Keerthana

ಉಡುಪಿ: ನಾಳೆಯಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ

ಉಡುಪಿ, ಮೇ 4: ಜಿಲ್ಲೆಯಲ್ಲಿ ಮಂಗಳವಾರದಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆಯಾಗಲಿದ್ದು, ಖರೀದಿಗೆ ಹೆಚ್ಚಿನ ಸಮಯ ಸಿಗಲಿದ್ದು, ಬೆಳಗ್ಗೆ 7ರಿಂದ ಸಂಜೆ 7ರ ತನಕ ಅಂಗಡಿಗಳು ಕಾರ್ಯಾಚರಿಸಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಐದು ಶಾಸಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರದಂದು ಜನರ ಪ್ರತಿಕ್ರಿಯೆಗಳನ್ನು ಗಮನಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಂಗಳವಾರದಂದು ವೈನ್‌ಶಾಪ್ ಮಾತ್ರ ಕಾರ್ಯಾಚರಣೆ ನಡೆಸಲಿದ್ದು, ಬಾರ್ ಓಪನ್ ಇಡಲು ಅವಕಾಶಗಳಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಡುಪಿ: ನಾಳೆಯಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

BREAKING NEWS ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮೂರನೇ ಬಲಿ

ಮಂಗಳೂರು, ಎ.30: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಬಂಟ್ವಾಳ ವೃದ್ಧೆ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ವೈರಸ್ ಮೂರನೇ ಬಲಿ ಪಡೆದಿದೆ. ಬಂಟ್ವಾಳದ ಕೊರೋನಾ ಪೀಡಿತ ವೃದ್ದೆ ಚಿಕಿತ್ಸೆ ಫಲಿಸದೇ ಗುರುವಾರ ಸಂಜೆ ಮೃತಪಟ್ಟಿದ್ದಾರೆ. ಬಂಟ್ವಾಳ ಕಸಬಾದ 69 ವರ್ಷದ ಮೃದ್ಧೆ ಎ.21ರಂದು ಕೊರೋನ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಎ.19ರಂದು ಬಂಟ್ವಾಳ ಪೇಟೆಯ ಸಾವನ್ನಪ್ಪಿದ್ದ ಮಹಿಳೆಯಿಂದ ಸೋಂಕು ತಗುಲಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.

BREAKING NEWS ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮೂರನೇ ಬಲಿ Read More »

ಕರಾವಳಿ

ಆರೆಂಜ್‌ನಿಂದ ಮತ್ತೆ ರೆಡ್ ವಲಯಕ್ಕೆ ದ.ಕ. ಜಿಲ್ಲೆ

ಮಂಗಳೂರು, ಎ.30: ರಾಜ್ಯ ಆರೋಗ್ಯ ಇಲಾಖೆ ಹೊಸ ಮಾನದಂಡಗಳೊಂದಿಗೆ ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವನ್ನು ಪಟ್ಟಿಮಾಡಿದ್ದು, ರಾಜ್ಯದ 15 ಜಿಲ್ಲೆಗಳನ್ನು ಕೆಂಪು ವಲಯಗಳನ್ನಾಗಿ ಘೋಷಿಸಿದೆ. ರೆಡ್ ಝೋನ್ ಪಟ್ಟಿಯಲ್ಲಿ ಈ ಮೊದಲು ಆರೆಂಜ್ ಝೋನ್‌ನಲ್ಲಿದ್ದ ದ.ಕ.ವೂ ಸೇರಿಕೊಂಡಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಮತ್ತೆ ರೆಡ್ ರೆನ್‌ಗೆ ಇಳಿಯಲ್ಪಟ್ಟಿದೆ. ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ಆಧರಿಸಿ ಈ ವಲಯಗಳನ್ನು ಗುರುತಿಸಲಾಗಿದೆ. ಕಳೆದ 14 ದಿನಗಳಲ್ಲಿ ಸೋಂಕು ದೃಢಪಟ್ಟ ಜಿಲ್ಲೆಯನ್ನು ಕೆಂಪು

ಆರೆಂಜ್‌ನಿಂದ ಮತ್ತೆ ರೆಡ್ ವಲಯಕ್ಕೆ ದ.ಕ. ಜಿಲ್ಲೆ Read More »

ಕರಾವಳಿ

ವಿಶ್ವದಲ್ಲಿ ಕೊರೋನಗೆ 2.25 ಲಕ್ಷ ಮಂದಿ ಬಲಿ, 31.8 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ಲಂಡನ್, ಎ.30: ವಿಶ್ವದೆಲ್ಲೆಡೆ ಕೊರೋನ ವೈರಸ್ ರಣಕೇಕೆ ಹಾಕುತ್ತಿದ್ದು, ಮಹಾಮಾರಿಗೆ ವಿವಿಧ ರಾಷ್ಟ್ರಗಳಲ್ಲಿ 2.25 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 31.8 ಲಕ್ಷ ಮಂದಿ ಸೋಂಕಿಗೊಳಗಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 7,708 ಮಂದಿ ಬಲಿಯಾಗಿದ್ದು, ಹೊಸದಾಗಿ 49,950 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 31,86,458ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 2,26,000ಕ್ಕೆ ಏರಿಕೆಯಾಗಿದೆ. ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುವ ಅಮೆರಿಕಾ ಒಂದೇ ರಾಷ್ಟ್ರದಲ್ಲಿ ಈ ವರೆಗೂ 60,853 ಬಲಿಯಾಗಿದ್ದಾರೆ. ಅಲ್ಲದೆ, 10,48,800 ಮಂದಿಯಲ್ಲಿ ಸೋಂಕು

ವಿಶ್ವದಲ್ಲಿ ಕೊರೋನಗೆ 2.25 ಲಕ್ಷ ಮಂದಿ ಬಲಿ, 31.8 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಕೊರೋನ ಸೋಂಕಿಗೆ 1074 ಮಂದಿ ಬಲಿ, 33,000 ಕ್ಕೇರಿದ ಸೋಂಕಿತರ ಸಂಖ್ಯೆ

ಹೊಸದಿಲ್ಲಿ, ಎ.30: ದೇಶದಲ್ಲಿ ಕೊರೋನ ಮಹಾಮಾರಿ ವೈರಸ್‌ಗೆ 1,074 ಮಂದಿಯನ್ನು ಬಲಿಪಡೆದುಕೊಂಡಿದೆ. ಅಲ್ಲದೆ, 33,000 ಸಾವಿರಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 67 ಮಂದಿ ಸಾವನ್ನಪ್ಪಿದ್ದು, 1,718 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 33,050ಕ್ಕೆ ಏರಿಕೆಯಾಗಿದ್ದು, 1,074 ಮಂದಿ ಬಲಿಯಾಗಿದ್ದಾರೆ. ಈ ನಡುವೆ ಸೋಂಕಿತರ ಜೊತೆ ಜೊತೆಗೆ ಗುಣಮುಖರಾಗುತ್ತಿರುವ ಸಂಖ್ಯೆ ಕೂಡ ಏರಿಕೆಯಾಗಿದ್ದು, 30 ಸಾವಿರ ಸೋಂಕಿತರ ಪೈಕಿ ವಿವಿಧ ರಾಜ್ಯಗಳಲ್ಲಿ 8,325 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಗಳಿಂದ

ದೇಶದಲ್ಲಿ ಕೊರೋನ ಸೋಂಕಿಗೆ 1074 ಮಂದಿ ಬಲಿ, 33,000 ಕ್ಕೇರಿದ ಸೋಂಕಿತರ ಸಂಖ್ಯೆ Read More »

ರಾಷ್ಟ್ರೀಯ ನ್ಯೂಸ್

ರಾಜ್ಯದ ಐವರು ಸಚಿವರು ಕ್ವಾರೆಂಟೈನ್‌ಗೆ

ಬೆಂಗಳೂರು, ಎ.30: ಕರ್ನಾಟಕದ ಐವರು ಸಚಿವರು ಕೊರೋನಾ ಪರೀಕ್ಷೆಯನ್ನು ನಡೆಸಿದ್ದು, ಕ್ಯಾಮರಾ ಮ್ಯಾನ್ ಜೊತೆ ಸಂಪರ್ಕಕ್ಕೆ ಬಂದ ಕಾರಣದಿಂದ ಸಚಿವರು ಪರೀಕ್ಷೆಯನ್ನು ನಡೆಸಿದ್ದಾರೆ. ಮೂವರು ಸಚಿವರ ವರದಿಗಳು ಈಗಾಗಲೇ ಬಂದಿದೆ. ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಸಿ.ಟಿ. ರವಿ, ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್ ಅವರ ಕೊರೋನಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಖಾಸಗಿ ವಾಹಿನಿ ಕ್ಯಾಮೆರಾಮ್ಯಾನ್ ಸಂಪರ್ಕಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಐವರು ಸಚಿವರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ

ರಾಜ್ಯದ ಐವರು ಸಚಿವರು ಕ್ವಾರೆಂಟೈನ್‌ಗೆ Read More »

ಕರ್ನಾಟಕ

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ

ಮುಂಬೈ, ಎ.30: ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್‌ (67)ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಉಸಿರಾಟದ ತೊಂದರೆ ಸಹ ಕಾಣಿಸಿಕೊಂಡ ಕಾರಣ ಬುಧವಾರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಒಂದು ವರ್ಷಗಳ ಕಾಲ ಅಮೆರಿಕಾದಲ್ಲಿ ಕ್ಯಾನ್ಸರ್‌ಗಾಗಿ ಚಿಕಿತ್ಸೆ ಪಡೆದಿದ್ದು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಾಸಾಗಿದ್ದರು. ಫೆಬ್ರವರಿ ತಿಂಗಳಲ್ಲಿ ಅನಾರೋಗ್ಯದಿಂದಾಗಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.    

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ Read More »

ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಪತ್ರಕರ್ತ ಸೇರಿದಂತೆ ಇಬ್ಬರಿಗೆ ಕೊರೋನ ಪಾಸಿಟಿವ್

ಕಾಸರಗೋಡು, ಎ.29: ಓರ್ವ ಪತ್ರಕರ್ತ ಸೇರಿದಂತೆ ಬುಧವಾರ ಕಾಸರಗೋಡಿನಲ್ಲಿ ಇಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಖಾಸಗಿ ಚಾನೆಲ್‌ವೊಂದರ ವರದಿಗಾರನಿಗೆ ಸೋಂಕು ದೃಢಪಟ್ಟಿದೆ. ಕೇರಳದಲ್ಲಿ ಪ್ರಥಮ ಬಾರಿಗೆ ಪತ್ರಕರ್ತರೋರ್ವರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ 178ಕ್ಕೇರಿದೆ. ಇಬ್ಬರಿಗೆ ಸೋಂಕಿತರ ಸಂಪರ್ಕ ದಿಂದ ಸೋಂಕು ತಗಲಿದ್ದು, ಬುಧವಾರ ಮೂವರು ಗುಣಮುಖರಾಗಿದ್ದಾರೆ. ಕೇರಳದಲ್ಲಿ ಇಂದು 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1,990 ಮಂದಿ ನಿಗಾದಲ್ಲಿದ್ದು, ಈ ಪೈಕಿ 29 ಮಂದಿ ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ. 695 ಮಂದಿಯ ಸ್ಯಾಂಪಲ್ ಪರೀಕ್ಷಾ

ಕಾಸರಗೋಡು: ಪತ್ರಕರ್ತ ಸೇರಿದಂತೆ ಇಬ್ಬರಿಗೆ ಕೊರೋನ ಪಾಸಿಟಿವ್ Read More »

ಕರಾವಳಿ

ಬಂಟ್ವಾಳ: ಮಲಗಿದ್ದಲ್ಲೇ ಮಾಜಿ ಸೈನಿಕ ನಿಧನ; ಐದು ದಿನಗಳ ಬಳಿಕ ಪ್ರಕರಣ ಬೆಳಕಿಗೆ

ಬಂಟ್ವಾಳ, ಎ.29: ಮಾಜಿ ಸೈನಿಕರೊಬ್ಬರು ಮನೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟಿದ್ದು, 5 ದಿನಗಳ ಬಳಿಕ ವಿಚಾರ ಬೆಳಕಿಗೆ ಬಂದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಕಲ್ಲು ಗ್ರಾಮದ ಪಲ್ಲೊಟ್ಟು ಎಂಬಲ್ಲಿ ನಡೆದಿದೆ. ಮೃತರನ್ನು ಮಾಜಿ ಸೈನಿಕ ಅವಿವಾಹಿತ ರಿಚಾರ್ಡ್ ಫೆರ್ನಾಂಡಿಸ್(50) ಎಂದು ಗುರುತಿಸಲಾಗಿದೆ. ದಿನ ನಿತ್ಯ ಇವರು ಹತ್ತಿರದ ಹಾಲಿನ ಡೈರಿಗೆ ಹಾಲು ಕೊಂಡುಹೋಗುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಹಾಲಿನ ಡೈರಿಗೆ ಬರದೇ ಇರುವುದನ್ನು ಗಮನಿಸಿ ಮನೆಯತ್ತ ಸ್ಥಳೀಯರು ಬಂದು ಗಮನಿಸಿದ ಸಂದರ್ಭದಲ್ಲಿ ಮೃತಪಟ್ಟಿರುವ

ಬಂಟ್ವಾಳ: ಮಲಗಿದ್ದಲ್ಲೇ ಮಾಜಿ ಸೈನಿಕ ನಿಧನ; ಐದು ದಿನಗಳ ಬಳಿಕ ಪ್ರಕರಣ ಬೆಳಕಿಗೆ Read More »

ಕರಾವಳಿ

ಕಾಸರಗೋಡು ಜಿಲ್ಲಾಧಿಕಾರಿಗೆ ಕ್ವಾರಂಟೈನ್

ಕಾಸರಗೋಡು, ಎ.29: ಜಿಲ್ಲೆಯಲ್ಲಿ ಬುಧವಾರದಂದು ಪತ್ರಕರ್ತರೊಬ್ಬರಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಕ್ವಾರಂಟೈನ್ ವಿಧಿಸಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿ ಮಾತ್ರವಲ್ಲದೆ, ಅವರ ಚಾಲಕ ಹಾಗೂ ಗನ್‌ಮ್ಯಾನ್ ಕೂಡ ನಿಗಾದಲ್ಲಿದ್ದಾರೆ. ಸೋಂಕು ಪತ್ತೆಯಾದ ಪತ್ರಕರ್ತ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಯ ಸಂದರ್ಶನ ನಡೆಸಿದ್ದರು. ಇದೀಗ ಪತ್ರಕರ್ತನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ನಿಗಾದಲ್ಲಿರಲು ತೀರ್ಮಾನಿಸಿದ್ದಾರೆ.

ಕಾಸರಗೋಡು ಜಿಲ್ಲಾಧಿಕಾರಿಗೆ ಕ್ವಾರಂಟೈನ್ Read More »

ಕರಾವಳಿ
Scroll to Top