈರಸ್‌ ಜಗತ್ತಿನ ವಿವಿಧೆಡೆ ವ್ಯಾಪಿಸಿರುವ ನಡುವೆಯೇ ಚೀನಾ ದೇಶಕ್ಕೆ ತೆರಳಿದ್ದ ವ್ಯಕ್ತಿಯೋರ್ವರು ಕಡಬಕ್ಕೆ ಆಗಮಿಸಿದ್ದರಿಂದ ಪರಿಸರದಲ್ಲಿ ಆತಂಕ ಸ್ಥಿತಿ ನಿರ್ಮಾಣವಾದ ಘಟನೆ ವರದಿಯಾಗಿದೆ.   ಚೀನಾ ದೇಶಕ್ಕೆ ತೆರಳಿದ್ದ ಕಡಬದ ವ್ಯಕ್ತಿಯೋರ್ವರು ಎರಡು ದಿನಗಳ ಹಿಂದೆ ತಾಯ್ನಾಡಿಗೆ ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಅವರನ್ನು ತಪಾಸಣೆಗೊಳಪಡಿಸಿದಾಗ ಕೊರೋನಾ ವೈರಸ್ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಅವರ ಮನೆಯ ಪರಿಸರದಲ್ಲಿ ಕೆಲವರು ಆತಂಕ

ಚೀನಾಕ್ಕೆ ತೆರಳಿ ಹುಟ್ಟೂರಿಗೆ ಹಿಂತಿರುಗಿದ ಕಡಬದ ವ್ಯಕ್ತಿ ➤ ಕಡಬದಲ್ಲೂ ‘ಕೊರೋನಾ’ದ್ದೇ ಸುದ್ದಿ..!! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಲಗಿದ್ದ ಚಾಲಕ ಮೃತ್ಯು ► ಹೃದಯಾಘಾತದ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.11. ಕೆಎಸ್ಸಾರ್ಟಿಸಿ ಬಸ್ ಚಾಲಕರೋರ್ವರ ಮೃತದೇಹವೊಂದು ಬಸ್ಸಿನಲ್ಲಿ ಮುಗ್ಗರಿಸಿ ಕುಳಿತ ಸ್ಥಿತಿಯಲ್ಲಿ ಕಂಡುಬಂದಿದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತ ಚಾಲಕನನ್ನು ಬೀದರ್ ನಿವಾಸಿ ರೇವಣ್ಣಪ್ಪ ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಮಂಗಳವಾರ ಸಂಜೆ ಕಡಬಕ್ಕೆ ಆಗಮಿಸಿದ ಬಸ್ಸನ್ನು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಮೀಪ ಹೆದ್ದಾರಿಯ ಪಕ್ಕದಲ್ಲಿ ರಾತ್ರಿ ನಿಲುಗಡೆಗೊಳಿಸಲಾಗಿದ್ದು, ಬೆಳಿಗ್ಗೆ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳಬೇಕಿತ್ತು‌. ಬೆಳಿಗ್ಗೆ ನಿರ್ವಾಹಕ ಎದ್ದು ಚಾಲಕನನ್ನು ಕರೆಯಲೆಂದು ನೋಡಿದಾಗ ಚಾಲಕ ಮುಗ್ಗರಿಸಿ ಬಿದ್ದು ಮೃತಪಟ್ಟಿರುವುದು

ಕಡಬ: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಲಗಿದ್ದ ಚಾಲಕ ಮೃತ್ಯು ► ಹೃದಯಾಘಾತದ ಶಂಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪೆರುವಾಯಿ ಮಖಾಂ ಉರೂಸ್ ➤ ಮಾ.11 ರಿಂದ 15 ರ ವರೆಗೆ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ.10. ಚರಿತ್ರೆ ಪ್ರಸಿದ್ದವಾದ ಬದ್ರಿಯಾ ಜುಮಾ ಮಸ್ಜಿದ್ ಪೆರುವಾಯಿ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಅಸ್ಸಯ್ಯಿದ್ ಅಬೂಬಕ್ಕರ್ ಹೈದ್ರೋಸ್ ಅಲ್ ಹಾದಿ ತಂಙಳ್(ಖ.ಸಿ)ರವರ ಮಖಾಂ ದರ್ಬಾರಿನ ಉರೂಸ್ ಮಹಾ ಸಂಭ್ರಮವು ಮಾರ್ಚ್ 11 ರಿಂದ 15 ರವರೆಗೆ ನಡೆಯಲಿದೆ. ಬದುಕಿನ ಭವ್ಯತೆಗೆ ತಿಲಾಂಜಲಿ ನೀಡಿ ಪಾರತ್ರಿಕ ಮೋಕ್ಷವನ್ನು ಗುರಿಯಾಗಿಸಿ ಭೌತಿಕ ಜಂಜಾಟದಿಂದ ಮುಕ್ತಿ ಪಡೆದು ತನು – ಮನ – ಧನವನ್ನು ಇಲಾಹೀ ಮಾರ್ಗದಲ್ಲಿ ವ್ಯಯಿಸುತ್ತಾ ತ್ಯಾಗದ ದೃಷ್ಟಿಯಿಂದ ತನುವನ್ನು ಕರಗಿಸಿ,

ಪೆರುವಾಯಿ ಮಖಾಂ ಉರೂಸ್ ➤ ಮಾ.11 ರಿಂದ 15 ರ ವರೆಗೆ Read More »

ಕರ್ನಾಟಕ

ಕೊರೋನಾ ಆತಂಕದ ಹಿನ್ನೆಲೆ ➤ ಮಾ.23 ರೊಳಗೆ ಪರೀಕ್ಷೆ ಮುಗಿಸುವಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.10, ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಾ. 23ರೊಳಗೆ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಬೇಕು ಎಂಬುದಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಜಿಲ್ಲೆಯ ಎಲ್ಲ ಖಾಸಗಿ, ಅನುದಾನಿತ, ಅನುದಾನರಹಿತ ಹಾಗೂ ಸರಕಾರಿ ಶಾಲೆಗಳಿಗೆ ಇದು ಅನ್ವಯವಾಗಲಿದೆ. ಕೊರೊನಾ ಆತಂಕದಿಂದಾಗಿ ಜಿಲ್ಲೆಯ ಕೆಲವು ಶಾಲೆಗಳ ವಿದ್ಯಾರ್ಥಿಗಳಲ್ಲಿ ಪತ್ರದ ಮೂಲಕ ಪೋಷಕರಿಗೆ ನೀಡುವಂತೆ ತಿಳಿಸಲಾಗಿದ್ದು, ಸಾಧ್ಯವಾದರೆ ಮಾಸ್ಕ್ ತೊಡಿಸಿಯೇ ಮಕ್ಕಳನ್ನು ಶಾಲೆಗೆ ಕಳುಹಿಸಿ, ಜ್ವರ, ಕೆಮ್ಮು,

ಕೊರೋನಾ ಆತಂಕದ ಹಿನ್ನೆಲೆ ➤ ಮಾ.23 ರೊಳಗೆ ಪರೀಕ್ಷೆ ಮುಗಿಸುವಂತೆ ಸೂಚನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.09. ವಿವಾಹಿತ ಮಹಿಳೆಯೋರ್ವರು ತನ್ನ ಮಗುವನ್ನು ಮನೆಯಲ್ಲೇ ಬಿಟ್ಟು ಫೆಬ್ರವರಿ 26ರಂದು ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಎನ್ ಕೂಪ್ ಸಿ.ಆರ್.ಸಿ ಕಾಲನಿ ಎಂಬಲ್ಲಿ ನಡೆದಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಎನ್ ಕೂಪ್ ಸಿ.ಆರ್.ಸಿ ಕಾಲನಿ ನಿವಾಸಿ ಕನಕರಾಜ ಎಂಬವರ ಪತ್ರಿ ಸುಮಿತ್ರಾ(30) ಎಂದು ಗುರುತಿಸಲಾಗಿದೆ. ಎಂಟು ವರ್ಷಗಳ ಹಿಂದೆ ಸುಮಿತ್ರಾಳನ್ನು ತಮಿಳುನಾಡಿಗೆ ವಿವಾಹ ಮಾಡಿಕೊಡಲಾಗಿದ್ದು, ಕೆಲವು ಸಮಯಗಳ ಕಾಲ ಗಂಡನ ಜೊತೆಗಿದ್ದು ಆ ಬಳಿಕ ತನ್ನ ತವರು

ಕಡಬ: ವಿವಾಹಿತ ಮಹಿಳೆ ನಾಪತ್ತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದುಬೈನಿಂದ ಆಗಮಿಸಿದ ವೇಳೆ ಶಂಕಿತ ಕೊರೋನಾ ವೈರಸ್ ಪತ್ತೆ ಹಿನ್ನೆಲೆ ➤ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಪರಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.09. ಮಹಾಮಾರಿ ಕೊರೋನ ಸೋಂಕು ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ತಗುಲಿ ಸಾವಿರಾರು ನಾಗರಿಕರ ಮಾರಣಹೋಮಕ್ಕೆ ಕಾರಣವಾಗಿರುವುದರ ನಡುವೆ ದುಬೈನಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರಿಗೆ ಕೊರೋನ ಸೋಂಕು ತಗುಲಿದ ಶಂಕೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ವ್ಯಕ್ತಿ ಸೋಮವಾರದಂದು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿರುವ ವ್ಯಕ್ತಿಯ ಹೆಸರನ್ನು ಆರೋಗ್ಯಾಧಿಕಾರಿಗಳು ಬಹಿರಂಗಪಡಿಸಲು ನಿರಾಕರಿಸಿದ್ದರಾದರೂ, ಸೋಮವಾರದಂದು ಶಂಕಿತ ರೋಗಿಯು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರನ್ನು ಆರೋಗ್ಯ ಇಲಾಖೆ

ದುಬೈನಿಂದ ಆಗಮಿಸಿದ ವೇಳೆ ಶಂಕಿತ ಕೊರೋನಾ ವೈರಸ್ ಪತ್ತೆ ಹಿನ್ನೆಲೆ ➤ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಪರಾರಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top