News Kadaba Desk

ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ!

(ನ್ಯೂಸ್‌ ಕಡಬ) newskadaba.com,  ಮಾ.05: ಫರಂಗಿಪೇಟೆಯ 10 ನೇ ಮೈಲ್‌ ಕಲ್ಲಿನ ಬಳಿ ನೇತ್ರಾವತಿ ನದಿಯ ದಡದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆಯಾಗಿದ್ದು, ನಿವಾಸಿಗಳಲ್ಲಿ ಅನುಮಾನ , ಆತಂಕ ಸೃಷ್ಟಿಯಾಗಿದೆ.ವರದಿಗಳ ಪ್ರಕಾರ, ಮಂಗಳವಾರ ಸಂಜೆ, ಸ್ಥಳೀಯ ನಿವಾಸಿಯೊಬ್ಬರು ನದಿ ದಂಡೆಯಲ್ಲಿ ನೀರಿನಲ್ಲಿ ಹಲವಾರು ಆಧಾರ್ ಕಾರ್ಡ್‌ಗಳು ತೇಲುತ್ತಿರುವುದನ್ನು ಕಂಡು ತಕ್ಷಣ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ, ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. […]

ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಾಣಿಜ್ಯ ವಿದ್ಯುತ್‌ ದರ ಹೆಚ್ಚಳ- ಯುನಿಟ್‌ಗೆ 10ರಿಂದ 95 ಪೈಸೆ ಏರಿಕೆ

(ನ್ಯೂಸ್‌ ಕಡಬ) newskadaba.com,  ಮಾ.05: ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2025-26ನೇ ಸಾಲಿಗೆ ಅನ್ವಯವಾಗುವಂತೆ ನಿಗದಿಪಡಿಸಿದ್ದ ವಿದ್ಯುತ್‌ ದರಗಳನ್ನು ಪರಿಷ್ಕರಿಸಿದ್ದು, ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್‌ ದರವನ್ನು ಪ್ರತಿ ಯುನಿಟ್‌ಗೆ 10 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಹೆಚ್ಚಳ ಮಾಡಲಾಗಿದೆ. ಇನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಬಳಸುವ ವಿದ್ಯುತ್‌ ದರವನ್ನು ಯೂನಿಟ್‌ಗೆ ಸರಾಸರಿ 95 ಪೈಸೆಯಷ್ಟು ಕಡಿಮೆ ಮಾಡಿದೆ. 2025-26ನೇ ಸಾಲಿಗೆ ಅನ್ವಯವಾಗುವಂತೆ ವಿದ್ಯುತ್‌ ದರ ಪರಿಷ್ಕರಣೆ ವೇಳೆ ಕೆಇಆರ್‌ಸಿಯು ಕೈಗಾರಿಕೆ, ವಾಣಿಜ್ಯ ಬಳಕೆಯ ವಿದ್ಯುತ್‌ಗೆ

ವಾಣಿಜ್ಯ ವಿದ್ಯುತ್‌ ದರ ಹೆಚ್ಚಳ- ಯುನಿಟ್‌ಗೆ 10ರಿಂದ 95 ಪೈಸೆ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಮಾ.05: ರಾಜ್ಯದಲ್ಲಿ ಮುಂದಿನ 4 ದಿನಗಳ ಕಾಲ ಒಣಹವೆ ಇರಲಿದ್ದು, ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದುಬೈನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ

(ನ್ಯೂಸ್‌ ಕಡಬ) newskadaba.com,  ಮಾ.04 : ದುಬೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಕಟ್ಟಡದ ಮೇಲ್ಭಾಗದಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿದ್ದ ಅಗ್ನಿಶಾಮಕ ಪಡೆತಕ್ಷಣ ನಿಯಂತ್ರಣಕ್ಕೆ ತಂದಿದೆ.ಘಟನೆಯ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ದೃಢಪಡಿಸಿದ್ದಾರೆ. ಈ ದಾಳಿ ಮಧ್ಯಪ್ರಾಚ್ಯದಲ್ಲಿ ನಿರಂತರ ನಡೆಯುತ್ತಿರುವಇರಾನ್-ಇಸ್ರೇಲ್ ಸಂಘರ್ಷದ ದಾಳಿ-ಪ್ರತಿದಾಳಿ ಘಟನಾಕ್ರಮದ ಭಾಗವಾಗಿದೆ. ಇದಕ್ಕೂ ಮುನ್ನ ಇಸ್ರೇಲ್-ಅಮೆರಿಕದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು. ಅಸ್ಪಷ್ಟತೆ ಹಾಗೂ ಕೋಪದಿಂದ,

ದುಬೈನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿತ್ತೂರು ಬಳಿ ಅಪಘಾತ; ರಾಜ್ಯದ 5 ಮಂದಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಮಾ.04 : ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಕಾರು ಆಂಧ್ರದ ಚಿತ್ತೂರು ಬಳಿ ಅಪಘಾತ ಕ್ಕೀಡಾಗಿದ್ದು, ಕರ್ನಾಟಕದ ಐವರು ಸಾವನ್ನಪ್ಪಿದ್ದಾರೆ. ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ಇಂದು ಬೆಳಿಗ್ಗೆ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಅತಿ ವೇಗದಲ್ಲಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಸಿಲುಕಿದ್ದ ಶವಗಳನ್ನು ಹೊರತರುವುದು ಪೊಲೀಸರಿಗೆ ಕಷ್ಟಕರವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಿಳಿದ

ಚಿತ್ತೂರು ಬಳಿ ಅಪಘಾತ; ರಾಜ್ಯದ 5 ಮಂದಿ ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

RCB ಅಭಿಮಾನಿಗಳಿಗೆ ಮೂರು ಗುಡ್ ನ್ಯೂಸ್, ಒಂದು ಬ್ಯಾಡ್ ನ್ಯೂಸ್‌!

(ನ್ಯೂಸ್‌ ಕಡಬ) newskadaba.com,  ಮಾ.04 : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಕಲರವ ಶುರುವಾಗಲು ಸಿದ್ಧವಾಗಿದೆ. ಕಳೆದ ಕೆಲ ತಿಂಗಳುಗಳಿಂದ ನಿಷೇಧಕ್ಕೆ ಒಳಗಾಗಿದ್ದ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಇದರ ಜೊತೆಗೆ ಆರ್‌ಸಿಬಿ ಅಭಿಮಾನಿಗಳಿಗೆ 3 ಗುಡ್ ನ್ಯೂಸ್ ಮತ್ತು 1 ಬ್ಯಾಡ್ ನ್ಯೂಸ್‌ ಸಿಕ್ಕಿದೆ. ಗುಡ್ ನ್ಯೂಸ್: ಉದ್ಘಾಟನಾ ಪಂದ್ಯ: ಐಪಿಎಲ್ 2026ರ ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ಲೇಆಫ್ ಪಂದ್ಯ: ಪ್ಲೇಆಫ್ ಸುತ್ತಿನ ಒಂದು ಪಂದ್ಯ (ಎಲಿಮಿನೇಟರ್ ಅಥವಾ ಮೊದಲ

RCB ಅಭಿಮಾನಿಗಳಿಗೆ ಮೂರು ಗುಡ್ ನ್ಯೂಸ್, ಒಂದು ಬ್ಯಾಡ್ ನ್ಯೂಸ್‌! Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್

ಪಿಯುಸಿ ಪರೀಕ್ಷೆಯ ಭಯದಿಂದ ಮನೆಬಿಟ್ಟು ಹೋದ ವಿದ್ಯಾರ್ಥಿನಿಯರು

(ನ್ಯೂಸ್‌ ಕಡಬ) newskadaba.com,  ಮಾ.04 : ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ಸಮಯದಲ್ಲಿ ರಾಜಧಾನಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಕಣ್ಮರೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು 2ನೇ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ 1ನೇ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಕಾಣೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪರೀಕ್ಷೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಎಕ್ಸಾಮ್ ಭಯದಿಂದ ಸೀನಿಯರ್ ವಿದ್ಯಾರ್ಥಿನಿ ತನ್ನ ಜೂನಿಯರ್ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಪಿಯುಸಿ ಪರೀಕ್ಷೆಯ ಭಯದಿಂದ ಮನೆಬಿಟ್ಟು ಹೋದ ವಿದ್ಯಾರ್ಥಿನಿಯರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮತ್ತೆ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

(ನ್ಯೂಸ್‌ ಕಡಬ) newskadaba.com,  ಮಾ.04 : ಆರಂಭಿಕ ವಹಿವಾಟಿನಲ್ಲೇ ರೂಪಾಯಿ ಮೌಲ್ಯ ಬುಧವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತಗೊಂಡಿದೆ. ಇರಾನ್ ವಿರುದ್ಧ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ನಡೆಸುತ್ತಿರುವ ಪರಿಣಾಮ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಗೋಚರವಾಗತೊಡಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು ಬುಧವಾರ ಸಾರ್ವಕಾಲಿಕ ಕನಿಷ್ಠ ಮಟ್ಟ 92.17ಕ್ಕೆ ತಲುಪಿದ್ದು, ಆರಂಭಿಕ ವಹಿವಾಟಿನಲ್ಲಿ 68 ಪೈಸೆ ಕುಸಿತಗೊಂಡಿತ್ತು. ಈ ಹಿಂದೆ ಜನವರಿ ಅಂತ್ಯದಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 91.9875 ಗೆ ಕುಸಿತವಾಗಿತ್ತು. ಇದು ಈ

ಮತ್ತೆ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶಬ್ದದ ವೇಗ ಮೀರಿ ಹಾರಿದ ಜೆಟ್ ವಿಮಾನ ಪುತ್ತೂರು ಜನರಲ್ಲಿ ಮೂಡಿದ್ದ ಆತಂಕ ನಿವಾರಣೆ

(ನ್ಯೂಸ್‌ ಕಡಬ) newskadaba.com,  ಮಾ.04 : ನಗರದಲ್ಲಿ ಮಾ.03ರಂದು ಮಧ್ಯಾಹ್ನ ಜೆಟ್ ವಿಮಾನವೊಂದು ಹಲವು ಬಾರಿ ಭೂಮಿ ಮಟ್ಟಕ್ಕೆ ಅತೀ ಸಮೀಪದಲ್ಲಿ ಹಾರಾಟ ನಡೆಸುತ್ತಿದ್ದ ದೃಶ್ಯ ಕಂಡು ಬಂದಿದ್ದು, ಕೆಲ ಕಾಲ ಆತಂಕ ಮೂಡಿದ ಬೆನ್ನಲ್ಲೇ ಇದು ಭೂವೈಜ್ಞಾನಿಕಕ್ಕೆ ಸಂಬಂಧಿಸಿದ ಸರ್ವೇ ಕಾರ್ಯ ಎಂದು ತಿಳಿದು ಜನರು‌ ನಿಟ್ಟುಸಿರು ಬಿಟ್ಟಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗದ್ದೆ ಮೇಲ್ಭಾಗದಲ್ಲಿ ನೆಲ ಮಟ್ಟಕ್ಕೆ ಅತಿ ಸಮೀಪದಲ್ಲಿ ಜೆಟ್ ವಿಮಾನ ಹಾರಾಡುತ್ತಿದ್ದ ದೃಶ್ಯವನ್ನು ಜನರು ನೋಡಿದ್ದು, ಪದೇ ಪದೇ ನಗರದ

ಶಬ್ದದ ವೇಗ ಮೀರಿ ಹಾರಿದ ಜೆಟ್ ವಿಮಾನ ಪುತ್ತೂರು ಜನರಲ್ಲಿ ಮೂಡಿದ್ದ ಆತಂಕ ನಿವಾರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ; ಪೊಲೀಸ್ ವಶದಿಂದ ಪರಾರಿಯಾದ ಆರೋಪಿಗೆ ಜೈಲು ಶಿಕ್ಷೆ

(ನ್ಯೂಸ್‌ ಕಡಬ) newskadaba.com,  ಮಾ.04 : ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ವಶದಿಂದ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸುಳ್ಯದ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 118/24 (ಕಲಂ 121(1), 132, 262 BNS) ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರು ಸಮಗ್ರ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿ ರಾಘವನ್ @ ಕೋಳಿಕರಣ್ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ

ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ; ಪೊಲೀಸ್ ವಶದಿಂದ ಪರಾರಿಯಾದ ಆರೋಪಿಗೆ ಜೈಲು ಶಿಕ್ಷೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top