Keerthana

3 ತಿಂಗಳ ಬಿಲ್ ಮುಂದೂಡಿಕೆ ಬಗ್ಗೆ ನಿರ್ದೇಶನ ಬಂದಿಲ್ಲ: ಮೆಸ್ಕಾಂ ಸ್ಪಷ್ಟನೆ

ಮಂಗಳೂರು, ಎ.5: ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿಗೆ ಬಿಲ್ ಪಾವತಿಸುವುದನ್ನು ಮುಂದೂಡುವ ಕುರಿತು ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನಗಳಿಲ್ಲ. ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸ್ಕಾಂ ಹಾಗೂ ಬೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ. ಎಲ್ಲಾ ವಿದ್ಯುತ್ ಗ್ರಾಹಕರಿಗೆ ಸರಾಸರಿ ಬಿಲ್ ಅನ್ನು ನೀಡುವ ವ್ಯವಸ್ಥೆ ಮಾಡಲಾಗುವುದು. ಹೆಚ್.ಟಿ. ಗ್ರಾಹಕರಿಗೆ ಈಗಾಗಲೇ ವಾಸ್ತವಿಕ ರೀಡಿಂಗ್‌ನಂತೆ ಬಿಲ್ ನೀಡಲಾಗಿರುತ್ತದೆ. ಹಾಲಿ ತಂತ್ರಾಂಶದಲ್ಲಿರುವ ಗ್ರಾಹಕರುಗಳಿಗೆ ವಿದ್ಯುತ್ ಬಿಲ್‌ ಅನ್ನು ಇ-ಮೇಲ್, […]

3 ತಿಂಗಳ ಬಿಲ್ ಮುಂದೂಡಿಕೆ ಬಗ್ಗೆ ನಿರ್ದೇಶನ ಬಂದಿಲ್ಲ: ಮೆಸ್ಕಾಂ ಸ್ಪಷ್ಟನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಬಿ.ಎಸ್.ವೈ ಮನವಿ

ಬೆಂಗಳೂರು, ಎ.5: ಕೊರೋನ ಪ್ರಕರಣಗಳ ಸಂಖ್ಯೆ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಾಜ್ಯದ ಜನತೆ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಶ್ವದಾದ್ಯಂತ ಕೊರೋನ ಸೋಂಕಿನಿಂದ ಉಂಟಾಗುತ್ತಿರುವ ಹಾನಿ ಎಲ್ಲರಿಗೂ ತಿಳಿದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನರ ಜೀವ ರಕ್ಷಣೆಗಾಗಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಹ ಬೀದರ್, ಮೈಸೂರು, ಮಂಗಳೂರು, ಬೆಂಗಳೂರು ನಗರ, ಕಲಬುರಗಿ ಜಿಲ್ಲೆಗಳಲ್ಲಿ ವೈರಸ್

ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಬಿ.ಎಸ್.ವೈ ಮನವಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಬಳಿಕ 1 ವಾರ ತರಗತಿ: ಸಚಿವ ಸುರೇಶ್ ಕುಮಾರ್

ಚಾಮರಾಜನಗರ, ಎ.5: ಲಾಕ್‌ಡೌನ್ ಮುಗಿದ ಬಳಿಕ ಪರಿಸ್ಥಿತಿ ನೋಡಿಕೊಂಡು ಎಸೆಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗುವುದು. ವೇಳಾಪಟ್ಟಿ ಪ್ರಕಟವಾದ ಬಳಿಕ ಒಂದು ವಾರ ಶಾಲೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಚಾಮರಾಜನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ಪರೀಕ್ಷೆ ಮುಂದೂಡಿ ದೀರ್ಘಕಾಲ ಅಭ್ಯಾಸ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಚೈತನ್ಯ ತುಂಬಬೇಕಿದೆ. ಪರೀಕ್ಷೆ ಬರೆಯುವ ಬಗ್ಗೆಯೂ ವಿದ್ಯಾರ್ಥಿಗಳಿಗೆ ಉತ್ಸಾಹ ಮೂಡಬೇಕಾಗಿದೆ. ಇದಕ್ಕಾಗಿ ಒಂದು ವಾರ ತರಗತಿ

ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಬಳಿಕ 1 ವಾರ ತರಗತಿ: ಸಚಿವ ಸುರೇಶ್ ಕುಮಾರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಮತ್ತಿಬ್ಬರಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 146ಕ್ಕೇರಿಕೆ

ಬೆಂಗಳೂರು, ಎ.5: ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ರಾಜ್ಯದಲ್ಲಿ ರವಿವಾರ ಮತ್ತಿಬ್ಬರಿಗೆ ಕೊರೋನ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 146ಕ್ಕೇರಿದೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯಂತೆ ಬೆಂಗಳೂರಿನ ಮಡಿವಾಳದ ಇಬ್ಬರಿಗೆ ಸೋಂಕು ದೃಢವಾಗಿದೆ. ನಗರದ ಮಡಿವಾಳದ ದಂಪತಿಗೆ ಕೊರೋನ ಸೋಂಕು ದೃಢವಾಗಿದೆ. 68 ವರ್ಷದ ಪತಿ ಮತ್ತು 62 ವರ್ಷದ ಪತ್ನಿ ಇತ್ತೀಚೆಗೆ ದುಬೈನಿಂದ ಆಗಮಿಸಿದ್ದರು. ಇವರಿಬ್ಬರು ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. ರಾಜ್ಯದಲ್ಲಿ ಇದುವರೆಗೆ 146 ಜನರಿಗೆ ಕೊರೋನ ಸೋಂಕು ದೃಢವಾಗಿದ್ದು ಅದರಲ್ಲಿ

ರಾಜ್ಯದಲ್ಲಿ ಮತ್ತಿಬ್ಬರಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 146ಕ್ಕೇರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡಿನಲ್ಲಿ ಶನಿವಾರ ಆರು ಮಂದಿಗೆ ಕೊರೋನ ಪಾಸಿಟಿವ್: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೇರಿಕೆ

ಕಾಸರಗೋಡು, ಎ.4: ಕೇರಳದ ಇತರ ಜಿಲ್ಲೆಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಕಾಸರಗೋಡು ಜಿಲ್ಲೆಯಲ್ಲಿ ಏರಿಕೆಯಾಗುತ್ತಾ ಇದ್ದು, ಶನಿವಾರ ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 11 ಪ್ರಕರಣ ಶನಿವಾರ ಪತ್ತೆಯಾಗಿದ್ದು , ಈ ಪೈಕಿ ಆರು ಪ್ರಕರಣ ಕಾಸರಗೋಡಿಗೆ ಸೇರಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೇರಿದೆ. ಕಾಸರಗೋಡಿನ ಸೋಂಕಿತರ ಪೈಕಿ ಮೂವರು ದುಬೈಯಿಂದ ಬಂದವರಾಗಿದ್ದು, ಓರ್ವ ನಿಝಾಮುದ್ದೀನ್‌ನಿಂದ ಬಂದವರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಾಸರಗೋಡಿನಲ್ಲಿ ಶನಿವಾರ ಆರು ಮಂದಿಗೆ ಕೊರೋನ ಪಾಸಿಟಿವ್: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೇರಿಕೆ Read More »

ಕರಾವಳಿ

Breaking news ದ.ಕ. ಜಿಲ್ಲೆಯಲ್ಲಿ ಒಂದೇ ದಿನ ಮೂರು ಕೊರೋನ ಪಾಸಿಟಿವ್: 12ಕ್ಕೇರಿದ ಸೋಂಕಿತರ ಸಂಖ್ಯೆ

ಮಂಗಳೂರು, ಎ.4: ಕಳೆದೆರಡು ದಿನಗಳಿಂದ ಪಾಸಿಟಿವ್ ಪ್ರಕರಣಗಳಿಲ್ಲದೆ ನಿರಾಳವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಶನಿವಾರ ಬೆಚ್ಚಿಬಿದ್ದಿದೆ. ಶನಿವಾರ ಒಂದೇ ದಿನ ಕೋವಿಡ್ 19 ಸೊಂಕಿತ ಮೂರು ಹೊಸದಾಗಿ ಪ್ರಕರಣಗಳು ಪತ್ತೆಯಾಗಿದ್ದು , ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12 ಕ್ಕೆ ಏರಿದೆ. ದಿಲ್ಲಿಗೆ ತೆರಳಿದ್ದ ದ.ಕ. ಜಿಲ್ಲೆಯ ಇಬ್ಬರಿಗೆ ಕೊರೋನ ಸೋಂಕು ದೃಢವಾಗಿದೆ. ಇನ್ನು ನಿಝಾಮುದ್ದೀನ್‌ನಲ್ಲಿ ನಡೆದ ತಬ್ಲಿಫ್-ಎ-ಜಮಾತ್ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸದ್ಯದ ಪ್ರಕಾರ 29 ಭಾಗವಹಿಸಿದ ಬಗ್ಗೆ ಮಾಹಿತಿ ಇದ್ದು

Breaking news ದ.ಕ. ಜಿಲ್ಲೆಯಲ್ಲಿ ಒಂದೇ ದಿನ ಮೂರು ಕೊರೋನ ಪಾಸಿಟಿವ್: 12ಕ್ಕೇರಿದ ಸೋಂಕಿತರ ಸಂಖ್ಯೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಲಾಕ್‌ಡೌ‌ನ್ ಎಫೆಕ್ಟ್: ಎಪ್ರಿಲ್ 30ರವರೆಗೂ ಬುಕ್ಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ

ಹೊಸದಿಲ್ಲಿ, ಎ.4: ಕೊರೋನ ನಿಗ್ರಹಕ್ಕೆ ಘೋಷಿಸಲಾಗಿದ್ದ ಎ.14ರವರೆಗಿನ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಇತ್ತೀಚೆಗೆ ನಿರ್ಬಂಧಿಸಲಾಗಿತ್ತು. ಆದರೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಹಾರಾಟಗಳಿಗೆ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ಏ.30ರವರೆಗೂ ವಿಸ್ತರಿಸಿದೆ. ಇದು ಲಾಕ್ ಲೌನ್ ಅವಧಿಯ ಬಳಿಕವೂ ಮತ್ತೆ ಒಂದು ವಾರದ ಅವಧಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತಷ್ಟು ದಿನಗಳ ಕಾಲ ಎಲ್ಲಾ ರೀತಿಯ ವಿಮಾನಯಾನ ಸೇವೆಗಳನ್ನು ನಿಷೇಧಿಸಬಹುದು ಎಂಬ ವದಂತಿಗಳು ಹರಡಲು ಆರಂಭವಾಗಿದೆ.

ಲಾಕ್‌ಡೌ‌ನ್ ಎಫೆಕ್ಟ್: ಎಪ್ರಿಲ್ 30ರವರೆಗೂ ಬುಕ್ಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

Breaking news ತುಂಬೆಯ ಯುವಕನಿಗೆ ಕೊರೋನ ಪಾಸಿಟಿವ್

ಬಂಟ್ವಾಳ, ಎ.4: ತಾಲೂಕಿನ ತುಂಬೆ ಗ್ರಾಮದ ನಿವಾಸಿಯೊಬ್ಬರಿಗೆ ಕೋವಿಡ್ – 19 (ಕೊರೋನ) ಸೋಂಕು ಇರುವುದು ದೃಢಪಟ್ಟಿದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ತರಳಿದ್ದ ತುಂಬೆಯ ಈ ಯುವಕ ಮಾ.21ರಂದು ದೆಹಲಿಯಿಂದ ನಿಝಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ನಿಝಾಮುದ್ದೀನ್ ತಬ್ಲಿಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಮಂದಿಗೆ ಕೊರೋನ ಸೋಂಕು ತಗುಲಿದ ಮಾಹಿತಿಯ ಬಳಿಕ ನಿಝಾಮುದ್ದೀನ್ ರೈಲು ಮೂಲಕ ಮಂಗಳೂರಿಗೆ ಬಂದ ಈ ಯುವಕನನ್ನು ಪ್ರತ್ಯೇಕಿಸಿ ಆತನ ಗಂಟಲ ಸ್ರಾವವನ್ನು

Breaking news ತುಂಬೆಯ ಯುವಕನಿಗೆ ಕೊರೋನ ಪಾಸಿಟಿವ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ಮೂರು ಮಕ್ಕಳ ತಾಯಿ ಆತ್ಮಹತ್ಯೆ

ಬಂಟ್ವಾಳ, ಎ.5: ಕ್ಷುಲ್ಲಕ ಕಾರಣಕ್ಕೆ ಮೂರು ಮಕ್ಕಳ ತಾಯಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿ.ಸಿ.ರೋಡ್ ಕೈಕಂಬ ಸಮೀಪದ ಪರ್ಲಿಯಾ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ತುಂಬೆ ನಿವಾಸಿ ಅಬ್ಬಾಸ್ ಅಲಿ ಎಂಬವರ ಪತ್ನಿ ರಮೀಝಾ ಬಾನು(29) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ದಂಪತಿಗೆ ಮೂವರು ಮಕ್ಕಳು ಇದ್ದು, ತುಂಬೆ ನಿವಾಸಿಗಳಾದ ದಂಪತಿ ಕೆಲವು ಸಮಯದ ಹಿಂದೆ ಪೆರ್ಲದಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಲಾಕ್ ಡೌನ್ ಸಮಯದಲ್ಲಿ

ಕ್ಷುಲ್ಲಕ ಕಾರಣಕ್ಕೆ ಮೂರು ಮಕ್ಕಳ ತಾಯಿ ಆತ್ಮಹತ್ಯೆ Read More »

ಕರಾವಳಿ

ದೀಪದ ಹತ್ತಿರ ಬರುವ ಕೊರೋನ ವೈರಸ್​ ಶಾಖದಿಂದ ಸಾಯುತ್ತದೆ!: ಬಿಜೆಪಿ ಶಾಸಕ ರಾಮದಾಸ್

ಮೈಸೂರು, ಎ.4: ದೀಪ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ದೀಪ ಹಚ್ಚಿದರೆ ವೈರಸ್​ಗಳು ಆ ದೀಪದ ಬಳಿ ಬಂದು, ಶಾಖ ತಡೆಯಲಾರದೆ ಸಾಯುತ್ತವೆ ಎಂದು ಬಿಜೆಪಿ ಶಾಸಕ ಎಸ್​.ಎ. ರಾಮದಾಸ್ ಹೇಳಿದ್ದಾರೆ. ಕೊರೋನ ವೈರಸ್ ದಾಳಿಯಿಂದ ತತ್ತರಿಸಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ದೇಶದ ಜನರೆಲ್ಲರೂ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಏ. 5ಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ ಅಥವಾ ಮೊಬೈಲ್ ಟಾರ್ಚ್​ ಬೆಳಗಬೇಕು ಎಂದು ಪ್ರಧಾನಮಂತ್ರಿ

ದೀಪದ ಹತ್ತಿರ ಬರುವ ಕೊರೋನ ವೈರಸ್​ ಶಾಖದಿಂದ ಸಾಯುತ್ತದೆ!: ಬಿಜೆಪಿ ಶಾಸಕ ರಾಮದಾಸ್ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top