News Kadaba Desk

ಕಡಬ: ಹೊಸ್ಮಠ ಸೇತುವೆ ಬಳಿ ಅಮಾಯಕ ಜೀವಗಳನ್ನು ಬಲಿಪಡೆದ ಅಪಾಯಕಾರಿ ಹಂಪ್ ➤ ದಿನಂಪ್ರತಿ ನಡೆಯುತ್ತಿದೆ ಸರಣಿ ಅಪಘಾತ ✍? ನಾಗರಾಜ್ ಎನ್.ಕೆ

✍? ನಾಗರಾಜ್ ಎನ್.ಕೆ. (ನ್ಯೂಸ್ ಕಡಬ) newskadaba.com ಕವರ್ ಸ್ಟೋರಿ: ಇಲ್ಲಿನ ಹೊಸಮಠ ನೂತನ ಸೇತುವೆಯ ಬಳಿ ಉಪ್ಪಿನಂಗಡಿ-ಕಡಬ ರಾಜ್ಯರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿರುವ ಹಂಪ್ (ರಸ್ತೆ ಉಬ್ಬು) ನಿಂದಾಗಿ ನಿರಂತರ ಅಪಘಾತಗಳು ನಡೆಯುತ್ತಿದ್ದು, ಜೀವ ಹಾನಿಯೂ ಆಗುತ್ತಿರುವುದು ವಾಹನ ಚಾಲಕರ ಆತಂಕಕ್ಕೆ ಕಾರಣವಾಗಿದೆ. ಒಂದೂವರೆ ವರ್ಷದ ಹಿಂದೆ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡ ಬಳಿಕ ಸೇತುವೆಯ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿನ ತಿರುವುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎನ್ನುವ ಕಾರಣಕ್ಕಾಗಿ ಹಂಪ್‌ಗಳನ್ನು […]

ಕಡಬ: ಹೊಸ್ಮಠ ಸೇತುವೆ ಬಳಿ ಅಮಾಯಕ ಜೀವಗಳನ್ನು ಬಲಿಪಡೆದ ಅಪಾಯಕಾರಿ ಹಂಪ್ ➤ ದಿನಂಪ್ರತಿ ನಡೆಯುತ್ತಿದೆ ಸರಣಿ ಅಪಘಾತ ✍? ನಾಗರಾಜ್ ಎನ್.ಕೆ Read More »

ವಿಶೇಷ ಲೇಖನಗಳು

? ಕೊಣಾಜೆ: ಮಹಿಳೆಯ ಸರ ಎಳೆದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 02. ಮಹಿಳೆಯ ಸರ ಎಳೆದು ಪರಾರಿಯಾಗಿದ್ದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಕೊಣಾಜೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಪಾನೇಲ ನಿವಾಸಿ ಇರ್ಷಾದ್ (23) ಎಂದು ಗುರುತಿಸಲಾಗಿದೆ. ಆರೋಪಿಯು ಬೋಳಿಯಾರ್ ನಿವಾಸಿ ಶಾಂಭವಿ ಎಂಬವರು ತೋಟದಿಂದ ಸೋಗೆ ತರುತ್ತಿದ್ದ ವೇಳೆ ಹಿಂದಿನಿಂದ ಬಂದು ಸರ ಎಳೆದು ಪರಾರಿಯಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇರ್ಷಾದ್ ಎಂಬಾತನನ್ನು ಬಂಧಿಸಿದ್ದಾರೆ.

? ಕೊಣಾಜೆ: ಮಹಿಳೆಯ ಸರ ಎಳೆದು ಪರಾರಿಯಾಗಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಮಹಿಳಾ ಠಾಣಾ ಎಸ್.ಐ ಮೇಲೆ ಹಲ್ಲೆ ಆರೋಪ ➤ ಸಹೋದರಿಯರಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 02. ದೂರು ಅರ್ಜಿಯೊಂದರ ವಿಚಾರಣೆಯ ವೇಳೆ ಪುತ್ತೂರು ಮಹಿಳಾ ಠಾಣಾ ಎಸ್.ಐ ಸೇಸಮ್ಮ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್ ಡಿಸೋಜ ಅವರ ಪತ್ನಿ ಬೇಬಿ ಡಿಸೋಜ(34) ಹಾಗೂ ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ ಆಶಾ(35) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಎಸ್.ಐ ಸೇಸಮ್ಮ ಅವರು ಆಸ್ಪತ್ರೆಗೆ

ಪುತ್ತೂರು: ಮಹಿಳಾ ಠಾಣಾ ಎಸ್.ಐ ಮೇಲೆ ಹಲ್ಲೆ ಆರೋಪ ➤ ಸಹೋದರಿಯರಿಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಎಸ್ಸೆಸ್ಸೆಲ್ಸಿ ಅಂತಿಮ ವೇಳಾಪಟ್ಟಿ ಪ್ರಕಟ ➤ ಜೂ. 21ರಿಂದ ಜುಲೈ 05ರ ವರೆಗೆ ಪರೀಕ್ಷೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 02. ಕೋವಿಡ್ ಕಾರಣದಿಂದಾಗಿ ತಡವಾಗಿ ಶಾಲೆಗಳು ಆರಂಭವಾಗಿರುವ ಹಿನ್ನೆಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾರ್ಚ್ ತಿಂಗಳ ಬದಲು ಜೂನ್ 21 ರಿಂದ ಜುಲೈ 5 ರವರೆಗೆ ನಡೆಯಲಿವೆ ಎಂದು ಶಿಕ್ಷಣ ಸಚಿವ ತಿಳಿಸಿದ್ದಾರೆ‌. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿರುವ ಅವರು ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸಲಹೆ, ಮನವಿಗಳನ್ನು ಪರಿಗಣಿಸಿ ಇದೀಗ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು. ಜೂನ್ 21 ರಂದು ಪ್ರಥಮ

ಎಸ್ಸೆಸ್ಸೆಲ್ಸಿ ಅಂತಿಮ ವೇಳಾಪಟ್ಟಿ ಪ್ರಕಟ ➤ ಜೂ. 21ರಿಂದ ಜುಲೈ 05ರ ವರೆಗೆ ಪರೀಕ್ಷೆ Read More »

ಕರ್ನಾಟಕ

ನೀಟ್ ಪರೀಕ್ಷಾ ಶುಲ್ಕ ಹೆಚ್ಚಳ ➤ ಉಪ್ಪಿನಂಗಡಿ ಕ್ಯಾಂಪಸ್ ಫ್ರಂಟ್ ವತಿಯಿಂದ ಕಡಬ ತಹಶೀಲ್ದಾರ್ ಗೆ ಮನವಿ ಮತ್ತು ಪ್ಲೇಕಾರ್ಡ್ ಪ್ರದರ್ಶನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 02. ಕ್ಯಾಂಪಸ್ ಫ್ರಂಟ್ ಉಪ್ಪಿನಂಗಡಿ ಇದರ ವತಿಯಿಂದ ನೀಟ್ ಪ್ರವೇಶ ಪರೀಕ್ಷೆಯ ಶುಲ್ಕ ಹೆಚ್ಚಳ ವಿರೋಧಿಸಿ ಕಡಬ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ವಿದ್ಯಾರ್ಥಿಗಳಿಗಾದ ಸಂಕಷ್ಟವನ್ನು ಸಂಪೂರ್ಣವಾಗಿ ವಿವರಿಸಲಾಯಿತು ಬಳಿಕ ಕಡಬ ಜ್ಯೂನಿಯರ್ ಕಾಲೇಜು ಪಕ್ಕದಲ್ಲಿ ವಿದ್ಯಾರ್ಥಿಗಳಿಂದ ಪ್ಲೇಕಾರ್ಡ್ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಏರಿಯಾ ಉಪಾಧ್ಯಕ್ಷರಾದ ಅಫ್ಸಲ್ ಕಡಬ ಹಾಗೂ ಕಡಬ ಯುನಿಟ್ ಮುಖಂಡರಾದ ಆಸಿರ್ ಕಡಬ ಮತ್ತು ಸದಸ್ಯರು ಉಪಸ್ಥಿತರಿದ್ದರು.

ನೀಟ್ ಪರೀಕ್ಷಾ ಶುಲ್ಕ ಹೆಚ್ಚಳ ➤ ಉಪ್ಪಿನಂಗಡಿ ಕ್ಯಾಂಪಸ್ ಫ್ರಂಟ್ ವತಿಯಿಂದ ಕಡಬ ತಹಶೀಲ್ದಾರ್ ಗೆ ಮನವಿ ಮತ್ತು ಪ್ಲೇಕಾರ್ಡ್ ಪ್ರದರ್ಶನ Read More »

ಕರಾವಳಿ, ಕರ್ನಾಟಕ

ಮಂಗಳೂರು: ಮಾ. 07ರಂದು ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 02. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ಇದರ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವು ಮಾರ್ಚ್‌ 7ರಂದು ರವಿವಾರದಂದು ನಗರದ ನೆಹರೂ ಮೈದಾನದ ಬಳಿಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ 100 ಮೀ. ಓಟ, 200 ಮೀ.ಓಟ, ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಮೂರುಕಾಲಿನ ಓಟ, ಸ್ಲೋ ಬೈಕ್‍ ರೇಸ್, ಬಾಳೆ ಹಣ್ಣು ತಿನ್ನುವ ಸ್ಪರ್ಧೆ, ಕ್ರಿಕೆಟ್ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ

ಮಂಗಳೂರು: ಮಾ. 07ರಂದು ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ Read More »

ಕರಾವಳಿ, ಕರ್ನಾಟಕ

ವೈದ್ಯಕೀಯ & ಸ್ನಾತಕೋತ್ತರ ಪರೀಕ್ಷಾ ಶುಲ್ಕ ಹೆಚ್ಚಳ* *➤ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

(ನ್ಯೂಸ್ ಕಡಬ) newskadaba.com. ಮಂಗಳೂರು, ಮಾ. 02. ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ವತಿಯಿಂದ ವೈದ್ಯಕೀಯ ಮತ್ತು ಸ್ನಾತಕೋತ್ತರ ಪರೀಕ್ಷಾ ಪ್ರವೇಶ ಶುಲ್ಕ ಹೆಚ್ಚಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ವಿದ್ಯಾರ್ಥಿಗಳ ಸಂಕಷ್ಟವನ್ನು ಹೇಳಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಇನಾಯತ್ ಮಂಗಳೂರು, ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶರ್ಫುದ್ದೀನ್ ಮತ್ತು ಝಾಹಿರ್ ಉಪಸ್ಥಿತರಿದ್ದರು.

ವೈದ್ಯಕೀಯ & ಸ್ನಾತಕೋತ್ತರ ಪರೀಕ್ಷಾ ಶುಲ್ಕ ಹೆಚ್ಚಳ* *➤ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ Read More »

ಕರಾವಳಿ, ಕರ್ನಾಟಕ

? ಸುರತ್ಕಲ್: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ➤ ಮಹಿಳೆಯ ರಕ್ಷಣೆ, ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 01. ಸುರತ್ಕಲ್ ಸಮೀಪದ ಬಾಳ ಗ್ರಾಮದ ಲಾಡ್ಜ್ ಒಂದಕ್ಕೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಳೆಯಂಗಡಿ ತೋಕೂರು ನಿವಾಸಿ ಹರೀಶ್ (42) ಹಾಗೂ ಬಂಟ್ವಾಳ ತಾಲೂಕಿನ ಮೂಡ ನಡುಗೋಡು ನಿವಾಸಿ ಲೋಕನಾಥ್(42) ಎಂದು ಗುರುತಿಸಲಾಗಿದೆ. ಆರೋಪಿಗಳು ಬಾಳ ಗ್ರಾಮದಲ್ಲಿರುವ ಬಿಎಎಸ್ಎಫ್ ಫ್ಯಾಕ್ಟರಿಯ ಎದುರಿನ ಫೆರಾವೊ ಕಾಂಪ್ಲೆಕ್ಸ್ ನ ರೂಂ ನಂ 205 ರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ವೇಳೆ

? ಸುರತ್ಕಲ್: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ➤ ಮಹಿಳೆಯ ರಕ್ಷಣೆ, ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 01. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆಗೈದವರನ್ನು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಜಯಂತ್ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ಎರಡನೇ ವರ್ಷದ ಇಂಜಿನಿಯರಿಂಗ್‌ ಮೂರನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿ ಆತ್ಮಹತ್ಯೆ ವಿಚಾರವನ್ನು ಕಾಲೇಜು ಆಡಳಿತ ಮಂಡಳಿ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ವಿವಿಪುರಂ ಪೊಲೀಸರು ಭೇಟಿ ನೀಡಿ

? ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೀರೋ ಸಿನೆಮಾ ಚಿತ್ರೀಕರಣದ ಸಂದರ್ಭ ಪೆಟ್ರೋಲ್ ಬಾಂಬ್ ಸ್ಫೋಟ ➤ ನಟ ವೃಷಭ್ ಶೆಟ್ಟಿ ತಲೆ ಹಾಗೂ ಬೆನ್ನಿಗೆ ಬೆಂಕಿ

(ನ್ಯೂಸ್ ಕಡಬ) newskadaba.com ಹಾಸನ, ಮಾ. 01. ಸಿನಿಮಾ ಶೂಟಿಂಗ್ ನಡೆಸುತ್ತಿದ್ದ ವೇಳೆಯಲ್ಲಿ ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ಅವರಿಗೆ ಬೆಂಕಿ ತಗುಲಿದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.   ಹೀರೋ ಸಿನೆಮಾದ ಚಿತ್ರೀಕರಣವು ಬೇಲೂರಿನಲ್ಲಿ ನಡೆಯುತ್ತಿದ್ದು, ಈ ಸಂದರ್ಭ ಪೆಟ್ರೋಲ್ ಬಾಂಬ್ ಒಂದನ್ನು ಸಿಡಿಸಲಾಗಿತ್ತು. ಈ ವೇಳೆ ವೃಷಬ್ ಶೆಟ್ಟಿ ತಲೆ ಹಾಗೂ ಬೆನ್ನಿನ ಭಾಗಕ್ಕೆ ಬೆಂಕಿ ತಲುಗಿದ್ದು, ತಲೆ ಕೂದಲು ಸುಟ್ಟು ಹೋಗಿದೆ. ಬೆನ್ನಿನ ಭಾಗಕ್ಕೆ ಗಾಯವಾಗಿದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೀರೋ ಸಿನೆಮಾ ಚಿತ್ರೀಕರಣದ ಸಂದರ್ಭ ಪೆಟ್ರೋಲ್ ಬಾಂಬ್ ಸ್ಫೋಟ ➤ ನಟ ವೃಷಭ್ ಶೆಟ್ಟಿ ತಲೆ ಹಾಗೂ ಬೆನ್ನಿಗೆ ಬೆಂಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top