Keerthana

ಉಡುಪಿ: ಯುವ ಉದ್ಯಮಿ ಆತ್ಮಹತ್ಯೆ

ಉಡುಪಿ, ಡಿ.13: ಯುವ ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ನಡೆದಿದೆ. ಆತ್ಯಹತ್ಯೆ ಮಾಡಿಕೊಂಡವರನ್ನು ಬೀಡಿನಗುಡ್ಡೆಯ ಹಂಸರಾಜ್ ನಾಯಕ್(35) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಪೈಂಟ್ ಫ್ಯಾಕ್ಟರಿಯ ಪಾಲುದಾರರಾಗಿದ್ದು, ಇದರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಯುವ ಉದ್ಯಮಿ ಆತ್ಮಹತ್ಯೆ Read More »

ಕರಾವಳಿ

ಮಂಗಳೂರು: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13: ರೈಲು ಢಿಕ್ಕಿ ಹೊಡೆದು, ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತೊಕ್ಕೊಟ್ಟು ಕಾಪಿಕಾಡ್ ನಲ್ಲಿ ನಡೆದಿದೆ.   ಮೃತರನ್ನು  ಕಾಪಿಕಾಡು ನಿವಾಸಿ ರತನ್ ಕುಮಾರ್ (40) ಎಂದು ಗುರುತಿಸಲಾಗಿದೆ. ಅವರು ನಗರದಲ್ಲಿ 42 ನಂಬರ್ ನ ಬಸ್ಸಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು  ಎಂದು ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು Read More »

ಕರಾವಳಿ

ದಿಲ್ಲಿಯಲ್ಲಿ ಭಾರೀ ಮಳೆ: ಸುಧಾರಿಸಿದ ವಾತಾವರಣ

ಹೊಸದಿಲ್ಲಿ, ಡಿ.13: ಸತತ ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಆಲಿಕಲ್ಲು ಸಹಿತ ಮಳೆಯಾಗಿದೆ. ದಿಲ್ಲಿ, ನೋಯ್ಡಾ, ಗಾಝಿಯಾಬಾದ್, ಗುರುಗ್ರಾಮ್ ಗಳಲ್ಲಿ ಗರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಇದರಿಂದಾಗಿ ಶುಕ್ರವಾರ ಬೆಳಗ್ಗೆ ವಾಯು ಗುಣಮಟ್ಟ ಸ್ವಲ್ಪ ಚೇತರಿಕೆಯಾಗಿದೆ. ಕಳೆದ ಅಕ್ಟೋಬರ್ ನಿಂದ ರಾಷ್ಟ್ರ ರಾಜಧಾನಿಯ ಜನತೆ ವಾಯುಮಾಲಿನ್ಯದಿಂದ ಬಳಲುತ್ತಿದ್ದು, ಮುಂದೆ ಉತ್ತಮ ನಿರೀಕ್ಷೆಯಲ್ಲಿದ್ದಾರೆ

ದಿಲ್ಲಿಯಲ್ಲಿ ಭಾರೀ ಮಳೆ: ಸುಧಾರಿಸಿದ ವಾತಾವರಣ Read More »

ರಾಷ್ಟ್ರೀಯ ನ್ಯೂಸ್

ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ 

ಹೊಸದಿಲ್ಲಿ, ಡಿ.13: ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅಂಕಿತ  ನೀಡಿದ್ದು, ಅದು ಕಾಯ್ದೆಯಾಗಿ ಜಾರಿಗೆ ಬರಲಿದೆ. ಸರ್ಕಾರದ ಅಧಿಕೃತ ಗೆಜೆಟ್ ನಲ್ಲಿ ಪ್ರಕಟವಾಗುವ ಮೂಲಕ ಕಾಯ್ದೆ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧಿಕೃತ ಅಧಿಸೂಚನೆ ತಿಳಿಸಿದೆ. ಈ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳಿಂದ ಧಾರ್ಮಿಕ ಕಿರುಕುಳ ಅನುಭವಿಸಿ ಅಲ್ಲಿ ಬದುಕಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಬಯಸಿ ಡಿಸೆಂಬರ್ 31, 2014ರವರೆಗೆ ಬಂದ ಹಿಂದೂ, ಸಿಖ್, ಬೌದ್ಧರು, ಜೈನರು, ಪಾರ್ಸಿಗಳು

ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ  Read More »

ರಾಷ್ಟ್ರೀಯ ನ್ಯೂಸ್

ಇರಾ ಗ್ರಾಪಂ ಅಧ್ಯಕ್ಷನ ಹತ್ಯೆಗೆ ಯತ್ನ: ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ,  ಡಿ.13: ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ರವರ ಮೇಲೆ ನಡೆದ ಹತ್ಯೆ ಯತ್ನಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು  ಕುಕ್ಕಾಜೆ ಗ್ರಾಮದ ನಿವಾಸಿಗಳಾದ ಬಶೀರ್  (27), ಕಬೀರ್ (23) ಹಾಗೂ ತನ್ವೀರ್ (23) ಎಂದು ಗುರುತಿಸಲಾಗಿದೆ. ರಝಾಕ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ, ಮಂಚಿ ಗ್ರಾಮದ ಮಂಚಿ ಕಟ್ಟೆಯಲ್ಲಿರುವ ಕ್ಲಿನಿಕ್’ವೊಂದಕ್ಕೆ ನವೆಂಬರ್ 30ರ ಶನಿವಾರ ರಾತ್ರಿ ತೆರಳಿದ್ದು ಈ ವೇಳೆ ಬೈಕ್‌ ನಲ್ಲಿ ಬಂದ ತಂಡ ಏಕಾಏಕಿ ರಝಾಕ್

ಇರಾ ಗ್ರಾಪಂ ಅಧ್ಯಕ್ಷನ ಹತ್ಯೆಗೆ ಯತ್ನ: ಮೂವರ ಬಂಧನ Read More »

ಕರಾವಳಿ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನಾಕಾರರಿಂದ ಕೇಂದ್ರ ಸಚಿವರ ಮನೆ ಮೇಲೆ ದಾಳಿ

 ಅಸ್ಸಾಂ, ಡಿ.12: ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ತಾಳಿದ್ದು, ಅಸ್ಸಾಂನಲ್ಲಿ ಪ್ರತಿಭಟನಾಕಾರರು ಕೇಂದ್ರ ಸಚಿವ ರಾಮೇಶ್ವರ್ ತೇಲಿ  ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಅಸ್ಸಾಂ ದಿಬ್ರುಗಢ್ ನ ದುಲಿಯಾಜನ್ ಪ್ರದೇಶದಲ್ಲಿರುವ ಸಂಸದ ಮತ್ತು ಕೇಂದ್ರ ಆಹಾರ ಸಂಸ್ಕರಣಾ ರಾಜ್ಯ ಸಚಿವರಾದ ರಾಮೇಶ್ವರ್ ತೇಲಿ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ್ದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಮನೆ ಅವರಣದಲ್ಲಿ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಅದೃಷ್ಟವಶಾತ್

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನಾಕಾರರಿಂದ ಕೇಂದ್ರ ಸಚಿವರ ಮನೆ ಮೇಲೆ ದಾಳಿ Read More »

ರಾಷ್ಟ್ರೀಯ ನ್ಯೂಸ್

ನಿಮ್ಮ ಹಕ್ಕನ್ನೂ ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಅಸ್ಸಾಂ ಜನತೆಗೆ ಮೋದಿ ಭರವಸೆ

ಹೊಸದಿಲ್ಲಿ, ಡಿ.12: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿರುವ ಅಸ್ಸಾಂ ಜನರಲ್ಲಿ ಪ್ರತಿಭಟನೆ ಕೈಬಿಡುವಂತೆ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇದೇ ಸಂದರ್ಭ ಅಸ್ಸಾಂ ಜನರ ಅಧಿಕಾರ, ಹಕ್ಕನ್ನೂ ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಸ್ಸಾಂ ಜನರ ಸಂಸ್ಕೃತಿ, ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು, ಮತ್ತೊಂದೆಡೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮಸೂದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದೆ. ಇಂದು

ನಿಮ್ಮ ಹಕ್ಕನ್ನೂ ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಅಸ್ಸಾಂ ಜನತೆಗೆ ಮೋದಿ ಭರವಸೆ Read More »

ರಾಷ್ಟ್ರೀಯ ನ್ಯೂಸ್

ಜಾರ್ಖಂಡ್ ವಿಧಾನಸಭೆ ಚುನಾವಣೆ: ಮೂರನೇ ಹಂತದ ಮತದಾನ ಆರಂಭ

(ನ್ಯೂಸ್ ಕಡಬ) newskadaba.com ರಾಂಚಿ, ಡಿ.12: ಜಾರ್ಖಂಡ್ ವಿಧಾನಸಭೆಗೆ ಮೂರನೇ ಹಂತದ ಮತದಾನ ಆರಂಭವಾಗಿದ್ದು, ಜಾರ್ಖಂಡ್ ನ ಒಟ್ಟು 17 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೂರನೇ ಹಂತದಲ್ಲಿ ಜಾರ್ಖಂಡ್ ನ ಕೋಡರ್ಮಾ, ಬರ್ಕಾಥಾ, ಬಾರ್ಹಿ, ಬಾರ್ಕಗಾಂವ್, ರಾಮ್‌ಘಡ್, ಮಾಂಡು, ಹಜಾರಿಬಾಗ್, ಸಿಮರಿಯಾ (ಎಸ್‌ಸಿ), ಧನ್ವಾರ್, ಗೋಮಿಯಾ, ಬೆರ್ಮೊ, ಇಚಗ, ಸಿಲ್ಲಿ, ಖಿಜ್ರಿ, ರಾಂಚಿ, ಹತಿಯಾ ಮತ್ತು ಕಾಂಕೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಜಾರ್ಖಂಡ್ ವಿಧಾನಸಭೆ ಚುನಾವಣೆ: ಮೂರನೇ ಹಂತದ ಮತದಾನ ಆರಂಭ Read More »

ರಾಷ್ಟ್ರೀಯ ನ್ಯೂಸ್

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಹಿರಿಯ ಐಪಿಎಸ್ ಅಧಿಕಾರಿ ರಹ್ಮಾನ್ ರಾಜೀನಾಮೆ

ಹೊಸದಿಲ್ಲಿ, ಡಿ.12:  ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವುದನ್ನು ವಿರೋಧಿಸಿ   ಮಹಾರಾಷ್ಟ್ರದ ಹಿರಿಯ ಐಪಿಎಸ್ ಅಧಿಕಾರಿ ಅಬ್ದುರ್ರಹ್ಮಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ವರದಿಯಾಗಿದೆ. ರಾಜ್ಯಸಭೆಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ರಹ್ಮಾನ್ ತನ್ನ ರಾಜೀನಾಮೆಯನ್ನು ಘೋಷಿಸಿದ್ದರು. “ಇದೊಂದು ಮತೀಯವಾದದ್ದು ಹಾಗೂ ಸಂವಿಧಾನದ ಮೂಲಭೂತ ಆಶಯಕ್ಕೆ ವಿರುದ್ಧವಾಗಿದೆ ಎಂದು ರಹಮಾನ್ ಅಭಿಪ್ರಾಯವ್ಯಕ್ತಪಡಿಸಿದ್ದು, ಗುರುವಾರದಿಂದ ತಾನು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಹಿರಿಯ ಐಪಿಎಸ್ ಅಧಿಕಾರಿ ರಹ್ಮಾನ್ ರಾಜೀನಾಮೆ Read More »

ರಾಷ್ಟ್ರೀಯ ನ್ಯೂಸ್

ಕುಂದಾಪುರ: ಕೊಡಿ ಹಬ್ಬಕ್ಕೆ ಬಂದ ಯುವಕ ಸಮುದ್ರಪಾಲು

ಕುಂದಾಪುರ, ಡಿ. 12: ಕೋಟೇಶ್ವರ ಕೊಡಿ ಹಬ್ಬಕ್ಕೆಂದು ಬಂದಿದ್ದ ನಾಲ್ಕು ಜನ ಸ್ನೇಹಿತರು ಸ್ನಾನಕ್ಕೆಂದು ಈಜಲು ಹೋದ ಸಂದರ್ಭದಲ್ಲಿ ಓರ್ವ ಸಮುದ್ರ ಪಾಲಾದ ಘಟನೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಗಂಗೆಬೈಲು ರಾಮಮಂದಿರದ ಸಮೀಪ ನಡೆದಿದೆ. ಸಮುದ್ರಪಾಲಾದ ಯುವಕನನ್ನು ತುಮಕೂರಿನ ಅಶೋಕ ನಗರದ ನಿವಾಸಿ ಅನಂತಕುಮಾರ್ ಎಂಬುವರ ಪುತ್ರ ನಿರಂಜನ್(17) ಎಂದು ಗುರುತಿಸಲಾಗಿದೆ. ಕೊಡೇರಿ ನಿವಾಸಿ ಅಪ್ರಮೇಯ ಎಂಬಾತ ತುಮಕೂರಿನಲ್ಲಿ ಬಿಕಾಂ ಓದುತ್ತಿದ್ದ ಎನ್ನಲಾಗಿದ್ದು, ಈತನ ಸಹಪಾಠಿಗಳಾದ ನಿರಂಜನ್, ಫಣಿದತ್ತ, ಸುದೀಪ್, ದೀಕ್ಷಿತ್ ಎಂಬುವವರು ಗುರುವಾರ ಕೋಟೇಶ್ವರ ಕೊಡಿ

ಕುಂದಾಪುರ: ಕೊಡಿ ಹಬ್ಬಕ್ಕೆ ಬಂದ ಯುವಕ ಸಮುದ್ರಪಾಲು Read More »

ಕರಾವಳಿ
Scroll to Top