Keerthana

ಗ್ರಾಪಂ ಚುನಾವಣೆ ದಿನಾಂಕ ಪ್ರಕಟ

ಬೆಂಗಳೂರು, ಜ.11: ರಾಜ್ಯದ ಕೆಲವು ಗ್ರಾಮ ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಎಪ್ರಿಲ್ 5ರಂದು ಮೊದಲ ಹಂತದ ಮತದಾನ ಮತ್ತು ಎಪ್ರಿಲ್ 9ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಕರ್ನಾಟಕ ಮತ್ತು […]

ಗ್ರಾಪಂ ಚುನಾವಣೆ ದಿನಾಂಕ ಪ್ರಕಟ Read More »

ಕರ್ನಾಟಕ

ಲಾರಿ-ಬಸ್ ಢಿಕ್ಕಿ: 20 ಕ್ಕೂ ಅಧಿಕ ಮಂದಿ ಸಜೀವ ದಹನ

ಲಕ್ನೋ, ಜ.11: ಲಾರಿ ಮತ್ತು ಬಸ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಹೊತ್ತಿ ಉರಿದಿದ್ದು,  20ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಘಟನೆ  ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ 9:30 ರ ವೇಳೆಗೆ ಈ ದುರ್ಘಟನೆ ನಡೆದಿದ್ದು ಬಸ್ ನಲ್ಲಿ ಸುಮಾರು 46 ಪ್ರಯಾಣಿಕರು ಇದ್ದರು, ಘಟನೆ ನಡೆದ ವೇಳೆ 21 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಜೈಪುರಕ್ಕೆ ತೆರಳುತ್ತಿದ್ದ ಟ್ರಕ್ ಮತ್ತು ಖಾಸಗಿ ಸ್ಲೀಪರ್

ಲಾರಿ-ಬಸ್ ಢಿಕ್ಕಿ: 20 ಕ್ಕೂ ಅಧಿಕ ಮಂದಿ ಸಜೀವ ದಹನ Read More »

ರಾಷ್ಟ್ರೀಯ ನ್ಯೂಸ್

ಒಮನ್ ಸುಲ್ತಾನ ಖಬೂಸ್ ಬಿನ್ ಸೈಯದ್ ನಿಧನ

ಮಸ್ಕತ್, ಜ.11: ಅರಬ್ ದೇಶದ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಒಮನ್‌ನ ಸುಲ್ತಾನ್, ಖಬೂಸ್ ಬಿನ್ ಸೈಯದ್(79) ನಿಧನರಾಗಿದ್ದಾರೆ. ಅರಬ್‌ ಜಗತ್ತಿನ ಸುದೀರ್ಘ ಅವಧಿ ಆಡಳಿತ ನಡೆಸಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅವರ ನಿಧನಕ್ಕೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ  ಎಂದು ಪ್ರಕಟನೆ ತಿಳಿಸಿದೆ. ಬ್ರಿಟೀಷರ ನೆರವಿನೊಂದಿಗೆ 1970 ರಲ್ಲಿ ರಕ್ತರಹಿತ ಕ್ರಾಂತಿಯಲ್ಲಿ ತನ್ನ ತಂದೆಯನ್ನು ಪದಚ್ಯುತಗೊಳಿಸಿ ಅವರು ಅಧಿಕಾರಕ್ಕೆ ಏರಿದರು. ತೈಲ ಸಂಪತ್ತನ್ನು ಬಳಸಿಕೊಂಡು ಒಮನ್‌ ದೇಶವನ್ನು ಅಭಿವೃದ್ಧಿಯ

ಒಮನ್ ಸುಲ್ತಾನ ಖಬೂಸ್ ಬಿನ್ ಸೈಯದ್ ನಿಧನ Read More »

ಅಂತರ್ರಾಷ್ಟ್ರೀಯ ನ್ಯೂಸ್

ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ನಿಧನ

ಬೆಂಗಳೂರು, ಜ.11: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಇಂದು ಮುಂಜಾನೆ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರದಲ್ಲಿ  ಸೇವೆ ಸಲ್ಲಿಸಿರುವ ಚಿದಾನಂದ ಮೂರ್ತಿಯವರಿಗೆ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಚಿ.ಮೂ ಪ್ರಮುಖರು. ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಚಿದಾನಂದಮೂರ್ತಿ ನಿರಂತರ ಹೋರಾಟ ಮಾಡಿದ್ದರು. ಸಂಶೋಧಕರಾಗಿ

ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ನಿಧನ Read More »

ಕರ್ನಾಟಕ

ಪೌರತ್ವ ಕಾಯ್ದೆ ಜಾರಿ: ಅಧಿಸೂಚನೆ ಹೊರಡಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ: ದೇಶಾದ್ಯಂತ ಭಾರಿ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಜ.10ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಈ ಸಂಬಂಧ ಗೆಜೆಟ್‌ ಅಧಿಸೂಚನೆ ಹೊರಬಿದ್ದಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಲ್ಲಿ ಧಾರ್ಮಿಕ ಶೋಷಣೆಗೆ ಒಳಗಾದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿಗೃಹ ಸಚಿವಾಲಯ ತಿಳಿಸಿದೆ. 2014ರ ಡಿ.31ಕ್ಕೆ ಮುನ್ನ ಭಾರತಕ್ಕೆ ಬಂದ ಮುಸ್ಲಿಮೇತರರ ವಲಸಿಗರಿಗೆ ಈ ಕಾಯಿದೆ ಅಡಿ ಪೌರತ್ವ ಲಭ್ಯವಾಗಲಿದೆ. ಆದರೆ, ಕಾಯಿದೆಗೆ ಸಂಬಂಧಿಸಿದ ನೀತಿ-ನಿಯಮಗಳೇನು ಎಂಬುದನ್ನು ಸರಕಾರ ಇನ್ನೂ ಬಯಲುಮಾಡಿಲ್ಲ. ಪೌರತ್ವ ತಿದ್ದುಪಡಿ

ಪೌರತ್ವ ಕಾಯ್ದೆ ಜಾರಿ: ಅಧಿಸೂಚನೆ ಹೊರಡಿಸಿದ ಕೇಂದ್ರ ಸರಕಾರ Read More »

ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ಅರಣ್ಯ ರಕ್ಷಕನಿಗೆ 15ದಿನಗಳ ನ್ಯಾಯಾಂಗ ಬಂಧನ

ಉಪ್ಪಿನಂಗಡಿ, ಜ.10: ಮರ ಕಡಿಯಲು ಅರಣ್ಯ ಇಲಾಖೆಯ ಅನುಮತಿ ನೀಡಲು ಲಂಚ ಸ್ವೀಕರಿಸುವ ವೇಳೆ ಎಸಿಬಿ ಪೊಲೀಸರಿಂದ ಬಂಧಿತನಾದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಕಚೇರಿಯ ಅರಣ್ಯ ರಕ್ಷಕ ಸುಧೀರ್ ಎನ್.ಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಖಾಸಗಿ ಸ್ವಾಮ್ಯದ ಭೂಮಿಯಲ್ಲಿನ ಮರವನ್ನು ಕಡಿಯುವ ಸಂಬಂಧ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಬೆಳ್ತಂಗಡಿ ತಾಲೂಕಿನ ಉರುವಾಲು ನಿವಾಸಿ ಸಿದ್ದೀಕ್ ಅಕ್ಬರ್ ಅವರ ಬಳಿ 15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದು, 10 ಸಾವಿರ ರೂ.ಗಳನ್ನು ಪಡೆದಿದ್ದಾರೆ

ಉಪ್ಪಿನಂಗಡಿ: ಅರಣ್ಯ ರಕ್ಷಕನಿಗೆ 15ದಿನಗಳ ನ್ಯಾಯಾಂಗ ಬಂಧನ Read More »

ಕರಾವಳಿ

ಗೌರಿ ಲಂಕೇಶ್ ಹತ್ಯೆಯ ಮತ್ತೊಬ್ಬ ಆರೋಪಿ ಬಂಧನ

ಬೆಂಗಳೂರು, ಜ.10: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಜಾರ್ಖಂಡ್ ನಲ್ಲಿ ಕರ್ನಾಟಕದ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರಳಿ (44) ಎಂದು ಗುರುತಿಸಲಾಗಿದೆ. ಗೌರಿ ಲಂಕೇಶ್​​ ಹತ್ಯೆಯಲ್ಲಿ ಬಳಸಲಾಗಿದ್ದ ಪಿಸ್ತೂಲ್‌ ಅನ್ನು ಈತ ನಾಶಪಡಿಸಿದ್ದಾನೆ ಎನ್ನಲಾಗಿದ್ದು, ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯಾಗಿದ್ದಾನೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಈತ ತಲೆಮರೆಸಿಕೊಂಡಿದ್ದು, ಎರಡೂ ವರ್ಷಗಳ ಬಳಿಕ ಕೊನೆಗೂ

ಗೌರಿ ಲಂಕೇಶ್ ಹತ್ಯೆಯ ಮತ್ತೊಬ್ಬ ಆರೋಪಿ ಬಂಧನ Read More »

ಕರ್ನಾಟಕ

ಉಕ್ರೇನಿನ ವಿಮಾನವನ್ನು ಇರಾನ್ ಹೊಡೆದುರುಳಿಸಿದೆ: ಟ್ರಂಪ್ 

ವಾಷಿಂಗ್ಟನ್, ಜ.10: ಸುಮಾರು 180 ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಯನ್ನು ಹೊತ್ತು ಸಾಗಿದ್ದ ಉಕ್ರೇನಿನ ವಿಮಾನವನ್ನು ಟೆಹ್ರಾನ್ ನಲ್ಲಿ ಇರಾನ್ ಹೊಡೆದುರುಳಿಸಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮಾನ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ದೇಶದ ಅಂತಾರಾಷ್ಟ್ರೀಯ ಬೋಯಿಂಗ್ 737-800 ವಿಮಾನ ರಷ್ಯಾದ ಕೀವ್ ಎಂಬಲ್ಲಿಗೆ ಹೊರಟಿತ್ತು. ಇರಾನ್ ದೇಶದ ಟೆಹ್ರಾನ್​ನ ವಿಮಾನ ನಿಲ್ದಾಣದಲ್ಲಿ ಇಳಿದು ಮತ್ತೆ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ 180 ಜನ ಮೃತಪಟ್ಟಿದ್ದರು. ಈ ಬಗ್ಗೆ ಮಾತನಾಡಿರುವ ಡೊನಾಲ್ಡ್​ ಟ್ರಂಪ್​, “ಈ

ಉಕ್ರೇನಿನ ವಿಮಾನವನ್ನು ಇರಾನ್ ಹೊಡೆದುರುಳಿಸಿದೆ: ಟ್ರಂಪ್  Read More »

ಅಂತರ್ರಾಷ್ಟ್ರೀಯ ನ್ಯೂಸ್

ಬಂಟ್ವಾಳದಲ್ಲಿ ನಾಮಫಲಕ ಹಾಕದೆ ರಸ್ತೆ ಕಾಮಗಾರಿ: ಕಿರು ಸೇತುವೆ ನಿರ್ಮಾಣ ಗುಂಡಿಗೆ ಬಿದ್ದ ಕಾರು, ಚಾಲಕನಿಗೆ ಗಾಯ

ಬಂಟ್ವಾಳ, ಜ.9: ಯಾವುದೇ ನಾಮಫಲಕ ಹಾಕದೆ ರಸ್ತೆಯ ಕಾಮಗಾರಿ ನಡೆಸುತ್ತಿರುವ ಪರಿಣಾಮ ಕಾರೊಂದು ಕಿರು ಸೇತುವೆಯ ನಿರ್ಮಾಣದ ಗುಂಡಿಗೆ ಬಿದ್ದು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಗಾಯಗೊಂಡವರನ್ನು ಕಾರು ಚಾಲಕ ರಾಜೇಶ್ ಎಂದು ಗುರುತಿಸಲಾಗಿದೆ. ಕಾರು ಚಾಲಕ ರಾಜೇಶ್ ಬಂಟ್ವಾಳ ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ರಸ್ತೆ ಕಾಣದೆ ಕಾರು ಗುಂಡಿಗೆ ಬಿದ್ದಿದೆ. ಬಿ.ಸಿರೋಡು – ಪುಂಜಾಲಕಟ್ಟೆ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಯಾವುದೇ ಮುನ್ಸೂಚನೆಯ ಫಲಕ ಹಾಕದೇ

ಬಂಟ್ವಾಳದಲ್ಲಿ ನಾಮಫಲಕ ಹಾಕದೆ ರಸ್ತೆ ಕಾಮಗಾರಿ: ಕಿರು ಸೇತುವೆ ನಿರ್ಮಾಣ ಗುಂಡಿಗೆ ಬಿದ್ದ ಕಾರು, ಚಾಲಕನಿಗೆ ಗಾಯ Read More »

ಕರಾವಳಿ

ಗಲ್ಲು ಶಿಕ್ಷೆಯಿಂದ ಪಾರಾಗಲು ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಯಿಂದ ಸುಪ್ರೀಂಗೆ ಅರ್ಜಿ

ಹೊಸದಿಲ್ಲಿ, ಜ.9: ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ. ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ದಿಲ್ಲಿಯ ಪಟಿಯಾಲ ಕೋರ್ಟ್ ಮೊನ್ನೆ ಸೋಮವಾರ ಘೋಷಿಸಿದ ಬಳಿಕ ವಿನಯ್ ಶರ್ಮ ಇಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ.

ಗಲ್ಲು ಶಿಕ್ಷೆಯಿಂದ ಪಾರಾಗಲು ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಯಿಂದ ಸುಪ್ರೀಂಗೆ ಅರ್ಜಿ Read More »

ರಾಷ್ಟ್ರೀಯ ನ್ಯೂಸ್
Scroll to Top