Keerthana

ರಾಜ್ಯದಲ್ಲಿಂದು 115 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆ

ಬೆಂಗಳೂರು, ಮೇ 28: ರಾಜ್ಯದಲ್ಲಿ ಇಂದು 115 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,533ಕ್ಕೇರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 29 ಸೋಂಕು ಪ್ರಕರಣ ದೃಢವಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಸೋಂಕು ಪ್ರಕರಣ ಪತ್ತೆಯಾಗಿದೆ. ಉಳಿದಂತೆ ಹಾಸನದಲ್ಲಿ 13 ಪ್ರಕರಣ, ಬೀದರ್‌ನಲ್ಲಿ 12 ಸೋಂಕು ಪ್ರಕರಣ, ಬೆಂಗಳೂರು ನಗರದಲ್ಲಿ 9, ಯಾದಗಿರಿಯಲ್ಲಿ 7, ಕಲಬುರಗಿಯಲ್ಲಿ 5, ಚಿತ್ರದುರ್ಗದಲ್ಲಿ 6, ಹಾವೇರಿ 4, ಚಿಕ್ಕಮಗಳೂರು 3, ವಿಜಯಪುರ 2, ರಾಯಚೂರಿನಲ್ಲಿ 1 ಕೋವಿಡ್ ಪ್ರಕರಣ ದೃಢವಾಗಿದೆ. […]

ರಾಜ್ಯದಲ್ಲಿಂದು 115 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆ Read More »

ಕರ್ನಾಟಕ

ಕೋವಿಡ್‌ಗೆ ಕರಾವಳಿ ತತ್ತರ >>ದ.ಕ. ಜಿಲ್ಲೆಯ 24, ಉಡುಪಿಯ 29 ಮಂದಿಗೆ ಸೋಂಕು ದೃಢ

ಮಂಗಳೂರು, ಮೇ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಮಂದಿ ಹಾಗೂ ಉಡುಪಿಯ 29 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ದ.ಕ. ಜಿಲ್ಲೆಯ 24 ಮಂದಿಯೂ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿ ಇರುವವರಾಗಿದ್ದಾರೆ. ಇವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ 97 ಪ್ರಕರಣಗಳ ಪೈಕಿ 37 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅದರಲ್ಲೂ 12 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 63 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಓರ್ವ ಸೋಂಕಿತ ಸೋಂಕು ಅಲ್ಲದ

ಕೋವಿಡ್‌ಗೆ ಕರಾವಳಿ ತತ್ತರ >>ದ.ಕ. ಜಿಲ್ಲೆಯ 24, ಉಡುಪಿಯ 29 ಮಂದಿಗೆ ಸೋಂಕು ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಡುಪಿಗೆ ಮುಂಬೈ ಆಘಾತ: ಜಿಲ್ಲೆಯ 27 ಮಂದಿಗೆ ಸೋಂಕು

ಉಡುಪಿ, ಮೇ 28: ಜಿಲ್ಲೆಯಲ್ಲಿಂದು 27 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಅಂತರಾಜ್ಯ ಪ್ರಯಾಣದ ಅನುಮತಿ ಸಿಕ್ಕ ಬಳಿಕ ಉಡುಪಿ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕೊರೋನ ಏರಿಕೆ ಕಂಡಿದೆ. ಮಹಾರಾಷ್ಟ್ರದಿಂದ ಬಂದ 24 ಜನರಲ್ಲಿ ಕೇರಳದಿಂದ ಬಂದ ಓರ್ವರಿಗೆ ಹಾಗೂ ತೆಲಂಗಾಣದಿಂದ ಬಂದ ಇಬ್ಬರಲ್ಲಿ ಕೊರೋನ ದೃಢಪಟ್ಟಿದೆ.  

ಉಡುಪಿಗೆ ಮುಂಬೈ ಆಘಾತ: ಜಿಲ್ಲೆಯ 27 ಮಂದಿಗೆ ಸೋಂಕು Read More »

ಕರಾವಳಿ

ದ.ಕ. ಜಿಲ್ಲೆಯಲ್ಲಿ ಮತ್ತೆ 6 ಮಂದಿಗೆ ಕೊರೋನ ಪಾಸಿಟಿವ್

ಮಂಗಳೂರು, ಮೇ 28: ದ.ಕ. ಜಿಲ್ಲೆಯಲ್ಲಿ ಇಂದು ಮತ್ತೆ 6 ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿಗೆ ಒಳಗಾದ ಬಹುತೇಕ ಮಂದಿ ಮಹಾರಾಷ್ಟ್ರದ ಮುಂಬೈಯಿಂದಲೇ ಬಂದವರಾಗಿದ್ದಾರೆ. 18 ವರ್ಷದ ಮಹಿಳೆ, 62 , 50 , 24, 36 ವರ್ಷದ ಪುರುಷರಲ್ಲಿ  ಕೊರೋನ ಪತ್ತೆಯಾಗಿದೆ. ಇವರೆಲ್ಲರೂ ಮಹಾರಾಷ್ಟ್ರದ ರಾಜ್ಯದಿಂದ ಹಿಂತಿರುಗಿದವರಾಗಿದ್ದಾರೆ.  

ದ.ಕ. ಜಿಲ್ಲೆಯಲ್ಲಿ ಮತ್ತೆ 6 ಮಂದಿಗೆ ಕೊರೋನ ಪಾಸಿಟಿವ್ Read More »

ಕರಾವಳಿ

ರಾಜ್ಯದಲ್ಲಿ ಇಂದು 135 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 2,418ಕ್ಕೆ ಏರಿಕೆ

ಬೆಂಗಳೂರು, ಮೇ 27: ರಾಜ್ಯದಲ್ಲಿ ಇಂದು 135 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,418ಕ್ಕೇರಿಕೆಯಾಗಿದೆ. ಅಲ್ಲದೆ ಇಂದು ಮೂವರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಕಲಬುರಗಿ 28, ಉತ್ತರ ಕನ್ನಡ 06, ಚಿಕ್ಕಮಗಳೂರು 03, ದಕ್ಷಿಣ ಕನ್ನಡ 11, ಯಾದಗಿರಿ 16, ಹಾಸನ 14, ಉಡುಪಿ 09, ಬೆಂಗಳೂರು ನಗರ 06, ಬೆಂಗಳೂರು ಗ್ರಾಮಾಂತರ 02, ಬಳ್ಳಾರಿ 01, ಬೀದರ್ 12, ಬೆಳಗಾವಿ 04, ರಾಯಚೂರು 05,

ರಾಜ್ಯದಲ್ಲಿ ಇಂದು 135 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 2,418ಕ್ಕೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜೂ.1 ಮಸೀದಿ, ಚಚ್೯ ದೇವಸ್ಥಾನ ತೆರೆಯಲು ಅವಕಾಶ: ಸಿಎಂ 

ಬೆಂಗಳೂರು, ಮೇ 27: ಜೂನ್‌ 1 ರಿಂದ ದೇವಸ್ಥಾನ ಮಾತ್ರವಲ್ಲದೇ ಮಸೀದಿ, ಚರ್ಚ್‌ಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.   ಈ ಬಗ್ಗೆ ವಿಧಾನಸೌಧದ ಆವರಣದಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಪುಣ್ಯತಿಥಿ ಅಂಗವಾಗಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ದೇವಸ್ಥಾನಕ್ಕೆ ಜೂನ್‌ 1ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಇದು ಚರ್ಚ್ ಮತ್ತು ಮಸೀದಿಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲೇ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳನ್ನು

ಜೂ.1 ಮಸೀದಿ, ಚಚ್೯ ದೇವಸ್ಥಾನ ತೆರೆಯಲು ಅವಕಾಶ: ಸಿಎಂ  Read More »

ಕರ್ನಾಟಕ

ದ.ಕ. ಜಿಲ್ಲೆಯಲ್ಲಿ ಇಂದು 11 ಮಂದಿಗೆ ಕೊರೋನ ಸೋಂಕು ದೃಢ

ಮಂಗಳೂರು, ಮೇ 27: ದ.ಕ. ಜಿಲ್ಲೆಯಲ್ಲಿ ಇಂದು ಒಟ್ಟು 11 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇದರಲ್ಲಿ 10 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಓರ್ವ ಮಾತ್ರ ಗುಜರಾತ್ ನಿಂದ ಬಂದವರಾಗಿದ್ದಾರೆ.   ಜಿಲ್ಲೆಯ ಸೋಂಕಿತರಲ್ಲಿ 3 ವರ್ಷದ ಮಗು ಸೇರಿ 35 ವರ್ಷದ ಗಂಡಸು, 36 ವರ್ಷದ ಹೆಂಗಸು , 46 ವರ್ಷದ ಗಂಡಸು , 11 ವರ್ಷದ ಹೆಣ್ಣು , 59 ವರ್ಷದ ಹೆಂಗಸು, 37 ವರ್ಷದ ಹೆಂಗಸು, 45 ವರ್ಷದ ಹೆಂಗಸು, 22 ವರ್ಷದ

ದ.ಕ. ಜಿಲ್ಲೆಯಲ್ಲಿ ಇಂದು 11 ಮಂದಿಗೆ ಕೊರೋನ ಸೋಂಕು ದೃಢ Read More »

ಕರಾವಳಿ

ನಾಲ್ಕು ಹಂತದ ಲಾಕ್‌ಡೌನ್ ವಿಫಲವಾಗಿದೆ, ಮುಂದೇನು?: ರಾಹುಲ್ ಗಾಂಧಿ ಪ್ರಶ್ನೆ

ಹೊಸದಿಲ್ಲಿ, ಮೇ 26: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೋನ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರಕಾರದ ಲಾಕ್‌ಡೌನ್ ವಿಫಲವಾಗಿದೆ. ಭಾರತವೀಗ ವಿಫಲವಾದ ಲಾಕ್‌ಡೌನ್‌ನ ಪರಿಣಾಮವನ್ನು ಎದುರಿಸುತ್ತಿದೆ. ದೇಶದಲ್ಲಿ ಕೊರೋನ ಸೋಂಕು ಗಣನೀಯವಾಗಿ ಹಬ್ಬುತ್ತಿದೆ. ಈಗ ನಿಮ್ಮ ಯೋಜನೆ ಏನು ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಂಗಳವಾರ ಬೆಳಗ್ಗೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಾಲ್ಕು ಹಂತಗಳ ಲಾಕ್‌ಡೌನ್‌ನಿಂದಲೂ ಪ್ರಧಾನಿ ಮೋದಿ ಅವರು ನಿರೀಕ್ಷೆ ಮಾಡಿದಷ್ಟು ಉತ್ತಮವಾದ ಫಲಿತಾಂಶ ಬಂದಿಲ್ಲ

ನಾಲ್ಕು ಹಂತದ ಲಾಕ್‌ಡೌನ್ ವಿಫಲವಾಗಿದೆ, ಮುಂದೇನು?: ರಾಹುಲ್ ಗಾಂಧಿ ಪ್ರಶ್ನೆ Read More »

ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿಂದು 101 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 2283ಕ್ಕೆ ಏರಿಕೆ

ಬೆಂಗಳೂರು, ಮೇ 26: ರಾಜ್ಯದಲ್ಲಿ ಇಂದು 101 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ, 2,283ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ 20, ಯಾದಗಿರಿ 14, ಹಾಸನ 13, ದಾವಣಗೆರೆ 11, ಬೆಳಗಾವಿ 11, ಬೀದರ್ 10, ವಿಜಯಪುರ 5, ದಕ್ಷಿಣ ಕನ್ನಡ 3, ಉಡುಪಿ 3, ಬೆಂಗಳೂರು ನಗರ 2, ಕೋಲಾರ 2, ಚಿಕ್ಕಬಳ್ಳಾಪುರ, ಕೊಪ್ಫಳ, ಬಳ್ಳಾರಿ, ಬಾಗಲಕೋಟೆಯಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಬಹುತೇಕರು ಹೊರರಾಜ್ಯಗಳ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ಮತ್ತು

ರಾಜ್ಯದಲ್ಲಿಂದು 101 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 2283ಕ್ಕೆ ಏರಿಕೆ Read More »

ಕರ್ನಾಟಕ

ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಗೆ ನಿರ್ಧಾರ!

ಬೆಂಗಳೂರು, ಮೇ 26: ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ನಡೆಸಲು ಬಿಜೆಪಿ ವರಿಷ್ಟರು ಮುಂದಾಗಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ವರಿಷ್ಠರು ಆಲೋಚಿಸಿದ್ದಾರೆ. ಇನ್ನೂ ಕೆಲವು ಸಚಿವರ ಕಾರ್ಯಕ್ಷಮತೆ ಆಧರಿಸಿ ಖಾತೆ ಬದಲಾವಣೆ ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ. ಉತ್ತಮವಾಗಿ ಕೆಲಸ ನಿರ್ವಹಿಸಿದವರಿಗೆ ಉತ್ತಮ ಖಾತೆ. ಈವರೆಗೆ ತಮ್ಮ ಕೆಲಸದಲ್ಲಿ ಕಳಪೆ ನಿರ್ವಹಣೆ ಮಾಡಿರುವ ಸಚಿವರಿಗೆ ಕೋಕ್ ನೀಡಲಿದ್ದು, ಹೊಸಬರಿಗೆ ಸಂಪುಟದಲ್ಲಿ ಆದ್ಯತೆ

ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಗೆ ನಿರ್ಧಾರ! Read More »

ಕರ್ನಾಟಕ
Scroll to Top