ಉಪ್ಪಿನಂಗಡಿ: ಕೊರೊನಾ ವದಂತಿಗೆ ಅತಂತ್ರವಾದ ಮೃತದೇಹ..! ➤ ಎಸ್ಐ ಈರಯ್ಯರ ಮಧ್ಯ ಪ್ರವೇಶದಿಂದ ಸಮಸ್ಯೆ ಇತ್ಯರ್ಥ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮೇ.29. ಮೃತಪಟ್ಟ ವ್ಯಕ್ತಿಗೆ ಜ್ವರ ಇತ್ತು ಎಂಬ ವದಂತಿ ಹಬ್ಬಿದ್ದರಿಂದ ಕೊರೋನಾ ಭಯದಿಂದ ಯಾರೂ ಹತ್ತಿರ ಸುಳಿಯದ ಕಾರಣ ಮೃತದೇಹವು ಅತಂತ್ರವಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಪ್ಪಿನಂಗಡಿಯ ಹೊಟೇಲ್ ಒಂದರಲ್ಲಿ ಕಾರ್ಮಿಕರಾಗಿದ್ದ ಉಡುಪಿಯ ವ್ಯಕ್ತಿಯೋರ್ವರು ಬುಧವಾರದಂದು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಅವರು ಜ್ವರದಿಂದ ಬಳಲುತ್ತಿದ್ದರು ಎಂಬ ವದಂತಿ ಹಬ್ಬಿದ ಕಾರಣ ಕೊರೊನಾ ಭಯದಿಂದಾಗಿ ಎಲ್ಲರೂ ಮೃತದೇಹದ ಬಳಿ ಬರಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. […]









