News Kadaba Desk

ಕ್ರಿಕೆಟ್ ಕ್ಷೇತ್ರದ ದಿಗ್ಗಜ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ ಅ. 24: ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ಕಪಿಲ್ ದೇವ್ ನಿನ್ನೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಪಿಲ್ ದೇವ್ ಗೆ ಹೃದಯಾಘಾತಕ್ಕೊಳಗಾದ ಸುದ್ದಿ ತಿಳಿಯುತ್ತಿದ್ದಂತೇ ವಿರಾಟ್ ಕೊಹ್ಲಿ ಸೇರಿದಂತೆ ಹಾಲಿ-ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಚಿಕಿತ್ಸೆ ಬಳಿಕ ಸ್ವತಃ ಕಪಿಲ್ ತಮಗೆ ಶುಭ ಹಾರೈಸಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ತಾವೀಗ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.ತಮ್ಮ ಮಗಳ ಜೊತೆಗೆ ಕಪಿಲ್ ದೇವ್ ಖುಷಿಯಿಂದ […]

ಕ್ರಿಕೆಟ್ ಕ್ಷೇತ್ರದ ದಿಗ್ಗಜ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರು ನಗರದಾದ್ಯಂತ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 24: ಬೆಂಗಳೂರು ನಗರದಾದ್ಯಂತ ಭಾರಿ ಮಳೆ ಸುರಿದ ಹಿನ್ನಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಮಠ ಕಳೆದುಕೊಂಡು ಪರದಾಡುತ್ತಿದ್ದಾರೆ.ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ನಗರವೇ ನಲುಗಿ ಹೋಗಿದೆ.   ಅಲ್ಲದೇ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಕಮಿಷನರ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಕರೆ ಮಾಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವಂತೆ ಸೂಚಸಿದ್ದಾರೆ. ಅಲ್ಲದೇ

ಬೆಂಗಳೂರು ನಗರದಾದ್ಯಂತ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ Read More »

ಕರ್ನಾಟಕ

ಸಕ್ರೆಬೈಲು :ಕಾಡಾನೆ ದಾಳಿಗೆ ಆಕರ್ಷಣೀಯ ಆನೆ “ರಂಗ” ಬಲಿ

(ನ್ಯೂಸ್ ಕಡಬ) newskadaba.com ಸಕ್ರೆಬೈಲು ಅ. 24: ಸಕ್ರೆಬೈಲು ಆನೆ ಬಿಡಾರದ ಪ್ರಮುಖ ಆಕರ್ಷಣೆಯಾಗಿದ್ದ ಆನೆರಂಗ ಸಾವನ್ನಪ್ಪಿದೆ. ಈ ಮೂಲಕ ಒಂದೇ ವಾರದಲ್ಲಿ ಮರಿಯಾನೆ ಸೇರಿ ಮೂರು ಆನೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ.  ಬಿಡಾರದ ಅತ್ಯಂತ ಆಕರ್ಷಣೀಯ ಆನೆ ಎಂದೇ ಖ್ಯಾತಿ ಪಡೆದಿದ್ದ ಸಾಕಾನೆ ರಂಗ ಇಂದು ಕಾಡಾನೆಯ ದಂತ ತಿವಿತಕ್ಕೆ ಅಸುನೀಗಿದ್ದಾನೆ. ಕಳೆದ ರಾತ್ರಿ ಕಾಡಾನೆ ಏಕಾಏಕಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅದರ ದಂತ ತಿವಿತಕ್ಕೆ ಬಲಿಯಾಗಿದ್ದಾನೆ. ತನ್ನ ಮೈಕಟ್ಟಿನಿಂದಲೇ ಎಲ್ಲರನ್ನು ಆಕರ್ಷಿಸಿದ್ದ

ಸಕ್ರೆಬೈಲು :ಕಾಡಾನೆ ದಾಳಿಗೆ ಆಕರ್ಷಣೀಯ ಆನೆ “ರಂಗ” ಬಲಿ Read More »

ಕರ್ನಾಟಕ

ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಐಇಇಇ ರಾಷ್ಟ್ರ ಮಟ್ಟದ ವೆಬಿನಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.24. ಐಇಇಇ  ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ದಿನಾಂಕ ಶುಕ್ರವಾರದಂದು “ಸಂಶೋಧನ ಸಮುದಾಯಕ್ಕೆ ಐಇಇಇಯ ಪ್ರಯೋಜನಗಳು” ಎಂಬ ವಿಷಯದ ಮೇಲೆ ರಾಷ್ಟ್ರಮಟ್ಟದ ವೆಬಿನಾರ್‍ಆಯೋಜಿಸಲಾಯಿತು. ಡಾ. ವೇದ್ ಪ್ರಕಾಶ್ ಮಿಶ್ರಾ, ಕಾರ್ಯಕ್ರಮ ನಾಯಕರು, ಸಹಾಯಕ ಪ್ರೊಫೆಸರ್, ಗಣಕ ವಿಜ್ಞಾನ ಮತ್ತುತಂತ್ರಜ್ಞಾನ ವಿಭಾಗ ಹಾಗೂ ಶಾಖಾ ಸಲಹೆಗಾರರರು ಐಇಇಇ ವಿದ್ಯಾರ್ಥಿ ಶಾಖೆ, ಅಮಿಟಿ ವಿಶ್ವವಿದ್ಯಾನಿಲಯ, ದುಬೈ, ಯು.ಎ.ಇ.  ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಅವರು “ಐಇಇಇ ಯು ಸಂಶೋಧನೆಗೆಂದೇ ಹುಟ್ಟು ಹಾಕಲ್ಪಟ್ಟ ಸಂಸ್ಥೆಯಾಗಿದೆ.

ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಐಇಇಇ ರಾಷ್ಟ್ರ ಮಟ್ಟದ ವೆಬಿನಾರ್ Read More »

ಕರಾವಳಿ, ಕರ್ನಾಟಕ

ಕಡಬ : ರಾಜೇಶ್ ಇಲೆಕ್ಟ್ರಿಕಲ್ & ಆರ್.ವಿ ಕನ್ ಸ್ಟ್ರಕ್ಷನ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ ಅ. 24: ಕಡಬದ ಮುಖ್ಯ ರಸ್ತೆಯ ಬಳಿ ರಾಜೇಶ್ ಇಲೆಕ್ಟ್ರಿಕಲ್ ಮತ್ತು ಆರ್.ವಿ ಕನ್ ಸ್ಟ್ರಕ್ಷನ್ ಉಪ್ಪಿನಂಗಡಿ, ಪುತ್ತೂರು ಇದರ ನೂತನ ಕಛೇರಿ ಶುಕ್ರವಾರದಂದು ಕಡಬದ ಗಣೇಶ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಂಡಿದೆ. ಇಂದು ಶುಭಾರಂಭಗೊಂಡ ನೂತನ ಕಛೇರಿಯನ್ನು ಹೋಟೆಲ್ ಶ್ರೀ ಗಣೇಶ್ ಪ್ರಸಾದ್ ಮಾಲಕಾರದ ಶ್ರೀ ಅಚ್ಯುತ್ ಪ್ರಭು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶ್ರೀ ಎಸ್ ಅಂಗರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಕಡಬದ

ಕಡಬ : ರಾಜೇಶ್ ಇಲೆಕ್ಟ್ರಿಕಲ್ & ಆರ್.ವಿ ಕನ್ ಸ್ಟ್ರಕ್ಷನ್ ಶುಭಾರಂಭ Read More »

ಕರಾವಳಿ

ಐವರ್ನಾಡು : ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ

(ನ್ಯೂಸ್ ಕಡಬ) newskadaba.com ಐವರ್ನಾಡು ಅ. 24:  ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ನಂಭವಿಸಿದೆ. ಐವರ್ನಾಡು ಗ್ರಾಮದ ಚೀಮುಳ್ಳು ಎಂಬಲ್ಲಿರುವ ಗಾಗೇಶ್ ಬೊಮ್ಮೆಟ್ಟಿ ಎಂಬುವರ ಮನೆಗೆ ಹೊಂದಿಕೊಂಡಿರುವ ರಬ್ಬರ್ ಗೋಡೌನ್, ಸ್ನಾನಗೃಹ, ಶೌಚಾಲಯಕ್ಕೆ ಕಳೆದ ದಿನ ರಾತ್ರಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಸುಮಾರು 75,000 ಸಾವಿರ ಅಧೀಕ ಮೌಲ್ಯದ ರಬ್ಬರ್ ಶೀಟ್ ಗಳು ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಯವರು ಮತ್ತು ಗ್ರಾಮ ಪಂಚಾಯತ್ ನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಐವರ್ನಾಡು : ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ Read More »

ಕರಾವಳಿ

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಢ ➤ ಐವರು ಮೃತ್ಯು

(ನ್ಯೂಸ್ ಕಡಬ) ಮದುರೈ, ಅ. 24. ಇಲ್ಲಿನ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಸ್ಫೋಟ ಸಂಭವಿಸಿ, ಐವರು ಮೃತಪಟ್ಟು ಮೂವರಿಗೆ ಗಂಭೀರ ಗಾಯಗೊಂಡ ಘಟನೆ ಮಧುರೈ ಯಲ್ಲಿ ನಡೆದಿದೆ.   ಕಲ್ಲುಪಟ್ಟಿ ಪ್ರದೇಶದ ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಭಾರೀ ಸ್ಫೋಟ ಸಂಭವಿಸಿತ್ತು, ಈ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಢ ➤ ಐವರು ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ➤ ಜಾನುವಾರುಗಳಿಗೆ ಅಂಟಿದ ಚರ್ಮಗಂಟು ವೈರಸ್

(ನ್ಯೂಸ್ ಕಡಬ) newskadaba.com ಶಿವಮೊಗ್ಗ ಅ. 24: ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ಕೊಟ್ಟಿದೆ. ಮಲೆನಾಡಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಈ ಕಾಯಿಲೆ ಹೆಸರು ಲುಂಪಿ ಸ್ಕಿನ್ (ಚರ್ಮಗಂಟು ರೋಗ).ಪಾಕ್ಸ್ ವಿರಿಡೆ ಎಂಬ ವೈರಸ್​ನಿಂದ ಹರಡುವ ಚರ್ಮಗಂಟು ರೋಗ ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪತ್ತೆಯಾಗಿದೆ. ಮಲೆನಾಡಿನ ಗ್ರಾಮಗಳ ಜಾನುವಾರುಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದೆ. ಈ ರೋಗವುಳ್ಳ ಜಾನುವಾರುಗಳ ನೇರ ಸಂಪರ್ಕ, ಮೇವು, ನೀರಿನಿಂದಲೂ ಹರಡುವ ಚರ್ಮಗಂಟು ರೋಗ ಶಿವಮೊಗ್ಗದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ➤ ಜಾನುವಾರುಗಳಿಗೆ ಅಂಟಿದ ಚರ್ಮಗಂಟು ವೈರಸ್ Read More »

ಕರ್ನಾಟಕ

ಇಂದು ಡಾ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ಮಹೋತ್ಸವ

(ನ್ಯೂಸ್ ಕಡಬ) newskadaba.com ಉಜಿರೆ ಅ. 24: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 53ನೇ ವರ್ಷದ ವರ್ಧಂತಿ ಸಮಾರಂಭ ಅ. 24ರ  ಇಂದು ಸರಳವಾಗಿ ನಡೆಯಲಿದೆ. 1948ರ ನವೆಂಬರ್‌ 25ರಂದು ಜನಿಸಿದ ಅಂದಿನ ವೀರೇಂದ್ರ ಕುಮಾರ್‌ ತನ್ನ ಇಪ್ಪತ್ತನೇ ಹರೆಯದಲ್ಲಿ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು. 2017ರ ಅಕ್ಟೋಬರ್‌ 24ರಂದು ಡಾ.ಡಿ. ವೀರೇಂದ್ರ ಹೆಗ್ಗಡೆಯವರು 50 ವರ್ಷಗಳ ಸೇವೆಯನ್ನು ಪೂರೈಸಿದ್ದು, 2018ರ ಅ.24ರವರೆಗೆ ಒಂದು ವರ್ಷ ವೈವಿಧ್ಯಮಯ ಕಾರ‍್ಯಕ್ರಮಗಳೊಂದಿಗೆ ಸುವರ್ಣ

ಇಂದು ಡಾ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ಮಹೋತ್ಸವ Read More »

ಕರಾವಳಿ, ಕರ್ನಾಟಕ

ಕಡಬ: ಬ.ಸಿ.ರೋಡ್- ಗುಂಡ್ಯ ಹೆದ್ದಾರಿ ಗುಂಡಿ ಮುಚ್ಚುವಂತೆ ನೀತಿ ತಂಡದ ವತಿಯಿಂದ ಕೇಂದ್ರ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಅ. 24. ರಾ.ಹೆ. 75ರ ಬಿ.ಸಿ. ರೋಡ್ ನಿಂದ ಗುಂಡ್ಯದವರೆಗೆ  ಹೆದ್ದಾರಿ ರಸ್ತೆಯು ತೀರಾ ಹದಗೆಟ್ಟಿದ್ದು, ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಕಡಬ ನೀತಿ ಸಂಘಟನೆ ವತಿಯಿಂದ ಕಡಬ ಉಪ ತಹಶೀಲ್ದಾರ್ ಮನೋಹರ್ ಅವರ ಮೂಲಕ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಹೆದ್ದಾರಿಯು ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಅಪಾಯವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ವೇಳೆ ಕಂದಾಯ ನಿರೀಕ್ಷಕ

ಕಡಬ: ಬ.ಸಿ.ರೋಡ್- ಗುಂಡ್ಯ ಹೆದ್ದಾರಿ ಗುಂಡಿ ಮುಚ್ಚುವಂತೆ ನೀತಿ ತಂಡದ ವತಿಯಿಂದ ಕೇಂದ್ರ ಸಚಿವರಿಗೆ ಮನವಿ Read More »

ಕರಾವಳಿ, ಕರ್ನಾಟಕ
Scroll to Top