News Kadaba Desk

ಕಾರ್ಕಳ : ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವೃದ್ದೆ

(ನ್ಯೂಸ್ ಕಡಬ) newskadaba.com ಕಾರ್ಕಳ ಅ. 19: ಕಾರ್ಕಳ ಚಿಕ್ಕಲ್ ಬೆಟ್ಟು ಎಂಬಲ್ಲಿ ಇಂದು ಮುಂಜಾನೆ ಸುಮಾರು 78 ವರುಷದ ವೃದ್ದೆಯೋರ್ವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.   ಘಟನೆ ಕಾರ್ಕಳದ ಹಿರ್ಗಾನ್ ಗ್ರಾಮದ ಚಿಕ್ಕಲ್ ಬೆಟ್ಟು ಎಂಬಲ್ಲಿ ನಡೆದಿದೆ.  ವೃದ್ದೆ ಸುಲೋಚನಾ ಎಂಬುವರು ಮನೆ ಸಮೀಪದ ತೋಟದಲ್ಲಿ ಮುಂಜಾನೆ ಸೀಮೆ ಎಣ್ಣೆ ಹಾಗೂ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಕಾರ್ಕಳ : ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವೃದ್ದೆ Read More »

ಕರಾವಳಿ, ಕರ್ನಾಟಕ

ಉಸಿರಾಟ ಸಮಸ್ಯೆ: ಶಾಸಕ ಎಸ್.ಎ.ರಾಮದಾಸ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 19: ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌ ಅವರು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮುಂಜಾನೆ ಉಸಿರಾಟದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಶಾಸಕ ರಾಮ್ ದಾಸ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.. ಕಳೆದ ಎರಡು ದಿನಗಳಿಂದ ಶಾಸಕ ರಾಮದಾಸ್ ದಸರಾ ಸಮಾರಂಭದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.  

ಉಸಿರಾಟ ಸಮಸ್ಯೆ: ಶಾಸಕ ಎಸ್.ಎ.ರಾಮದಾಸ್ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ

ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆ ಮುಂದೆ ಇಟ್ಟ ಪತಿರಾಯ

(ನ್ಯೂಸ್ ಕಡಬ) newskadaba.com ತೆಲಂಗಾಣ ಅ. 19: ಪತ್ನಿಗೆ ಅನೈತಿಕ ಸಂಬಂಧ ಇದೆ ಎಂಬ ಸಂಶಯದ ಮೇಲೆ ಬೇಸತ್ತ ಪತಿಯೊಬ್ಬ ಆಕೆಯ ರುಂಡವನ್ನು ಕತ್ತರಿಸಿ ಅದನ್ನು ಪ್ರಿಯಕರನ ಮನೆ ಮುಂದೆ ತಂದಿಟ್ಟು ಹೋಗಿರುವ ಭೀಕರ ಘಟನೆ ತೆಲಂಗಾಣದಲ್ಲಿ ನಡೆದಿದೆ.   ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ್ ಗ್ರಾಮದ ಜುರ್ರು ಸಾಹಿಲು ತನ್ನ ಪತ್ನಿ 35 ವರ್ಷದ ಅಂಶಮ್ಮ ಎಂಬಾಕೆಯ ರುಂಡವನ್ನು ಕತ್ತರಿಸಿದ್ದಾರೆ. ನಂತರ ಆ ರುಂಡವನ್ನು ಬೈಕ್ ನಲ್ಲಿ ಐದು ಕಿ.ಮೀ ದೂರದಲ್ಲಿರುವ ನಾರಾಯಣ್ ಖೇಡ್ ಗ್ರಾಮಕ್ಕೆ ತೆಗೆದುಕೊಂಡು

ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆ ಮುಂದೆ ಇಟ್ಟ ಪತಿರಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಸ ಹಾಕೋ ಕಿರಾತಕರಿಗೆ ಸ್ಪೆಷಲ್ ಬ್ಯಾನರ್ ರೆಡಿ ➤ ಬ್ಯಾನರ್ ನಲ್ಲಿ ಏನಿದೆ ಗೊತ್ತೇ.?!

(ನ್ಯೂಸ್ ಕಡಬ) newskadaba.com ಉಡುಪಿ ಅ. 19: ಪರಿಸರ ಸ್ವಚ್ಛತೆ ಬಗ್ಗೆ ಸರ್ಕಾರ ಎಷ್ಟೇ ಮುಂಜಾಗ್ರತೆ ಕ್ರಮಗಳನ್ನು ಜಾರಿಗೆ ತಂದರೂ ಕೆಲವೊಂದು ಪ್ರದೇಶದ ಜನರು ಇದನ್ನ ಕ್ಯಾರೆ ಅನ್ನುತ್ತಿಲ್ಲ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಕೀಳಾಗಿ ವರ್ತಿಸುತ್ತಾರೆ.ಅದರಂತೆ ,ಉಡುಪಿಯ ಹಿರಿಯಡ್ಕದ ಪ್ರದೇಶವೊಂದರಲ್ಲಿ ಜನ ಸಿಕ್ಕಾಪಟ್ಟೆ ಕಸ ಎಸೆದು ಹೋಗುತ್ತಿದ್ದರು. ಇದರಿಂದ ಇಡೀ ಪರಿಸರ ಗಬ್ಬು ನಾರುತ್ತಿತ್ತು, ಮಾತ್ರವಲ್ಲದೆ ಸಾಂಕ್ರಾಮಿಕ ರೋಗದ ಭೀತಿಯೂ ಶುರುವಾಗಿತ್ತು.ಹೀಗಾಗಿ ಆತ್ರಾಡಿ ಗ್ರಾಮಸ್ಥರೆಲ್ಲಾ ಸೇರಿ ‘ ಇಲ್ಲಿ ದಯವಿಟ್ಟು ಕಸ ಹಾಕಬೇಡಿ ‘ ಎಂದು ಕೋರಿಕೆಯ ಬ್ಯಾನರ್ ಅಳವಡಿಸಿದ್ದರು.

ಕಸ ಹಾಕೋ ಕಿರಾತಕರಿಗೆ ಸ್ಪೆಷಲ್ ಬ್ಯಾನರ್ ರೆಡಿ ➤ ಬ್ಯಾನರ್ ನಲ್ಲಿ ಏನಿದೆ ಗೊತ್ತೇ.?! Read More »

ಕರಾವಳಿ, ಕರ್ನಾಟಕ

ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಯುವಕರು ನೀರುಪಾಲು

(ನ್ಯೂಸ್ ಕಡಬ) newskadaba.com ಕಾಪು ಅ. 19: ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಐವರು ಯುವಕರ ತಂಡದಲ್ಲಿ ಇಬ್ಬರು ಯುವಕರು ನಿರುಪಾಲಾದ ಘಟನೆ ರವಿವಾರ ಸಂಜೆ ನಡೆದಿದೆ. ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ. ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ‌. ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್,

ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಯುವಕರು ನೀರುಪಾಲು Read More »

ಕರಾವಳಿ, ಕರ್ನಾಟಕ

ನಮ್ಮಬದುಕನ್ನು ಆತ್ಮ ನಿರ್ಭರಗೊಳಿಸಬೇಕು ➤ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ

(ನ್ಯೂಸ್ ಕಡಬ) newskadaba.com ಅರಂತೋಡು, ಅ. 18. ಹಲವು ರೀತಿಯ ಉದ್ಯೋಗ ಪಡೆದು ಅಥವಾ ಸ್ವತಃ ಕೃಷಿ ಮಾಡಿಕೊಂಡು ತನ್ನ ಕಾಲಮೇಲೆ ನಿಲ್ಲುವುದಕ್ಕೆ ಆತ್ಮ ಸ್ಥೈರ್ಯದಿಂದ ಬದುಕುವುದರಿಂದ ನಮ್ಮ ಜೀವನ ಸಾಕಾರಗೊಳ್ಳುವುದಕ್ಕೆ ಉದ್ಯೋಗ ನೈಪುಣ್ಯ ಕಾರ್ಯ ಸಾಕ್ಷಿಯಾಗಿದೆ. ನಾವು ಯಾವ ರೀತಿ ಕೆಲಸ ಮಾಡಬೇಕು, ನಾವು ಯಾವ ರೀತಿ ಬದುಕು ಕಟ್ಟಿಕೋಳ್ಳಬೇಕು ಎನ್ನುವುದಕ್ಕೆ ಈ ಕಾರ್ಯ ದಾರಿಯಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ

ನಮ್ಮಬದುಕನ್ನು ಆತ್ಮ ನಿರ್ಭರಗೊಳಿಸಬೇಕು ➤ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ Read More »

ಕರಾವಳಿ

ಶಾರ್ಟ್​ಸರ್ಕ್ಯೂಟ್​ ನಿಂದ ಕಾರು ಭಸ್ಮ ➤ ಅದೃಷ್ಟವಶಾತ್​ ಮೂವರು ಪಾರು

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 18: ಶರ್ಟ್​ಸರ್ಕ್ಯೂಟ್​ನಿಂದ ಕಾರು ಸಂಪೂರ್ಣ ಭಸ್ಮವಾಗಿದ್ದು, ಅದರಲ್ಲಿದ್ದ ಮೂವರು ಪಾರಾದ ಘಟನೆ ಬೆಂಗಳೂರಿನ ಮೈಸೂರು ರೋಡ್​ ಪಂಥರಪಾಳ್ಯದಲ್ಲಿ ನಡೆದಿದೆ.   ಚಾಲಕ, ಆತನ ಪತ್ನಿ ಮತ್ತು ತಾಯಿ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದರು, ಈ ವೇಳೆ ಅಕಸ್ಮಾತಾಗಿ ಶಾರ್ಟ್​ ಸರ್ಕ್ಯೂಟ್​ ಉಂಟಾಗಿದೆ. ಅದನ್ನು ಕಂಡ ಮೂವರು ತಕ್ಷಣ ಕಾರಿನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರಿನ ಬೆಂಕಿನಂದಿಸಿದ್ದಾರೆ, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಕುರಿತು ಬ್ಯಾಟರಾಯನಪುರ ಪೊಲೀಸ್​

ಶಾರ್ಟ್​ಸರ್ಕ್ಯೂಟ್​ ನಿಂದ ಕಾರು ಭಸ್ಮ ➤ ಅದೃಷ್ಟವಶಾತ್​ ಮೂವರು ಪಾರು Read More »

ಕರ್ನಾಟಕ

ಹಿಸಾಂತ್ಮಕವಾಗಿ ದನ ಕರುಗಳ ಸಾಗಾಟ ➤ ಓರ್ವ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಪುಂಜಾಲಕಟ್ಟೆ ಅ. 18: ಜಾನುವಾರುಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಜಾಲವೊಂದನ್ನು ಶನಿವಾರ ರಾತ್ರಿ ಪುಂಜಾಲಕಟ್ಟೆ ಪೊಲೀಸರು ಪತ್ತೆ ಹಚ್ಚಿದ್ದು, ಜಾನುವಾರುಗಳ ಸಹಿತ ಸಾಗಾಟಕ್ಕೆ ಬಳಸಿದ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ. ಕಾವಳಮೂಡೂರು ಗ್ರಾಮದ ಎನ್.ಸಿ .ರೋಡ್‌ನಲ್ಲಿ ಕಾಡು ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಅಮಾನವೀಯವಾಗಿ ಕೂಡಿ ಹಾಕಿ ವಾಹನಗಳಲ್ಲಿ ಸಾಗಾಟಕ್ಕೆ ಪ್ರಯತ್ನಿಸುತ್ತಿದ್ದ ವೇಳೆ ಪುಂಜಾಲಕಟ್ಟೆ ಎಸ್‌ಐ ಸೌಮ್ಯಾ ಜೆ. ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ಬೊಲೆರೊ ಜೀಪ್, ಆಮ್ನಿ ಕಾರು, ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ವಾಹನದಲ್ಲಿದ್ದ 7 ದನ

ಹಿಸಾಂತ್ಮಕವಾಗಿ ದನ ಕರುಗಳ ಸಾಗಾಟ ➤ ಓರ್ವ ಆರೋಪಿ ಖಾಕಿ ಬಲೆಗೆ Read More »

ಕರಾವಳಿ, ಕ್ರೈಮ್ ನ್ಯೂಸ್

ನೋಯ್ಡಾ ಪೊಲೀಸರ ಬಲೆಗೆ ಏಲಿಯನ್.!

(ನ್ಯೂಸ್ ಕಡಬ) newskadaba.com ನೋಯ್ಡಾ, ಅ. 18: ಗ್ಯಾಸ್ ತುಂಬಿದ ಈ ಐರನ್ ಮ್ಯಾನ್ ಆಕೃತಿಯ ಬಲೂನ್‌ವೊಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾ ಬಳಿ ನಡೆದಿದೆ. ಈ ಬಲೂನ್‌ನನ್ನು ಏಲಿಯನ್ ಎಂದು ಭಾವಿಸಿ ಜನ ಆತಂಕಕ್ಕೀಡಾಗಿದ್ದರು. ಆಗಸದಲ್ಲಿ ಹಾರಾಡುತ್ತಿದ್ದ ಮನುಷ್ಯನಾಕೃತಿಯ ಈ ವಸ್ತುವನ್ನು ನೋಡಿದ ನೋಯ್ಡಾದ ದನ್ಕೌರ್ ಟೌನ್ ಜನ, ಏಲಿಯನ್ ದಾಳಿ ನಡೆದಿದೆ ಎಂದೇ ಭಾವಿಸಿದ್ದರು. ಗ್ಯಾಸ್ ತುಂಬಿದ ಈ ಐರನ್ ಮ್ಯಾನ್ ಆಕೃತಿಯ ಬಲೂನ್ ಇಲ್ಲಿನ ಭಟ್ಟಾ ಪರ್ಸೌಲ್ ಬಳಿಯ ಕೆನಾಲ್

ನೋಯ್ಡಾ ಪೊಲೀಸರ ಬಲೆಗೆ ಏಲಿಯನ್.! Read More »

ರಾಷ್ಟ್ರೀಯ ನ್ಯೂಸ್

ಕಲ್ಮಕಾರು: ಯುವಕ ಆತ್ಮಹತ್ಮಗೆ ಶರಣು

(ನ್ಯೂಸ್ ಕಡಬ) newskadaba.com ಕಲ್ಮಕಾರು ಅ. 18: ಕಲ್ಮಕಾರಿನಲ್ಲಿ ಯುವಕನೋರ್ವ ಮದ್ಯಾಹ್ನ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಳೆದ ದಿನ ನಡೆದಿದೆ. ಕಲ್ಮಕಾರು ಗ್ರಾಮದ ಪಡ್ಪು ವಸಂತರವರ ಪುತ್ರ ಲೋಹಿತ್ (24)  ಶನಿವಾರ ಮದ್ಯಾಹ್ಮ ಮನೆಯ ಸಮೀಪದ ಮಾವಿವಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮದ್ಯಾಹ್ನ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ್. ಮೃತ ಲೋಹಿತ್ ತಂದೆ ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.  

ಕಲ್ಮಕಾರು: ಯುವಕ ಆತ್ಮಹತ್ಮಗೆ ಶರಣು Read More »

ಕರಾವಳಿ, ಕರ್ನಾಟಕ
Scroll to Top