News Kadaba Desk

ಮಹಿಳೆಯ ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆಗೈದ ಕಿರಾತಕರು

(ನ್ಯೂಸ್ ಕಡಬ) newskadaba.com ಮಂಡ್ಯ, ಫೆ. 03. ಗೃಹಿಣಿಯೋರ್ವರ ಕೈಕಾಲು ಕಟ್ಟಿ ಅತ್ಯಾಚಾರ ನಡೆಸಿದ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಮದ್ದೂರು ಪಟ್ಟಣದ ವಿವಿ ನಗರದಲ್ಲಿ ನಡೆದಿದೆ. ಮದ್ದೂರು ಪಟ್ಟಣದ 39 ವರ್ಷದ ಮಹಿಳೆ ಕೊಲೆಯಾಗಿದ್ದು, ಮಹಿಳೆಯ ಪತಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದರು. ಇವರು ಪತಿ ಜತೆ ಕಳೆದ ಆರು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರೆನ್ನಲಾಗಿದೆ. ಘಟನೆಯಿಂದ ಅಕ್ಕ-ಪಕ್ಕದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಈ ಕುರಿತು ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ […]

ಮಹಿಳೆಯ ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆಗೈದ ಕಿರಾತಕರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಮುಡಿಪು ಬೆಟ್ಟದಲ್ಲಿ ಸರಸದಲ್ಲಿ ತೊಡಗಿದ್ದ ಅನ್ಯಕೋಮಿನ ಜೋಡಿ..! ➤ ಪೊಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ

(ನ್ಯೂಸ್ ಕಡಬ) newskadaba.com ಕೊಣಾಜೆ, ಫೆ. 03. ಮುಡಿಪು ಪವಾಡ ಬೆಟ್ಟದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಅಂತರ್ಜಾತಿಯ ಜೋಡಿಯೊಂದನ್ನು ಪತ್ತೆ ಹಚ್ಚಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಡುಬಿದಿರೆ ನಿವಾಸಿ ಮಹಮ್ಮದ್ ಜುನೈದ್ ಎಂಬ ಯುವಕನು ಮುಡಿಪು ಡಿ.ಜಿ ಕಟ್ಟೆ ವಿದ್ಯಾನಗರ ನಿವಾಸಿಯಾದ ಹಿಂದೂ ಯುವತಿಯೊಂದಿಗೆ ಪರಿಚಯ ಬೆಳೆಸಿದ್ದು, ಈ ಜೋಡಿಯು ಮುಡಿಪು ಬೆಟ್ಟದಲ್ಲಿ ಸರಸ ಸಲ್ಲಾಪದಲ್ಲಿದ್ದರು ಎನ್ನಲಾಗಿದೆ. ಈ ಕುರಿತು ಮಾಹಿತಿಯನ್ನು ಕಲೆಹಾಕಿದ ದಾಳಿ ಮಾಡಿದ ಹಿಂದು ಜಾಗರಣ ವೇದಿಕೆ ಸದಸ್ಯರು

ಮಂಗಳೂರು: ಮುಡಿಪು ಬೆಟ್ಟದಲ್ಲಿ ಸರಸದಲ್ಲಿ ತೊಡಗಿದ್ದ ಅನ್ಯಕೋಮಿನ ಜೋಡಿ..! ➤ ಪೊಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

Breaking | ಕಡಬ: ನಾಯಿಯನ್ನು ಅಟ್ಟಿಸಿಕೊಂಡು ಶೌಚಾಲಯಕ್ಕೆ ನುಗ್ಗಿದ ಚಿರತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಸಾಕು ನಾಯಿಯ ಜೊತೆ ಮನೆಯ ಶೌಚಾಲಯದಲ್ಲಿ ಬಂಧಿಯಾದ ಘಟನೆ ಬುಧವಾರ ಬೆಳಿಗ್ಗೆ ಕಡಬದ ಕೈಕಂಬದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಸಮೀಪದ ಕೈಕಂಬ ನಿವಾಸಿ ರೇಗಪ್ಪ ಎಂಬವರ ಮನೆಯ ಸಮೀಪ ಸಾಕು ನಾಯಿಯನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದೆ. ಚಿರತೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕುನಾಯಿಯು ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೊಕ್ಕಿದ್ದು, ಚಿರತೆಯು ನಾಯಿಯನ್ನು ಹಿಂಬಾಲಿಸಿ ಶೌಚಾಲಯದ ಒಳಗೆ ಬಂದಿದೆ. ಇದನ್ನು ಗಮನಿಸಿದ ಮನೆಯವರು ಹೊರಗಿನಿಂದ ಶೌಚಾಲಯದ ಬಾಗಿಲನ್ನು

Breaking | ಕಡಬ: ನಾಯಿಯನ್ನು ಅಟ್ಟಿಸಿಕೊಂಡು ಶೌಚಾಲಯಕ್ಕೆ ನುಗ್ಗಿದ ಚಿರತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ರೋಟರಿ ಕ್ಲಬ್ ವತಿಯಿಂದ ಪೋಲಿಯೋ ಲಸಿಕಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ರೋಟರಿ ಕ್ಲಬ್ ವತಿಯಿಂದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವು ಜ.31ರಂದು ನಡೆಯಿತು. ಕಾರ್ಯಕ್ರಮವನ್ನು ಕಡಬ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಚಿತ್ರ ರಾವ್ ಅವರು ಮಗುವಿಗೆ ಪೋಲಿಯೋ ಲಸಿಕೆ ನೀಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ವಿ.ಎಂ.ಕುರಿಯನ್, ಕಾರ್ಯದರ್ಶಿ ಇ.ಕೆ.ತೋಮಸ್, ಐ.ಪಿ.ಪಿ.ಅಚ್ಚುತ ಪ್ರಭು, ರೊಟೇರಿಯನ್ ಮಹಮ್ಮದ್ ರಫೀಕ್, ಸಿ.ಪಿ.ಸೈಮನ್, ಚಂದ್ರಶೇಖರ ಕೋಡಿಬೈಲು, ಗ್ರೇಸಿ ತೋಮಸ್ ಹಾಗೂ ಆಸ್ಪತ್ರೆಯ ಶುಶ್ರೂಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು. ಒಟ್ಟು

ಕಡಬ: ರೋಟರಿ ಕ್ಲಬ್ ವತಿಯಿಂದ ಪೋಲಿಯೋ ಲಸಿಕಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಕಡಬ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಕಡಬದ ಅಂಬೇಡ್ಕರ್ ಭವನದಲ್ಲಿ ಮಂಗಳವಾರದಂದು ತಾ.ಪಂ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಜಯಂತಿ ಆರ್ .ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವೈ ಕುಸುಮಾ, ಕಡಬ ತಹಶೀಲ್ದಾರ್ ಅನಂತ ಶಂಕರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಜಿ.ಪಂ. ಸದಸ್ಯ ರಾದ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ ಹಾಗೂ ತಾ.ಪಂ.ಸದಸ್ಯರಾದ ಉಷಾ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

ಕಡಬ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ Read More »

ಕರಾವಳಿ, ಕರ್ನಾಟಕ

ಕುಮಾರಾಧಾರ ನದಿಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 02. ಶಾಂತಿಗೋಡು ಸಮೀಪದ ಕುಮಾರಧಾರ ನದಿಗೆ ಮೀನು ಹಿಡಿಯಲೆಂದು ತೆರಳಿದ್ದ ಮೂವರ ಪೈಕಿ ಓರ್ವ ನಾಪತ್ತೆಯಾದ ಘಟನೆ ಇಂದದು ನಡೆದಿದೆ.   ನಾಪತ್ತೆಯಾದವರನ್ನು ಮುಂಡೂರು ನಿವಾಸಿ ಕಾಂತಪ್ಪ ಎಂದು ಗುರುತಿಸಲಾಗಿದೆ. ಇವರು ಶಾಂತಿಗೋಡು ಕುಮಾರಧಾರ ನದಿಗೆ ಮೀನು ಹಿಡಿಯಲೆಂದು ತನ್ನ ಮಗ ಹಾಗೂ ಸಂಬಂಧಿಕರೊಂದಿಗೆ ತೆರಳಿದ್ದ ಸಂದರ್ಭ ಇವರು ನಾಪತ್ತೆಯಾಗಿದ್ದಾರೆ ಎಂದು ಅವರ ಮಗ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಹುಡುಕಾಟ ನಡೆಸುತ್ತಿದ್ದಾರೆ.

ಕುಮಾರಾಧಾರ ನದಿಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ವ್ಯಕ್ತಿ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಸು ತೊಲೆಯಲು ಹೋಗಿದ್ದ ಬಾಲಕ ಹಾಗೂ ಮಹಿಳೆ ಕೆಸರಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ರಾಮನಗರ, ಫೆ. 02. ಹಸುವಿನ ಮೈತೊಳೆಯಲೆಂದು ಹೋಗಿದ್ದ ಬಾಲಕ ಹಾಗೂ ಅವನನ್ನು ಕಾಪಾಡಲು ಹೋದ ಮಹಿಳೆಯೋರ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕನಕಪುರದ ಹುಣಸೆಮರದದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ. ಮೃತರನ್ನು ದೀಪು(11) ಹಾಗೂ ಆತನ ಸಂಬಂಧಿ ಮಹಿಳೆ ಭಾರತಿ(30) ಎಂದು ಗುರುತಿಸಲಾಗಿದೆ. ದೀಪು ಎಂಬಾತ ಜಮೀನಿನಲ್ಲಿದ್ದ ಹೊಂಡದಲ್ಲಿ ಹಸುವನ್ನು ತೊಳೆಯಲೆಂದು ಹೋಗಿದ್ದ ವೇಳೆ ಬಾಲಕ ಕಾಲು ಜಾರಿ ನೀರು ಪಾಲಾಗುವುದನ್ನು ಕಂಡ ಭಾರತಿ ಬಾಲಕನನ್ನು ರಕ್ಷಿಸಲೆಂದು ಹೋಗಿ ಇಬ್ಬರೂ ಕೆಸರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಹಸು ತೊಲೆಯಲು ಹೋಗಿದ್ದ ಬಾಲಕ ಹಾಗೂ ಮಹಿಳೆ ಕೆಸರಲ್ಲಿ ಮುಳುಗಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಫೆ. 21ರಿಂದ ಬಿಗ್ ಬಾಸ್ 8ನೇ ಆವೃತ್ತಿ ಆರಂಭ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 02. ಖ್ಯಾತ ಕನ್ನಡ ನಟ ಕಿಚ್ಚ ಸುದೀಪ್ ನಿರೂಪಣೆಯ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಫೆಬ್ರವರಿ 21ರಿಂದ ಪ್ರಾರಂಭವಾಗಲಿದೆ. ಇದೀಗ ಯಶಸ್ವಿಯಾಗಿ ಏಳು ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್, ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಫೆ. 21ಕ್ಕೆ ಆರಂಭಿಸಲಿದ್ದು, ರಾತ್ರಿ 9ಗಂಟೆಯಿಂದ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಮೊದಲ ಸೀಸನ್ ನಿಂದಲೇ ನಿರೂಪಕರಾಗಿರುವ ಸುದೀಪ್ ಈ

ಫೆ. 21ರಿಂದ ಬಿಗ್ ಬಾಸ್ 8ನೇ ಆವೃತ್ತಿ ಆರಂಭ…! Read More »

ಕರ್ನಾಟಕ

ಬಿಳಿನೆಲೆ: ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟನ ಎಂಬಲ್ಲಿ ವರದಿಯಾಗಿದೆ. ಕಾಣೆಯಾದವರನ್ನು ಚೆಮ್ಮಡ್ಕ್ ಮನೆಯ ನಿವಾಸಿ ಚೆನ್ನಪ್ಪ(75) ಎಂದು ಗುರುತಿಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಳಿನೆಲೆ: ವ್ಯಕ್ತಿ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 113 ರ ನೆಟ್ಟಣದಲ್ಲಿ ಮಸೀದಿ ಎದುರುಡೆ ಇಂದು ಬೆಳಗ್ಗೆ ನಡೆದಿದೆ. ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಬರುತ್ತಿದ್ದ ಕಡಬದ ಕೆಂಚಪಟ್ರೆ ನಿವಾಸಿ ಸುದರ್ಶನ್ ಬೈಪಡಿತ್ತಾಯ ಎಂಬವರ ಬೈಕಿಗೆ ಹಿಂದಿನಿಂದ ಅತೀ ವೇಗದಲ್ಲಿ ಬಂದ ಬೈಕ್ ಒಂದು ಡಿಕ್ಕಿ ಹೊಡೆದಿದ್ದು ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಸುದರ್ಶನ್ ಬೈಪಡಿತ್ತಾಯ ಅವರ ಕೈಗೆ ತೀವ್ರ

ಸುಬ್ರಹ್ಮಣ್ಯ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top