News Kadaba Desk

ವೈಯಕ್ತಿಕ ಪೂರ್ವದ್ವೇಷದ ಹಿನ್ನೆಲೆ ➤ ಐವರ ತಂಡದಿಂದ ಮೂವರ ಕೊಲೆಯತ್ನ- ಆರೋಪಿಗಳಿಗಾಗಿ ಶೋಧ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 23. ವೈಯಕ್ತಿಕ ದ್ವೇಷದ ಹಿನ್ನೆಲೆ ಐದು ಮಂದಿಯ ತಂಡವೊಂದು ಮೂವರ ಕೊಲೆಗೆ ಯತ್ನಿಸಿದ ಘಟನೆ ಮೂಡಬಿದಿರೆ ತಾಲೂಕಿನ ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಗಂಟಾಲ್ಕಟ್ಟೆ ಎಂಬಲ್ಲಿನ ಗೋವುಗುಡ್ಡೆ ನಿವಾಸಿ ಶಬೀರ್, ಮಹಮ್ಮದ್ ಅನ್ಸಾರ್ ಮತ್ತು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇವರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಅದೇ ಪರಿಸರದ ಸಾಹುಲ್, ಫಾರೂಕ್, ಜಲೀಲ್, ಇಬ್ರಾನ್ ಹಾಗೂ ಶಾಫಿ ಎಂಬವರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. […]

ವೈಯಕ್ತಿಕ ಪೂರ್ವದ್ವೇಷದ ಹಿನ್ನೆಲೆ ➤ ಐವರ ತಂಡದಿಂದ ಮೂವರ ಕೊಲೆಯತ್ನ- ಆರೋಪಿಗಳಿಗಾಗಿ ಶೋಧ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಶ್ವ ಜಲ ದಿನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 23. ವಿಶ್ವ ಜಲ ದಿನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲೆಯ ಮಡಂತ್ಯಾರ್ ಯುನಿಟ್ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ ಮಾಡಲಾಯಿತು. ಭಿತ್ತಿ ಪತ್ರಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಮತ್ತು ಅವಶ್ಯಕತೆಗಳ ಕುರಿತು ಘೋಷಣೆಗಳನ್ನು ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯರಾದ ಸದಾಫ್ ಬೆಳ್ತಂಗಡಿ ಹಾಗೂ ಮಡಂತ್ಯಾರ್ ಯುನಿಟ್ ನಾಯಕರು ಉಪಸ್ಥಿತರಿದ್ಧರು.

ವಿಶ್ವ ಜಲ ದಿನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ Read More »

ಕರಾವಳಿ, ಕರ್ನಾಟಕ

ಬೆಳಂದೂರು, ಪಳ್ಳತ್ತಾರು ಪರಿಸರದಲ್ಲಿ ನಿರಂತರ ಕಳ್ಳತನದ ಹಿನ್ನೆಲೆ ➤ ದಾರಿದೀಪ ಅಳವಡಿಸುವಂತೆ ಗ್ರಾ.ಪಂ ಗೆ ಮನವಿ

(ನ್ಯೂಸ್ ಕಡಬ) newskadaba.com ಬೆಳಂದೂರು, ಮಾ. 23. ಬೆಳಂದೂರು ಹಾಗೂ ಪಳ್ಳತ್ತಾರು ಭಾಗದ ಪರಿಸರದಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿದ್ದು, ಇದರಿಂದಾಗಿ ಬರೆಪ್ಪಾಡಿ – ಪಳ್ಳತ್ತಾರು ಮಾರ್ಗವಾಗಿ ಬೆಳಂದೂರು ತನಕ ದಾರಿದೀಪ ಅಳವಡಿಸುವಂತೆ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷರವರಿಗೆ ಮನವಿ ನೀಡಲಾಯಿತು.   ಈ ಸಂದರ್ಭದಲ್ಲಿ ನಝೀರ್ ದೇವಸ್ಯ, ನವಾಝ್ ಸಖಾಫಿ, ಹಮೀದ್ ಸಖಾಫಿ, ಜಲೀಲ್ ಪಳ್ಳತ್ತಾರು, ಹಮೀದ್ ಪಳ್ಳತ್ತಾರು, ರಝಾಕ್ ಬನಾರಿ, ಸಾದಿಕ್ ಮೊದಲಾದವರು ಉಪಸ್ಥಿತರಿದ್ದರು.

ಬೆಳಂದೂರು, ಪಳ್ಳತ್ತಾರು ಪರಿಸರದಲ್ಲಿ ನಿರಂತರ ಕಳ್ಳತನದ ಹಿನ್ನೆಲೆ ➤ ದಾರಿದೀಪ ಅಳವಡಿಸುವಂತೆ ಗ್ರಾ.ಪಂ ಗೆ ಮನವಿ Read More »

ಕರಾವಳಿ, ಕರ್ನಾಟಕ

? ಸಂಬಳ ಕೇಳಿದ ಕಾರಣಕ್ಕೆ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಇರಿದ ರಬ್ಬರ್ ತೋಟದ ಮಾಲೀಕ

(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ. 23.‌ ಸಂಬಳ ಕೇಳಿದ ಎಂಬ ಕಾರಣಕ್ಕೆ ಕಾರ್ಮಿಕನೋರ್ವನನ್ನು ರಬ್ಬರ್ ತೋಟದ ಮಾಲಿಕ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಇರಿದ ಘಟನೆ ಇಲ್ಲಿನ ತೆಳ್ಳಾರು ಮಾವಿನಕಟ್ಟೆಯ ನೀರಿನ ಟ್ಯಾಂಕ್ ಬಳಿಯಲ್ಲಿ ನಡೆದಿದೆ. ತೆಳ್ಳಾರಿನ ರಬ್ಬರ್ ತೋಟದ ಮಾಲಕ ಶಿಜು ಹಾಗೂ ಕಾರ್ಮಿಕ ಶ್ಯಾಮ ನಡುವೆ ಸಂಬಳದ ವಿಚಾರದಲ್ಲಿ ಗಲಾಟೆ ನಡೆದಿದ್ದು, ಗಲಾಟೆಯ ವೇಳೆ ಮಾತಿಗೆ ಮಾತು ಬೆಳೆದು ಶಿಜು ಎಂಬವರು ಶ್ಯಾಮಗೆ ಕತ್ತಿಯಿಂದ ಚುಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶ್ಯಾಮನನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ

? ಸಂಬಳ ಕೇಳಿದ ಕಾರಣಕ್ಕೆ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಇರಿದ ರಬ್ಬರ್ ತೋಟದ ಮಾಲೀಕ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದಾದ್ಯಂತ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ➤ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ ಕಡಬ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಮಾ. 22. ರಾಜ್ಯದಾದ್ಯಂತ ಕೊರೋನಾ ಆತಂಕ ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಮಾಸ್ಕ್ ಧರಿಸದೇ ದಿನನಿತ್ಯ ಓಡಾಡುತ್ತಿರುವ ಹಿನ್ನೆಲೆ ಇದೀಗ ಕಡಬ ಎಸ್.ಐ ರುಕ್ಮ ನಾಯಕ್ ನೇತೃತ್ವದ ತಂಡವು ಫೀಲ್ಡ್ ಗೆ ಇಳಿದಿದ್ದಾರೆ. ಕಡಬದ ಮುಖ್ಯ ಪೇಟೆಯ ಸಹಿತ ವಿವಿಧೆಡೆ ಇರುವ ಅಂಗಡಿಗಳಿಗೆ ತೆರಳಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಲ್ಲದೇ ಮಾಸ್ಕ್ ಹಾಕದೇ ಓಡಾಡುವವರಿಗೆ ದಂಡ ಹಾಕುವ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ.

ರಾಜ್ಯದಾದ್ಯಂತ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ➤ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ ಕಡಬ ಪೊಲೀಸರು Read More »

ಕರಾವಳಿ, ಕರ್ನಾಟಕ

ಶಿಕ್ಷಣ ತಜ್ಞ ಪ್ರೊ.ಎಂ.ಅಬೂಬಕರ್ ತುಂಬೆ ನಿಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 23. ಶಿಕ್ಷಣ ತಜ್ಞ, ಯುಎಇ ರಾಸ್ ಅಲ್ ಖೈಮಾದ ಸ್ಕಾಲರ್ಸ್ ಇಂಡಿಯನ್ ಹೈಸ್ಕೂಲ್ ಪ್ರಾಂಶುಪಾಲ ಪ್ರೊ.ಎಂ.ಅಬೂಬಕರ್ ತುಂಬೆ(59) ಅವರು ಮಂಗಳವಾರ ಮುಂಜಾನೆ ಯುಎಇಯ ರಾಸ್ ಅಲ್ ಖೈಮಾದಲ್ಲಿರುವ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.     1962ರ ಆಗಸ್ಟ್ 15ರಂದು ಜನಿಸಿದ ಇವರು 1982ರಲ್ಲಿ ಮಂಗಳೂರಿನ ಬದ್ರಿಯಾ ಪ್ರಾಥಮಿಕ‌ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ‌ ಆರಂಭಿಸಿದ್ದರು. 1987ರವರೆಗೆ ಅಲ್ಲಿ ಶಿಕ್ಷಕರಾಗಿದ್ದ ಇವರು ಕೆಲಕಾಲ ಬಿ.ಎ.ಗ್ರೂಪ್ ತುಂಬೆ ಇದರ ಎಕ್ಸಿಕ್ಯೂಟಿವ್ ಮ್ಯಾನೇಜರ್

ಶಿಕ್ಷಣ ತಜ್ಞ ಪ್ರೊ.ಎಂ.ಅಬೂಬಕರ್ ತುಂಬೆ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಹಪಾಠಿಗಳಿಂದ ನಿಂದನೆ ➤ 10ನೇ ತರಗತಿಯ ಬಾಲಕ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಹಾಸನ, ಮಾ. 23. ಸಹಪಾಠಿಗಳಿಂದ ನಿಂದನೆಗೊಳಗಾದ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.   ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಹರ್ಷಿತ್ ಗೌಡ (16) ಎಂದು ಗುರುತಿಸಲಾಗಿದೆ. ಹಾಸನ ತಾಲೂಕಿನ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತ್ ಗೆ ಒಂದು ವರ್ಷದ ಹಿಂದೆಯೇ ಸ್ಟ್ರೋಕ್ ಆಗಿದ್ದು, ಇದನ್ನೇ ಕಾರಣವಾಗಿಸಿ ಆತನ ಸಹಪಾಠಿಗಳು ಶಾಲೆಯಲ್ಲಿ ರೇಗಿಸುತ್ತಿದ್ದರು. ಇದೇ ವಿಚಾರವಾಗಿ ಮಾರ್ಚ್ 19 ರಂದು ಶಾಲೆಯಲ್ಲಿ ವಿದ್ಯಾರ್ಥಿಗಳ

ಸಹಪಾಠಿಗಳಿಂದ ನಿಂದನೆ ➤ 10ನೇ ತರಗತಿಯ ಬಾಲಕ ನೇಣು ಬಿಗಿದು ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.23. ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಪುತ್ತೂರಿನಲ್ಲಿ ನಡೆದಿದೆ. ಮೃತರನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ, ಪುತ್ತೂರು ತಾಲೂಕು ಬೆಳ್ಳಿಪ್ಪಾಡಿ ಕುಂಡಾಪು ನಿವಾಸಿ ಪದ್ಮ ಪಕ್ಕಳ ಎಂಬವರ ಪುತ್ರಿ ಶ್ರೇಯಾ ಪಕ್ಕಳ (16) ಎಂದು ಗುರುತಿಸಲಾಗಿದೆ. ಆರೋಗ್ಯದಿಂದಿದ್ದ ಶ್ರೇಯಾಳಿಗೆ ಇಂದು ಬೆಳಿಗ್ಗೆ ಹಠಾತ್ತನೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.    

ಪುತ್ತೂರು: ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು Read More »

ಕರಾವಳಿ

ದಂಡ ಹಾಕಲು ತೆರಳಿದ ಪೊಲೀಸರ ತಲೆದಂಡ | ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು ➤ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮೈಸೂರು, ಮಾ.22. ಪೊಲೀಸರು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಬೈಕ್‌ ಸವಾರನಿಗೆ ಸಂಚಾರ ಪೊಲೀಸರು ಲಾಠಿಯಲ್ಲಿ ಹೊಡೆದ ಪರಿಣಾಮ ಬೈಕ್‌ ಸವಾರ ಕೆಳಗೆ ಬಿದ್ದಿದ್ದು, ಈ ವಲೆ ಹಿಂಬದಿಯಿಂದ ಬಂದ ಲಾರಿಯು ಸವಾರನ ಹರಿದು ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ನಗರದ ಹಿನಕಲ್‌ ರಿಂಗ್‌ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಂದ ಬೈಕನ್ನು ನಿಲ್ಲಿಸಲು ಸೂಚಿಸಿದರೂ ಬೈಕ್ ಸವಾರ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ತಕ್ಷಣವೇ

ದಂಡ ಹಾಕಲು ತೆರಳಿದ ಪೊಲೀಸರ ತಲೆದಂಡ | ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು ➤ ವೀಡಿಯೋ ವೈರಲ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಲಾಕ್‍ಡೌನ್, ನೈಟ್‍ ಕರ್ಫ್ಯೂ ಸದ್ಯಕ್ಕಿಲ್ಲ | ಕೊರೋನಾ ತಡೆಗೆ ಕಠಿಣ ಕ್ರಮ ➤ ಸಭೆ, ಸಮಾರಂಭಗಳಿಗೆ ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.22. ಕೋವಿಡ್-19 ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‍ಡೌನ್ ಅಥವಾ ನೈಟ್‍ ಕರ್ಫ್ಯೂ ಹೇರಲಾಗುತ್ತದೆ ಎಂಬ ಆತಂಕ ಎದುರಾಗಿತ್ತಾದರೂ, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ಕೊರೋನ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ನಿಯಂತ್ರಣ ಸಂಬಂಧ ಚರ್ಚೆ ನಡೆಸಲಾಯಿತು. ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಲು ಜನ ಜಾಗೃತಿ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ

ರಾಜ್ಯದಲ್ಲಿ ಲಾಕ್‍ಡೌನ್, ನೈಟ್‍ ಕರ್ಫ್ಯೂ ಸದ್ಯಕ್ಕಿಲ್ಲ | ಕೊರೋನಾ ತಡೆಗೆ ಕಠಿಣ ಕ್ರಮ ➤ ಸಭೆ, ಸಮಾರಂಭಗಳಿಗೆ ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top