News Kadaba Desk

ಆರ್ ಬಿ ಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 26. ಆರ್‌ಬಿಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯೊಂದು ಪಲ್ಟಿಯಾಗಿರುವ ಘಟನೆ ರಾಮನಗರದ ಬಿಡದಿ ಬಳಿಯ ಕಲ್ಲುಗೋಪಹಳ್ಳಿ ಬಳಿ ನಡೆದಿದೆ. ಮೈಸೂರು ಆರ್.ಬಿ.ಐ ನಿಂದ ಬೆಂಗಳೂರಿಗೆ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯು ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗೋಪಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಯಲ್ಲಿ ಅಲ್ಲಲ್ಲಿ ತಿರುವುಗಳನ್ನು ಮಾಡಿದ್ದು, ಈ ಕಾರಣದಿಂದಾಗಿ ಕಂಟೇನರ್‌ […]

ಆರ್ ಬಿ ಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ತಾಲೂಕು ಪಂಚಾಯತ್ ನೂತನ ಕಟ್ಟಡದ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 26. ಜನರ ಸಮಸ್ಯೆಗೆ ನೇರವಾಗಿ ಸ್ಪಂದಿಸುವ ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ಉಳಿಸುವುದು ಅನಿವಾರ್ಯ. ಎರಡನೇ ಸ್ತರದ ನಾಯಕರನ್ನು ಸೃಷ್ಠಿಸುವುದರಲ್ಲಿ ತಾಲೂಕು ಪಂಚಾಯತ್ ವ್ಯವಸ್ಥೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.‌ ಅವರು ಕಡಬ ತಾಲೂಕು ಪಂಚಾಯತ್ ನೂತನ ಕಟ್ಟಡದ ಶಿಲಾನ್ಯಾಸ‌ ಕಾರ್ಯಕ್ರಮದಲ್ಲಿ ನೂತನ ಕಟ್ಟಡದ ಶಿಲಾಫಲಕ ಅನಾವರಣ ಮಾಡಿ ಮಾತನಾಡಿದರು. ಶಿಲಾನ್ಯಾಸ ನೆರ‌ವೇರಿಸಿ ಮಾತನಾಡಿದ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲ

ಕಡಬ: ತಾಲೂಕು ಪಂಚಾಯತ್ ನೂತನ ಕಟ್ಟಡದ ಶಿಲಾನ್ಯಾಸ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ: ಲಾರಿ ಚಾಲಕನನ್ನು ತಿವಿದು ಕೊಂದ ಕಾಡಾನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.26. ಕಾಡಾನೆ ದಾಳಿ ನಡೆಸಿದ ಪರಿಣಾಮ ಲಾರಿ ಚಾಲಕನೋರ್ವ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಶಿರಾಡಿ ಘಾಟ್‌ನ ಕೆಂಪುಹೊಳೆ ಸಮೀಪ ಗುರುವಾರ ರಾತ್ರಿ ನಡೆದಿದೆ. ಮೃತ ಲಾರಿ ಚಾಲಕನನ್ನು ರಾಜಸ್ಥಾನ ಮೂಲದವನೆಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಚಾಲಕ ಕೆಂಪುಹೊಳೆ ಸಮೀಪ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ತೆರಳಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.    

ನೆಲ್ಯಾಡಿ: ಲಾರಿ ಚಾಲಕನನ್ನು ತಿವಿದು ಕೊಂದ ಕಾಡಾನೆ Read More »

ಕರಾವಳಿ

ಕಡಬ: ಅಶ್ವಿನಿ ಸ್ಯಾನಿಟರಿ & ಹಾರ್ಡ್‌ವೇರ್ ನವೀಕೃತ ಮಳಿಗೆ ಶುಭಾರಂಭ ➤ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಏಕೈಕ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸಂಸ್ಥೆ

(ನ್ಯೂಸ್ ಕಡಬ) newskadaba.com ಕಡಬ, ಫೆ.26. ಇಲ್ಲಿನ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲೂಷನ್ಸ್ ಹಾಗೂ ಅಶ್ವಿನಿ ಸ್ಯಾನಿಟರಿ- ಹಾರ್ಡ್‌ವೇರ್, ನೂತನ ಟೈಲ್ಸ್ ಶೋ ರೂಮ್‌ನ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭವು ಗುರುವಾರ ನೆರವೇರಿತು.   ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅಲ್ಟ್ರಾಟೆಕ್ ಮಂಗಳೂರು ಡಿಪೋದ ಮುಖ್ಯಸ್ಥ ಸತ್ಯನಾರಾಯಣ ಬಿ. ಅವರು ಆದಿತ್ಯಾ ಬಿರ್ಲಾ ಕಂಪೆನಿಯ ಅಧೀನದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಭಾರತದಲ್ಲಿ ನಂ.1 ಸ್ಥಾನದಲ್ಲಿದೆ. ಜಗತ್ತಿನ 35 ರಾಷ್ಟ್ರಗಳಲ್ಲಿ ವ್ಯವಹರಿಸುತ್ತಿರುವ ಕಂಪೆನಿಯು ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲೂಷನ್ಸ್ ಎನ್ನುವ ಹೆಸರಿನಲ್ಲಿ

ಕಡಬ: ಅಶ್ವಿನಿ ಸ್ಯಾನಿಟರಿ & ಹಾರ್ಡ್‌ವೇರ್ ನವೀಕೃತ ಮಳಿಗೆ ಶುಭಾರಂಭ ➤ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಏಕೈಕ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸಂಸ್ಥೆ Read More »

ಕರಾವಳಿ

ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಜಿ ಶುಲ್ಕ ಹೆಚ್ಚಿಸುವ ಮೂಲಕ ಸರಕಾರ ಲೂಟಿ ಹೊಡೆಯುತ್ತಿದೆ ➤ ಕ್ಯಾಂಪಸ್‌ ಫ್ರಂಟ್

(ನ್ಯೂಸ್ ಕಡಬ) newskadaba.com ವೈದ್ಯಕೀಯ ಸ್ನಾತಕೋತ್ತರ ಪದವೀಧರ ಪರೀಕ್ಷಾ-2021 ರ ಅರ್ಜಿ ಶುಲ್ಕವನ್ನು ಹೆಚ್ಚಿಸಿದ್ದು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಸರ್ಕಾರದ ಅವೈಜ್ಞಾನಿಕ ಕ್ರಮಗಳಿಂದಾಗಿ ದೇಶದ ಆರ್ಥಿಕತೆ ನೆಲಕಚ್ಚಿದೆ. ಸರ್ಕಾರವು ದಿನನಿತ್ಯ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ, ಪೆಟ್ರೋಲ್- ಡೀಸಲ್ ಬೆಲೆಯನ್ನು ಹೆಚ್ಚಿಸಿದ ಹಾಗೆಯೇ, ಬೇರೆ-ಬೇರೆ ರೀತಿಯ ದಾರಿಗಳನ್ನು ಹುಡುಕಿ ಜನರ ಹಣವನ್ನು ಬೆಲೆ ಏರಿಕೆ, ತೆರಿಗೆ ಮತ್ತು ದಂಡದ ಹೆಸರಲ್ಲಿ ಲೂಟಿ ಹೊಡೆಯುತ್ತಿದೆ. ಇದರ ಭಾಗವೇ ವೈದ್ಯಕೀಯ

ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಜಿ ಶುಲ್ಕ ಹೆಚ್ಚಿಸುವ ಮೂಲಕ ಸರಕಾರ ಲೂಟಿ ಹೊಡೆಯುತ್ತಿದೆ ➤ ಕ್ಯಾಂಪಸ್‌ ಫ್ರಂಟ್ Read More »

ಕರ್ನಾಟಕ

ಲಾರಿ ಹಾಗೂ ಅಶೋಕ್ ಲೈಲ್ಯಾಂಡ್ ದೋಸ್ತ್ ನಡುವೆ ಢಿಕ್ಕಿ ➤ ದೋಸ್ತ್ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.25. ಲಾರಿ ಹಾಗೂ ಲೇಲ್ಯಾಂಡ್ ದೋಸ್ತ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಚಾಲಕ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಕೊಣಾಲು ಎಂಬಲ್ಲಿ ಗುರುವಾರದಂದು ನಡೆದಿದೆ. ಮೃತರನ್ನು ಲೈಲ್ಯಾಂಡ್ ದೋಸ್ತ್ ವಾಹನ ಚಾಲಕ ಹಾಸನ ಜಿಲ್ಲೆಯ ಆಲೂರು ನಿವಾಸಿ ಚೇತನ್ ಎಂ.ವಿ.(22) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ ಹಾಗೂ ಹಾಸನದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ದೋಸ್ತ್ ನಡುವೆ ಈ ದುರ್ಘಟನೆ ಸಂಭವಿಸಿದೆ. ಗಂಭೀರ

ಲಾರಿ ಹಾಗೂ ಅಶೋಕ್ ಲೈಲ್ಯಾಂಡ್ ದೋಸ್ತ್ ನಡುವೆ ಢಿಕ್ಕಿ ➤ ದೋಸ್ತ್ ಚಾಲಕ ಮೃತ್ಯು Read More »

ಕರಾವಳಿ

ಈ ರಾಜ್ಯದಲ್ಲಿ 9, 10 ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪರಿಕ್ಷೆಯಿಲ್ಲದೇ ಪಾಸ್..❗➤ ಮುಖ್ಯಮಂತ್ರಿಯಿಂದ ಮಹತ್ವದ ನಿರ್ಧಾರ

(ನ್ಯೂಸ್ ಕಡಬ) newskadaba.com ತಮಿಳುನಾಡು, ಫೆ. 25. ಕಳೆದ ವರ್ಷ ಕೊರೋನಾ ವೈರಸ್ ಭೀತಿಯಿಂದಾಗಿ 1ರಿಂದ 9ನೇ ತರಗತಿವರೆಗೆ ಪರೀಕ್ಷೆ ನಡೆಸದೆ ಹಾಗೆಯೇ ಪಾಸು ಮಾಡಲಾಗಿತ್ತು. ಇದೀಗ ಕೊರೋನಾ ಎರಡನೇ ಅಲೆ ಆರಂಭವಾಗಿದ್ದು, ತಮಿಳುನಾಡು ರಾಜ್ಯ ಸರ್ಕಾರವು ಕೊರೋನಾ ಭೀತಿ ಹೆಚ್ಚಿರುವುದರಿಂದ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನ 9, 10 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸದೆ ಪಾಸು ಮಾಡಲು ಮುಂದಾಗಿದೆ ಎಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಈ ಕುರಿತು

ಈ ರಾಜ್ಯದಲ್ಲಿ 9, 10 ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪರಿಕ್ಷೆಯಿಲ್ಲದೇ ಪಾಸ್..❗➤ ಮುಖ್ಯಮಂತ್ರಿಯಿಂದ ಮಹತ್ವದ ನಿರ್ಧಾರ Read More »

ರಾಷ್ಟ್ರೀಯ ನ್ಯೂಸ್

ಆರೆಸ್ಸೆಸ್ ಹಾಗೂ ಎಸ್ಡಿಪಿಐ ನಡುವೆ ಘರ್ಷಣೆ ➤ 8 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಕೇರಳ, ಫೆ. 25.‌ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐನ 8 ಮಂದಿ ಕಾರ್ಯಕರ್ತರನ್ನು ಬಂಧಿಸಿದ ಘಟನೆ ನಡೆದಿದೆ. ಬುಧವಾರ ರಾತ್ರಿ ಚೆರ್ತಲಾ ಸಮೀಪದ ನಾಗಂಕುಲಂಗರದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತ ನಂದು(23) ಎಂಬಾತ ಮೃತಪಟ್ಟಿದ್ದು, ಅಲ್ಲದೇ ಎಸ್ಡಿಪಿಐ ಹಾಗೂ ಆರೆಸ್ಸೆಸ್ ನ ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಲಪ್ಪುಳ ಹಾಗೂ ಎರ್ನಾಕುಲಂನ ವಿವಿಧ ಆಸ್ಪತ್ರೆಗಳಲ್ಲಿ ಸೇರಿಸಲಾಗಿದೆ. ಆರ್ ಎಸ್ ಎಸ್ ಸಂಘಟನೆಗೆ ಸೇರಿದ ಓರ್ವ ಕಾರ್ಯಕರ್ತನ

ಆರೆಸ್ಸೆಸ್ ಹಾಗೂ ಎಸ್ಡಿಪಿಐ ನಡುವೆ ಘರ್ಷಣೆ ➤ 8 ಮಂದಿಯ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ: ಬೈಕ್-ಲಾರಿ ನಡುವೆ ಢಿಕ್ಕಿ ➤ ಮಗ ಮೃತ್ಯು, ತಂದೆ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.25. ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದು, ಸಹಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ – ಪುತ್ತೂರು ರಸ್ತೆಯ ಕಂಬಳಬೆಟ್ಟು ಎಂಬಲ್ಲಿ ಎಂಬಲ್ಲಿ ಗುರುವಾರದಂದು ಸಂಭವಿಸಿದೆ. ಮೃತ ಸವಾರನನ್ನು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ನಿವಾಸಿ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇಸ್ಮಾಯಿಲ್ ಹಾಗೂ ಆತನ ತಂದೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಂಬಳಬೆಟ್ಟು ಸಮೀಪದ ಬದನಾಜೆ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ಬೈಕ್ ಗೆ

ವಿಟ್ಲ: ಬೈಕ್-ಲಾರಿ ನಡುವೆ ಢಿಕ್ಕಿ ➤ ಮಗ ಮೃತ್ಯು, ತಂದೆ ಗಂಭೀರ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಡುಪಿ: ಕಾಂಗ್ರೆಸ್ ಮುಖಂಡನ ಮನೆಗೆ ನುಗ್ಗಿ ಮನೆ ಹಾಗೂ ವಾಹನಕ್ಕೆ ಹಾನಿ ➤ ಜೀವ ಬೆದರಿಕೆ

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 25. ಉಪ್ಪೂರು ಸೊಸೈಟಿ ಅಧ್ಯಕ್ಷ, ಸಮಾಜಸೇವಕ ಹಾಗೂ ಹಾವಂಜೆ ಗ್ರಾಮ ಪಂಚಾಯತ್‍ ಸದಸ್ಯ ರಮೇಶ್ ಎನ್.ಶೆಟ್ಟಿ ಕುಕ್ಕೆಹಳ್ಳಿ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಫೆ.23ರಂದು ರಾತ್ರಿ 10.30ರ ವೇಳೆಗೆ ಮನೆಗೆ ಬಂದ ಕೆಲವರು ಇವರ ಮನೆಗೆ ಮತ್ತು ವಾಹನಕ್ಕೆ ಹಾನಿ ಮಾಡಿದ್ದಲ್ಲದೇ ಮನೆಯ ಗೇಟಿನ ಲೈಟ್ ಗಳನ್ನೂ ಒಡೆದು ಹಾಕಿದ್ದಾರೆ. ಜೊತೆಗೆ ರಮೇಶ್ ಎಂಬವರಿಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಲಾಗಿದೆ.

ಉಡುಪಿ: ಕಾಂಗ್ರೆಸ್ ಮುಖಂಡನ ಮನೆಗೆ ನುಗ್ಗಿ ಮನೆ ಹಾಗೂ ವಾಹನಕ್ಕೆ ಹಾನಿ ➤ ಜೀವ ಬೆದರಿಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top