News Kadaba Desk

ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19.  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ದ.ಕ ಜಿಲ್ಲಾ  ಶಾಖೆ ಇದರ ವತಿಯಿಂದ ಸರಕಾರಿ ನೌಕರರ ಮಕ್ಕಳಿಗೆ 2018-19 ಮತ್ತು 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಾರ್ಷಿಕ  ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದವರನ್ನು ಗಳಿಸಿದ ಅಂಕಗಳ ಆಧಾರಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ದ.ಕ ಜಿಲ್ಲಾ  ಶಾಖೆ, ಕ್ಲಾಕ್ ಟವರ್ ಹತ್ತಿರ, […]

ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ – ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿ ➤ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಹಿಳಾ ಉದ್ಧೇಶಿತ ಆಯವ್ಯಯದಡಿ ಪತ್ರಿಕೋದ್ಯಮ ಪದವಿ/ಸ್ನಾತಕೋತ್ತರ ಪದವೀಧರ ಮಹಿಳೆಯರು ವೃತ್ತಿಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಪ್ರೆಂಟಿಸ್ ತರಬೇತಿಯನ್ನು ಹಮ್ಮಿಕೊಂಡಿದೆ. ಅಭ್ಯರ್ಥಿಗಳು ಪತ್ರಿಕೋದ್ಯಮದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನ್ನಡ ಭಾಷೆಯ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 40 ವರ್ಷದೊಳಗಿರಬೇಕು. ಅರ್ಜಿಯೊಂದಿಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸ್ನಾತಕೋತ್ತರ ಪದವಿ ಪ್ರಮಾಣಪತ್ರ,

ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿ ➤ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ

ಜನವರಿ 22 ರಂದು ತಾ.ಪಂ. ವಾರ್ಷಿಕ ಜಮಾಬಂದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ಮಂಗಳೂರು ತಾಲೂಕು ಪಂಚಾಯತ್ ನ 2019-20ನೇ ಸಾಲಿನ ವಾರ್ಷಿಕ ಜಮಾಬಂದಿ  ಕಾರ್ಯಕ್ರಮವು ಜನವರಿ 22 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

ಜನವರಿ 22 ರಂದು ತಾ.ಪಂ. ವಾರ್ಷಿಕ ಜಮಾಬಂದಿ Read More »

ಕರಾವಳಿ, ಕರ್ನಾಟಕ

ಪಡಿತರ ಚೀಟಿದಾರರು ದಾಖಲೆ ವಿವರಗಳನ್ನು ನೀಡಲು ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19.  ಸರಕಾರದ ಸೂಚನೆಯಂತೆ ಮೊದಲ ಹಂತದಲ್ಲಿ ಇ-ಕೆ.ವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು ಹೊರತು ಪಡಿಸಿ ಉಳಿದಿರುವ ಫಲಾನುಭವಿಗಳ ಇ-ಕೆ.ವೈಸಿ ನ್ಯಾಯಬೆಲೆ ಅಂಗಡಿಗಳ ಮೂಲಕ ಮರು ಪ್ರಾರಂಭಿಸಲು ಆದೇಶವಾಗಿರುತ್ತದೆ. ಪಡಿತರ ಚೀಟಿದಾರರು ತಮ್ಮ ಕುಟುಂಬದ  ಎಲ್ಲಾ ಸದಸ್ಯರ  ಇ-ಕೆ.ವೈಸಿ  ನೀಡಬೇಕಾಗಿದ್ದು, ಪಡಿತರ  ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥ, ಸಂಬಂಧ, ಲಿಂಗ, ಜಾತಿ, ಎಲ್.ಪಿ.ಜಿ. ವಿವರ, ಮೊಬೈಲ್ ಸಂಖ್ಯೆ ತುರ್ತಾಗಿ ಸಂಗ್ರಹಿಸಬೇಕಾಗಿರುತ್ತದೆ. ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಚಾಲ್ತಿ ಇರುವ  ಅಂತ್ಯೋದಯ ಹಾಗೂ

ಪಡಿತರ ಚೀಟಿದಾರರು ದಾಖಲೆ ವಿವರಗಳನ್ನು ನೀಡಲು ಸೂಚನೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಕೆ.ಎಂ.ಎಫ್ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗಡೆಯವರಿಂದ ಪಶುಸಂಗೋಪನಾ ಸಚಿವರ ಭೇಟಿ- ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೊಡವೂರು ರವಿರಾಜ ಹೆಗಡೆಯವರು ಇಂದು ಅಪರಾಹ್ನ 2.30 ಗಂಟೆಗೆ ಮಂಗಳೂರಿನ ಸಕ್ರ್ಯೂಟ್ ಹೌಸ್ ನಲ್ಲಿ ಕರ್ನಾಟಕದ ಸನ್ಮಾನ್ಯ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚೌಹಾನ್ ರವರನ್ನು ಭೇಟಿಯಾಗಿ ಒಕ್ಕೂಟದ ವತಿಯಿಂದ ಸನ್ಮಾನಿಸಿದರು. ಕರ್ನಾಟಕ ರಾಜ್ಯ ಸರಕಾರವು ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗೋ ಸಂರಕ್ಷಣಾ ಕಾಯ್ದೆಯನ್ನು ಅನುಷ್ಠಾನಗೊಳಿಸಿ, ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗೋ ಕಳ್ಳತನ, ಗೋ ಸಾಗಾಣಿಕೆ ಮತ್ತು

ಮಂಗಳೂರು: ಕೆ.ಎಂ.ಎಫ್ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗಡೆಯವರಿಂದ ಪಶುಸಂಗೋಪನಾ ಸಚಿವರ ಭೇಟಿ- ಸನ್ಮಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಎರಡು ತಿಂಗಳ ಹಿಂದೆ ನಿಯೋಜನೆಗೊಂಡ ಕ್ರೀಡಾಧಿಕಾರಿಯ ದಿಢೀರ್ ಬದಲಾವಣೆ

(ನ್ಯೂಸ್ ಕಡಬ) newskadaba.com ಕಡಬ, ಜ. 19. ತಾಲೂಕಿನ ಸಹಾಯಕ ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ಹುದ್ದೆಗೆ ಎರಡು ತಿಂಗಳ ಹಿಂದೆ ನಿಯೋಜನೆಗೊಂಡ ಎಣ್ಮೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ರಾಮಚಂದ್ರ ಪಿ.ಎನ್ ಅವರನ್ನು ದಿಢೀರ್ ಬದಲಾಯಿಸಿ, ಏನೆಕಲ್ಲು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಣೆಮಜಲು ಅವರನ್ನು ನಿಯೋಜಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದರ ಹಿಂದೆ ರಾಜಕೀಯ ಕಸರತ್ತು ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕ್ರೀಡಾ ಅಭಿಮಾನಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಈ

ಕಡಬ: ಎರಡು ತಿಂಗಳ ಹಿಂದೆ ನಿಯೋಜನೆಗೊಂಡ ಕ್ರೀಡಾಧಿಕಾರಿಯ ದಿಢೀರ್ ಬದಲಾವಣೆ Read More »

ಕರಾವಳಿ, ಕರ್ನಾಟಕ

ಗಣರಾಜ್ಯೋತ್ಸವದಂದು ಮೊದಲ ಬಾರಿಗೆ ಪರೇಡ್ ನಲ್ಲಿ ಪಾಲ್ಗೊಳ್ಳಲಿರುವ ರಫೇಲ್ ಯುದ್ದ ವಿಮಾನ..!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ‌. 19. ಗಣರಾಜ್ಯೋತ್ಸವದಂದು ಪರೇಡ್ ನಲ್ಲಿ ಮೊದಲ ಬಾರಿಗೆ ರಫೇಲ್ ವಿಮಾನಗಳು ಪಾಲ್ಗೊಂಡು ಅಂತಿಮ ಘಟ್ಟದಲ್ಲಿ ವೈಮಾನಿಕ ಪ್ರದರ್ಶನ ನೀಡಲಿದೆ. 15 ಯುದ್ದ ವಿಮಾನಗಳು, 5 ಸಾಗಾಟ ವಿಮಾನಗಳು ಹಾಗೂ ಒಂದು ವಿಂಟೇಜ್ ವಿಮಾನ ಸೇರಿದಂತೆ 42 ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ ಎಂದು ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಇಂದ್ರಾನಿಲ್ ನಂದಿ ತಿಳಿಸಿದ್ದಾರೆ. ಪರೇಡ್ ಸಂದರ್ಭ ರುದ್ರಾ, ಸುದರ್ಶನ್, ರಕ್ಷಕ್, ಏಕಲವ್ಯ ಹಾಗೂ ಬ್ರಹ್ಮಾಸ್ತ್ರದ ರಚನೆಯನ್ನು ಕಾಣಬಹುದು ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವದಂದು ಮೊದಲ ಬಾರಿಗೆ ಪರೇಡ್ ನಲ್ಲಿ ಪಾಲ್ಗೊಳ್ಳಲಿರುವ ರಫೇಲ್ ಯುದ್ದ ವಿಮಾನ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ನೂತನ ಸಚಿವ ಎಸ್.ಅಂಗಾರ ಅವರಿಂದ ಧರ್ಮ ಸಮ್ಮೇಳನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 19. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರು ಷಷ್ಠಿಯ ಪ್ರಯುಕ್ತ ನಡೆಸಿದ ದೇವಸ್ಥಾನದ ಧರ್ಮಸಮ್ಮೇಳನ ಮಂಟಪವನ್ನು ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಅಂಗಾರ ಅವರು ಇಂದು ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ಹಣ ಅಗತ್ಯ ಬಂದಿಲ್ಲ, ಇಲ್ಲಿ ಭಕ್ತರ ಕಾಣಿಕೆಯಿಂದಲೇ ಅಭಿವೃದ್ಧಿ ಕೆಲಸವಾಗುತ್ತದೆ. ನಾನೊಬ್ಬ ಕೂಲಿ ಕಾರ್ಮಿಕನಾಗಿ ಬೆಳೆದು ಬಂದ ದಾರಿಯನ್ನು ಮರೆಯುವುದಿಲ್ಲ.

ಸುಬ್ರಹ್ಮಣ್ಯ: ನೂತನ ಸಚಿವ ಎಸ್.ಅಂಗಾರ ಅವರಿಂದ ಧರ್ಮ ಸಮ್ಮೇಳನ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ತೊಕ್ಕೊಟ್ಟು: ಟಿಪ್ಪರ್ ಲಾರಿ ಹಾಗೂ ಓಮ್ನಿ ಕಾರು ನಡುವೆ ಭೀಕರ ಅಪಘಾತ ➤ ಇಬ್ಬರಿಗೆ ಗಂಭೀರ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 19. ಟಿಪ್ಪರ್ ಲಾರಿ ಹಾಗೂ ಓಮ್ನಿ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಓಮ್ನಿ ಕಾರಿನಲ್ಲಿದ್ದ ಪ್ರಯಾಣಿಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಕಿನ್ಯದಲ್ಲಿ ನಡೆದಿದೆ.‌ ಗಾಯಗೊಂಡವರನ್ನು ಕೆ.ಸಿ. ನಗರದ ಪೂಮಣ್ಣು ನಿವಾಸಿಗಳಾದ ಇಮ್ರಾನ್ ( 23) ಮತ್ತು ನೂರುದ್ದೀನ್(22) ಎಂದು ಗುರುತಿಸಲಾಗಿದೆ. ಕೇರಳ ನೋಂದಣಿಯ ಟಿಪ್ಪರ್ ಲಾರಿ ಮರಳನ್ನು ಹೊತ್ತುಕೊಂಡು ದೇರಳಕಟ್ಟೆಗೆ ತೆರಳುತ್ತಿದ್ದ ವೇಳೆ ನಾಟೆಕಲ್ ನಿಂದ ಕೆ.ಸಿ. ರೋಡ್ ಕಡೆಗೆ ಬರುತ್ತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ.

ತೊಕ್ಕೊಟ್ಟು: ಟಿಪ್ಪರ್ ಲಾರಿ ಹಾಗೂ ಓಮ್ನಿ ಕಾರು ನಡುವೆ ಭೀಕರ ಅಪಘಾತ ➤ ಇಬ್ಬರಿಗೆ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ವಾಟ್ಸಾಪ್ ಗೆ ಭಾರತ ಸರಕಾರದಿಂದ ಪತ್ರ..!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ. 19. ವಾಟ್ಸಾಪ್ ಕಂಪನಿಯು ಜಾರಿಗೊಳಸಲು ಉದ್ದೇಶಿಸಿರುವ ಪ್ರೈವೆಸಿ ಪಾಲಿಸಿ ಅಪ್ಡೇಟ್ ನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಭಾರತ ಸರಕಾರ ವಾಟ್ಸಾಪ್ ಸಿ.ಇ.ಒ ವಿಲ್ ಕಾಥರ್ಟ್ ಅವರಿಗೆ ಪತ್ರ ಬರೆದಿದೆ. ಭಾರತದಲ್ಲಿ ಆಕ್ರೋಶಕ್ಕೊಳಗಾಗಿರುವ ವಾಟ್ಸಾಪ್ ನ ಪ್ರಾಸ್ತಾವಿತ ಪ್ರೈವೆಸಿ ಪಾಲಿಸಿಯ ಕುರಿತಂತೆ ಯುರೋಪಿಯನ್ ದೇಶಗಳು ಹಾಗೂ ಭಾರತಕ್ಕೆ ಪ್ರತ್ಯೇಕ ಗೌಪ್ಯತಾ ನೀತಿಯೇಕೆ ಎಂದು ಪ್ರಶ್ನಿಸಿ, ಭಾರತಕ್ಕೆ ಪ್ರತ್ಯೇಕ ರೀತಿ ತಾರತಮ್ಯ ಧೋರಣೆಯಾಗಿದೆ ಎಂದು ಹೇಳಿದೆ. ಗೌಪ್ಯತಾ ನೀತಿ ಹಾಗೂ ಫೇಸ್ ಬುಕ್

ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ವಾಟ್ಸಾಪ್ ಗೆ ಭಾರತ ಸರಕಾರದಿಂದ ಪತ್ರ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top