News Kadaba Desk

ಆತೂರು ಪೊಲೀಸ್ ಚೆಕ್ ಪೋಸ್ಟ್ ಧ್ವಂಸ ಪ್ರಕರಣ ➤ ಇಬ್ಬರ ಬಂಧನ | ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಕಡಬ, ಜು.14. ಇತ್ತೀಚೆಗೆ ಕಡಬ ಠಾಣಾ ವ್ಯಾಪ್ತಿಯ ಆತೂರು ಎಂಬಲ್ಲಿ ಪೊಲೀಸ್ ಚೆಕ್ ಪೋಸ್ಟ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಯೂಸುಫ್ ಎಂಬವರ ಪುತ್ರ ತೌಸೀಫ್(30) ಮತ್ತು ಕೊಯಿಲ ಗ್ರಾಮದ ಸನ್ಯಾಸಿ ಮೂಲೆ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ಮಹಮ್ಮದ್ ಶಾಕಿರ್(25) ಎಂದು ಗುರುತಿಸಲಾಗಿದೆ. ಜೂನ್ 29 ರಂದು ಆತೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ […]

ಆತೂರು ಪೊಲೀಸ್ ಚೆಕ್ ಪೋಸ್ಟ್ ಧ್ವಂಸ ಪ್ರಕರಣ ➤ ಇಬ್ಬರ ಬಂಧನ | ಬಂಧಿತರ ಸಂಖ್ಯೆ 8ಕ್ಕೆ ಏರಿಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಚರ್ಚೆಗೆ ಕಾರಣವಾದ ಕಡಬ ತಾಲೂಕು ಕ್ರೀಡಾಂಗಣ ವಿಚಾರ ➤ ಇಒ ನವೀನ್ ಭಂಡಾರಿ ಸ್ಪಷ್ಟನೆ

(ನ್ಯೂಸ್ ಕಡಬ) Newskadaba.com ಕಡಬ, ಜು. 14.ಸವಣೂರಿನಲ್ಲಿ ಅಭಿವೃದ್ದಿಯಾಗಲಿರುವ ಸುಮಾರು 1 ಕೋಟಿ ರೂ. ವೆಚ್ಚದ 400 ಮೀಟರ್ ವಿಸ್ತೀರ್ಣದ ಕ್ರೀಡಾಂಗಣಕ್ಕೂ ಕಡಬ ತಾಲೂಕು ಕ್ರೀಡಾಂಗಣಕ್ಕೂ ಯಾವುದೇ ಸಂಬಂಧವಿಲ್ಲ. ಕಡಬ ತಾಲೂಕು ಕ್ರೀಡಾಂಗಣ ಕಡಬ ಭಾಗದಲ್ಲಿಯೇ ನಿರ್ಮಾಣ ಮಾಡುವ ಕುರಿತು ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಪುತ್ತೂರು, ಕಡಬ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಸ್ವಷ್ಟನೆ ನೀಡಿದ್ದಾರೆ. ಸವಣೂರು ಪ.ಪೂ.ಕಾಲೇಜಿನಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣವು ಕಡಬ ತಾಲೂಕು ಕ್ರೀಡಾಂಗಣ ಎಂದು ಮಾಧ್ಯಮದಲ್ಲಿ ವರದಿಯಾಗಿದ್ದು, ಬಳಿಕ ಈ

ಚರ್ಚೆಗೆ ಕಾರಣವಾದ ಕಡಬ ತಾಲೂಕು ಕ್ರೀಡಾಂಗಣ ವಿಚಾರ ➤ ಇಒ ನವೀನ್ ಭಂಡಾರಿ ಸ್ಪಷ್ಟನೆ Read More »

ಕರಾವಳಿ

ಸುಬ್ರಹ್ಮಣ್ಯ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ ➤ ಸ್ಥಳದಲ್ಲಿ ಗೃಹರಕ್ಷಕ ದಳ ಹಾಗೂ ಪೊಲೀಸರ ಸರ್ಪಗಾವಲು

(ನ್ಯೂಸ್ ಕಡಬ) Newskadaba.com ಸುಬ್ರಹ್ಮಣ್ಯ, ಜು. 14. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡು ಸ್ನಾನಘಟ್ಟ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ ಹಾಗೂ ಘಟ್ಟ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿ, ತೋಡು, ಹಳ್ಳಗಳು ತುಂಬಿ ಹರಿಯುತ್ತಿವೆ. ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದ್ದರಿಂದಾಗಿ, ಸ್ನಾನ ಘಟ್ಟ ಹಾಗೂ ಸೇತುವೆ ಕೆಳ ಭಾಗದ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ನದಿಯ ದಡದಲ್ಲಿ ತೀರ್ಥಸ್ನಾನ ನೆರವೇರಿಸಲು

ಸುಬ್ರಹ್ಮಣ್ಯ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ ➤ ಸ್ಥಳದಲ್ಲಿ ಗೃಹರಕ್ಷಕ ದಳ ಹಾಗೂ ಪೊಲೀಸರ ಸರ್ಪಗಾವಲು Read More »

ಕರಾವಳಿ, ಕರ್ನಾಟಕ

ಗುಂಡ್ಯ: ಕಾರುಗಳ ಮಧ್ಯೆ ಢಿಕ್ಕಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.13. ಮಾರುತಿ 800 ಹಾಗೂ ರಿಟ್ಝ್ ಕಾರಿನ ನಡುವೆ ಮುಖಾಮುಖಿ ಸಂಭವಿಸಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ನಡೆದಿದೆ. ಹಾಸನದಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಮಾರುತಿ 800 ಹಾಗೂ ಧರ್ಮಸ್ಥಳದಿಂದ ಸಕಲೇಶಪುರ ಕಡೆಗೆ ತೆರಳುತ್ತಿದ್ದ ಕಾರುಗಳ ನಡುವೆ ಗುಂಡ್ಯ – ಉದನೆ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರುಗಳೆರಡು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಂಡ್ಯ: ಕಾರುಗಳ ಮಧ್ಯೆ ಢಿಕ್ಕಿ Read More »

ಕರಾವಳಿ

ನಿಮ್ಮ ಮನೆಯಲ್ಲಿ ಗ್ಯಾಸ್ ಗೀಝರ್ ಇದ್ದರೆ ಈ ಸುದ್ದಿ ಓದಿ ನೋಡಿ ➤ ಬಂಟ್ವಾಳ: ಸ್ನಾನಕ್ಕೆ ತೆರಳಿದ ಯುವಕ ಉಸಿರುಗಟ್ಟಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು.13. ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಝರ್ ನಿಂದ ಹೊರಬಂದ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದೆ. ಈತ ಸ್ನಾನದ ಕೊಠಡಿಯ ಒಳಗಿದ್ದ ಗ್ಯಾಸ್ ಗೀಝರ್ ಅನ್ನು ಆನ್ ಮಾಡಿ ಸ್ನಾನ ಮಾಡುತ್ತಿದ್ದ ವೇಳೆ ಗೀಝರ್ ನಿಂದ ಗೀಝರ್ ನಿಂದ ಹೊರ

ನಿಮ್ಮ ಮನೆಯಲ್ಲಿ ಗ್ಯಾಸ್ ಗೀಝರ್ ಇದ್ದರೆ ಈ ಸುದ್ದಿ ಓದಿ ನೋಡಿ ➤ ಬಂಟ್ವಾಳ: ಸ್ನಾನಕ್ಕೆ ತೆರಳಿದ ಯುವಕ ಉಸಿರುಗಟ್ಟಿ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನಿಂತಿಕಲ್ಲು: ಈಝಿ ಹೋಮ್ ಟೆಕ್ಸ್ ಟೈಲ್ಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.12. ಇಲ್ಲಿಗೆ ಸಮೀಪದ ನಿಂತಿಕಲ್ಲು ಜಂಕ್ಷನ್ ನಲ್ಲಿರುವ ಧರ್ಮಶ್ರೀ ಆರ್ಕೇಡ್ ನಲ್ಲಿ ‘ಈಝಿ ಹೋಮ್ ಟೆಕ್ಸ್ ಟೈಲ್ಸ್’ ಸೋಮವಾರದಂದು ಶುಭಾರಂಭಗೊಂಡಿತು. ಬೆಳ್ಳಾರೆ ವಾಣಿಜ್ಯ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ, ಕಾಮಧೇನು ಗ್ರೂಪ್‌ನ ಮಾಲಕರಾದ ಮಾಧವ ಗೌಡ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಯೂರ ಗೋಲ್ಡ್ ಪ್ಯಾಲೇಸ್ ನ ದೀಕ್ಷಿತ್ ಗೌಡ, ಆದಿತ್ಯ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ನ ದಯಾನಂದ ಕೆ.ಎಸ್., ಕಾಮತ್ ಮೆಡಿಕಲ್ ನ ಸರಸ್ವತೀ ಕಾಮತ್, ಶಿವದುರ್ಗಾ

ನಿಂತಿಕಲ್ಲು: ಈಝಿ ಹೋಮ್ ಟೆಕ್ಸ್ ಟೈಲ್ಸ್ ಶುಭಾರಂಭ Read More »

ಕರಾವಳಿ

ಸುಬ್ರಹ್ಮಣ್ಯ: ‘ನ್ಯೂಸ್ ಕಡಬ’ದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ➤ ರಾಜ್ಯ ಹೆದ್ದಾರಿಯ ಅಪಾಯಕಾರಿ ಮರದ ದಿಮ್ಮಿ ತೆರವು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.12. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಹೆದ್ದಾರಿಯಲ್ಲಿ ಅಡ್ಡಲಾಗಿದ್ದ ಬೃಹತ್ ಗಾತ್ರದ ಮರದ ದಿಮ್ಮಿಯನ್ನು ನ್ಯೂಸ್ ಕಡಬದ ವರದಿ ಬಂದ ಬೆನ್ನಲ್ಲೇ ಇಂದು ತೆರವುಗೊಳಿಸಲಾಗಿದೆ. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಲ್ಕುಂದ ಸುಬ್ರಹ್ಮಣ್ಯ ಮಧ್ಯೆ ಅಪಾಯಕಾರಿ ತಿರುವಿನಲ್ಲಿ ಬೃಹತ್ ಗಾತ್ರದ ಮರವೊಂದು ತಿಂಗಳ ಹಿಂದೆ ರಸ್ತೆಗಡ್ಡವಾಗಿ ಬಿದ್ದಿತ್ತು. ಅದರ ಒಂದು ತುದಿಯನ್ನು ತುಂಡರಿಸಿ ಕೊಂಡೊಯ್ಯಲಾಗಿದ್ದು, ಇನ್ನೊಂದು ದಿಮ್ಮಿ ರಸ್ತೆಯಲ್ಲೇ ಬಾಕಿಯಾಗಿದೆ. ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು

ಸುಬ್ರಹ್ಮಣ್ಯ: ‘ನ್ಯೂಸ್ ಕಡಬ’ದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ➤ ರಾಜ್ಯ ಹೆದ್ದಾರಿಯ ಅಪಾಯಕಾರಿ ಮರದ ದಿಮ್ಮಿ ತೆರವು Read More »

ಕರಾವಳಿ

ಆರ್ಥೊಡಾಕ್ಸ್ ಸಭೆಯ ಪರಮಾಧ್ಯಕ್ಷ ಬೆಸಿಲಿಯೊಸ್ ಮಾರ್ಥೋಮಾ ಪಾಲ್ || ವಿಧಿವಶ

ಕೇರಳ, ಜು.12. ಆರ್ಥೊಡಾಕ್ಸ್ ಸಭೆಯ ಪರಮಾಧ್ಯಕ್ಷರಾದ ಸೈಂಟ್ ಬೆಸಿಲಿಯೊಸ್ ಮಾರ್ಥೋಮಾ ಪಾಲ್ II ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಇವರನ್ನು ಪರುಮಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೇರಳದ ಕೊಟ್ಟಾಯಂ ನಲ್ಲಿರುವ ಮಲಂಕರ ಆರ್ಥೊಡಾಕ್ಸ್ ಸಭೆಯ ಆಗುಹೋಗುಗಳನ್ನು ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದಲೇ ನಡೆಸುತ್ತಿದ್ದರು. ಮೃತರ ಗೌರವಾರ್ಥ ಮಲಂಕರ ಆರ್ಥೋಡಾಕ್ಸ್ ಸಭೆಯ ಎಲ್ಲಾ ದೇವಾಲಯಗಳಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಸಂತಾಪ ವ್ಯಕ್ತಪಡಿಸಲಾಗಿದೆ.      

ಆರ್ಥೊಡಾಕ್ಸ್ ಸಭೆಯ ಪರಮಾಧ್ಯಕ್ಷ ಬೆಸಿಲಿಯೊಸ್ ಮಾರ್ಥೋಮಾ ಪಾಲ್ || ವಿಧಿವಶ Read More »

ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ರಾಜ್ಯ ಹೆದ್ದಾರಿಯಲ್ಲೊಂದು ಅಪಾಯಕಾರಿ ಮರದ ದಿಮ್ಮಿ ➤ ತಿಂಗಳು ಕಳೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.12. ಬೃಹತ್ ಗಾತ್ರದ ಮರದ ದಿಮ್ಮಿಯೊಂದು ಹೆದ್ದಾರಿಗೆ ಬಿದ್ದು ತಿಂಗಳು ಕಳೆದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇನ್ನೂ ತೆರವು ಭಾಗ್ಯ ಕಂಡಿಲ್ಲ. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಲ್ಕುಂದ ಸುಬ್ರಹ್ಮಣ್ಯ ಮಧ್ಯೆ ಅಪಾಯಕಾರಿ ತಿರುವಿನಲ್ಲಿ ಬೃಹತ್ ಗಾತ್ರದ ಮರವೊಂದು ತಿಂಗಳ ಹಿಂದೆ ರಸ್ತೆಗಡ್ಡವಾಗಿ ಬಿದ್ದಿತ್ತು. ಅದರ ಒಂದು ತುದಿಯನ್ನು ತುಂಡರಿಸಿ ಕೊಂಡೊಯ್ಯಲಾಗಿದ್ದು, ಇನ್ನೊಂದು ದಿಮ್ಮಿ ರಸ್ತೆಯಲ್ಲೇ ಬಾಕಿಯಾಗಿದೆ. ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ

ಸುಬ್ರಹ್ಮಣ್ಯ: ರಾಜ್ಯ ಹೆದ್ದಾರಿಯಲ್ಲೊಂದು ಅಪಾಯಕಾರಿ ಮರದ ದಿಮ್ಮಿ ➤ ತಿಂಗಳು ಕಳೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು Read More »

ಕರಾವಳಿ

ಕಡಬ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ➤ ಪತ್ರಿಕಾ ವಿತರಕ ಬಾಲಕೃಷ್ಣ ರೈ ಅವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಜು.12. ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಸೋಮವಾರದಂದು ಕಡಬ ಪ್ರೆಸ್ ಕ್ಲಬ್ ನಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಕಡಬ ಠಾಣಾ ಉಪನಿರೀಕ್ಷಕ ರುಕ್ಮನಾಯ್ಕ್, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್.ದಿನೇಶ್ ಆಚಾರ್ಯ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ವಹಿಸಿದ್ದರು. ಈ ಸಂದರ್ಭದಲ್ಲಿ ಪತ್ರಿಕಾ ವಿತರಣಾ ಕ್ಷೇತ್ರದಲ್ಲಿನ ಸೇವೆಗಾಗಿ ಪತ್ರಿಕಾ ವಿತರಕ ಬಾಲಕೃಷ್ಣ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೇಸಿಐ

ಕಡಬ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ➤ ಪತ್ರಿಕಾ ವಿತರಕ ಬಾಲಕೃಷ್ಣ ರೈ ಅವರಿಗೆ ಸನ್ಮಾನ Read More »

ಕರಾವಳಿ, ಕರ್ನಾಟಕ
Scroll to Top