News Kadaba Desk

ಸಹೋದರನಿಗೆ ಕೊರೋನಾ ದೃಢ ➤ ಗಂಗೂಲಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ)newskadaba.com ಕೋಲ್ಕತ್ತಾ: ಜು.16, ಸೌರವ್ ರ ಹಿರಿಯ ಸಹೋದರ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸ್ನೇಹಷೀಶ್ ಗಂಗೂಲಿಗೆ ಕೋವಿಡ್-19 ಸೋಂಕು ದೃಢವಾದ ಹಿನ್ನಲೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಬಂಗಾಳದ ಮಾಜಿ ರಣಜಿ ಆಟಗಾರರಾಗಿದ್ದ ಸ್ನೇಹಷೀಶ್ ಗಂಗೂಲಿ ಅವರಿಗರ ಕೋವಿಡ್-19 ದೃಢಪಟ್ಟಿದ್ದು, ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಇದೀಗ ಕೋವಿಡ್ ಸೋಂಕು ದೃಢವಾಗಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ಸಹೋದರನಿಗೆ ಕೊರೋನಾ ದೃಢ ➤ ಗಂಗೂಲಿಗೆ ಹೋಂ ಕ್ವಾರಂಟೈನ್ Read More »

ಕರಾವಳಿ

ಕಡಬ: ಕುದ್ಮಾರಿನ ಯುವಕನಲ್ಲಿ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ)newskadaba.com ಕಡಬ, ಜು.15, ದಿನದಿಂದ ದಿನಕ್ಕೆ ತನ್ನ ಶೌರ್ಯವನ್ನು ತೋರುತ್ತಿರುವ ಕೊರೋನಾ ಇದೀಗ ತಾಲೂಕಿನ ಕುದ್ಮಾರು ಗ್ರಾಮದ ಯುವಕನೋರ್ವನಲ್ಲಿ ದೃಢಪಟ್ಟಿದೆ. ಮಂಗಳೂರಿನ ಪಾಸ್ಟ್ ಫುಡ್ ತಯಾರಿಕಾ ಸಂಸ್ಥಯೊಂದರಲ್ಲಿ ಕರ್ತವ್ಯದಲ್ಲಿದ್ದ ಈತ ಅನಾರೋಗ್ಯ ನಿಮಿತ್ತ ಊರಿಗೆ ಬಂದಿದ್ದು, ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇವರ ಗಂಟಲ ದ್ರವ ಸಂಗ್ರಹಿಸಿ ಕೊರೋನಾ ಪರೀಕ್ಷೆಗೆ ಕಳುಹಿಸಿದ್ದು, ಇದೀಗ ವರದಿಯು ಪಾಸಿಟಿವ್ ಬಂದಿದೆ. ಯುವಕನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಈತನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಕಡಬ: ಕುದ್ಮಾರಿನ ಯುವಕನಲ್ಲಿ ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ ➤ ಪರೀಕ್ಷಾ ಶುಲ್ಕದಲ್ಲಿ ಶೆ.50 ರಷ್ಟು ವಿನಾಯಿತಿ ಘೋಷಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು. 15, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕೋರ್ಸ್ ಗಳ ಅರ್ಧವಾರ್ಷಿಕ ಸೆಮಿಸ್ಟರ್ ಗಳ ಪರೀಕ್ಷೆಗಳನ್ನು ಕೊರೋನಾ ಹಿನ್ನೆಲೆ ರದ್ದು ಮಾಡಿರುವುದರಿಂದ ಮುಂದಿನ ಸೆಮಿಸ್ಟರ್ ಗಳ ಪರೀಕ್ಷಾ ಶುಲ್ಕದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ಪರೀಕ್ಷಾ ಶುಲ್ಕವನ್ನು ಸಂಗ್ರಹಿಸಿದ್ದು, ಅದನ್ನು ವಾಪಸ್‌ ಕೊಡಿಸಿ ಎಂದು ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಮನವಿಗೆ

ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ ➤ ಪರೀಕ್ಷಾ ಶುಲ್ಕದಲ್ಲಿ ಶೆ.50 ರಷ್ಟು ವಿನಾಯಿತಿ ಘೋಷಣೆ Read More »

ಕರ್ನಾಟಕ

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ದ್ವಿತೀಯ ವಾರ್ಷಿಕೋತ್ಸವ ➤ ಉಚಿತ ಸಸಿ ವಿತರಣೆ

(ನ್ಯೂಸ್ ಕಡಬ)newskadaba.com ಮಂಗಳೂರು: ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ವತಿಯಿಂದ ಸಂಸ್ಥೆಯ ಎರಡನೇ ವರ್ಷದ ಅಂಗವಾಗಿ ಉಚಿತ ಸಸಿ ವಿತರಣೆ ಕಾರ್ಯಕ್ರಮವು ಮರಿಯಾಶ್ರಮ ಶಾಲೆ ತಲಪಾಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ಮೇರಿ ಪಿಂಟೋ ಮಾತನಾಡಿ, ಸಾಮಾಜಿಕ ಚಿಂತನೆಗಳನ್ನು ಇಟ್ಟುಕೊಂಡು ತಾವು ಮಾಡುತ್ತಿರುವ ಈ ಸೇವೆ ಪ್ರಶಂಸಾರ್ಹ. ಸಂಸ್ಥೆಯ ಎರಡನೇ ವರ್ಷದ ಅಂಗವಾಗಿ ಪರಿಸರದ ಮಹತ್ವವನ್ನು ಅರಿತು ನಮ್ಮ ಸಂಸ್ಥೆಗೆ ಉಚಿತ ಸಸಿಯನ್ನು ನೀಡಿದ್ದೀರಾ, ಗಡಿನಾಡುಗಳಲ್ಲಿ ಹಿಂದುಳಿದಿರುವಂತಹ ಇಂತಹ ಶಾಲೆಗಳನ್ನು ಗುರುತಿಸಿ ನೀವು ನೀಡುತ್ತಿರುವ ಸೇವೆ

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ದ್ವಿತೀಯ ವಾರ್ಷಿಕೋತ್ಸವ ➤ ಉಚಿತ ಸಸಿ ವಿತರಣೆ Read More »

ಕರಾವಳಿ, ಕರ್ನಾಟಕ

ಕಡಬ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜು.15. ಬೀಡಿ ಬ್ರ್ಯಾಂಚ್ ಗೆಂದು ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೋರ್ವರು ಕೊಯಿಲ ಗ್ರಾಮದ ಸಂಪಡ್ಕ ಎಂಬಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ. ಕೋಡಿಂಬಾಳ ಗ್ರಾಮದ ದಾಸರಗುಡ್ಡೆ ನಿವಾಸಿ ಬಾಬು ಎಂಬವರ ಪತ್ನಿ ಸುಮತಿ ಎಂಬವರು ಸೋಮವಾರದಂದು ನಾಪತ್ತೆಯಾಗಿದ್ದು, ಈ ಬಗ್ಗೆ ಅವರ ಗಂಡ ಬಾಬು ಅವರು ಕಡಬ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರ ವಿನಯ ಎಂಬವರನ್ನು ಕೊಯಿಲ ಸಮೀಪದ ಸಂಪಡ್ಕ ಎಂಬಲ್ಲಿನ

ಕಡಬ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ತಪಾಸನೆಗೆ ಆ್ಯಂಟಿಜೆನ್ ಕಿಟ್‍ನ ಬಳಕೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.15: ಕೋವಿಡ್-19 ಸೋಂಕಿತರನ್ನು ತಪಾಸನೆ ಮಾಡಿ ರ್ಯಾಪಿಡ್ ಫಲಿತಾಂಶ ನೀಡುವ ಆ್ಯಂಟಿಜೆನ್ ಕಿಟ್‍ನ ಬಳಕೆಯನ್ನು ಜು.14ರಿಂದ ದಕ್ಷಿಣ ಕನ್ನಡದಲ್ಲಿ ಆರಂಭಿಸಲಾಗಿದೆ. ಈ ಹಿಂದೆ ಕೊರೊನಾ ಸೋಂಕು ಇದೆಯೇ ಇಲ್ಲವೇ ಎಂದು ಪತ್ತೆ ಹಚ್ಚಲು ಎರಡು ದಿನಗಳ ಕಾಲ ಕಾಯಬೇಕಿತ್ತು. ಆ್ಯಂಟಿಜೆನ್ ಟೆಸ್ಟ್ ನಿಂದ 15 ರಿಂದ 20 ನಿಮಿಷದಲ್ಲಿ ಕೊರೊನಾ ಪಾಸಿಟಿವ್ ಪತ್ತೆ ಹಚ್ಚಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಗೆ ಇಂತಹ 3500 ಕಿಟ್ ರಾಜ್ಯ ಸರ್ಕಾರದಿಂದ ಪೂರೈಕೆಯಾಗಿದೆ. ಈ ಕಿಟ್ ನಲ್ಲಿ ಇರುವ ಸ್ಟ್ರಿಪ್

ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ತಪಾಸನೆಗೆ ಆ್ಯಂಟಿಜೆನ್ ಕಿಟ್‍ನ ಬಳಕೆ Read More »

ಕರಾವಳಿ, ಕರ್ನಾಟಕ

ಖ್ಯಾತ ಯಕ್ಷಗಾನ ಹಿಮ್ಮೇಳ ವಾದಕ ಯುವರಾಜ ಆಚಾರ್ಯ ಕಾವಳಕಟ್ಟೆ ಇನ್ನಿಲ್ಲ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.15 : ಖ್ಯಾತ ಯಕ್ಷಗಾನ ಹಿಮ್ಮೇಳ ವಾದಕರಾಗಿ ಹಲವು ಮೇಳಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ನಿವಾಸಿ ಯುವರಾಜ ಆಚಾರ್ಯ ಕಾವಳಕಟ್ಟೆ( 60) ಅನಾರೋಗ್ಯದಿಂದ ಜು.14 ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಆರಂಭದಲ್ಲಿ ಹವ್ಯಾಸಿ ಮದ್ದಳೆವಾದಕರಾಗಿದ್ದ ಅವರು ಬಳಿಕ ಸುಮಾರು 15 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದ್ದರು. ಹೊಸನಗರ ಮೇಳ, ಹಿರಿಯಡ್ಕ, ಮಂಗಳಾದೇವಿ, ಬಪ್ಪನಾಡು, ಸಸಿಹಿತ್ಲು ಮೇಳಗಳಲ್ಲಿ ಮದ್ದಳೆ ವಾದಕರಾಗಿದ್ದ ಅವರು ಅನಾರೋಗ್ಯ ದಿಂದ ಮೇಳದಿಂದ ನಿವೃತ್ತಿ

ಖ್ಯಾತ ಯಕ್ಷಗಾನ ಹಿಮ್ಮೇಳ ವಾದಕ ಯುವರಾಜ ಆಚಾರ್ಯ ಕಾವಳಕಟ್ಟೆ ಇನ್ನಿಲ್ಲ Read More »

ಕರಾವಳಿ

ಬಂಟ್ವಾಳ ಹೋಮ್ ಕ್ವಾರಂಟೈನ್ ನಿಯಮ ಮೀರಿದಾತನ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜು.15:  ಕೊರೊನಾ ತನ್ನ ವೇಗವನ್ನು ಹೆಚ್ಚಿಸುತ್ತಾ ಮುಂದುವರಿಯುತ್ತಿದೆ ಇದರ ನಡುವೆ ವ್ಯಕ್ತಿಯೊಬ್ಬರ ವಿರುದ್ಧ ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ ಆರೋಪದಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಂಬೆ ಗ್ರಾಮದ ಕಾಣೆಮಾರ್ ನಿವಾಸಿ ಸಾಹಿದ್ (32) ವಿರುದ್ಧ ಕಾನೂನು ಉಲ್ಲಂಘಿಸಿದ ಆರೋಪ ಕೇಳಿಬಂದಿರುವುದು. ಸಾಹಿದ್ ಗೆ ಜು.೦೯ ರಿಂದ ಜು.23 ರವರೆಗೆ ಹೋಮ್ ಕಾರಂಟೈನ್ ಇರುವಂತೆ ತುಂಬೆ ಗ್ರಾಮ ಪಂಚಾಯತ್ ನಿಂದ ನೋಟಿಸು ಕೂಡ ಜಾರಿ ಮಾಡಿತ್ತು. ಆದರೆ ಜುಲೈ 14

ಬಂಟ್ವಾಳ ಹೋಮ್ ಕ್ವಾರಂಟೈನ್ ನಿಯಮ ಮೀರಿದಾತನ ವಿರುದ್ಧ ಪ್ರಕರಣ ದಾಖಲು Read More »

ಕರಾವಳಿ

ಬೆಳ್ಳಾರೆ: ಕೋಳಿ ಅಂಕಕ್ಕೆ ದಾಳಿ

(ನ್ಯೂಸ್ ಕಡಬ)newskadaba.com ಬೆಳ್ಳಾರೆ, ಜು.13, ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ಹಾಗೂ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬೆಳ್ಳಾರೆ ಪೊಲೀಸರು ಜೂಜಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಬಂಧಿಸಿ 13 ಕೋಳಿಗಳು ಹಾಗೂ ನಗದು ವಶಪಡಿಸಿಕೊಂಡ ಘಟನೆ ಕೊಡಿಯಾಲ ಗ್ರಾಮದ ಬೇರ್ಯ ಎಂಬಲ್ಲಿ ನಡೆದಿದೆ.   ಕೋಳಿ ಅಂಕ ನಿರತರಾಗಿದ್ದ ಹುಕ್ರಪ್ಪ ಶೆಟ್ಟಿ ಕೋಡಿಮಜಲು, ಪಾಂಡುರಂಗ ಕೆ. ಕೈಕುಡೆ, ಸುಂದರ ಎಂ. ಮರಿಕೈ, ವಿಶ್ವಾಸ್ ಕೆ. ಪಲ್ಲತ್ತಾರು, ಉಮೇಶ್ ಗೌಡ ಕೈಕುಡೆ, ಚೇತನ್

ಬೆಳ್ಳಾರೆ: ಕೋಳಿ ಅಂಕಕ್ಕೆ ದಾಳಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ದ.ಕ, ಉಡುಪಿ ಜಂಟಿ ಅಗ್ರ ಸ್ಥಾನ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.14: ಈಗಾಗಲೇ ದ್ವಿತೀಯ ಪಿಯುಸಿ ಪಿ.ಯು.ಸಿ ಫಲಿತಾಂಶ ಹೊರಬಿದ್ದಿದ್ದು ಅಚ್ಚರಿಯ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಜಂಟಿಯಾಗಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ 90.71 ಫಲಿತಾಂಶ ಪಡೆದುಕೊಂಡರೆ ನಂತರದ ಸ್ಥಾನ ಕೊಡಗಿನ ಪಾಲಾಗಿದೆ 81.53, ಉತ್ತರ ಕನ್ನಡ 80.97,ಚಿಕ್ಕಮಗಳೂರು 79.11 ನಂತರದ ಸ್ಥಾನ ಪಡೆದ ಜಿಲ್ಲೆಗಳಾಗಿವೆ. ಈ ಬಾರಿಯೂ ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರದ್ದೇ ಮೇಲುಗೈ ಆಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ದ.ಕ, ಉಡುಪಿ ಜಂಟಿ ಅಗ್ರ ಸ್ಥಾನ Read More »

ಕರಾವಳಿ
Scroll to Top