Swathi

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನೂಜಿಬಾಳ್ತಿಲದ ಪ್ರಜ್ಞಾ ಎನ್

 (ನ್ಯೂಸ್ ಕಡಬ) newskadaba.com  ಕಲ್ಲುಗುಡ್ಡೆ,  ನ.9  ಗುಡ್ಡಗಾಡು ಓಟದಲ್ಲಿ ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಎನ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಉಪನಿರ್ದೇಶಕರ ಕಛೇರಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಶಿವಮೊಗ್ಗ ಇದರ ಸಹಯೋಗದಲ್ಲಿ ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನೂಜಿಬಾಳ್ತಿಲ ಬೆಥನಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಜ್ಞಾ ಎನ್. 4 ಕಿ.ಮೀ. ಗುಡ್ಡಗಾಡು ಓಟದಲ್ಲಿ 4ನೇ […]

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನೂಜಿಬಾಳ್ತಿಲದ ಪ್ರಜ್ಞಾ ಎನ್ Read More »

ಕರಾವಳಿ

ಟ್ರಂಪ್ ರಾಜಕೀಯಕ್ಕಾಗಿ ಟ್ರಸ್ಟ್ ಹಣ ಬಳಕೆ ➤20 ಲಕ್ಷ ಡಾಲರ್ ದಂಡ ವಿಧಿಸಿದ ಕೋರ್ಟ್

 (ನ್ಯೂಸ್ ಕಡಬ) newskadaba.com  ವಾಷಿಂಗ್ಟನ್,  ನ.8  ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರವರು ಅಮೇರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕಾಗಿ ತಮ್ಮ ಚಾರಿಟೇಬಲ್ ಟ್ರಸ್ಟ್ ನ ಹಣಕಾಸನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ನ್ಯಾಯಾಲಯವು 20 ಲಕ್ಷ ಡಾಲರ್ ದಂಡವನ್ನು ವಿಧಿಸಿದೆ. ನ್ಯೂಯಾರ್ಕ್ ಅಟಾರ್ನಿ ಜನರಲ್ ಮಾಹಿತಿ ಪ್ರಕಾರ, ತಮ್ಮ ಚಾರಿಟೇಬಲ್ ಟ್ರಸ್ಟ್ ನ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ತಪ್ಪೊಪ್ಪಿಕೊಂಡಿರುವುದಾಗಿ ವಿವರಿಸಿದೆ.

ಟ್ರಂಪ್ ರಾಜಕೀಯಕ್ಕಾಗಿ ಟ್ರಸ್ಟ್ ಹಣ ಬಳಕೆ ➤20 ಲಕ್ಷ ಡಾಲರ್ ದಂಡ ವಿಧಿಸಿದ ಕೋರ್ಟ್ Read More »

ಅಂತರ್ರಾಷ್ಟ್ರೀಯ ನ್ಯೂಸ್

ವಿಶ್ವ ವಿಕಿರಣ ಶಾಸ್ತ್ರದಿನ – ನವೆಂಬರ್ 8

 (ನ್ಯೂಸ್ ಕಡಬ) newskadaba.com   ನ.8  ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ ದಿನ” ಎಂದು ಆಚರಿಸಿ ವಿಕರಣ ಶಾಸ್ತ್ರದಿಂದ ವೈದ್ಯಕೀಯ ರಂಗಕ್ಕೆ ಉಂಟಾಗುವ ಸಹಾಯಗಳನ್ನು ಸ್ಮರಿಸಲಾಗುತ್ತದೆ. ಈ ಆಚರಣೆ 2012 ನವೆಂಬರ್ 8 ರಂದು ಆರಂಭಿಸಲಾಯಿತು. ಸುಮಾರು 200 ರಾಷ್ಟ್ರಗಳಲ್ಲಿ ಈ ಆಚರಣೆ ಮಾಡಲಾಗುತ್ತಿದೆ. 1895ನೇ ನವೆಂಬರ್ 8ರಂದು ವಿಲಿಯನರ್ ಕೊನಾಡ್‍ರೊಂಟ್‍ಜೆನ್ ಎಂಬ ವಿಜ್ಞಾನಿ ಕ್ಷ-ಕಿರಣಗಳನ್ನು ಪತ್ತೆ ಹಚ್ಚಿದನು. ಕ್ಯಾಥೋಡ್ ಕಿರಣಗಳ ಬಗ್ಗೆ ಸಂಶೋಧನೆ ನಡೆಸುವಾಗ ಆಕಸ್ಮಿಕವಾಗಿ ಕ್ಷ-ಕಿರಣಗಳನ್ನು ಆತ ಪತ್ತೆ ಹಚ್ಚಿದ್ದ

ವಿಶ್ವ ವಿಕಿರಣ ಶಾಸ್ತ್ರದಿನ – ನವೆಂಬರ್ 8 Read More »

ವಿಶೇಷ ಲೇಖನಗಳು

ಅನುಮಾನಕ್ಕೀಡಾದ 7ನೇ ತರಗತಿ ಪಬ್ಲಿಕ್ ಪರೀಕ್ಷೆ

(ನ್ಯೂಸ್ ಕಡಬ) newskadaba.com   ಬೆಂಗಳೂರು, ನ.8   ಪಬ್ಲಿಕ್ ಪರೀಕ್ಷೆಯನ್ನು ಏಳನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವುದು ರಾಜ್ಯ ಸರಕಾರದ ಚಿಂತನೆಯಾಗಿದ್ದು, ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಕ್ಕೆ ತರುವುದು ಅನುಮಾನವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಸರಕಾರ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಬೇಕಾದ ಯಾವುದೇ ಸಿದ್ಧತೆಯನ್ನು ಇನ್ನೂ ಮಾಡಿಕೊಂಡಿಲ್ಲ. ಈ ಸಂಬಂಧ ಸರಕಾರದಿಂದ ಅಧಿಕೃತ ಆದೇಶ ಅಥವಾ ನಿರ್ದೇಶನವೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ತಲುಪಿಲ್ಲ .  ಪರೀಕ್ಷೆಗೆ ಕೇವಲ 4  ತಿಂಗಳಿದ್ದು ಈ ಹಂತದಲ್ಲಿ ಹೊಸ ಪದ್ಧತಿ

ಅನುಮಾನಕ್ಕೀಡಾದ 7ನೇ ತರಗತಿ ಪಬ್ಲಿಕ್ ಪರೀಕ್ಷೆ Read More »

ಕರ್ನಾಟಕ

ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com   ನೆಲ್ಯಾಡಿ, ನ.7    ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಜ್ಞಾನೋದಯದ ಸ್ಕೌಟ್ ಗೈಡ್ಸ್ ನ ವತಿಯಿಂದ ಸೋಮವಾರ ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ಯವರು ಹದಿಹರೆಯದ ಯುವಕ ಯುವತಿಯರು ರಸ್ತೆ ಕಾನೂನುಗಳನ್ನು ಉಲಂಘನೆ ಮಾಡುತ್ತಾರೆ. ಸುರಕ್ಷಿತ ಚಾಲನೆಯನ್ನು ನಿರ್ವಹಿಸಿದರೆ ಅಪಘಾತ ನಡೆಯುವುದಿಲ್ಲ. ಈ ಸುರಕ್ಷತೆಯ

ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಾಗಾರ Read More »

ಕರಾವಳಿ

ಒಂದನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟ ➤ಆನಂದ ಅಮೀನ್ ಬೆಂಗ್ರೆಗೆ ಚಿನ್ನ

(ನ್ಯೂಸ್ ಕಡಬ) newskadaba.com   ಮಂಗಳೂರು, ನ.7   ಮಾಸ್ಟರ್ಸ್ ಗೇಮ್ಸ್ ಸಂಘದ ಆಶ್ರಯದಲ್ಲಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಒಂದನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಆನಂದ ಅಮೀನ್ ಬೆಂಗ್ರೆ ಅವರು ಈಜು ವಿಭಾಗದಲ್ಲಿ ಎರಡು ಚಿನ್ನ ಪದಕ ಪಡೆದಿದ್ದಾರೆ. ಮಂಗಳೂರಿನಲ್ಲಿ ನವೆಂಬರ್ 4 ಮತ್ತು 5ರಂದು ಒಂದನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟ ನಡೆಯಿತು. ಆನಂದ್ ಅಮೀನ್ ಅವರು 50 ಮೀಟರ್ ಮತ್ತು 100 ಮೀಟರ್ ಬ್ರೆಸ್ಟ್

ಒಂದನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟ ➤ಆನಂದ ಅಮೀನ್ ಬೆಂಗ್ರೆಗೆ ಚಿನ್ನ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜೂನಿಯರ್ ಅಥ್ಲೇಟ್ ಮೀಟ್ ➤ಜ್ಞಾನೋದಯ ಬೆಥನಿಗೆ 1 ಚಿನ್ನ , 1 ಬೆಳ್ಳಿ ಮತ್ತು 2 ಕಂಚು

(ನ್ಯೂಸ್ ಕಡಬ) newskadaba.com  ನೆಲ್ಯಾಡಿ, ನ.7   ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜೂನಿಯರ್ ಅಥ್ಲೇಟ್ ಮೀಟ್ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಆದಿತ್ಯವಾರ ನಡೆದ ಕ್ರೀಡಾಕೂಟದಲ್ಲಿ ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಚಿನ್ನ ,ಬೆಳ್ಳಿ ಮತ್ತು ಕಂಚುಗಳನ್ನು ಪಡೆದುಕೊಂಡಿದ್ದಾರೆ. 14 ರ ವಯೋಮಾನದ ಬಾಲಕರ ವಿಭಾಗದಲ್ಲಿ 8ನೇ ತರಗತಿ ವಿದ್ಯಾರ್ಥಿ ಆದರ್ಶ್ ಶೆಟ್ಟಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕ, ಬಾಲಕಿಯರ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿ ರಕ್ಷಾ ಎತ್ತರ ಜಿಗಿತದಲ್ಲಿ ಕಂಚು ಮತ್ತು

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜೂನಿಯರ್ ಅಥ್ಲೇಟ್ ಮೀಟ್ ➤ಜ್ಞಾನೋದಯ ಬೆಥನಿಗೆ 1 ಚಿನ್ನ , 1 ಬೆಳ್ಳಿ ಮತ್ತು 2 ಕಂಚು Read More »

ಕರಾವಳಿ

ಪಾದಚಾರಿಗೆ ಬೈಕ್ ಡಿಕ್ಕಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.7   ಬೈಕೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಸವಾರನಿಗೂ, ಪಾದಚಾರಿಗೂ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ರಾಘವೇಂದ್ರ ಮಠ ಕ್ರಾಸ್ ಬಳಿ ಬುಧವಾರದಂದು ನಡೆಯಿತು. ಪಾದಚಾರಿ ಶೇಖರರವರಿಗೆ ತಲೆಗೆ ರಕ್ತ ಗಾಯಗೊಂಡಿರುವುದಲ್ಲದೇ, ಸವಾರ ಮಹಮ್ಮದ್ ದರ್ವೀಝ್ ರವರಿಗೆ ಎಡಕೈ, ಎಡಕಾಲು, ಎಡಕಣ್ಣಿನ ಬಳಿ ಗಾಯವಾಗಿರುತ್ತದೆ, ಗಾಯಾಳುಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಎಂದು ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ Read More »

ಕರಾವಳಿ

ಕಾರು ಮತ್ತು ಬೈಕ್ ನಡುವೆ ಡಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ.7    ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಬೊಳುವಾರು ಬೈಪಾಸ್ ಜಂಕ್ಷನ್ ಬಳಿಯ ಉದಯಗಿರಿ ಹೋಟೆಲ್ ನ ಎದುರು ಬುಧವಾರದಂದು ನಡೆದಿದೆ. ಶಿವಪ್ರಸಾದ್ ಭಟ್ ರವರಿಗೆ ಎಡಕಾಲಿಗೆ ಗಾಯವಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ ಎಂದು ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರು ಮತ್ತು ಬೈಕ್ ನಡುವೆ ಡಿಕ್ಕಿ Read More »

ಕರಾವಳಿ

ಎನ್.ಎಸ್.ಎಸ್. ವಾರ್ಷಿಕ ಶಿಬಿರ ಸಮಾರೋಪ

  (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.7    ಕಡ್ಯ ಕೊಣಾಜೆ ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಮಂಗಳವಾರದಂದು ನಡೆಯಿತು. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಅವರು ಸಮಾರೋಪ ಭಾಷಣ ಮಾಡಿದರು. ತಾ.ಪಂ. ಸದಸ್ಯೆ ಪಿ.ವೈ. ಕುಸುಮ ಮಾತನಾಡಿ, ಬೆವರು ಸುರಿಸಿ ದುಡಿಯುವ ಕ್ಷಣಗಳು ದುಡಿಮೆಯ ಬೆಲೆಯನ್ನು ಕಲಿಸುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ.

ಎನ್.ಎಸ್.ಎಸ್. ವಾರ್ಷಿಕ ಶಿಬಿರ ಸಮಾರೋಪ Read More »

ಕರಾವಳಿ
Scroll to Top