News Kadaba Desk

ಮಂಗಳೂರು: ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ನಲ್ಲಿ ಸಿಲಿಂಡರ್ ಸ್ಪೋಟ ➤ ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.11. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಮಿಳುನಾಡು ಮೂಲದ ಬೋಟ್‌ ಒಂದರಲ್ಲಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ಗಂಭೀರ ಗಾಯಗೊಂಡು ಬೋಟ್‌ನಲ್ಲಿದ್ದ 11 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯವರು ರಕ್ಷಿಸಿದ ಘಟನೆ ನಡೆದಿದೆ. ಮಂಗಳೂರಿನಿಂದ ಸುಮಾರು 140 ನಾಟಿಕಲ್ ಮೈಲ್ ದೂರದಲ್ಲಿ ಈ ಬೋಟ್ ಮೀನುಗಾರಿಯಲ್ಲಿ ತೊಡಗಿದ್ದ ವೇಳೆ ಬೋಟ್‌ನಲ್ಲಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದ್ದು, ವಿಷಯ ತಿಳಿದ ಕರಾವಳಿ ರಕ್ಷಣಾ ಪಡೆಯವರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಬೋಟ್‌ನಲ್ಲಿದ್ದ 11 ಮಂದಿಯನ್ನು ರಕ್ಷಿಸಿದ್ದಾರೆ. ಗಂಭೀರ […]

ಮಂಗಳೂರು: ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ನಲ್ಲಿ ಸಿಲಿಂಡರ್ ಸ್ಪೋಟ ➤ ಮೀನುಗಾರರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಹಲವು ಕಡೆ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಯ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.11. ಹಲವಾರು ಕಳ್ಳತನಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಓರ್ವ ಕಳ್ಳನನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ರಾಜೇಶ್ ನಾಯ್ಕ(42) ಎಂದು ಗುರುತಿಸಲಾಗಿದೆ. ಮೂಲತಃ ಧಾರವಾಡ ನಿವಾಸಿಯಾಗಿರುವ ಈತ ಪ್ರಸ್ತುತ ಉಡುಪಿ ಇಂದ್ರಾಳಿ ದುರ್ಗಾನಗರದಲ್ಲಿ ವಾಸಿಸುತ್ತಿದ್ದನು ಎನ್ನಲಾಗಿದೆ. ಈತ ಹಲವು ಕಡೆ ಕಳ್ಳತನ ನಡೆಸಿದ್ದು, ಕುಳಾಯಿ ಗ್ರಾಮದ ರವಿಶೆಟ್ಟಿ, ಈಡ್ಯಾ ಗ್ರಾಮದ ಗುಡ್ಡೆ ಕೊಪ್ಪಳ ರಾಮಂಜನೇಯ ಭಜನಾ ಮಂದಿರ ಹಾಗೂ ಸತೀಶ್ ಸುವರ್ಣ ಅವರ ಕುಟುಂಬಕ್ಕೆ ಸೇರಿದ ದೈವಸ್ಥಾನದಿಂದ ರಾಜೇಶ್

ಮಂಗಳೂರು: ಹಲವು ಕಡೆ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಯ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 11. ಭಾರತೀಯ ಸೇನೆಗೆ ಸಂಬಂಧಿಸಿದ ಅತೀಸೂಕ್ಷ್ಮ ವಿಷಯಗಳನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಗೆ ತಲುಪಿಸುತ್ತಿದ್ದ ಎನ್ನುವ ಮಾಹಿತಿಯ ಮೇರೆಗೆ ಸಿಐಡಿ ಅಧಿಕಾರಿಗಳು ರಾಜಸ್ಥಾನದ ಜೈಸಾಲ್ಮೆರ್ ನಿವಾಸಿ ಸತ್ಯನಾರಾಯಣ್ ಪಲಿವಾಲ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತನನ್ನು ವಿಚಾರಣೆಗೊಳಪಡಿಸಿದಾಗ ಗುಪ್ತಚರ ಇಲಾಖೆಯೊಂದಿಗೆ ಭಾರತೀಯ ಸೇನಾ ಪಡೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರೋಪಿಯ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗುತ್ತಿಗಾರು: ಗ್ರಾಮಭಾರತ ತಂಡದ ಸದಸ್ಯರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಜ. 11. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಂದನೇ ವಾರ್ಡ್ ನಿಂದ ಗೆಲುವು ಸಾಧಿಸಿದ ಗ್ರಾಮಭಾರತ ತಂಡದ ಸದಸ್ಯರು ರವಿವಾರದಂದು ಬಳ್ಳಕ ಪ್ರದೇಶದ ಜನರಿಂದ ಅಹವಾಲುಗಳನ್ನು ಸ್ವೀಕರಿಸಿದರು. ನೂತನವಾದ ಆಯ್ಕೆಯಾದ ಗ್ರಾ.ಪಂ. ಸದಸ್ಯರು ಈ ಜನರ ಸಮಸ್ಯೆ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಹಂತ ಹಂತವಾಗಿ ಅನಿಷ್ಠಾನಗೊಳಿಸಲು ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಈ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆ, ಬಸ್ ಸಮಸ್ಯೆ ನೆಟ್ವರ್ಕ್ ಸಮಸ್ಯೆ ಮೊದಲಾದವುಗಳನ್ನು ಈಡೇರಿಸುವಂತೆ ಒತ್ತಾಯಿಸಿದರು‌. ಈ ಸಂದರ್ಭ

ಗುತ್ತಿಗಾರು: ಗ್ರಾಮಭಾರತ ತಂಡದ ಸದಸ್ಯರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಸೀಮೆಎಣ್ಣೆ ಸೇವಿಸಿ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 11. ಸೀಮೆಎಣ್ಣೆ ಸೇವಿಸಿದ ಪರಿಣಾಮ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತ ಮಗುವನ್ನು ಋತಿಕ್ (1) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಆಟವಾಡುತ್ತಿದ್ದ ಮಗು ಗೊತ್ತಿಲ್ಲದೆ ಬಾಟಲಿಯಲ್ಲಿದ್ದ ಸೀಮೆಎಣ್ಣೆ ಸೇವಿಸಿದ್ದರಿಂದ ಅಸ್ವಸ್ಥವಾಗಿ ಬಿದ್ದಿದ್ದರಿಂದ ತಕ್ಷಣವೇ ಮಗುವನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಕೊಂಡೊಯ್ದು ಬಳಿಕ ಡಾಕ್ಟರ್ ಸಲಹೆಯಂತೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.

ಕಾಸರಗೋಡು: ಸೀಮೆಎಣ್ಣೆ ಸೇವಿಸಿ ಮಗು ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೀನಾಡಿ: ಯುವ ಬ್ರಿಗೇಡ್ ವತಿಯಿಂದ ಸ್ವಚ್ಚತಾ ಕಾರ್ಯ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ.11. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಯಲ್ಲಿ ಯುವ ಬ್ರೀಗೇಡ್ ಕಡಬ ವತಿಯಿಂದ ಸ್ವಚ್ಚತೆ ಹಾಗೂ ಶ್ರಮದಾನ ರವಿವಾರ ನಡೆಯಿತು. ಶಾಲಾ ವಠಾರ ಸ್ವಚ್ಚತೆ, ಹುಲ್ಲು ಕತ್ತರಿಸುವುದು ಹಾಗೂ ಶೌಚಾಲಯದ ಗೋಡೆಗೆ ಬಣ್ಣ ಬಳಿಯಲಾಯಿತು. ವಿಶೇಷ ಎಂದರೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವ ಬ್ರೀಗೇಡ್ ಸದಸ್ಯ ನೂಜಿಬಾಳ್ತಿಲ ಗ್ರಾಮದ ನೀರಾರಿ ಕಿಶೋರ್ ಹಾಗೂ ಭವ್ಯಾ ದಂಪತಿ ಮದುವೆಯಾದ ಮರುದಿನವೇ ಈರ್ವರು ಕೂಡಾ ವಾರದ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು  ಗಮನ

ಮೀನಾಡಿ: ಯುವ ಬ್ರಿಗೇಡ್ ವತಿಯಿಂದ ಸ್ವಚ್ಚತಾ ಕಾರ್ಯ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ: ಒರುಂಬಾಲು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ.11. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಉಮಾಮಹೇಶ್ವರ ದೇವಸ್ಥಾನದಲ್ಲಿ ರವಿವಾರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಗಣಹೋಮ ಕಾರ್ಯಗಳು ಕ್ಷೇತ್ರದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೆಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ಶನಿವಾರ ಊರ ಭಕ್ತಾಧಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ರವಿವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ ನಡೆದು ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ದೇವರಿಗೆ

ನೂಜಿಬಾಳ್ತಿಲ: ಒರುಂಬಾಲು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ Read More »

ಕರಾವಳಿ, ಕರ್ನಾಟಕ

ಮಂಗಳೂರು: ಸತ್ತು ಬಿದ್ದಿರುವ ಮೂರು ಕಾಗೆಗಳ ಮೃತದೇಹ ಪತ್ತೆ ➤ ಹಕ್ಕಿ ಜ್ವರದ ಭೀತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 11. ದೇಶದಾದ್ಯಂತ ಕೊರೊನಾ ಆತಂಕದ ನಡುವೆಯೇ ಹಕ್ಕಿ ಜ್ವರದ ಆತಂಕವು ಮೂಡಿದ್ದು, ಇದೇ ಸಂದರ್ಭದಲ್ಲಿ ಮಂಗಳೂರು ವಾಮಂಜೂರಿನ ಪಚ್ಚನಾಡಿ ಎಂಬಲ್ಲಿ ಕಾಗೆಗಳು ಸತ್ತು ಬಿದ್ದಿರುವುದು ಪತ್ತೆಯಾಗಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಸಮೀಪ ರುದ್ರಭೂಮಿಗೆ ಹೋಗುವ ದಾರಿಯಲ್ಲಿ ಮೂರು ಕಾಗೆಗಳು ಸತ್ತು ಬಿದ್ದ ದೃಶ್ಯ ಇಂದು ಬೆಳಗ್ಗೆ ಸ್ಥಳೀಯರಿಗೆ ಕಂಡು ಬಂದಿದೆ. ಇದೀಗ ಮಂಗಳೂರಿನಲ್ಲೂ ಕಾಗೆ ಸತ್ತು ಬಿದ್ದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಮಂಗಳೂರು: ಸತ್ತು ಬಿದ್ದಿರುವ ಮೂರು ಕಾಗೆಗಳ ಮೃತದೇಹ ಪತ್ತೆ ➤ ಹಕ್ಕಿ ಜ್ವರದ ಭೀತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಹೊಳೆಯಲ್ಲಿ ಮುಳುಗಿ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 11. ಹೊಳೆಯಲ್ಲಿ ಮುಳುಗಿ ಬಾಲಕನೋರ್ವ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ‌ ಕಕ್ಕಿಂಜೆ ಸಮೀಪದ ಚಿಬಿದ್ರೆ ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಇನಾಯತುಲ್ಲಾ(೮) ಎಂದು ಗುರುತಿಸಲಾಗಿದೆ. ರವಿವಾರದಂದು ಚಿಕ್ಕಮಗಳೂರಿನಿಂದ ಅಜ್ಜಿ ಮನೆಗೆಂದು ಬಂದಿದ್ದ ಈತ ಉಪಹಾರ ಮುಗಿಸಿ ಮನೆಯವರೊಂದಿಗೆ ಎಂದಿನಂತೆ ಮನೆಯ ಪಕ್ಕದಲ್ಲೇ ಇದ್ದ ನದಿಗೆ ಬಟ್ಟೆ ತೊಳೆಯಲು ಹಾಗೂ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ನದಿನೀರಿನಲ್ಲಿ ಆಟದಲ್ಲಿ ನಿರತನಾಗಿದ್ದ ಈತ ಎಲ್ಲರ ಕಣ್ಮುಂದೆಯೇ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಬಾಲಕನನ್ನು

ಬೆಳ್ತಂಗಡಿ: ಹೊಳೆಯಲ್ಲಿ ಮುಳುಗಿ ಬಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜ. 13ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…! ➤ ಶಾಸಕರಿಗೆ ಒಲಿಯಲಿದೆ ಮಂತ್ರಿಭಾಗ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 11. ಹಲವು ತಿಂಗಳುಗಳಿಂದ ಕುತೂಹಲ ಮೂಡಿಸಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ಅದರಂತೆ ಜ. 13ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಬಿಜೆಪಿ ವರಿಷ್ಠರ ಸೂಚನೆಯಂತೆ ಭಾನುವಾರ ಮುಖ್ಯಮಂತ್ರಿಯವರು ದೆಹಲಿಗೆ ಹೋಗಿ ಬಂದಿದ್ದು, ಏಳು ಸಚಿವ ಸ್ಥಾನಗಳ ಭರ್ತಿಗೆ ಗ್ರೀನ ಸಿಗ್ನಲ್ ದೊರೆತಿದೆ. ಆದರೆ ಯಾರಿಗೆ ಶಾಸಕರಾಗುವ ಅದೃಷ್ಟ ದೊರೆಯಲಿದೆ ಎನ್ನುವುದು ಇಂದು ತಿಳಿಯಲಿದೆ. ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಸೂಚಿಸಿದ್ದು,

ಜ. 13ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…! ➤ ಶಾಸಕರಿಗೆ ಒಲಿಯಲಿದೆ ಮಂತ್ರಿಭಾಗ್ಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top