News Kadaba Desk

Breaking News ವಿಮಾನ ಪತನ ➤ ಮಹಿಳಾ ಫೈಲಟ್ ಸಹಿತ ಇಬ್ಬರ ದುರ್ಮರಣ

(ನ್ಯೂಸ್ ಕಡಬ)newskadaba.com ಜೂ. 8, ಒಡಿಶಾದಲ್ಲಿ ಸೋಮವಾರದಂದು ತರಬೇತಿ ವಿಮಾನ ಪತನವಾಗಿದ್ದು, ಬಿಹಾರ ಮತ್ತು ತಮಿಳುನಾಡು ಮೂಲದ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆನ್ನಲಾಗಿದೆ. ಒಡಿಶಾದ ಧೇಂಕ್ ನಲ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ದುರಂತದಲ್ಲಿ ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಹಾಗೂ ಇನ್ ಸ್ರಕ್ಟರ್ ಸಾವನ್ನಪ್ಪಿದ್ದಾರೆ. ಈ ಘಟನೆಯು ಕಂಕದಾಹದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ತರಬೇತಿ ಸಂದರ್ಭ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ಪತನವಾಗಿದೆ ಎನ್ನಲಾಗಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, […]

Breaking News ವಿಮಾನ ಪತನ ➤ ಮಹಿಳಾ ಫೈಲಟ್ ಸಹಿತ ಇಬ್ಬರ ದುರ್ಮರಣ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಗಸ್ಟ್ 15ರ ನಂತರ ಶಾಲಾ-ಕಾಲೇಜುಗಳ ಪುನರಾರಂಭ ➤ ಕೇಂದ್ರ ಸಚಿವ

(ನ್ಯೂಸ್ ಕಡಬ)newskadaba.com ಜೂ.8, ಕೊರೋನಾದಿಂದ ದೇಶದೆಲ್ಲೆಡೆ ಲಾಕ್ ಡೌನ್ ಆಗಿ ಮುಚ್ಚಲ್ಪಟ್ಟಿದ್ದ ಶಾಲಾ – ಕಾಲೇಜುಗಳನ್ನು ಆಗಸ್ಟ್ 15ರ ನಂತರ ಆರಂಭಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಮಹತ್ವದ ಆದೇಶವನ್ನು ನೀಡಿದ್ದಾರೆ. ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಇವರು 3 ತಿಂಗಳುಗಳಿಂದ ಮುಚ್ಚಲ್ಪಟ್ಟ ಶಾಲಾ ಕಾಲೇಜುಗಳನ್ನು ಆಗಸ್ಟ್‌ ತಿಂಗಳಿನಲ್ಲಿ ಮರು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಹಾಗೆಯೇ ಮುಂದೂಡಲ್ಪಟ್ಟ ಎಲ್ಲಾ ಪರೀಕ್ಷೆಗಳನ್ನು ಮುಂದಿನ ತಿಂಗಳು ನಡೆಸಲಾಗುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್,

ಆಗಸ್ಟ್ 15ರ ನಂತರ ಶಾಲಾ-ಕಾಲೇಜುಗಳ ಪುನರಾರಂಭ ➤ ಕೇಂದ್ರ ಸಚಿವ Read More »

ರಾಷ್ಟ್ರೀಯ ನ್ಯೂಸ್

ಕೊರೋನಾ ಹಿನ್ನೆಲೆ ಎಲ್ಲಾ ಪರೀಕ್ಷೆಗಳನ್ನು ರದ್ದುಪಡಿಸುವಂತೆ ವಾಟಾಳ್ ಒತ್ತಾಯ

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 8, ಎಸ್ಸೆಸ್ಸೆಲ್‌ಸಿ, ಫಾರ್ಮಸಿ, ಎಂಜಿನಿಯರಿಂಗ್‌ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಸಂಕಷ್ಟದಲ್ಲಿರುವುದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಾನದಂಡ ಅನುಸರಿಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕೆಂಬ ಎಂದು ಆಗ್ರಹಿಸಿದ್ದಾರೆ. ದೇಶ ಹಾಗೂ

ಕೊರೋನಾ ಹಿನ್ನೆಲೆ ಎಲ್ಲಾ ಪರೀಕ್ಷೆಗಳನ್ನು ರದ್ದುಪಡಿಸುವಂತೆ ವಾಟಾಳ್ ಒತ್ತಾಯ Read More »

ರಾಷ್ಟ್ರೀಯ ನ್ಯೂಸ್

ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ➤ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ಸ್ಯಾಂಡಲ್​ವುಡ್​ ನ ಖ್ಯಾತ ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದಾಗಿ ಭಾನುವಾರದಂದು ಮೃತಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್​ ಅವರನ್ನು ವಿವಾಹವಾಗಿದ್ದರು. ಚಿರಂಜೀವಿ ಸರ್ಜಾಗೆ ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಶನಿವಾರದಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ➤ ಹೃದಯಾಘಾತದಿಂದ ನಿಧನ Read More »

ಕರ್ನಾಟಕ

ಜೂ. 8ರಿಂದ ರಾಜ್ಯದ ಎಲ್ಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ➤ ಸಚಿವ ಸುರೇಶ್ ಕುಮಾರ್

(ನ್ಯೂಸ್ ಕಡಬ)newskadaba.com ಜೂ. 7, ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಶಿಕ್ಷಕರು ಜೂ.8 ರಿಂದ ಶಾಲಾ ಕಛೇರಿಯಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ. ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಜೂ.8ರಂದು ಶಾಲೆಗೆ ಹಾಜರಾಗಿ ಶಾಲೆ ಪುನರಾರಂಭದ ಕುರಿತು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು,  ಹಾಗೆಯೇ ರಾಜ್ಯಾದ್ಯಂತ ದೂರದ ಊರುಗಳಿಂದ ಬರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಜೂನ್ 8ರಿಂದ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು

ಜೂ. 8ರಿಂದ ರಾಜ್ಯದ ಎಲ್ಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ➤ ಸಚಿವ ಸುರೇಶ್ ಕುಮಾರ್ Read More »

ಕರಾವಳಿ

ಕಡಬ: 162 ಮಂದಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ)newskadaba.com ಕಡಬ. ಜೂ. 7, ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಡಬದ ಬ್ಯಾಂಕೊಂದರ ಸಿಬ್ಬಂದಿಗಳು ಸೇರಿದಂತೆ ಸುಮಾರು 162 ಮಂದಿಗೆ ಹೋಂ ಕ್ವಾರಂಟೈನ್ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಪಟ್ಟಿ ಬಿಡುಗಡೆ ಮಾಡಲಾಗಿದೆ. ಕೊರೋನಾ ಪಾಸಿಟಿವ್ ಬಂದ ವ್ಯಕ್ತಿ ಭೇಟಿ ನೀಡಿದ ಕಡಬದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 22 ಮಂದಿ ಸಿಬ್ಬಂದಿಗಳು ಸೇರಿದಂತೆ ಬ್ಯಾಂಕ್ ಗೆ ಭೇಟಿ ಮಾಡಿದ 140 ಮಂದಿ ಸೇರಿ ಒಟ್ಟು 162 ಮಂದಿಯನ್ನು ಸುರಕ್ಷತಾ ದೃಷ್ಟಿಯಿಂದ

ಕಡಬ: 162 ಮಂದಿಗೆ ಹೋಂ ಕ್ವಾರಂಟೈನ್ Read More »

ಕರಾವಳಿ

ಸೇತುವೆಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 7, ಯುವಕನೋರ್ವ ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಮಂತರಪಾಳ್ಯದ ಸುರೇಶ್ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಮೇಲ್ಸೇತುವೆಯಿಂದ ಏಕಾಏಕಿ ಜಿಗಿದ ಇವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಇವರನ್ನು ಸಾರ್ವಜನಿಕರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇತುವೆಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಮ್ಮು- ಕಾಶ್ಮೀರ ಎನ್ ಕೌಂಟರ್ ➤ ಮೂವರು ಉಗ್ರರು ಬಲೆಗೆ

(ನ್ಯೂಸ್ ಕಡಬ)newskadaba.com ಶ್ರೀನಗರ: ಜೂ. 7, ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ರಕ್ಷಣಾಪಡೆಯು ಜಂಟಿ ಕಾರ್ಯಾಚರಣೆ ಆರಂಭಿಸಿದ ವೇಳೆ ಉಗ್ರರು ದಾಳಿ ಆರಂಭಿಸಿದ ಕಾರಣ ಅಲ್ಲಿ ಗುಂಡಿನ ಚಕಮಕಿ ನಡೆದಿದೆ‌. ಅಲ್ಲಿನ ಪ್ರಾಥಮಿಕ ವರದಿಯ ಪ್ರಕಾರ ಕನಿಷ್ಠ ಮೂವರು ಉಗ್ರರು ರಕ್ಷಣಾ ಪಡೆಯ ಕಾರ್ಯಾಚರಣೆ ವೇಳೆ ಸಿಲುಕಿದ್ದಾರೆ. ರಕ್ಷಣಾ ಪಡೆಗಳ ಬಳಿ ಸಿಲುಕಿದ್ದ ಉಗ್ರರು ಪರಾರಿಯಾಗಲು ಬೇಕಾಗಿ ಗುಂಡಿನ ದಾಳಿ ನಡೆಸಿದ್ದರಿಂದ ರಕ್ಷಣಾ ಪಡೆಯು ಪ್ರತಿದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್

ಜಮ್ಮು- ಕಾಶ್ಮೀರ ಎನ್ ಕೌಂಟರ್ ➤ ಮೂವರು ಉಗ್ರರು ಬಲೆಗೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಮೂರನೇ ಸುತ್ತಿನ ಅರ್ಜಿ

(ನ್ಯೂಸ್ ಕಡಬ)newskadaba.com ಕುದ್ಲೂರು. ಜೂ. 7, ಕುದ್ಲೂರು ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ತೀರಾ ಸಿಗುತ್ತಿಲ್ಲ. ದೈನಂದಿನ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆಟ್ ವರ್ಕ್ ಇಲ್ಲದೇ ಇರುವುದರಿಂದ ಬಹಳ ಕಷ್ಟವಾಗುತ್ತಿದೆ. ಇದೀಗ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಮಕ್ಕಳ ವಿಧ್ಯಾಭ್ಯಾಸ ಕೂಡಾ ಆನ್ ಲೈನ್, ಇಂಟರ್ ನೆಟ್ ಮೊರೆಹೋಗಿರುವುದರಿಂದ ಮಕ್ಕಳ ವಿಧ್ಯಾಭ್ಯಾಸಕ್ಕೆ ಕೂಡಾ ಚ್ಯುತಿ ಬರುತ್ತಿದೆ. ಮಕ್ಕಳು ಮನೆಯ ಹಂಚು, ಗುಡ್ಡೆಯನ್ನು ಹತ್ತಿ ನೆಟ್ ವರ್ಕಿಗಾಗಿ ಪರದಾಡುತ್ತಿದ್ದಾರೆ. ನಮ್ಮೂರಿಗೆ ಸಮರ್ಪಕವಾಗಿ ನೆಟ್ ವರ್ಕ್ ಸಿಗುವಂತೆ ಟವರ್

ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಮೂರನೇ ಸುತ್ತಿನ ಅರ್ಜಿ Read More »

ಕರಾವಳಿ

ವಿದ್ಯುತ್ ಬಿಲ್ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ➤ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು. ಜೂ. 7, ಲಾಕ್‌ಡೌನ್‌ ಸಮಯದಲ್ಲಿ ವಿದ್ಯುತ್‌ ಬಿಲ್‌ ಅಧಿಕ ಬಂದಿರುವುದಾಗಿ ಸಾರ್ವಜನಿಕರಿಂದ ವ್ಯಕ್ತವಾಗಿರುವ ಮನವಿಗಳಿಗೆ ತಕ್ಷಣ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಶನಿವಾರ ಇದರ ಕುರಿತಾಗಿ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ಮಾರ್ಚ್‌-ಎಪ್ರಿಲ್‌ ಬಿಲ್ಲನ್ನು ಒಟ್ಟಿಗೆ ನೀಡಿರುವುದರಿಂದ ಮೊತ್ತ ಅಧಿಕವಾಗಿರುವುದು ಸಹಜ. ಆದರೆ ಪ್ರತೀ ಯುನಿಟ್‌ ದರ ಲೆಕ್ಕ ಹಾಕುವಾಗ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರಿಂದ ಅತೃಪ್ತಿ ವ್ಯಕ್ತವಾಗಿದೆ.

ವಿದ್ಯುತ್ ಬಿಲ್ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ➤ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ Read More »

ಕರಾವಳಿ
Scroll to Top