News Kadaba Desk

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 25. ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳನ್ನು ಆಕೆಯ ದೊಡ್ಡಪ್ಪನ ಮಗನೇ ಅತ್ಯಾಚಾರವೆಸಗಿರುವ ಆರೋಪಿಯನ್ನು ಬಂಧಿಸಿದ ಘಟನೆ ತಾಲೂಕಿನ ಬಂದಾರು ಗ್ರಾಮದ ಪುಂಡೈಬನ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿ ಪ್ರವೀಣ್ ಎಂಬಾತ ಆಗಾಗ ಬಾಲಕಿಯ ಮನೆಗೆ ಬಂದು ಹೋಗುತ್ತಿದ್ದು, ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ಇದೀಗ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಆರು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, […]

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪಂಜ: ಹುಚ್ಚುನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಪಂಜ, ಜ. 25. ಜೇಸಿಐ ಪಂಜ ಪಂಚಶ್ರೀ ಹಾಗೂ ಪಶುಸಂಗೋಪನೆ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವು ಭಾನುವಾರದಂದು ಪಂಜ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಪ್ರಾಣಿಗಳಿಂದ ಗಾಳಿಯ ಮೂಲಕ ಅನೇಕ ಕಾಯಿಲೆಗಳು ಹರಡುತ್ತಿದ್ದು, ಈ ಬಗ್ಗೆ ಕಾಳಜಿ ವಹಿಸಿ ಮುಂಚಿತವಾಗಿ ಲಸಿಕೆ ನೀಡಬೇಕಾದುದು ಅತ್ಯಗತ್ಯವಾಗಿದೆ. ಇದರಿಂದ ಪಂಜ, ಬಳ್ಪ, ಕಲ್ಮಡ್ಕ, ಎಡಮಂಗಲ, ಎಣ್ಮೂರು ಹಾಗೂ ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯ ನಿಗದಿಯಾದ ಸ್ಥಳಗಳಲ್ಲಿ ಲಸಿಕೆ ನೀಡಲಾಯಿತು. ಈ

ಪಂಜ: ಹುಚ್ಚುನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ವಿಟ್ಲ: ಎಸ್ಸಾರ್ ಪೆಟ್ರೋಲ್ ಬಂಕ್ ದೋಚಿದ ಕಳ್ಳರು

(ನ್ಯೂಸ್ ಕಡಬ) newskadaba.com ವಿಟ್ಲ, ಜ. 25. ವಿಟ್ಲ-ಪುತ್ತೂರು ರಸ್ತೆಯಲ್ಲಿರುವ ಎಸ್.ಆರ್ ಪೆಟ್ರೋಲ್ ಬಂಕ್ ಗೆ ನುಗ್ಗಿದ ಕಳ್ಳರು ಕಂಪ್ಯೂಟರ್ ಹಾಗೂ ಸಿಸಿ ಕ್ಯಾಮೆರಾಕ್ಕೆ ಸಂಬಂಧಿಸಿದ ವಸ್ತುಗಳನ್ನು ದೋಚಿದ ಘಟನೆ ನಡೆದಿದೆ. ಘಟನೆಯಲ್ಲಿ ಕಛೇರಿಯಲ್ಲಿನ ಎಲ್ಲಾ ಲಾಕರ್ ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿದ್ದು, ಸುಮಾರು ಎರಡು ಲಕ್ಷದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಬಂಕ್ ನಲ್ಲಿ ಎಷ್ಟು ಮೊತ್ತದ ನಗದನ್ನು ದೋಚಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಷ್ಟೆ. ಮಾಣಿಯಲ್ಲಿರುವ ವೈನ್ ಶಾಪ್ ಗೂ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿ ಸಣ್ಣ

ವಿಟ್ಲ: ಎಸ್ಸಾರ್ ಪೆಟ್ರೋಲ್ ಬಂಕ್ ದೋಚಿದ ಕಳ್ಳರು Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಪತ್ರಕರ್ತನ ಫೇಸ್-ಬುಕ್ ಅಕೌಂಟ್ ಹ್ಯಾಕ್ ➤ ಫ್ರೆಂಡ್ ಲಿಸ್ಟ್ ನಲ್ಲಿರುವವರಿಗೆ ಹಣ ಕಳುಹಿಸುವಂತೆ ರಿಕ್ವೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 25. ಪತ್ರಿಕೆಯ ವರದಿಗಾರರೊಬ್ಬರ ಫೇಸ್‌-ಬುಕ್ ಅಕೌಂಟ್ ಅನ್ನು ಹ್ಯಾಕ್ ಮಾಡಿ, ಅವರ ಫ್ರೆಂಡ್ ಲಿಸ್ಟ್‌ ನಲ್ಲಿರುವವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪುಂಜಾಲಕಟ್ಟೆಯ ಪತ್ರಕರ್ತ ರತ್ನದೇವ್ ಎಂಬವರ ಫೇಸ್‌ ಬುಕ್ ಖಾತೆಯನ್ನು ಹ್ಯಾಕ್ ಮಡಿ ಅವರ ಫ್ರೆಂಡ್ ಲಿಸ್ಟ್‌ ನಲ್ಲಿರುವವರಿಗೆ ‘ನನಗೆ ತುರ್ತಾಗಿ ಹಣದ ಅವಶಯಕತೆಯಿದ್ದು, ನಾಳೆ ಮರಳಿಸುತ್ತೇನೆ. ನಿಮ್ಮಲ್ಲಿ ಗೂಗಲ್ ಪೇ ಅಥವಾ ಫೋನ್ ಪೇ ಇದ್ದರೆ ಹಣ ಕಳುಹಿಸಿ. ನನ್ನ ಸ್ನೇಹಿತನ ನಂಬರ್ ನೀಡುತ್ತೇನೆ.

ಬಂಟ್ವಾಳ: ಪತ್ರಕರ್ತನ ಫೇಸ್-ಬುಕ್ ಅಕೌಂಟ್ ಹ್ಯಾಕ್ ➤ ಫ್ರೆಂಡ್ ಲಿಸ್ಟ್ ನಲ್ಲಿರುವವರಿಗೆ ಹಣ ಕಳುಹಿಸುವಂತೆ ರಿಕ್ವೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರದಿಂದ 40ಕೋಟಿ ರೂ. ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 25. ಸ್ವಾವಲಂಬಿ ಭಾರತ ಯೋಜನೆಯಡಿ ದೇಶದ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದ ಸಲುವಾಗಿ ದೇಶದಲ್ಲಿ ಎರಡು ಪ್ಲಾಸ್ಟಿಕ್‌ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ ಸದಾನಂದ ಗೌಡ ಅವರು ತಿಳಿಸಿದ್ದಾರೆ. ಆರು ತಿಂಗಳ ಒಳಗೆ ಅಂತಿಮ ಒಪ್ಪಿಗೆ ನೀಡಿ ಯೋಜನೆಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಇದೊಂದು ಪ್ಲಾಸ್ಟಿಕ್‌ ಸಂಬಂಧಿತ ಕೈಗಾರಿಕೆಗಳಿಗೆ ಸೀಮಿತವಾದ ಕೈಗಾರಿಕಾಭಿವೃದ್ಧಿ ಕೇಂದ್ರ. ಪ್ಲಾಸ್ಟಿಕ್‌

ಮಂಗಳೂರು: ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರದಿಂದ 40ಕೋಟಿ ರೂ. ಬಿಡುಗಡೆ Read More »

ಕರ್ನಾಟಕ

ವಿಮಾನ ಅಪಘಾತ ➤ ನಾಲ್ವರು ಫುಟ್ ಬಾಲ್ ಆಟಗಾರರು ಮೃತ್ಯು

(ನ್ಯೂಸ್ ಕಡಬ) newskadaba.com ಸಾವೊ ಪೌಲೊ, ಜ. 25. ಭಾನುವಾರದಂದು ನಡೆದ ವಿಮಾನ ಅಪಘಾತದಲ್ಲಿ ಪಲ್ಮಾಸ್ ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ ಹಾಗೂ ನಾಲ್ವರು ಆಟಗಾರರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಕ್ಲಬ್ ಅಧ್ಯಕ್ಷ ಲೂಕಾಸ್‌ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್‌, ಗುಲೆರ್ಮೆ ನೊಯೆ, ರಣುಲ್‌ ಮತ್ತು ಮಾರ್ಕಸ್ ಮೋಲಿನರಿ ಎಂದು ಗುರುತಿಸಲಾಗಿದೆ. ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು ಕರೆದೊಯ್ಯಲು ಸಜ್ಜಾಗಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತಕಕ್ಕೆ ಈಡಾಗಿತ್ತು.

ವಿಮಾನ ಅಪಘಾತ ➤ ನಾಲ್ವರು ಫುಟ್ ಬಾಲ್ ಆಟಗಾರರು ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಜ. 26ಕ್ಕೆ ಕಿಸಾನ್ ಪರೇಡ್ ➤ 25 ಸಾವಿರ ಟ್ರಾಕ್ಟರ್ ದೆಹಲಿಗೆ ಆಗಮಿಸುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 25. ಜ.26ರ ಗಣರಾಜ್ಯೋತ್ಸವದಂದು ನಡೆಯಲಿರುವ ಕಿಸಾನ್ ಪರೇಡ್ ನಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಸುಮಾರು 25 ಸಾವಿರ ಟ್ರ್ಯಾಕ್ಟರ್ ಗಳು ಭಾಗವಹಿಸಲಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕೈಟ್ ತಿಳಿಸಿದ್ದಾರೆ. ಗಣರಾಜ್ಯೋತ್ಸವದಂದು ಸುಮಾರು 25 ಸಾವಿರ ಟ್ರ್ಯಾಕ್ಟರ್​ಗಳು ಇಲ್ಲಿಗೆ ಆಗಮಿಸಲಿದ್ದು, ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗುವುದು, ಯಾವುದೇ ರಾಜಕೀಯ ವ್ಯಕ್ತಿಯೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.

ಜ. 26ಕ್ಕೆ ಕಿಸಾನ್ ಪರೇಡ್ ➤ 25 ಸಾವಿರ ಟ್ರಾಕ್ಟರ್ ದೆಹಲಿಗೆ ಆಗಮಿಸುವ ಸಾಧ್ಯತೆ Read More »

ರಾಷ್ಟ್ರೀಯ ನ್ಯೂಸ್

ವಿಟ್ಲ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಐವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 25. ಎರಡು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಟ್ಟು ಐದು ಮಂದಿ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಕಾಶಿಮಠ ಎಂಬಲ್ಲಿ ನಡೆದಿದೆ. ಕೇಪು ಕಡೆಯಿಂದ ವಿಟ್ಲ ಪೇಟೆಗೆ ಬಂದು ತನ್ನ ಸ್ನೇಹಿತನನ್ನು ಬೆಂಗಳೂರು ಬಸ್ ಗೆ ಬಿಡಲೆಂದು ಡಿಯೋ ವಾಹನದಲ್ಲಿ ಬರುತ್ತಿದ್ದ ವೇಳೆ ವಿಟ್ಲ ಕಡೆಯಿಂದ ಕನ್ಯಾನದ ಕಡೆಗೆ ತೆರಳುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ವಾಹನದಲ್ಲಿದ್ದ ಒಟ್ಟು ಐದು ಮಂದಿ ಗಾಯಗೊಂಡಿದ್ದಾರೆ

ವಿಟ್ಲ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಐವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್ ರಕ್ಷಣೆ ➤ 8 ಮಂದಿಯನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

(ನ್ಯೂಸ್ ಕಡಬ) newskadaba.com ಕಾರವಾರ, ಜ. 25. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್ ತಳಭಾಗದ ಫೈಬರ್ ಒಡೆದು ಸಮುದ್ರದಲ್ಲಿ ಮುಳುಗುತ್ತಿದ್ದ 8 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ವರದಿಯಾಗಿದೆ. ಉಡುಪಿಯ ಶ್ರೀ ಸೌಪರ್ಣಿಕಾ ಎಂಬ ಬೋಟ್ ಕಾರವಾರ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬೋಟ್ ತಳಭಾಗದ ಫೈಬರ್ ಒಡೆದು ಹೋಗಿದ್ದು, ಬೋಟ್ ಸಂಪೂರ್ಣವಾಗಿ ಮುಳುಗುವ ಹಂತಕ್ಕೆ ತಲುಪಿತ್ತು. ಈ ವೇಳೆಯಲ್ಲಿ ಬೋಟ್ ನಲ್ಲಿದ್ದ ಮೀನುಗಾರರು ರಕ್ಷಣೆ

ಮಂಗಳೂರು: ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್ ರಕ್ಷಣೆ ➤ 8 ಮಂದಿಯನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸವಣೂರು: 40,000 ರೂ. ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಸವಣೂರು, ಜ. 25. ಗ್ರಾಮದ ಗುಂಡಿಲ ಅಬ್ದುಲ್ ಜಿ ಎಂಬವರ ಮನೆಯ ಹಿಂಬಾಗಿಲಿನ ಚಿಲಕವನ್ನು ಮುರಿದು ತೆರೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಡೈನಿಂಗ್ ಹಾಲಿನಲ್ಲಿ ಮಲಗಿದ್ದ ಅಬ್ದುಲ್ಲಾರ ಮಗಳು ಸಮೀಮಾ ಎಂಬವರ ಕುತ್ತಿಗೆಯಲ್ಲಿದ್ದ 8 ಗ್ರಾಂ ಚಿನ್ನದ ಸರ ಹಾಗೂ ಅಲ್ಲೇ ಪಕ್ಕದಲ್ಲಿ ಮಲಗಿದ್ದ ಮೊಮ್ಮಗಳು ಫಾತಿಮಾ ಸಿಮ್ರಾಳ ಕುತ್ತಿಗೆ ಯಲ್ಲಿದ್ದ 2 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿದ್ದ ಘಟನೆ ನಡೆದಿದೆ. ಕಳವಾದ ಚಿನ್ನಾಭರಣಗಳ ಮೌಲ್ಯ 40,000/- ಎಂದು ಅಂದಾಜಿಸಲಾಗಿದ್ದು,ಮನೆಯವರು ಮಲಗಿದ್ದ

ಸವಣೂರು: 40,000 ರೂ. ಮೌಲ್ಯದ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top