News Kadaba Desk

ಹೊಂಚು ಹಾಕಿ ಕದಿಯುತ್ತಿದ್ದ ಕಳ್ಳನನ್ನು ಹೊಂಚು ಹಾಕಿ ಹಿಡಿದ ಊರವರು ➤ ಸುಳ್ಯದಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ | ಮುಂದೇನಾಯ್ತು ಗೊತ್ತೇ..⁉️

ನ್ಯೂಸ್ ಕಡಬ newskadaba.com ಸುಳ್ಯ, ಫೆ.16. ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಹಿಡಿಯಲು ಹೊಂಚು ಹಾಕಿದ ಊರವರು ಕೊನೆಗೂ ಸಫಲರಾಗಿದ್ದಾರೆ. ಸುಳ್ಯದ ಹಳೇಗೇಟಿನ ನರ್ಸರಿ ಒಂದರಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ರಾತ್ರಿ ವೇಳೆ ನಿರಂತರವಾಗಿ ವ್ಯಾಪಾರಕ್ಕೆಂದು ಇಟ್ಟಿದ್ದ ಸಾಮಗ್ರಿಗಳ ಕಳ್ಳತನ ನಡೆಯುತ್ತಿತ್ತು. ಕಳ್ಳನನ್ನು ಹಿಡಿಯಲು ಹಲವು ಬಾರಿ ಸಂಸ್ಥೆಯ ಮಾಲಕರು ಹೊಂಚುಹಾಕಿ ಕುಳಿತರೂ ಏನೂ ಪ್ರಯೋಜನವಾಗಿರಲಿಲ್ಲ. ಸೋಮವಾರ ತಡರಾತ್ರಿ ಕಳ್ಳತನ ಮಾಡಲೆಂದು ಖತರ್ನಾಕ್ ಕಳ್ಳ ಆಗಮಿಸಿದ್ದು, ನರ್ಸರಿಯ ಶೆಡ್ಡಿನ ಹಿಂಭಾಗದಿಂದ ಒಳ ನುಗ್ಗಿದಾಗ ಕಳ್ಳನನ್ನು ಹಿಡಿಯಲು […]

ಹೊಂಚು ಹಾಕಿ ಕದಿಯುತ್ತಿದ್ದ ಕಳ್ಳನನ್ನು ಹೊಂಚು ಹಾಕಿ ಹಿಡಿದ ಊರವರು ➤ ಸುಳ್ಯದಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ | ಮುಂದೇನಾಯ್ತು ಗೊತ್ತೇ..⁉️ Read More »

ಕರಾವಳಿ, ಕ್ರೈಮ್ ನ್ಯೂಸ್

? ಬೆಳ್ತಂಗಡಿ: ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 16. ಬೈಕ್ ಹಾಗೂ ನೀರು ಸಾಗಿಸುವ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಡದಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಗೋಳಿಯಂಗಡಿ ನಿವಾಸಿ ಸಾದಿಕ್ ಎಂದು ಗುರುತಿಸಲಾಗಿದೆ. ಕುಂಡದಬೆಟ್ಟು ಬಳಿ ರಸ್ತೆ ಕಾಮಗಾರಿಯು ನಡೆಯುತ್ತಿದ್ದು ಅದಕ್ಕೆ ನೀರು ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಮತ್ತು ಸಾದಿಕ್ ಬರುತ್ತಿದ್ದ ದ್ವಿಚಕ್ರ ವಾಹನದ ನಡುವೆ ಪರಸ್ಪರ ಢಿಕ್ಕಿ ಹೊಡೆದು, ಸಾದಿಕ್ ಅವರು ಗಂಭೀರವಾಗಿ

? ಬೆಳ್ತಂಗಡಿ: ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ➤ ಶಾಲಾ ಪ್ರಾಂಶುಪಾಲನಿಗೆ ಮರಣದಂಡನೆ

(ನ್ಯೂಸ್ ಕಡಬ) newskadaba.com ಪಾಟ್ನಾ, ಫೆ. 16.‌ ಐದನೇ ತರಗತಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ, ನ್ಯಾಯಾಲಯವು ಪಾಟ್ನಾದ ಶಾಲೆಯೊಂದರ ಪ್ರಾಂಶುಪಾಲನಿಗೆ ಮರಣದಂಡನೆ ವಿಧಿಸಿದೆ. ಅಲ್ಲದೇ ಸಹ ಆರೋಪಿ ಶಾಲಾ ಶಿಕ್ಷಕನಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 1 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಆರೋಪಿಯನ್ನು ಫುಲ್ಪರಿ ಷರೀಷ್ ಪ್ರದೇಶದ ಶಾಲೆಯ ಶಿಕ್ಷಕ ಸಹ ಆರೋಪಿ ಅಭಿಷೇಕ್ ಕುಮಾರ್ ಗೆ ಜೀವಾವಧಿ ಶಿಕ್ಷೆ ಹಾಗೂ 50, 000ರೂ. ದಂಡ ವಿಧಿಸಲಾಗಿದೆ.

? ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ➤ ಶಾಲಾ ಪ್ರಾಂಶುಪಾಲನಿಗೆ ಮರಣದಂಡನೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

?? ಉಪ್ಪಳ: ಯುವಕನ ಮೇಲೆ ತಂಡದಿಂದ ಮಾರಣಾಂತಿಕ ಹಲ್ಲೆ

(ನ್ಯೂಸ್ ಕಡಬ) newskadaba.com ಉಪ್ಪಳ, ಫೆ. 16. ಗುಂಪೊಂದು ತಲವಾರು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಉಪ್ಪಳ ಪೇಟೆಯಲ್ಲಿ ನಡೆದಿದೆ. ಹಲ್ಲೆಗೊಳಗಾದವನ್ನು ಉಪ್ಪಳ ಮಣಿಮುಂಡ ನಿವಾಸಿ ಮುಹಮ್ಮದ್ ಹರ್ಶಿದ್(33) ಎಂದು ಗುರುತಿಸಲಾಗಿದೆ. ಇವರು ಪತ್ನಿ ಹಾಗೂ ಮಕ್ಕಳ ಜೊತೆ ಉಪ್ಪಳ ಪೇಟೆಗೆಂದು ಬಂದಿದ್ದು, ಹರ್ಶಿದ್ ಅವರು ಅಂಗಡಿಯಿಂದ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಸಂದರ್ಭ ಮೂರು ಮಂದಿಯ ಗುಂಪೊಂದು ದಾಳಿ ನಡೆಸಿ, ತಲವಾರಿನಿಂದ ಕಡಿದು ಪರಾರಿಯಾಗಿದೆ. ಗಾಯಾಳವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯಕ್ಕೆ ನಿಖರ

?? ಉಪ್ಪಳ: ಯುವಕನ ಮೇಲೆ ತಂಡದಿಂದ ಮಾರಣಾಂತಿಕ ಹಲ್ಲೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

?? ಬಂಗಾರ್ ಪಲ್ಕೆ ಜಲಪಾತ ದುರಂತ ಪ್ರಕರಣ ➤ 23 ದಿನಗಳ ಸತತ ಕಾರ್ಯಾಚರಣೆಯಿಂದ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 16. ಇಲ್ಲಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ.25ರಂದು ಗುಡ್ಡ ಕುಸಿತದ ಪರಿಣಾಮವಾಗಿ ಮಣ್ಣಿನಡಿ ಕಣ್ಮರೆಯಾದ ಯುವಕನೋರ್ವನ ಮೃತದೇಹವು ಸತತ ಪ್ರಯತ್ನದ ಫಲವಾಗಿ ಕೊನೆಗೂ ಮಂಗಳವಾರದಂದು ಪತ್ತೆಯಾಗಿದೆ. ಮೃತರನ್ನು ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ(20) ಎನ್ನಲಾಗಿದೆ. ಸನತ್ ಶೆಟ್ಟಿ ಮೃತದೇಹವು ಮಣ್ಣು ಹಾಗೂ ಬಂಡೆಯಡಿ ಸಿಲುಕಿದ್ದರಿಂದ ಸತತ 23 ದಿನಗಳ ಕಾರ್ಯಾಚರಣೆ ಬಳಿಕ ಇದೀಗ ಪತ್ತೆಯಾಗಿದೆ. ಬಂಡೆಕಲ್ಲು ಒಡೆದು ಜೆಸಿಬಿ, ಹಿಟಾಚಿ ಸುಮಾರು

?? ಬಂಗಾರ್ ಪಲ್ಕೆ ಜಲಪಾತ ದುರಂತ ಪ್ರಕರಣ ➤ 23 ದಿನಗಳ ಸತತ ಕಾರ್ಯಾಚರಣೆಯಿಂದ ಮೃತದೇಹ ಪತ್ತೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಳೆಯ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಹಿನ್ನೆಲೆ ➤ ಎಲಿಮಲೆ-ಅರಂತೋಡು ರಸ್ತೆಯಲ್ಲಿ ಜೂನ್ 30ರ ವರೆಗೆ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com  ಮಂಗಳೂರು, ಫೆ.16.  ಕರ್ನಾಟಕ ರಾಜ್ಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗದಿಂದ ಸುಳ್ಯ ತಾಲೂಕಿನ ಎಲೆಮಲೆ-ಅರಂತೋಡು ರಸ್ತೆಯ 3.60 ಕಿ.ಮೀ (ಸೇವಾಜೆ) ನ ಹಳೆಯ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ 10 ಮೀಟರ್ ಅಗಲಕ್ಕೆ ಹೊಸ ಸೇತುವೆ ನಿರ್ಮಿಸಬೇಕಾಗಿರುವುದರಿಂದ ಫೆಬ್ರವರಿ 15 ರಿಂದ ಜೂನ್ 30 ರವರೆಗೆ ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅರಂತೋಡು ಮಾರ್ಗದಿಂದ ಎಲೆಮಲೆಗೆ ಸಂಚರಿಸುವ ವಾಹನಗಳು ಸುಳ್ಯ-ಪೈಚಾರು-ಸೋಂಣಂಗೇರಿ-ದೊಡ್ಡತೋಟ ಮೂಲಕ ಹಾಗೂ ಎಲೆಮಲೆ ಮಾರ್ಗದಿಂದ ಅರಂತೋಡಿಗೆ

ಹಳೆಯ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಹಿನ್ನೆಲೆ ➤ ಎಲಿಮಲೆ-ಅರಂತೋಡು ರಸ್ತೆಯಲ್ಲಿ ಜೂನ್ 30ರ ವರೆಗೆ ಸಂಚಾರ ನಿಷೇಧ Read More »

ಕರಾವಳಿ

ಕಡಬ ತಾಲೂಕಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ತರುವ ಗುರಿ ➤ ಕಡಬ ತಾಲೂಕು ಪಂಚಾಯತ್ ಅಧ್ಷಕ್ಷರಿಂದ “ಶಾಲೆಯತ್ತ ನಮ್ಮ ನಡಿಗೆ” ➤ ಇಂದು ಕಡಬದಲ್ಲಿ “ಶೈಕ್ಷಣಿಕ ಪ್ರಗತಿ ಪರಿಶೀಲನೆ” ಸಭೆ

(ನ್ಯೂಸ್ ಕಡಬ) newskadaba.com ಕಡಬ: ಕೊರೋನಾ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಇದೀಗ ಶಾಲೆ ಕಾಲೇಜುಗಳು ಪ್ರಾರಂಭವಾಗುತ್ತಿದೆ, ಮುಂದಿನ ಮಾರ್ಚ್ ಬಳಿಕ ಎಲ್ಲಾ ಕಾಲೇಜುಗಳು ಶಾಲೆಗಳು ಹಿಂದಿನAತೆಯೇ ನಡೆಯಲಿರುವ ಬಗ್ಗೆ ಸರಕಾರ ಈಗಾಗಲೇ ಸ್ಪಷ್ಟಪಡಿಸಿವೆ, ಅದರಂತೆ ಶೈಕ್ಷಣಿಕ ಚಟುವಟಿಕೆಗಳಿಂದ ತುಸು ದೂರವೇ ಉಳಿದಿದ್ದ ವಿದ್ಯಾರ್ಥಿಗಳನ್ನು ಮತ್ತೆ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಕೊಡಿಸವಲ್ಲಿ ಈಗಾಗಲೇ ಶಿಕ್ಷಕರಿಂದ ಪ್ರಯತ್ನಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ಕು| ರಾಜೇಶ್ವರಿ ಕನ್ಯಾಮಂಗಲ ಅವರು ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ

ಕಡಬ ತಾಲೂಕಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ತರುವ ಗುರಿ ➤ ಕಡಬ ತಾಲೂಕು ಪಂಚಾಯತ್ ಅಧ್ಷಕ್ಷರಿಂದ “ಶಾಲೆಯತ್ತ ನಮ್ಮ ನಡಿಗೆ” ➤ ಇಂದು ಕಡಬದಲ್ಲಿ “ಶೈಕ್ಷಣಿಕ ಪ್ರಗತಿ ಪರಿಶೀಲನೆ” ಸಭೆ Read More »

ಕರ್ನಾಟಕ

ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸಮುದಾಯ ಭವನ ಕಟ್ಟಡ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಗೂನಡ್ಕ, ಫೆ. 15. ದ.ಕ. ಸಂಪಾಜೆ ಗ್ರಾಮದ ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ನೂತನ ಸಮುದಾಯ ಭವನವು ಭಾನುವಾರದಂದು ಸಂಜೆ ಉದ್ಘಾಟನೆಗೊಂಡಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ನೂತನ ಸಮುದಾಯ ಭವನವನ್ನು ಉದ್ಘಾಟಿಸಿ, ನೂತನ ಭೋಜನ ಕೊಠಡಿಗೆ ಶಂಕುಸ್ಥಾಪನೆಗೊಳಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಅವರು ಸಭಾಭವನದ ವೇದಿಕೆಯನ್ನು ಉದ್ಘಾಟಿಸಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ,

ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸಮುದಾಯ ಭವನ ಕಟ್ಟಡ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ಟ್ರಕ್ ಅಪಘಾತ ➤ 15 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಜಲ್ಗಾಂವ್, ಫೆ. 15. ಭೀಕರ ಟ್ರಕ್‌ ಅಪಘಾತದಲ್ಲಿ ಬರೋಬ್ಬರಿ 15 ಮಂದಿ ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಯವಾಲ್ ತಾಲೂಕಿನ ಕಿಂಗ್‌ವಾನ್ ಗ್ರಾಮದ ಬಳಿ ನಡೆದಿದೆ. ಮೃತರಲ್ಲಿ 7 ಪುರುಷರು, 6 ಮಹಿಳೆಯರು ಮತ್ತು 2 ಮಕ್ಕಳು ಸೇರಿದ್ದಾರೆ. ಈ ಮಧ್ಯೆ ಟ್ರಕ್ ಚಾಲಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟವರೆಲ್ಲರೂ ಜಿಲ್ಲೆಯ ಅಭೋದಾ, ಕೆರ್ಹಾಲಾ ಮತ್ತು ರಾವರ್‌ನ ಗ್ರಾಮದ ಕಾರ್ಮಿಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್ ಅಪಘಾತ ➤ 15 ಮಂದಿ ಮೃತ್ಯು Read More »

ಕ್ರೈಮ್ ನ್ಯೂಸ್

ಭಾಂದವ್ಯ ಟ್ರೋಫಿಗೆ ಮುತ್ತಿಕ್ಕಿದ ಪೊಲೀಸ್ ಇಲೆವೆನ್…!!! ➤ ರನ್ನರ್ಸ್ ಆಗಿ ಹೊರ ಹೊರಹೊಮ್ಮಿದ ಪ್ರೆಸ್ ಇಲೆವೆನ್…!!!

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 15. ವಿವಿಧ ಇಲಾಖೆಗಳನ್ನು ಒಗ್ಗೂಡಿಸಿಕೊಂಡು ‘ಭಾಂದವ್ಯ’ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ನಗರದ ವಿವೇಕಾನಂದ ಕಾಲೇಜಿನಲ್ಲಿ ನಡೆಯಿತು. ವಿವಿಧ ಇಲಾಖೆಗಳ ಸುಮಾರು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡು ತಮ್ಮ ಬಲ ಪ್ರದರ್ಶನಗೈದರು. ಈ ಪಂದ್ಯಾ ಕೂಟದ ಮೊದಲ ಸೆಮಿಫೈನಲ್ ಪಂದ್ಯ ಭಾರೀ ರಣರೋಚಕದಿಂದ ಕೂಡಿತ್ತು. ಮೆಸ್ಕಾಂ ಹಾಗೂ ಪ್ರೆಸ್ ಇಲೆವೆನ್ ನಡುವಿನ ಜಿದ್ದಾ ಜಿದ್ದಿನ ಪಂದ್ಯಾಟ ನೆರೆದಿದ್ದ ಕ್ರೀಡಾ ಪ್ರೇಮಿಗಳನ್ನು ಪಂದ್ಯಾಟದ ಕೊನೇ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. 4 ಓವರ್

ಭಾಂದವ್ಯ ಟ್ರೋಫಿಗೆ ಮುತ್ತಿಕ್ಕಿದ ಪೊಲೀಸ್ ಇಲೆವೆನ್…!!! ➤ ರನ್ನರ್ಸ್ ಆಗಿ ಹೊರ ಹೊರಹೊಮ್ಮಿದ ಪ್ರೆಸ್ ಇಲೆವೆನ್…!!! Read More »

ಕರಾವಳಿ, ಕರ್ನಾಟಕ
Scroll to Top