Keerthana

ಉಡುಪಿ: ಮೇ 18ರಿಂದ ಸೆಲೂನ್ ಆರಂಭ

ಉಡುಪಿ, ಮೇ 14: ಜಿಲ್ಲೆಯಾದ್ಯಂತ ಮೇ 18ರಿಂದ ಸೆಲೂನುಗಳನ್ನು ಪುನರಾರಂಭಿಸಲು ಷರತ್ತು ಬದ್ದ ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ 13ರಂದು ಜಿಲ್ಲಾ ಸವಿತಾ ಸಮಾಜದ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸದ್ಯದ ಪರಿಸ್ಥಿತಿಗಳನ್ನು ವಿವರಿಸಿದೆ. ಕೊರೋನ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದ್ದಾಗ ಲಾಕ್‌ಡೌನ್ ಮಾಡುವ ಮೂರು ದಿನಗಳ ಹಿಂದೆಯೇ ಕ್ಷೌರಿಕ ಬಂಧುಗಳು ಅಂಗಡಿಗಳನ್ನು ಮುಚ್ಚಿ ಬೆಂಬಲವನ್ನು […]

ಉಡುಪಿ: ಮೇ 18ರಿಂದ ಸೆಲೂನ್ ಆರಂಭ Read More »

ಕರಾವಳಿ

ಮೂಡುಬಿದಿರೆ: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಮೂಡುಬಿದಿರೆ, ಮೇ 14: ತಾಲೂಕಿನ ತೋಡಾರಿನಲ್ಲಿ ನಿರ್ಮಾಣ ಹಂತದ ಕಟ್ಟಡದ 5ನೇ ಮಹಡಿಯಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ತೋಡಾರು ಪಡೀಲ್ ಬಾಕಿಯಾರು ನಿವಾಸಿ ವಿನಯ್ ಪೂಜಾರಿ (32) ಎಂದು ಗುರುತಿಸಲಾಗಿದೆ. ಈತ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ವೇಳೆ, 5ನೇ ಮಹಡಿಯಿಂದ ಆಯ ತಪ್ಪಿಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮೂಡುಬಿದಿರೆ: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಇಂದು 34 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ

ಇಬ್ಬರು ಮೃತ್ಯು ಬೆಂಗಳೂರು, ಮೇ 13: ರಾಜ್ಯದಲ್ಲಿ ಇಂದು ಹೊಸದಾಗಿ 34 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 959ಕ್ಕೆ ಏರಿಕಯಾಗಿದ್ದು, ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬೀದರ್ 12, ಕಲಬುರಗಿ 8, ಹಾಸನ 4ದಾವಣೆಗೆರೆ 2, ವಿಜಯಪುರ 2, ಉತ್ತರ ಕನ್ನಡ 2, ಬೆಂಗಳೂರು 2, ಹಾಗೂ ದಕ್ಷಿಣ ಕನ್ನಡ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಕಲಬುರಗಿಯ 60 ವರ್ಷದ ಪುರಷ ಹಾಗೂ

ರಾಜ್ಯದಲ್ಲಿ ಇಂದು 34 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ Read More »

ಕರ್ನಾಟಕ

ಸಣ್ಣ ಕೈಗಾರಿಗಳಿಗೆ 3 ಲಕ್ಷ ಕೋಟಿ ರೂ. ಸಾಲ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಮೇ 13: 25 ರಿಂದ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ ಹಾಗೂ 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೊರೋನ ವೈರಸ್ ಲಾಕ್‌ಡೌನ್ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ನಿನ್ನೆ ಪ್ರಧಾನಿ ಮೋದಿ ಅವರು

ಸಣ್ಣ ಕೈಗಾರಿಗಳಿಗೆ 3 ಲಕ್ಷ ಕೋಟಿ ರೂ. ಸಾಲ: ನಿರ್ಮಲಾ ಸೀತಾರಾಮನ್ Read More »

ರಾಷ್ಟ್ರೀಯ ನ್ಯೂಸ್

ಅಧಿಕಾರಿಗಳ, ರಾಜಕೀಯ ವ್ಯಕ್ತಿಗಳ ಹೆಸರೇಳಿ ಹಣ ವಸೂಲಿ: ವಾಟ್ಸ್‌ಆ್ಯಪ್ ಅಡ್ಮಿನ್ ಬಂಧನ

ಮಂಗಳೂರು, ಮೇ 13: ಪೊಲೀಸ್ ಅಧಿಕಾರಿಗಳು, ಮಾಧ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಹೆಸರನ್ನು ಹೇಳಿ ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಕನಕ ವಾಟ್ಸ್‌ಆ್ಯಪ್ ಗ್ರೂಪ್‌ನ ಅಡ್ಮಿನ್‌ನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳ್ತಂಗಡಿಯ ಪುತ್ತಿಲ ಗ್ರಾಮದ ಕುಂಡಡ್ಕ ಮನೆ ನಿವಾಸಿ ಅಬ್ದುರ್ರಶೀದ್ ಯಾನೆ ರಶೀದ್ ಕುಂಡಡ್ಕ (39) ಎಂದು ಗುರುತಿಸಲಾಗಿದೆ. ಈತ ಕುಖ್ಯಾತ ರೌಡಿ ಹಾಗೂ ಜ್ಯುವೆಲ್ಲರಿ ದರೋಡೆ ಪ್ರಕರಣವೊಂದರಲ್ಲಿನ ಪ್ರಮುಖ ಆರೋಪಿ ಮುತ್ತಾಸಿಮ್ ಯಾನೆ ತಸ್ಲಿಂ ಎಂಬಾತನ ಕೊಲೆ ಪ್ರಕರಣದಲ್ಲಿರುವ ವ್ಯಕ್ತಿಯೊಬ್ಬನ ಹೆಸರನ್ನು

ಅಧಿಕಾರಿಗಳ, ರಾಜಕೀಯ ವ್ಯಕ್ತಿಗಳ ಹೆಸರೇಳಿ ಹಣ ವಸೂಲಿ: ವಾಟ್ಸ್‌ಆ್ಯಪ್ ಅಡ್ಮಿನ್ ಬಂಧನ Read More »

ಕರಾವಳಿ

ಜೂನ್‌ವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವಂತಿಲ್ಲ: ಸಚಿವ ಕೋಟ ಸೂಚನೆ

ಮಂಗಳೂರು, ಮೇ 12: ದ.ಕ. ಜಿಲ್ಲೆಯಲ್ಲಿ ವಿದ್ಯುತ್ ಬಿಲ್‌ಗಳ ಬಗ್ಗೆ ಜನರು ಹಲವು ದೂರುಗಳನ್ನು ನೀಡಿರುವುದು ಸರಕಾರದ ಗಮನಕ್ಕೆ ಬಂದಿದೆ. ಮನೆ ಮತ್ತು ಸಣ್ಣ ಉದ್ಯಮಕ್ಕೆ ಕಡಿಮೆ ಸರಾಸರಿ ಇರುವ ತಿಂಗಳ ಬಿಲ್ ಆಧಾರದಲ್ಲಿ ಬಿಲ್ ನೀಡಬೇಕು. ಜೂನ್ ತಿಂಗಳಿನವರೆಗೂ ಕಡ್ಡಾಯವಾಗಿ ಬಿಲ್ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೂನ್‌ವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವಂತಿಲ್ಲ: ಸಚಿವ ಕೋಟ ಸೂಚನೆ Read More »

ಕರಾವಳಿ

ರಾಜ್ಯದಲ್ಲಿ ಇಂದು ಒಂದೇ ದಿನ 63 ಮಂದಿ ಕೊರೋನ ಪಾಸಿಟಿವ್

ಇದೇ ಮೊದಲ ಬಾರಿ ದಾಖಲೆಯ ಹೆಚ್ಚು ಕೇಸು ಪತ್ತೆ ಬೆಂಗಳೂರು, ಮೇ 12: ರಾಜ್ಯದಲ್ಲಿ ಇಂದು ಹೊಸದಾಗಿ ದಾಖಲೆಯ 63 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬಾಗಲಕೋಟೆಯಲ್ಲಿ 15, ದಾವಣಗೆರೆಯಲ್ಲಿ 12, ಕೋಲಾರ 5, ಗದಗ 3, ಧಾರವಾಡ 9, ಬೀದರ್ 2, ದಕ್ಷಿಣ ಕನ್ನಡ 2 ಹಾಸನ 5, ಬೆಂಗಳೂರು 4, ಚಿಕ್ಕಬಳ್ಳಾಪುರ, ಮಂಡ್ಯ, ಬಳ್ಳಾರಿ ಹಾಗೂ

ರಾಜ್ಯದಲ್ಲಿ ಇಂದು ಒಂದೇ ದಿನ 63 ಮಂದಿ ಕೊರೋನ ಪಾಸಿಟಿವ್ Read More »

ಕರ್ನಾಟಕ

ನಾಳೆಯಿಂದ ಉಡುಪಿಯಲ್ಲಿ ಬಸ್ ಸಂಚಾರ ಆರಂಭ: ಡಿಸಿ ಜಗದೀಶ್

ಉಡುಪಿ, ಮೇ 12: ಜನಸಾಮಾನ್ಯರ ಬೇಡಿಕೆಯಂತೆ ಮೇ 13ರಂದು ಬೆಳಗ್ಗೆಯಿಂದ ಉಡುಪಿ ಜಿಲ್ಲೆಯೊಳಗೆ ಒಂದಷ್ಟು ಖಾಸಗಿ ಹಾಗೂ ಕೆ ಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಜನಸಾಮಾನ್ಯರ ಓಡಾಟದ ಅನುಕೂಲಕ್ಕಾಗಿ ಜಿಲ್ಲಾಡಳಿತ ಬಸ್ ಓಡಾಟಕ್ಕೆ ಅನುಮತಿ ನೀಡಿದ್ದು, 50 ಶೇಕಡಾಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಯಾವುದೇ ಬಸ್‌ಗಳನ್ನು ತುಂಬುವಂತಿಲ್ಲ. ಒಂದು ವೇಳೆ ಇದನ್ನು ಪ್ರಯಾಣದ ವೇಳೆ ಸಂಬಂಧಿಸಿದ ಬಸ್ ಈ ನಿಯಮ ಪಾಲಿಸದಿರುವುದು ಕಂಡುಬಂದರೆ ಹಾಗೂ ಹೆಚ್ಚಿನ ಪ್ರಯಾಣಕರನ್ನು ಸಾಗಾಟ

ನಾಳೆಯಿಂದ ಉಡುಪಿಯಲ್ಲಿ ಬಸ್ ಸಂಚಾರ ಆರಂಭ: ಡಿಸಿ ಜಗದೀಶ್ Read More »

ಕರಾವಳಿ

ರಾಜ್ಯದಲ್ಲಿ ಇಂದು 14 ಮಂದಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ

ಬೆಂಗಳೂರು, ಮೇ 11: ರಾಜ್ಯದಲ್ಲಿ ಇಂದು ಹೊಸದಾಗಿ 14 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ ಆಗಿದೆ. ಈ ಪೈಕಿ 31 ರೋಗಿಗಳು ಮೃತಪಟ್ಟಿದ್ದು, 426 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ದಾವಣಗೆರೆಯಲ್ಲಿ 3, ಕಲಬುರಗಿಯಲ್ಲಿ 1, ಬೀದರ್‌ನಲ್ಲಿ 2, ಬೆಂಗಳೂರಿನಲ್ಲಿ 2, ಮಂಡ್ಯ, ಹಾಸನ, ಹಾವೇರಿ, ಬಾಗಲಕೋಟೆ, ಬದಾಮಿ ಹಾಗೂ ವಿಜಯಪುರದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತ ಗರ್ಭಿಣಿ

ರಾಜ್ಯದಲ್ಲಿ ಇಂದು 14 ಮಂದಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ Read More »

ಕರ್ನಾಟಕ

ದ.ಕ., ಉಡುಪಿ ಉದ್ಯೋಗಸ್ಥರಿಗೆ ಇನ್ನೂ ಮುಂದೆ ಬೇಕಿಲ್ಲ ಅಂತರ್ ಜಿಲ್ಲಾ ಪಾಸ್

ಮಂಗಳೂರು, ಮೇ 11: ಕೊರೋನ – ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವಿಭಜಿತ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಮಧ್ಯೆ ಜನ ಸಂಚಾರಕ್ಕೆ ಇದ್ದ ನಿರ್ಬಂಧವನ್ನು ರಾಜ್ಯ ಸರಕಾರ ಕೊಂಚ ಸಡಿಲಿಕೆ ಮಾಡಿದ್ದು, ಉಭಯ ಜಿಲ್ಲೆಗಳ ಉದ್ಯೋಗಸ್ಥರು ಇನ್ನು ಮುಂದೆ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಯಾವುದೇ ಅಂತರ್ ಜಿಲ್ಲಾ ಪಾಸ್ ವ್ಯವಸ್ಥೆ ಇಲ್ಲದೆ ಓಡಾಡಬಹುದಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದ್ದು ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನು ಒಂದೇ ಘಟಕವಾಗಿ ಪರಿಗಣಿಸಲು

ದ.ಕ., ಉಡುಪಿ ಉದ್ಯೋಗಸ್ಥರಿಗೆ ಇನ್ನೂ ಮುಂದೆ ಬೇಕಿಲ್ಲ ಅಂತರ್ ಜಿಲ್ಲಾ ಪಾಸ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top