News Kadaba Desk

ಪ.ಜಾ/ ಪ.ಪಂಗಡದ ಸಂಘ ಸಂಸ್ಥೆಗಳಿಂದ ಸಹಾಯಧನಕ್ಕೆ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 30. ಪ್ರಸ್ತುತ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಹೊಸದಾಗಿ ನೋಂದಾವಣಿಗೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನ ಸಂಘ ಸಂಸ್ಥೆಗಳಿಗೆ ಸಹಾಯಧನ ಹಾಗೂ ಕ್ರೀಡಾಗಂಟು ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 5 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು […]

ಪ.ಜಾ/ ಪ.ಪಂಗಡದ ಸಂಘ ಸಂಸ್ಥೆಗಳಿಂದ ಸಹಾಯಧನಕ್ಕೆ – ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಸಸಿ/ ಕಸಿ ಗಿಡಗಳ ಸರಬರಾಜು – ಖಾಸಗಿ ನರ್ಸರಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 30. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದ.ಕ ಜಿಲ್ಲೆಯಲ್ಲಿ ಪೌಷ್ಠಿಕ ತೋಟ ನಿರ್ಮಿಸಲು ವಿವಿಧ ಜಾತಿಯ ತೋಟಗಾರಿಕೆ ಸಸಿಗಳನ್ನು  ಸರಬರಾಜು ಮಾಡಲು ಅರ್ಹ ಖಾಸಗಿ ನರ್ಸರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 10 ಕೊನೆಯ ದಿನ. ಸರಬರಾಜು ಮಾಡಲು ಸಿದ್ದರಿರುವ ಹಾಗೂ ಉತ್ತಮ ಗುಣಮಟ್ಟದ ಸಸಿ /ಕಸಿ ಗಿಡಗಳ ಸಾಕಷ್ಟು ದಾಸ್ತಾನು ಹೊಂದಿರುವ ಖಾಸಗಿ ನರ್ಸರಿಗಳು ನುಗ್ಗೆ, ನಿಂಬೆ, ಕರಿಬೇವು, ಪಪ್ಪಾಯ, ಸೀಬೆ, ಮಾವು(ಕಸಿ),

ಸಸಿ/ ಕಸಿ ಗಿಡಗಳ ಸರಬರಾಜು – ಖಾಸಗಿ ನರ್ಸರಿಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶೀನಿವಾಸ ಪೂಜಾರಿ ಪ್ರವಾಸ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 30. ಮುಜರಾಯಿ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ರವರು ಜನವರಿ 30 ಹಾಗೂ 31 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜನವರಿ 30 ರಂದು ಮಧ್ಯಾಹ್ನ 12.30ಕ್ಕೆ ಪಜೀರು ಗ್ರಾಮದ ಕೆ.ಐ.ಎ.ಡಿ.ಬಿ., ಕಂಬ್ಲಪದವು ಹತ್ತಿರ  ಭಾರಿ ವಾಹನ ಚಾಲನಾ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಉಡುಪಿಗೆ ಪ್ರಯಾಣಿಸಲಿದ್ದಾರೆ. ಜನವರಿ 31

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶೀನಿವಾಸ ಪೂಜಾರಿ ಪ್ರವಾಸ Read More »

ಕರಾವಳಿ, ಕರ್ನಾಟಕ

ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಜ.31ರಿಂದ ಫೆ. 07ರವರೆಗೆ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 29. ಕಳೆದ ಕೆಲವು ದಿನಗಳಿಂದ ಪ್ಲಾಸ್ಟಿಕ್ ನಿಷೇಧದ ಕೂಗು ಕೇಳಿಬರುತ್ತಿದ್ದರೂ ಯಾರೂ ಇದನ್ನು ಪರಿಗಣಿಸದೇ ಇರುವುದರ ಹಿನ್ನೆಲೆ ನಿಷೇಧ ಹೇರಿದರೂ ಕಂಡಕಂಡಲ್ಲಿ ಪ್ಲಾಸ್ಟಿಕ್ ಬಿಸಾಡುವುದನ್ನು ವಿರೋಧಿಸಿ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿಯನ್ನು ಸುಳ್ಯ ಎಸ್ಕೆಎಸ್ಸೆಸ್ಸೆಫ್ ವಿಖಾಯ ಸುಳ್ಯ ವಲಯ ವತಿಯಿಂದ ‘ಶುಚಿಯಾದ ಪರಿಸರಕ್ಕಾಗಿ ನಾಳಿನ ತಲೆಮಾರಿಗಾಗಿ ಪ್ಲಾಸ್ಟಿಕ್ ಮುಕ್ತರಾಗೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಜ.31ರಿಂದ ಫೆ.7 ರ ವರೆಗೆ ನಡೆಯಲಿದೆ. ಜನವರಿ 31 ರಂದು ಸುಳ್ಯದ ಎಲಿಮಲೆಯಲ್ಲಿ ದ.ಕ.ಜಿಲ್ಲಾ ವಿಖಾಯ ಚೇರ್ಮನ್

ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಜ.31ರಿಂದ ಫೆ. 07ರವರೆಗೆ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿ Read More »

ಕರಾವಳಿ, ಕರ್ನಾಟಕ

ಕಲಾಪದ ವೇಳೆ ಬ್ಲೂಫಿಲಂ ವೀಕ್ಷಿಸಿದ ಕಾಂಗ್ರೆಸ್ ಶಾಸಕ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 29. ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಅವರು ಮೊಬೈಲ್‌ ನಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂದು ವಿಧಾನಪರಿಷತ್​ ಕಲಾಪ ನಡೆಯುತ್ತಿದ್ದ ವೇಳೆ ಕಾಂಗ್ರೆಸ್​ ಎಂ.ಎಲ್​.ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯವು ಇದೀಗ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆಯ ಕುರಿತು ಮಾತನಾಡಿದ ಪ್ರಕಾಶ್ ರಾತೋಡ್, ನಾನು ಅಶ್ಲೀಲ ವಿಡಿಯೋ ನೋಡಿಲ್ಲ. ನೂರಾರು ಗ್ರೂಪ್​ಗಳಲ್ಲಿ ಇದ್ದೇನೆ

ಕಲಾಪದ ವೇಳೆ ಬ್ಲೂಫಿಲಂ ವೀಕ್ಷಿಸಿದ ಕಾಂಗ್ರೆಸ್ ಶಾಸಕ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೇ 24ರಿಂದ ಜೂನ್.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ➤ ವೇಳಾಪಟ್ಟಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 29. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ವೇಳಾಪಟ್ಟಿಯು ಬಿಡುಗಡೆಯಾಗಿದ್ದು, ಮೇ.24 ರಿಂದ ಜೂನ್ 10ರವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೇ. 24ರಂದು ಭೌತಶಾಸ್ತ್ರ ಮತ್ತು ಇತಿಹಾಸ, ಮೇ 25ರಂದು ಮೈನಾರಿಟಿ ಲ್ಯಾಂಗ್ವೇಜಸ್, ಮೇ. 26 ಬೇಸಿಕ್ ಮ್ಯಾತ್ಸ್ ಮತ್ತು ಲಾಜಿಕ್ ಹೋಮ್ ಸೈನ್ಸ್, ಮೇ.27 ಗಣಿತ, ಐಚ್ಛಿಕ ಕನ್ನಡ, ಅಕೌಂಟೆನ್ಸಿ ಮೇ. 28 ಉರ್ದು, ಮೇ. 29 ರಾಜ್ಯ ಶಾಸ್ತ್ರ, ಮೇ 31

ಮೇ 24ರಿಂದ ಜೂನ್.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ➤ ವೇಳಾಪಟ್ಟಿ ಬಿಡುಗಡೆ Read More »

ಕರ್ನಾಟಕ

ರೈತರ ಪ್ರತಿಭಟನೆಯನ್ನು ಬೆಂಬಲಿಸಿದ ಅಣ್ಣಾ ಹಜಾರೆ ನಾಳೆಯಿಂದ ಉಪವಾಸ ಸತ್ಯಾಗ್ರಹ..!

(ನ್ಯೂಸ್ ಕಡಬ) newskadaba.com ಅಹಮದ್ ನಗರ, ಜ. 29. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾಹಝಾರೆ ಅವರು ನಾಳೆಯಿಂದ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೇ ತಾವಿರುವ ಪ್ರದೇಶಗಳಿಂದಲೇ ರೈತರ ಪರವಾಗಿ ಪ್ರತಿಭಟನೆ ನಡೆಸುವಂತೆ ಅವರು ತಮ್ಮ ಬೆಂಬಲಿಗರಲ್ಲಿ ವಿನಂತಿಸಿದ್ದಾರೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಿದ ಅಣ್ಣಾ ಹಜಾರೆ ನಾಳೆಯಿಂದ ಉಪವಾಸ ಸತ್ಯಾಗ್ರಹ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಯೂನಿಯನ್ ಬ್ಯಾಂಕ್ – EDF ಟ್ರಸ್ಟ್ ನಿಂದ ಶುಶ್ರೂಷಕ ಕೊಠಡಿ ಕೊಡುಗೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 29. ಯೂನಿಯನ್ ಬ್ಯಾಂಕ್ – ಇಡಿಎಫ್ ಟ್ರಸ್ಟ್ (Economic Develop Foundation ) ನಿಂದ ರೂ.2,25,000/- ಗಳ ಕೊಡುಗೆಯನ್ನು ಭಗಿನೀ ಸಮಾಜಕ್ಕೆ ನೀಡಿ ಶುಶ್ರೂಷಕ ಕೊಠಡಿಯ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ, ಯೂನಿಯನ್ ಬ್ಯಾಂಕ್‍ ಆಫ್‍ ಇಂಡಿಯಾದ ಮಂಗಳೂರು ಪ್ರಾದೇಶಿಕ ಕಛೇರಿಯ ಮುಖ್ಯಸ್ಥರಾದ ಶ್ರೀ ಜಗನ್ನಾಥ ಶೆಟ್ಟಿಯವರು, ಭಗಿನೀ ಸಮಾಜದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಯು. ಭಟ್ ಹಾಗೂ ಭಗಿನೀ ಸಮಾಜದ ಅನ್ಯ ಸದಸ್ಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಮಂಗಳೂರು: ಯೂನಿಯನ್ ಬ್ಯಾಂಕ್ – EDF ಟ್ರಸ್ಟ್ ನಿಂದ ಶುಶ್ರೂಷಕ ಕೊಠಡಿ ಕೊಡುಗೆ Read More »

ಕರಾವಳಿ, ಕರ್ನಾಟಕ

ಅಸ್ಸಾಂ: ಫೆ. 06ರಿಂದ 10ರವರೆಗೆ ರಾ.ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ➤ ಕರ್ನಾಟಕ ತಂಡದ ತರಬೇತುದಾರರಾಗಿ “ಕಡಬದ ಅಬ್ದುಲ್ ಖಾದರ್” ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜ. 29. ಫೆ. 06ರಿಂದ 10ರ ವರೆಗೆ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಕರ್ನಾಟಕ ತಂಡದ ತರಬೇತುದಾರರಾಗಿ ಕಡಬದ ಅಬ್ದುಲ್ ಖಾದರ್(ಕಲಂದರ್) ಅವರು ಆಯ್ಕೆಯಾಗಿರುತ್ತಾರೆ. ಇವರು ಖ್ಯಾತ ಕಬಡ್ಡಿ ತರಬೇತುದಾರ ಹಾಗೂ ತೀರ್ಪುಗಾರರಾಗಿದ್ದು, ಇದೀಗ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದು, ಅಸ್ಸಾಂನ ಗುವಾಹಟಿಗೆ ತೆರಳಲಿದ್ದಾರೆ.

ಅಸ್ಸಾಂ: ಫೆ. 06ರಿಂದ 10ರವರೆಗೆ ರಾ.ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ➤ ಕರ್ನಾಟಕ ತಂಡದ ತರಬೇತುದಾರರಾಗಿ “ಕಡಬದ ಅಬ್ದುಲ್ ಖಾದರ್” ಆಯ್ಕೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಶ್ರೀದೇವಿ ಕಾಲೇಜ್ ಆಫ್ ನರ್ಸಿಂಗ್ ಗೆ ಹಲವು ರ್ಯಾಂಕ್ ಗಳು

(ನ್ಯೂಸ್ ಕಡಬ) newskadaba.com  ಮಂಜೇಶ್ವರ, ಜ. 29. ರಾಜೀವ್‍ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಯನ್ಸ್‍ , ಬೆಂಗಳೂರು ನವಂಬರ್ 2020 ನಡೆಸಿದ ಪರೀಕ್ಷೆಯಲ್ಲಿ ಶ್ರೀದೇವಿ ಕಾಲೇಜ್‍ ಆಫ್‍ ನರ್ಸಿಂಗ್ ಮಂಗಳೂರು ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕು. ಐಶ್ವರ್ಯ ನಾಯರ್, 6ನೇ ರ್ಯಾಂಕ್‍ ಸೋಶಿಯಾಲಜಿ, 8ನೇ ರ್ಯಾಂಕ್‍ ಕಮ್ಯುನಿಕೇಶನ್ ಮತ್ತುಎಜುಕೇಶನಲ್‍ ಟೆಕ್ನಾಲಜಿ ಮತ್ತು 9ನೇ ರ್ಯಾಂಕ್ ಫಾರ್ಮಕೋಲಾಜಿ, ಪಾಥಲಜಿ, ಜೆನೆಟಿಕ್ಸ್. ಕು. ಅಖಿಲಾಕೆ. ಶಾಜಿ 7ನೇ ರ್ಯಾಂಕ್ ಮ್ಯಾನೆಜ್‍ ಮೆಂಟ್‍ ಆಫ್ ನರ್ಸಿಂಗ್ ಸರ್ವಿಸಸ್& ಎಜುಕೇಶನ್. ಕು.

ಮಂಗಳೂರು: ಶ್ರೀದೇವಿ ಕಾಲೇಜ್ ಆಫ್ ನರ್ಸಿಂಗ್ ಗೆ ಹಲವು ರ್ಯಾಂಕ್ ಗಳು Read More »

ಕರಾವಳಿ, ಕರ್ನಾಟಕ
Scroll to Top