news kadaba desk

‘ಪಿಎಂ ಕುಸುಮ್ ಯೋಜನೆ’ ಕರ್ನಾಟಕದಿಂದಲೇ 1.79 ಲಕ್ಷ ರೈತರ ಬೇಡಿಕೆ               

(ನ್ಯೂಸ್ ಕಡಬ)newskadaba.com ನವದೆಹಲಿ, ಆ.08. ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ ಅಳವಡಿಕೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ.ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಜೋಶಿ,, ಕರ್ನಾಟಕದಿಂದ ಬರೋಬ್ಬರಿ 1,79,588 ಸೋಲಾರ್ ಪಂಪ್‌ ಅಳವಡಿಕೆಗೆ ಬೇಡಿಕೆ ಬಂದಿದೆ ಎಂದು ಮಾಹಿತಿ ನೀಡಿದರು. ವಿಪಕ್ಷದವರು ಪಿಎಂ ಕುಸುಮ್ ಯೋಜನೆ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಹಾಗೊಂದು ವೇಳೆ ಈ ಯೋಜನೆ ವಿಫಲವಾಗಿದ್ದರೆ ಪ್ರಸ್ತುತ […]

‘ಪಿಎಂ ಕುಸುಮ್ ಯೋಜನೆ’ ಕರ್ನಾಟಕದಿಂದಲೇ 1.79 ಲಕ್ಷ ರೈತರ ಬೇಡಿಕೆ                Read More »

ಕರ್ನಾಟಕ

2024ರ ‘ಕಲ್ಲಚ್ಚು ಪ್ರಶಸ್ತಿ’ಗೆ ಡಾ.ನಾಗೇಶ್ ಪ್ರಭು ಆಯ್ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಆ.08. ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಯಲ್ಲಿ ಹಿರಿಯ ಪತ್ರಕರ್ತರು ಮತ್ತು ಲೇಖಕರಾಗಿರುವ ಡಾ. ನಾಗೇಶ್ ಪ್ರಭು ಅವರು ಮಂಗಳೂರಿನ ಕಲ್ಲಚ್ಚು ಪ್ರಕಾಶನದ 15ನೇ ಆವೃತ್ತಿಯ 2024ರ ಪ್ರತಿಷ್ಠಿತ “ಕಲ್ಲಚ್ಚು ಪ್ರಶಸ್ತಿ”ಗೆ ಆಯ್ಕೆ ಆಗಿದ್ದು ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಗಣ್ಯ ಆತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುವುದೆಂದು ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ ಆರ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ, ಡಾ ನಾಗೇಶ್ ಪ್ರಭು “ದಿ ಹಿಂದೂ” ಪತ್ರಿಕೆಯ ಬೆಂಗಳೂರು

2024ರ ‘ಕಲ್ಲಚ್ಚು ಪ್ರಶಸ್ತಿ’ಗೆ ಡಾ.ನಾಗೇಶ್ ಪ್ರಭು ಆಯ್ಕೆ Read More »

ಕರಾವಳಿ

‘ಭಂಡ ಕಾಂಗ್ರೆಸ್ ಸರಕಾರದಿಂದ ನಾಡಿನ ಜನತೆಗೆ ಒಳ್ಳೆಯದಾಗಲು ಸಾಧ್ಯವಿಲ್ಲ        ಶಾಸಕ ವಿಜಯೇಂದ್ರ                       

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.08. ಅಹಿಂದ ಹೆಸರು ಹೇಳಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಹಲವು ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು. ಐದನೇ ದಿನವಾದ ಇಂದು ಮೈಸೂರು ಚಲೋ ಪಾದಯಾತ್ರೆಯು ಮುಂದುವರೆಯಿತು. ಈ ಸಂದರ್ಭದಲ್ಲಿ ಮಂಡ್ಯದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ವಾಲ್ಮೀಕಿ ನಿಗಮದ ಹಗರಣ, ಮೈಸೂರಿನ ಸಾವಿರಾರು ಕೋಟಿಯ ಮೂಡ ನಿವೇಶನ ಹಗರಣ ಇರಬಹುದು; ಇಂಥ ಭ್ರಷ್ಟ, ದುಷ್ಟ ಕಾಂಗ್ರೆಸ್

‘ಭಂಡ ಕಾಂಗ್ರೆಸ್ ಸರಕಾರದಿಂದ ನಾಡಿನ ಜನತೆಗೆ ಒಳ್ಳೆಯದಾಗಲು ಸಾಧ್ಯವಿಲ್ಲ        ಶಾಸಕ ವಿಜಯೇಂದ್ರ                        Read More »

ಕರ್ನಾಟಕ

ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಭಾರಿ ವಾಹನಗಳ ದಟ್ಟಣೆ       ಕುಸಿತದ ಆತಂಕ                     

(ನ್ಯೂಸ್ ಕಡಬ)newskadaba.com ಉಡುಪಿ, ಆ.08. ಭಾರೀ ವಾಹನಗಳ ದಟ್ಟಣೆಯಿಂದಾಗಿ ಸಂತೆಕಟ್ಟೆಯ ಸರ್ವಿಸ್ ರಸ್ತೆಯು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವ ನಡುವೆಯೇ ಇರುವ ಸುರಕ್ಷತಾ ಕಾಳಜಿಯನ್ನು  ಹೆಚ್ಚಿಸುತ್ತಿದೆ. ವಾಹನ ಸಂಚಾರಕ್ಕೆ ಮುಕ್ತವಾಗಿರುವ ಅಂಡರ್‌ಪಾಸ್‌ ಹೊಂಡಗಳಿಂದ ಕೂಡಿದ್ದು, ಪ್ರಯಾಣ ಅಪಾಯಕಾರಿಯಾಗಿದೆ. ಪರಿಣಾಮವಾಗಿ, ಅನೇಕ ಚಾಲಕರು ಪರ್ಯಾಯ ಮಾರ್ಗವಾಗಿ ಸರ್ವಿಸ್ ರಸ್ತೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಭಾರವಾದ ಹೊರೆಗಳಿಂದಾಗಿ ರಸ್ತೆ ಕುಸಿತದ ಅಪಾಯವನ್ನು ಇದು ತೀವ್ರಗೊಳಿಸಿದೆ, ಇದು ಗಮನಾರ್ಹ ಹಾನಿಗೆ ಕಾರಣವಾಗಬಹುದು ಎಂಬುದು ಆತಂಕ.  

ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಭಾರಿ ವಾಹನಗಳ ದಟ್ಟಣೆ       ಕುಸಿತದ ಆತಂಕ                      Read More »

ಕರಾವಳಿ

ಏಷ್ಯಾದ ಅತಿದೊಡ್ಡ ಮೀನುಗಾರಿಕೆ ಕೇಂದ್ರ ಮಲ್ಪೆ ಬಂದರಿನಲ್ಲಿ ಸ್ವಚ್ಛತಾ ಅಭಿಯಾನ

(ನ್ಯೂಸ್ ಕಡಬ)newskadaba.com ಉಡುಪಿ, ಆ.08.  ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಇಲಾಖೆಯು ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯ ಮೀನುಗಾರರ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮಳೆಗಾಲದಲ್ಲಿ, ಗಮನಾರ್ಹ ಪ್ರಮಾಣದ ತ್ಯಾಜ್ಯವು ಸಮುದ್ರಕ್ಕೆ ಸೇರುತ್ತದೆ ಮತ್ತು ಮಲ್ಪೆ ಬಂದರು ಪ್ರದೇಶದಲ್ಲಿ ಸೆಡಿಮೆಂಟೇಶನ್ ಮೂಲಕ ಗಣನೀಯ ಪ್ರಮಾಣದ ಕಸದ ಶೇಖರಣೆ ಕಂಡುಬಂದಿದೆ. ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳುವುದರೊಂದಿಗೆ, ಬಂದರು ಲಕ್ಷಾಂತರ ಸಂದರ್ಶಕರು ಪ್ರತಿದಿನ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನೋಡಬಹುದು. ಪರಿಸ್ಥಿತಿಯನ್ನು ಪರಿಹರಿಸಲು,

ಏಷ್ಯಾದ ಅತಿದೊಡ್ಡ ಮೀನುಗಾರಿಕೆ ಕೇಂದ್ರ ಮಲ್ಪೆ ಬಂದರಿನಲ್ಲಿ ಸ್ವಚ್ಛತಾ ಅಭಿಯಾನ Read More »

ಕರಾವಳಿ

 ಶಿರಾಡಿಘಾಟ್​​ನಲ್ಲಿ ಎಲ್ಲಾ ವಾಹನಗಳಿಗೂ ಸಂಚಾರಕ್ಕೆ ಅವಕಾಶ

(ನ್ಯೂಸ್ ಕಡಬ)newskadaba.com ಹಾಸನ, ಆ.08.  ಕಳೆದ ಕೆಲವು ದಿನಗಳ ಆತಂಕದ ಬಳಿಕ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತವಾಗಿದ್ದು, ದಿನದ 24 ಗಂಟೆಯೂ ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಲವು ವಾಹನಗಳ ಮೇಲೆ ಮಣ್ಣು ಕುಸಿದಿದ್ದು, ಗುಡ್ಡ ಕುಸಿದಿದ್ದರಿಂದ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ವಾಹನಗಳ ಓಡಾಟದ ಬಗ್ಗೆ ಸಕಲೇಶಪುರ ಎಸಿ ಶೃತಿ ಅವರು ಮಾಹಿತಿ ನೀಡಿದ್ದಾರೆ.  

 ಶಿರಾಡಿಘಾಟ್​​ನಲ್ಲಿ ಎಲ್ಲಾ ವಾಹನಗಳಿಗೂ ಸಂಚಾರಕ್ಕೆ ಅವಕಾಶ Read More »

ಕರ್ನಾಟಕ

ಡೆಂಗ್ಯೂ ಪ್ರಕರಣ- ‘ಮುನ್ನೆಚ್ಚರಿಕೆ ಅಗತ್ಯ’                 ದಿನೇಶ್‌ ಗುಂಡೂರಾವ್‌ ಸೂಚನೆ                  

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.08. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಇಳಿಕೆ ಕಂಡರೂ ಅಕ್ಟೋಬರ್ ಅಂತ್ಯದವರೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಗಳು ಕಡಿಮೆಯಾದ ಬಳಿಕ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬಂದಿತು ಎನ್ನಲು ಸಾಧ್ಯವಿಲ್ಲ. ಬಿಸಿಲು-ಮಳೆಯವಾತಾವರಣದಿಂದ ಪ್ರಕರಣಗಳ ಏರಿಳಿತವಾಗುತ್ತದೆ ಎಂದರು. ರಾಜ್ಯದಲ್ಲಿ 259 ಮಂದಿ ಹೊಸದಾಗಿ ಡೆಂಗ್ಯೂ ಪೀಡಿತರಾಗಿರುವುದು ದೃಢಪಟ್ಟಿದ್ದು, ಈ ಜ್ವರ ಪೀಡಿತರಲ್ಲಿ 395 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಸಕ್ರಿಯ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2,085ಕ್ಕೆ

ಡೆಂಗ್ಯೂ ಪ್ರಕರಣ- ‘ಮುನ್ನೆಚ್ಚರಿಕೆ ಅಗತ್ಯ’                 ದಿನೇಶ್‌ ಗುಂಡೂರಾವ್‌ ಸೂಚನೆ                   Read More »

ಕರ್ನಾಟಕ

‘ಶಾಸಕರ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ’   ಸಚಿವ ವಿನಯ್ ಕುಮಾರ್ ಸೊರಕೆ                    

(ನ್ಯೂಸ್ ಕಡಬ)newskadaba.com ಕಾಪು, ಆ.08. ಶಾಸಕರ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಾಸಕರಿಗೆ ಟಿಕೆಟ್ ನಿರಾಕರಿಸಿದಾಗ ‘ಒಳ್ಳೆಯ ದಿನಗಳು ಬರಲಿವೆ’ ಎಂದು ಸಾಂತ್ವನ ಹೇಳಿದರು. ನಮ್ಮ ಕುಟುಂಬ ಭೂಮಾಲೀಕ ಹಿನ್ನೆಲೆಯಿಂದ ಬಂದಿದ್ದು, ಮಾಜಿ ಪ್ರಧಾನಿ ಇಂದಿರಾಗಾಂಧಿ ಭೂಸುಧಾರಣಾ ಕಾಯ್ದೆ ತಂದಾಗ ನಾವೇ ಭೂಮಿ ಹಂಚಿಕೆ ಮಾಡಿದ್ದೆವು, ಭೂ ನ್ಯಾಯಮಂಡಳಿ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದೇನೆ ಎಂದು ಸೊರಕೆ ಹೇಳಿದರು.

‘ಶಾಸಕರ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ’   ಸಚಿವ ವಿನಯ್ ಕುಮಾರ್ ಸೊರಕೆ                     Read More »

ಕರಾವಳಿ

 ‘ಹಳೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ’             ಡಿಕೆಶಿ ವಿರುದ್ಧ ಹೆಚ್‌ಡಿಕೆ ಟಾಂಗ್‌          

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.08.   ತಮ್ಮ ಬಗ್ಗೆ ವೀಡಿಯೋ ಪ್ಲೇ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅವರು ತಮ್ಮ ಹಳೆಯ ಚಾಳಿ ಬಿಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಮೈಸೂರು ಚಲೋ ಐದನೇ ದಿನದ ಪಾದಯಾತ್ರೆ ವೇಳೆ ಮಂಡ್ಯದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಬಹಳಷ್ಟು ಜನರು ಕೊಚ್ಚೆಗಳ ಬಗ್ಗೆ ಮಾತಾಡಬಾರದು ಎಂದು ಸಲಹೆ ಕೊಟ್ಟಿದ್ದಾರೆ. ನಾನು ಮಾತನಾಡಬಾರದು ಎಂದು ಕೊಂಡಿದ್ದೆ. ಮಂಡ್ಯದಲ್ಲಿ ಅವರು ಒಂದು ವೀಡಿಯೋ ಪ್ಲೇ ಮಾಡಿದ್ದಾರೆ.

 ‘ಹಳೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ’             ಡಿಕೆಶಿ ವಿರುದ್ಧ ಹೆಚ್‌ಡಿಕೆ ಟಾಂಗ್‌           Read More »

ಕರ್ನಾಟಕ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ-ಹತ್ಯೆ ಪ್ರಕರಣ        ಆರೋಪಿ ಅರೆಸ್ಟ್     

(ನ್ಯೂಸ್ ಕಡಬ)newskadaba.com ಮಂಗಳೂರು, ಆ.08.  14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 51 ವರ್ಷದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕತ್ತು ಹಿಸುಕಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ನಂತರ ಬಾಲಕಿಯ ಚಿಕ್ಕಪ್ಪ ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/2024 ಕಲಂ 103 (1) ಬಿ.ಎನ್.ಎಸ್.ಯಂತೆ ಪ್ರಕರಣ ದಾಖಲಾಗಿರುತ್ತದೆ ಎನ್ನಲಾಗಿದೆ. ಆರೋಪಿಯನ್ನು ಫಕೀರಪ್ಪ ಹಣಮಪ್ಪ ಮಾದರ(51) ಎಂದು ಗುರುತಿಸಲಾಗಿದ್ದು, ಮೂಲತಃ ಬೆಳಗಾವಿ ಜಿಲ್ಲೆಯ ಹಂಚಿನಾಳ್,

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ-ಹತ್ಯೆ ಪ್ರಕರಣ        ಆರೋಪಿ ಅರೆಸ್ಟ್      Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top