Keerthana

ಉಪ್ಪಳ: ಸರಣಿ ಅಪಘಾತ; ಟಿಪ್ಪರ್‌ನಲ್ಲಿ ಸಿಲುಕಿದ ಚಾಲಕನ ರಕ್ಷಣೆ

ಕಾಸರಗೋಡು, ಫೆ.17: ಮೂರು ವಾಹನಗಳು ಢಿಕ್ಕಿಯಾಗಿದ್ದು, ಟಿಪ್ಪರ್ ಚಾಲಕ ವಾಹನದ ಒಳಗೆ ಸಿಲುಕಿದ ಘಟನೆ ಉಪ್ಪಳ ಸರಕಾರಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಟಿಪ್ಪರ್ ಚಾಲಕನನ್ನು ರಕ್ಷಣೆ ಮಾಡಿದ್ದು, ಗಾಯಗೊಂಡ ಚಾಲಕನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಅರ್ಧ ಗಂಟೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಉಪ್ಪಳ ಶಾಲಾ ಬಳಿ ಪ್ರಯಾಣಿಕರನ್ನು ಇಳಿಸಲೆಂದು ನಿಂತಿದ್ದ ಸಂದರ್ಭದಲ್ಲಿ ಉಪ್ಪಳ ಭಾಗದಿಂದ […]

ಉಪ್ಪಳ: ಸರಣಿ ಅಪಘಾತ; ಟಿಪ್ಪರ್‌ನಲ್ಲಿ ಸಿಲುಕಿದ ಚಾಲಕನ ರಕ್ಷಣೆ Read More »

ಕರಾವಳಿ

ವರದಕ್ಷಿಣೆ ಕಿರುಕುಳದ ಆರೋಪ: ಅತ್ಯಹತ್ಯೆಗೆ ಶರಣಾದ ಹಿನ್ನೆಲೆ ಗಾಯಕಿ

ಬೆಂಗಳೂರು, ಫೆ.17: ಹಿನ್ನೆಲೆ ಗಾಯಕಿ ಸುಷ್ಮಿತಾ ರಾಜೇ ತಮ್ಮ ತಾಯಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬರುತ್ತಿದೆ. ಶರತ್ ಎಂಬುವರನ್ನು ಪ್ರೀತಿಸಿದ್ದ ಸುಶ್ಮಿತಾ ರಾಜೇ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಇನ್ನು ಗಂಡ ಹಾಗೂ ಆತನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಮಾಳಗಾಳದ ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಾವಿಗೂ ಮುನ್ನ ಸುಷ್ಮಿತಾ ಡೆತ್ ನೋಟು ಬರೆದು ಅದನ್ನು ವಾಟ್ಸ್‌ಆ್ಯಪ್ ಮೂಲಕ ಸಹೋದರನಿಗೆ ಕಳುಹಿಸಿದ್ದು ಈ

ವರದಕ್ಷಿಣೆ ಕಿರುಕುಳದ ಆರೋಪ: ಅತ್ಯಹತ್ಯೆಗೆ ಶರಣಾದ ಹಿನ್ನೆಲೆ ಗಾಯಕಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

breaking news ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾರ್ಚ್ 3ರಂದು ಗಲ್ಲು

ಹೊಸದಿಲ್ಲಿ, ಫೆ.17: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ನೇಣಿಗೇರಿಸಲು ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಸೋಮವಾರ ಹೊಸ ಡೆತ್ ವಾರಂಟನ್ನು ಜಾರಿಗೊಳಿಸಿದೆ. ಪ್ರಕರಣದಲ್ಲಿ ಅಪರಾಧಿಗಳಾಗಿರುವ ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ಮುಕೇಶ್ ಸಿಂಗ್‌ರನ್ನು ನೇಣಿಗೇರಿಸುವಂತೆ ಹೊಸ ದಿನಾಂಕ ನಿಗದಿಪಡಿಸಿದೆ. ಅಪರಾಧಿಗಳಿಗೆ ಸಂಬಂಧಿಸಿದ ವರದಿಯನ್ನು ತಿಹಾರ್ ಜೈಲು ಅಧಿಕಾರಿಗಳು ಕೋರ್ಟ್ ಗೆ ಹಸ್ತಾಂತರಿಸಿದ್ದರು. ನಾಲ್ವರು ಅಪರಾಧಿಗಳಲ್ಲಿ ಮೂವರು ಈಗಾಗಲೇ ಎಲ್ಲಾ ಕಾನೂನು ಅವಕಾಶಗಳನ್ನು

breaking news ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾರ್ಚ್ 3ರಂದು ಗಲ್ಲು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೈಂದೂರು: ಭೂ ಕುಸಿತದಿಂದ ಕೊಳವೆ ಬಾವಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

ಬೈಂದೂರು, ಫೆ.16: ಬೈಂದೂರು ತಾಲೂಕಿನ ಮರವಂತೆಯಲ್ಲಿ ಭೂ ಕುಸಿತದಲ್ಲಿ ಭಾನುವಾರ ಕೊಳವೆ ಬಾವಿಯೊಳಗೆ ಸಿಲುಕಿದ್ದ ವ್ಯಕ್ತಿಯನ್ನು 6 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ. ಭೂ ಕುಸಿತಕ್ಕೆ ಸಿಲುಕಿದ ರೋಹಿತ್ ಖಾರ್ವಿಯವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾವಿಯೊಳಗಿಂದ ಹೊರತೆಗೆಯಲಾಗಿದೆ. ಬಳಿಕ ವೈದ್ಯರು ಆಗಮಿಸಿ ರೋಹಿತ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ರೋಹಿತ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೊಳವೆಬಾವಿ ಕೊರೆಯುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಅದರ ಸುತ್ತ ಭಾರೀ

ಬೈಂದೂರು: ಭೂ ಕುಸಿತದಿಂದ ಕೊಳವೆ ಬಾವಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ Read More »

ಕರಾವಳಿ

ಪೊಳಲಿ: ಬಸ್ಸುಗಳೆರೆಡು ಢಿಕ್ಕಿ, 20ಕ್ಕೂ ಅಧಿಕ ಮಂದಿಗೆ ಗಾಯ

ಬಂಟ್ವಾಳ, ಫೆ.16: ಖಾಸಗಿ ಎರಡು ಬಸ್‌ಗಳು ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿ.ಸಿ.ರೋಡ್- ಪೊಳಲಿ ರಸ್ತೆಯ ಕಲ್ಪನೆ ತಿರುವಿನಲ್ಲಿ ನಡೆದಿದೆ. ಬಿ.ಸಿ .ರೋಡ್‌ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದ ಸರ್ವೀಸ್ ಬಸ್‌ಗೆ ಮದುವೆ ದಿಬ್ಬಣದ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆನ್ನಲಾಗಿದೆ. ಇದರಿಂದ ಎರಡು ಬಸ್‌ಗಳನಲ್ಲಿದ್ದ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬಂಟ್ವಾಳ

ಪೊಳಲಿ: ಬಸ್ಸುಗಳೆರೆಡು ಢಿಕ್ಕಿ, 20ಕ್ಕೂ ಅಧಿಕ ಮಂದಿಗೆ ಗಾಯ Read More »

ಕರಾವಳಿ

ಮಂಗಳೂರು: ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾದ ತಂದೆ-ಮಗ

ಮಂಗಳೂರು, ಫೆ.16: ತಂದೆ ಹಾಗೂ ಐದು ವರ್ಷದ ಪುತ್ರ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಬಳಿ ರವಿವಾರ ಬೆಳಗ್ಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾದವರನ್ನು ಬಂಟ್ವಾಳ, ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ(45), ಹಾಗೂ ಅವರ ಪುತ್ರ ಅನೀಶ್ ರೈ(6) ಎಂದು ಗುರುತಿಸಲಾಗಿದೆ. ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಅವರು ಕಳೆದ ಎರಡು ದಿನಗಳ ಹಿಂದೆ ಮುಂಬೈಯಿಂದ ಕೊಣಾಜೆಯ ಪಾವೂರಿಗೆ ಸಂಬಂಧಿಕರ ಮನೆಗೆ ನೇಮಕ್ಕೆ ಬಂದಿದ್ದರೆನ್ನಲಾಗಿದೆ. ರವಿವಾರ ನಸುಕಿನ

ಮಂಗಳೂರು: ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾದ ತಂದೆ-ಮಗ Read More »

ಕರಾವಳಿ

ಬೈಂದೂರು: ಕೊಳವೆ ಬಾವಿ ಕೊರೆಯುತ್ತಿದ್ದ ವೇಳೆ ಭೂ ಕುಸಿತ: 15ಅಡಿ ಅಳದಲ್ಲಿ ಸಿಲುಕಿದ ವ್ಯಕ್ತಿ

ರಕ್ಷಣಾ ಕಾರ್ಯ ಬಿರುಸು ಬೈಂದೂರು, ಫೆ.16: ಕೊಳೆವೆ ಬಾವಿ ಕೊರೆಯುತ್ತಿದ್ದ ವೇಳೆ ಉಂಟಾದ ಭೂ ಕುಸಿತದಲ್ಲಿ ವ್ಯಕ್ತಿಯೋರ್ವ ಸಿಲುಕಿರುವ ಘಟನೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ರವಿವಾರ ನಡೆದಿದೆ. ಸ್ಥಳೀಯ ನಿವಾಸಿ ಸುಬ್ಬಾ ಖಾರ್ವಿಯ ಮಗ ರೋಹಿತ್ ಭೂ ಕುಸಿತದಲ್ಲಿ ಸಿಲುಕಿರುವ ವ್ಯಕ್ತಿ. ಕೊಳವೆಬಾವಿ ಕೊರೆಯುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಅದರ ಸುತ್ತ ಭಾರೀ ಆಳಕ್ಕೆ ಭೂ ಕುಸಿತ ಉಂಟಾಗಿದೆ. ಈ ಸಂದರ್ಭ ಸುಮಾರು 15 ಅಡಿಯಷ್ಟು ಮಣ್ಣು ಕುಸಿದಿದ್ದು, ಸ್ಥಳದಲ್ಲಿದ್ದ ರೋಹಿತ್ ಖಾರ್ವಿ ಅದರಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ

ಬೈಂದೂರು: ಕೊಳವೆ ಬಾವಿ ಕೊರೆಯುತ್ತಿದ್ದ ವೇಳೆ ಭೂ ಕುಸಿತ: 15ಅಡಿ ಅಳದಲ್ಲಿ ಸಿಲುಕಿದ ವ್ಯಕ್ತಿ Read More »

ಕರಾವಳಿ

ಮೂರನೇ ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ

ಹೊಸದಿಲ್ಲಿ, ಫೆ.16: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಮುಖ್ಯಮಂತ್ರಿಯಾಗಿ ರವಿವಾರ ಪ್ರಮಾಣ ವಚನ ಸ್ವೀಕರಿಸಿದರು. ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜೊತೆಗೆ ಹಿಂದಿನ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ಮತ್ತೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೆ ಕೈಲಾಶ್ ಗೆಹ್ಲೋಟ್, ಸತ್ಯೇಂದರ್ ಜೈನ್, ಗೋಪಾಲ್ ರಾಯ್, ಇಮ್ರಾನ್ ಹುಸೈನ್, ರಾಜೇಂದ್ರ

ಮೂರನೇ ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್

ಮೇಲ್ಜಾತಿಯ ವ್ಯಕ್ತಿಯ ಜಮೀನಿನಲ್ಲಿ ಮಲವಿಸರ್ಜನೆ ಆರೋಪ: ದಲಿತ ಯುವಕನನ್ನು ಥಳಿಸಿ ಹತ್ಯೆಗೈದ ಸ್ಥಳೀಯರು

ಚೆನ್ನೈ, ಫೆ.16: ಮೇಲ್ಜಾತಿಯ ವ್ಯಕ್ತಿಯೊಬ್ಬರಿಗೆ ಸೇರಿದ ಖಾಲಿ ಜಮೀನಿನಲ್ಲಿ ಮಲವಿಸರ್ಜನೆ ಮಾಡಿದ ಎನ್ನುವ ಕಾರಣಕ್ಕಾಗಿ ದಲಿತ ಯುವಕನೋರ್ವನನ್ನು ಜನರ ಗುಂಪೊಂದು ಥಳಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ. ತಮಿಳುನಾಡಿನ ದಕ್ಷಿಣ ಚೆನ್ನೈನ ವಿಲ್ಲುಪುರಂ ಪಟ್ಟಣದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ಶಕ್ತಿವೇಲ್(24) ಎಂದು ಗುರುತಿಸಲಾಗಿದೆ. ಫೆ.12ರಂದು ಘಟನೆ ನಡೆದಿದ್ದು, ಸ್ಥಳೀಯರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿದೆ. ಈತ ವಿಲ್ಲುಪುರಂ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಶಕ್ತಿವೇಲ್ ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ಸಂತ್ರಸ್ತನ ತಂಗಿ ಸ್ಥಳೀಯ

ಮೇಲ್ಜಾತಿಯ ವ್ಯಕ್ತಿಯ ಜಮೀನಿನಲ್ಲಿ ಮಲವಿಸರ್ಜನೆ ಆರೋಪ: ದಲಿತ ಯುವಕನನ್ನು ಥಳಿಸಿ ಹತ್ಯೆಗೈದ ಸ್ಥಳೀಯರು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

breaking news ಕಾರ್ಕಳ: ಭೀಕರ ಅಪಘಾತಕ್ಕೆ 9 ಮಂದಿ ಮೃತ್ಯು

20ಕ್ಕೂ ಅಧಿಕ ಮಂದಿಗೆ ಗಾಯ ಉಡುಪಿ, ಫೆ.15: ಚಲಿಸುತ್ತಿದ್ದ ಪ್ರವಾಸಿ ಬಸ್ಸೊಂದು ಬಂಡೆ ಢಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟು 20ಕ್ಕೂ ಅಧಿಕ ಮಂದಿಗೆ ಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಮಾಳ ಚೆಕ್‌ಪೋಸ್ಟ್ ಸಮೀಪದ ಅಬ್ಬಾಸ್‌ಕಟ್ಟೆ ಬಳಿ ನಡೆದಿದೆ. ಮೈಸೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆ ಹೊರಟ ಬಸ್ಸು ಮೈಸೂರಿನಿಂದ ಕುದುರೆ ಮುಖ ಮಾರ್ಗವಾಗಿ ಕಾರ್ಕಳ ಕಡೆ ಅಗಮಿಸುತ್ತಿದ್ದ ವೇಳೆ ಮಾಳ ಮುಳ್ಳೂರು ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 35 ಮಂದಿ ಪ್ರಯಾಣಿಕರಿದ್ದಾರೆಂದು ತಿಳಿದುಬಂದಿದೆ.

breaking news ಕಾರ್ಕಳ: ಭೀಕರ ಅಪಘಾತಕ್ಕೆ 9 ಮಂದಿ ಮೃತ್ಯು Read More »

ಕರಾವಳಿ
Scroll to Top