news kadaba desk

ಶಕ್ತಿ ಯೋಜನೆ ಎಫೆಕ್ಟ್- ಶ್ರೀಮಂತವಾದ ದೇವಾಲಯಗಳು

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.21. ಸಾರಿಗೆ ಬಸ್ ಗಳಲ್ಲಿ ಶಕ್ತಿಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರದ ವ್ಯವಸ್ಥೆ ಕಲ್ಪಿಸಿದ ಬೆನ್ನಲ್ಲೇ ದೇವಾಸ್ಥನಗಳಿಗೆ ಮಹಿಳೆಯರ ಭೇಟಿ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ರಾಜ್ಯದ ದೇವಾಲಯಗಳಿಗೆ ಆದಾಯ ಹರಿದುಜ ಬರಲು ಶುರುವಾಗಿದೆ ಎಂದು ವರದಿ ತಿಳಿಸಿದೆ. ರಾಜ್ಯದ ತೀರ್ಥ ಕ್ಷೇತ್ರಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಂದೇ ತಿಂಗಳಿನಲ್ಲಿ ಧಾರ್ಮಿಕ ಇಲಾಖೆಯ 58 ದೇವಾಲಯಗಳ ಹುಂಡಿಗಳಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಭಾರೀ […]

ಶಕ್ತಿ ಯೋಜನೆ ಎಫೆಕ್ಟ್- ಶ್ರೀಮಂತವಾದ ದೇವಾಲಯಗಳು Read More »

ಕರ್ನಾಟಕ

ಬೆಂಗಳೂರು ಅಲ್ಲ ಇಡೀ ಕರ್ನಾಟಕವೇ ಟಾರ್ಗೆಟ್ – ಶಂಕಿತ ಉಗ್ರರಿಂದ ಸ್ಪೋಟಕ ಹೇಳಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.21. ಬಂಧಿತ ಶಂಕಿತ ಉಗ್ರರ ಕೃತ್ಯಗಳ ಪ್ಲಾನ್‍ಗಳು ಬಗೆದಷ್ಟೂ ಬಯಲಾಗುತ್ತಿದ್ದು, ಶಂಕಿತ ಉಗ್ರರ ಟಾರ್ಗೆಟ್ ಬೆಂಗಳೂರು ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕೋಮುಗಲಭೆ ಸೃಷ್ಟಿಸಿ ನರಮೇಧಕ್ಕೆ ಷಡ್ಯಂತ್ರ ರೂಪಿಸಿರುವುದು ಎಂಬಂತಹ ಒಂದೊಂದೇ ಸ್ಫೋಟಕ ಸತ್ಯಗಳು ಕೇಂದ್ರ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿದ ವೇಳೆ ಹೊರ ಬರುತ್ತಿರುವುದಾಗಿ ತಿಳಿದು ಬಂದಿದೆ. ಶಂಕಿತ ಉಗ್ರರು ರಾಜ್ಯಾದ್ಯಂತ ರಕ್ತಪಾತ, ನರಮೇಧ, ಪೈಶಾಚಿಕ ಕೃತ್ಯಕ್ಕೆ

ಬೆಂಗಳೂರು ಅಲ್ಲ ಇಡೀ ಕರ್ನಾಟಕವೇ ಟಾರ್ಗೆಟ್ – ಶಂಕಿತ ಉಗ್ರರಿಂದ ಸ್ಪೋಟಕ ಹೇಳಿಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತದಿಂದ ಹಾರಿದ ಬಾಲಕಿ – ವಿಡಿಯೋ ವೈರಲ್..!

(ನ್ಯೂಸ್ ಕಡಬ)newskadaba.com ಛತ್ತೀಸ್ ಗಢ, ಜು.21. ಶಾಲಾ ಬಾಲಕಿಯೊಬ್ಬಳು ಪೋಷಕರು, ಜಾಸ್ತಿ ಮೊಬೈಲ್ ಬಳಸಬೇಡ ಎಂದು ಆಕೆಗೆ ಹೇಳಿದ್ದಕ್ಕೆ, ಮನನೊಂದು 90 ಅಡಿ ಇರುವ ಈ ಜಲಪಾತದಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ ಘಟನೆ ಛತ್ತೀಸ್ ಗಢದ ಬಸ್ತಾರ್ ನಲ್ಲಿರುವ ಚಿತ್ರಕೋಟೆ ಎಂಬ ಜಲಪಾತದಲ್ಲಿ ನಡೆದಿದೆ. ಜಲಪಾತಕ್ಕೆ ಧುಮುಕುವ ಮೊದಲು ಆಕೆ ಸ್ವಲ್ಪ ಹೊತ್ತು ಅದರ ಅಂಚಿನಲ್ಲಿ ಓಡಾಡಿದ್ದಾಳೆ. ಇದನ್ನು ನೋಡಿದ ಸ್ಥಳೀಯರು/ಪ್ರವಾಸಿಗರು, ಆಕೆಯನ್ನು ಕೂಗಿ ನಿಲ್ಲುವಂತೆ ಹೇಳಿದ್ದಾರೆ. ಬಳಿಕ ಹಾರಿರುವ ವಿಡಿಯೋ ವೈರಲ್ ಆಗಿದೆ.

ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತದಿಂದ ಹಾರಿದ ಬಾಲಕಿ – ವಿಡಿಯೋ ವೈರಲ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಅಮೆರಿಕ, ಜು.21. ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಯುನೈಟೆಡ್ ಸ್ಟೇಟ್ಸ್‌ನ ನೆವಾಡಾದಲ್ಲಿ ನಡೆದಿದೆ. ವುಡ್ರೋ ಟರ್ನರ್ ಬಂಡಿ ಮೃತ ಬಾಲಕ ಎಂದು ಗುರುತಿಸಲಾಗಿದೆ. ನೆವಾಡಾದಲ್ಲಿ ಎರಡು ವರ್ಷದ ಬಾಲಕ ಅಪರೂಪದ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಬಾಲಕನ ಆರೋಗ್ಯದಲ್ಲಿ ಆಗಿರುವ ಏರುಪೇರು ಗಮನಕ್ಕೆ ಬಂದು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರಿಗೆ ರೋಗದ ಲಕ್ಷಣದ ಬಗ್ಗೆ ತಿಳಿದಿದೆ. ಎರಡು ವರ್ಷದ ಮಗುವಿಗೆ ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದಾರೆ. ಏಕೆಂದರೆ,

ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಲಾರಿಯಿಂದ ಲಕ್ಷಾಂತರ ರೂ.ನಗದು ಕಳವು ➤ ಕಂಡಕ್ಟರ್ ನಾಪತ್ತೆ; ದೂರು ದಾಖಲು

(ನ್ಯೂಸ್ ಕಡಬ)newskadaba.com ಪುತ್ತೂರು, ಜು.21. ಅಡಿಕೆ ಸಾಗಾಟದ ಲಾರಿಯೊಂದರಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಮತ್ತು ಲಾರಿಯ ಕಂಡಕ್ಟರ್ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೂಣೆಯಲ್ಲಿರುವ ಅಝರ್ ಟ್ರೆಂಡಿಂಗ್ ಮತ್ತು ಪುತ್ತೂರಿಯಲ್ಲಿರುವ ಅಝರ್ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಮಾಲಕ ಬನ್ನೂರು ನಿವಾಸಿ ಅಝರ್ ಕಂಪೌಂಡ್ ನ ಕಲಂದರ್ ಇಬ್ರಾಹಿಂ ನೌಷದ್ ಎಂಬವರ ಲಕ್ಷಾಂತರ ರೂಪಾಯಿ ನಗದು ಕಳವಾಗಿದೆ.  

ಲಾರಿಯಿಂದ ಲಕ್ಷಾಂತರ ರೂ.ನಗದು ಕಳವು ➤ ಕಂಡಕ್ಟರ್ ನಾಪತ್ತೆ; ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಮಾದಕ ವಸ್ತು ಮತ್ತು MDMA ಮಾರಾಟ ➤ ಆರೋಪಿಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.21. ಮಾದಕ ವಸ್ತು ಮತ್ತು MDMA ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಎರಡು ಕಾರಿನಲ್ಲಿ ಬಂದು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ನಿಯಾಜ್ (28), ನಿಶಾದ್ (28), ಮೊಹಮ್ಮದ್ ರಝೀನ್ (24) ಎಂಬ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮಾದಕ ವಸ್ತು ಮತ್ತು MDMA ಮಾರಾಟ ➤ ಆರೋಪಿಗಳು ಪೊಲೀಸ್ ವಶಕ್ಕೆ Read More »

ಕರಾವಳಿ

ಗೃಹಲಕ್ಷ್ಮೀ ಯೋಜನೆ – ಡಿಸಿಯವರಿಂದ ನೋಂದಣಿ ಪ್ರಕ್ರಿಯೆ ವೀಕ್ಷಣೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಜು.21. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಯೋಜನೆಯಡಿ ನೋಂದಣಿಗಾಗಿ 9 ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ 3 ವಲಯ ಕಚೇರಿಗಳಲ್ಲಿ 6 ಕೇಂದ್ರಗಳು ಆರಂಭವಾಗಿವೆ. ಈ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಜು.20ರಂದು ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿದ್ದರು ಎನ್ನಲಾಗಿದೆ.

ಗೃಹಲಕ್ಷ್ಮೀ ಯೋಜನೆ – ಡಿಸಿಯವರಿಂದ ನೋಂದಣಿ ಪ್ರಕ್ರಿಯೆ ವೀಕ್ಷಣೆ..! Read More »

ಕರಾವಳಿ

ನಿವೃತ್ತ ಅಧಿಕಾರಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ..!

(ನ್ಯೂಸ್ ಕಡಬ)newskadaba.com ಮಣಿಪಾಲ, ಜು.21. ಕೇಂದ್ರ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿಯೊರ್ವರ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಮೃತರನ್ನು ಪೆರ್ಡೂರು ನಿವಾಸಿ 83 ವರ್ಷದ ಗೋಪಾಲ ನಾಯಕ್ ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಮೃತಪಟ್ಟು ಮೂರು ದಿನಗಳು ಕಳೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಣಿಪಾಲ ಪೊಲೀಸ್ ಠಾಣೆಯ ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ನೆರವಾದರು.  

ನಿವೃತ್ತ ಅಧಿಕಾರಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಮಾರಕಾಸ್ತ್ರದಿಂದ ಹೊಡೆದು ಯುವಕ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಜು.21. ಭದ್ರಾವತಿಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ರೌಡಿಶೀಟರ್ ಓರ್ವನಿಗೆ ಬರ್ಬರವಾಗಿ ಕೊಲೆ ಮಾಡಲಾಗಿದೆ‌. ಮುಜಾಯಿದ್ದೀನ್(32) ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಮಾರಕಾಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮುಜಾಯಿದ್ದೀನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಪೇಪರ್ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮಾರಕಾಸ್ತ್ರದಿಂದ ಹೊಡೆದು ಯುವಕ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಂದಾಪುರ: ತಡರಾತ್ರಿ ನಿದ್ದೆಗಣ್ಣಿನಲ್ಲಿ ಮನೆಯಿಂದ 3 ಕಿ.ಮೀ ನಡೆದ ಬಾಲಕಿ

(ನ್ಯೂಸ್ ಕಡಬ)newskadaba.com ಕುಂದಾಪುರ, ಜು.21. ಮನೆಯಲ್ಲಿ ಮಲಗಿದ್ದ ಆರು ವರ್ಷದ ಬಾಲಕಿಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಬೀದಿಯಲ್ಲಿ ವಾಹನ ಸಂಚರಿಸುತ್ತಿದ್ದವರ ಕಣ್ಣಿಗೆ ಬಿದ್ದ ಘಟನೆ ನಡೆದಿದೆ. ಕುಂದಾಪುರ ಸಮೀಪ ದಬ್ಬೆಕಟ್ಟೆ–ತೆಕ್ಕಟ್ಟೆ ರಸ್ತೆಯಲ್ಲಿ ರಾತ್ರಿ ಬಾರ್ ಬಂದ್ ಮಾಡಿ ತೆರಳುತ್ತಿದ್ದ ವೇಳೆ ಬಾಲಕಿ ರಸ್ತೆಯಲ್ಲಿ ತೆರಳುತ್ತಿರುವುದು ಕಣ್ಣಿಗೆ ಬಿದ್ದಿದ್ದು, ಈ ವೇಳೆ ಬಾಲಕಿಯನ್ನು ವಿಚಾರಿಸಿ ಅರ್ಚನಾ ಬಾರ್ ನ ವಿಶ್ವನಾಥ್ ಪೋಷಕರಿಗೆ ಕರೆಸಿದ್ದಾರೆ. ಮಗು ನಾಪತ್ತೆಯಾದ ವಿಷಯವೇ ತಿಳಿಯದೆ ಮನೆಯವರು ಮಗುವನ್ನು ಕಂಡು

ಕುಂದಾಪುರ: ತಡರಾತ್ರಿ ನಿದ್ದೆಗಣ್ಣಿನಲ್ಲಿ ಮನೆಯಿಂದ 3 ಕಿ.ಮೀ ನಡೆದ ಬಾಲಕಿ Read More »

ಕರ್ನಾಟಕ
Scroll to Top