(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.7 ಬೈಕೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಸವಾರನಿಗೂ, ಪಾದಚಾರಿಗೂ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ರಾಘವೇಂದ್ರ ಮಠ ಕ್ರಾಸ್ ಬಳಿ ಬುಧವಾರದಂದು ನಡೆಯಿತು.

ಪಾದಚಾರಿ ಶೇಖರರವರಿಗೆ ತಲೆಗೆ ರಕ್ತ ಗಾಯಗೊಂಡಿರುವುದಲ್ಲದೇ, ಸವಾರ ಮಹಮ್ಮದ್ ದರ್ವೀಝ್ ರವರಿಗೆ ಎಡಕೈ, ಎಡಕಾಲು, ಎಡಕಣ್ಣಿನ ಬಳಿ ಗಾಯವಾಗಿರುತ್ತದೆ, ಗಾಯಾಳುಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಎಂದು ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










