News Kadaba Desk

ಕಡಬ: ಇಂದು ಮತ್ತೆ ಓರ್ವರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ: ಜು.22, ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ತನ್ನ ಆರ್ಭಟವನ್ನು ಮುಂದುವರೆಸುತ್ತಿದ್ದು, ಇಂದು ಕೂಡಾ ಓರ್ವರಲ್ಲಿ ಸೋಂಕು ದೃಢಪಟ್ಟಿದೆ. ಕೇರಳದಿಂದ ಆಗಮಿಸಿ ಮಂಗಳೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಸುಂಕದಕಟ್ಟೆ ನಿವಾಸಿ 53 ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.  

ಕಡಬ: ಇಂದು ಮತ್ತೆ ಓರ್ವರಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ: ಜು.22, ಕಾಶಿಪಟ್ಟಣ ಗ್ರಾಮದ ಕೇಳದಪೇಟೆ ಹೊಸಮನೆ ನಿವಾಸಿ, ಬೆಳ್ತಂಗಡಿ ಪಿ.ಎಲ್.ಡಿ‌ ಬ್ಯಾಂಕ್ ಮಾಜಿ ನಿರ್ದೇಶಕ ಅನೂಪ್ ಕುಮಾರ್ ಜೈನ್ (67) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಇವರು ಕಾಶಿಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ‌ ಹಾಗೂ ಕೇಳದಪೇಟೆ ಶ್ರೀ ಅನಂತನಾಥ ಸ್ವಾಮಿ ಬಸದಿಯ ಕಾರ್ಯಾಧ್ಯಕ್ಷರಾಗಿ‌ಯೂ ಪರಿಚಿತರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಪಾರ ಬಂಧುವರ್ಗದವರನ್ನೂ ಅಗಲಿದ್ದಾರೆ.

Read More »

ಕರಾವಳಿ

ದುಷ್ಕರ್ಮಿಗಳ ಗುಂಡಿನ ದಾಳಿಗೆ ಗಾಯಗೊಂಡಿದ್ದ ಪತ್ರಕರ್ತ ಬಲಿ

(ನ್ಯೂಸ್ ಕಡಬ) newskadaba.com ಲಕ್ನೋ, ಜು. 22, ಉತ್ತರ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಡಿ ದಾಳಿಗೆ ಗಾಯಗೊಂಡಿದ್ದ ಪತ್ರಕರ್ತ ವಿಕ್ರಮ್ ಜೋಶಿ ನಿಧನ ಹೊಂದಿದ್ದಾರೆ. ಘಾಜಿಯಾಬಾದ್ ನಲ್ಲಿ ಪತ್ರಕರ್ತರಾಗಿದ್ದ ವಿಕ್ರಮ್ ಜೋಶಿ ಅವರ ಮೇಲೆ ಅಪರಿಚಿತರು ಜುಲೈ 20 ರಂದು ಗುಂಡಿನ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು 9 ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ದುಷ್ಕರ್ಮಿಗಳ ಗುಂಡಿನ ದಾಳಿಗೆ ಗಾಯಗೊಂಡಿದ್ದ ಪತ್ರಕರ್ತ ಬಲಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ: ಕೆರೆಗೆ ಹಾರಿ ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜು.22. ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದ ಶರವೂರು ಎಂಬಲ್ಲಿ ಬುಧವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಆಲಂಕಾರು ಗ್ರಾಮದ ಶರವೂರು ಸಮೀಪದ ಪಾಂಜೋಡಿ ಕಾಲೋನಿ ನಿವಾಸಿ ಕರಿಯ ಎಂಬವರ ಪುತ್ರಿ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಈಕೆ ಬುಧವಾರ ಬೆಳಿಗ್ಗೆ ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಈ ಬಗ್ಗೆ ಕಡಬ ಪೊಲೀಸರಿಗೆ

ಕಡಬ: ಕೆರೆಗೆ ಹಾರಿ ಯುವತಿ ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜುಲೈ 31ರಂದು ಕರಾವಳಿಯಲ್ಲಿ ‘ಬಕ್ರೀದ್’ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.21: ಪ್ರವಾದಿ ಇಬ್ರಾಹೀಂ (ಅ) ಮತ್ತು ಅವರ ಪುತ್ರ ಇಸ್ಮಾಯೀಲ್ (ಅ) ಅವರ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜು.31ರ ಶುಕ್ರವಾರ ಕರಾವಳಿಯಲ್ಲಿ ಆಚರಿಸಲಾಗುವುದು ಎಂದು ಖಾಝಿಗಳಾದ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಪ್ರತ್ಯೇಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ದ್ಸುಲ್‌ಹಜ್ ಪ್ರಥಮ ಚಂದ್ರದರ್ಶನವಾಗಿದೆ. ಅದರಂತೆ ಜು. 31ರಂದು ಬಕ್ರೀದ್ ಆಚರಿಸಲು ನಿರ್ಧರಿಸಲಾಗಿದೆ.

ಜುಲೈ 31ರಂದು ಕರಾವಳಿಯಲ್ಲಿ ‘ಬಕ್ರೀದ್’ ಆಚರಣೆ Read More »

ಕರಾವಳಿ, ಕರ್ನಾಟಕ

ನಾಳೆಯಿಂದ ರಾಜ್ಯಾದ್ಯಂತ ಅನ್ ಲಾಕ್ ಸಿಎಂ ಯಡಿಯೂರಪ್ಪ ಘೋಷಣೆ

ಬೆಂಗಳೂರು: ನಾಳೆಯಿಂದ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಫೇಸ್ ಬುಕ್, ಯೂಟ್ಯೂಬ್ ಲೈವ್ ನಲ್ಲಿ ಮಾತನಾಡಿದ ಅವರು, ಜನ ತಮ್ಮ ಎಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಅವರ ಆರ್ಥಿಕ ಪರಿಸ್ಥಿತಿ ಕೆಡುತ್ತದೆ. ಸರಕಾರಕ್ಕೂ ಸಂಪನ್ಮೂಲ ಕ್ರೋಡೀಕರಣ ಅಗತ್ಯವಿದೆ. ಹೀಗಾಗಿ ಲಾಕ್ ಡೌನ್ ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಕ್ರಮ ವಹಿಸಲಾಗಿದೆ. ಅಗತ್ಯಕ್ಕೆ ತಕ್ಕಷ್ಟು ಬೆಡ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಒಟ್ಟು

ನಾಳೆಯಿಂದ ರಾಜ್ಯಾದ್ಯಂತ ಅನ್ ಲಾಕ್ ಸಿಎಂ ಯಡಿಯೂರಪ್ಪ ಘೋಷಣೆ Read More »

ಕರ್ನಾಟಕ

ಬೆಳ್ತಂಗಡಿ: ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ: ಜು.21, ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ದೇವಗಿರಿ ನಿವಾಸಿ ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿ ಬಸ್ಸು ಚಾಲಕನಾಗಿದ್ದ 41 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಇದರ ಮಧ್ಯೆ ಅವರ ಗಂಟಲದ್ರವ ಪರೀಕ್ಷೆ ನಡೆಸಿದ್ದು ಕೊರೋನ ಧೃಡ ಪಟ್ಟಿದ್ದು, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ನಿನ್ನೆ ಮರಣಹೊಂದಿದ ವ್ಯಕ್ತಿಯ ಸಂಬಂಧಿಕರು ಅಂತ್ಯಕ್ರಿಯೆ ನಡೆಸುವುದೆಂದು ತೀರ್ಮಾನಿಸಿದ್ದರು. ಅದರಂತೆ ಸರಕಾರದ ಎಲ್ಲಾ ನಿಯಮಗಳನ್ನು ಪೂರ್ತಿಗೊಳಿಸಿ ಶವವನ್ನು ದೇವಗಿರಿಗೆ ಆಂಬುಲೆನ್ಸ್ ಮೂಲಕ ತಂದಾಗ ಯಾರೂ ಕೂಡ ಸಂಬಂಧಿಕರು

ಬೆಳ್ತಂಗಡಿ: ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ Read More »

ಕರಾವಳಿ, ಕರ್ನಾಟಕ

ಕಡಬದಲ್ಲಿ ಮತ್ತೆ ಕೊರೋನಾ..‼️ ➤ ಕಡಬದ ವ್ಯಾಪಾರಿಗೆ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಜು.21. ಕಳೆದ ನಾಲ್ಕು ದಿನಗಳಿಂದ ಕಡಬದ ಜನತೆಯಿಂದ ದೂರವಾಗಿದ್ದ ಕೊರೋನಾ ಮಹಾಮಾರಿಯು ಇಂದು ಮತ್ತೆ ಪತ್ತೆಯಾಗಿದೆ. ಕಳೆದೆರಡು ದಶಕಗಳಿಂದ ಕಡಬದ ಮುಖ್ಯ ಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ 45 ವರ್ಷ ಪ್ರಾಯದ ವ್ಯಾಪಾರಿಯೋರ್ವರಿಗೆ ಕೊರೋನಾ ದೃಢಪಟ್ಟಿದ್ದು, ಕಡಬದ ಜನತೆಗೆ ಮತ್ತೆ ಆತಂಕ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಇದೀಗ ಅವರ ಗಂಟಲು ದ್ರವದ ಪರೀಕ್ಷೆಯಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ.

ಕಡಬದಲ್ಲಿ ಮತ್ತೆ ಕೊರೋನಾ..‼️ ➤ ಕಡಬದ ವ್ಯಾಪಾರಿಗೆ ಪಾಸಿಟಿವ್ Read More »

ಬ್ರೇಕಿಂಗ್ ನ್ಯೂಸ್

ಯುಎಸ್ಎ ಗೆ ಟಿಕೆಟ್ ಆರಂಭಿಸಿದ ಏರ್ ಇಂಡಿಯಾ ➤ ಜುಲೈ 22ರಿಂದ ಆಗಸ್ಟ್‌ 31 ರವರೆಗೂ‌ ಸೇವೆ ಲಭ್ಯ

(ನ್ಯೂಸ್ ಕಡಬ)newskadaba.com ದೆಹಲಿ, ಜುಲೈ 21, ‘ವಂದೇ ಭಾರತ್ ಮಿಷನ್’ ನಾಲ್ಕನೇ ಹಂತದಲ್ಲಿ ಭಾರತದಿಂದ ಅಮೆರಿಕಾಕ್ಕೆ ಅಂತರಾಷ್ಟ್ರೀಯ ವಿಮಾನ ಸಂಚಾರ ಪ್ರಾರಂಭವಾಗುತ್ತಿದ್ದು, ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಜುಲೈ 22 ರಿಂದ ಆಗಸ್ಟ್ 31ರವರೆಗೂ ಈ ಸೇವೆ ಲಭ್ಯವಿರಲಿದೆ. ಯುಎಸ್‌ಗೆ ತೆರಳಲು ಬಯಸುವ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್, ಬುಕ್ಕಿಂಗ್ ಕೇಂದ್ರಗಳು ಹಾಗೂ ಟ್ರಾವೆಲ್ ಏಜೆಂಟ್‌ಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು. ವಿಮಾನಯಾನ ಸಚಿವಾಲಯವು ನಿಗದಿ ಮಾಡಿರುವಂತಹ ಟಿಕೆಟ್ ದರದಲ್ಲಿ ದೇಶೀಯ ಖಾಸಗಿ ವಿಮಾನಗಳು ಹಾಗೂ ಏರ್ ಇಂಡಿಯಾ

ಯುಎಸ್ಎ ಗೆ ಟಿಕೆಟ್ ಆರಂಭಿಸಿದ ಏರ್ ಇಂಡಿಯಾ ➤ ಜುಲೈ 22ರಿಂದ ಆಗಸ್ಟ್‌ 31 ರವರೆಗೂ‌ ಸೇವೆ ಲಭ್ಯ Read More »

ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗರ್ಭಿಣಿಯರಿಗೆ ಚಿಕಿತ್ಸೆ ನಿರಾಕರಿಸಿದರೆ ಕಠಿಣ ಕ್ರಮ ➤ ಕೋಟ ಶ್ರೀ ನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು: ಜು.21, ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಕೋವಿಡ್ ಸೋಂಕಿತರೆಂಬ ಕಾರಣಕ್ಕೆ ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಬೇರೆಡೆಗೆ ಕಳುಹಿಸುವಂತಿಲ್ಲ. ಹೆರಿಗೆ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಸತಾಯಿಸದೆ ಹೆರಿಗೆ ಮಾಡಿಸಲು ಕ್ರಮ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಡಕ್ ಸೂಚನೆ ನೀಡಿದ್ದಾರೆ. ಸೋಮವಾರ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಗರ್ಭಿಣಿಯರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸತಾಯಿಸಿದರೆ ಅಥವಾ ನಿರಾಕರಿಸಿದರೆ ಅಂತಹವರ

ಗರ್ಭಿಣಿಯರಿಗೆ ಚಿಕಿತ್ಸೆ ನಿರಾಕರಿಸಿದರೆ ಕಠಿಣ ಕ್ರಮ ➤ ಕೋಟ ಶ್ರೀ ನಿವಾಸ ಪೂಜಾರಿ Read More »

ಕರಾವಳಿ, ಕರ್ನಾಟಕ
Scroll to Top