news kadaba desk

7ನೇ ವೇತನ ಆಯೋಗ ಜಾರಿ..! ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಶುರುವಾಯ್ತು ಆರ್ಥಿಕ ಸಂಕಷ್ಟ..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.10. ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರ ನಿರ್ಧರಿಸಿದ್ದು, ಈ ನಡುವಲ್ಲೇ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ. ಅಧಿಕಾರಕ್ಕೆ ಬರುವುದಕ್ಕೂ ಮುನ್ನ 2023 ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದಗಳನ್ನು ಯಾವುದೇ ವಿಳಂಬ ನೀತಿ ಅನುಸರಿಸದೆ ಭರ್ತಿ ಮಾಡುತ್ತೇವೆಂದು ಭರವಸೆ ನೀಡಿದ್ದರು. ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ […]

7ನೇ ವೇತನ ಆಯೋಗ ಜಾರಿ..! ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಶುರುವಾಯ್ತು ಆರ್ಥಿಕ ಸಂಕಷ್ಟ..! Read More »

ಕರ್ನಾಟಕ

ಇಂದು(ಆ.10)ವಯನಾಡಿನ ಭೂಕುಸಿತ ಪ್ರದೇಶಕ್ಕೆ ಪ್ರಧಾನಿ ಭೇಟಿ..!

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ವಯನಾಡಿನ ಭೂಕುಸಿತಗೊಂಡ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಲಿದ್ದು, ಪರಿಹಾರ ಮತ್ತು ಪುನರ್ವಸತಿ ಪರಿಶೀಲಿಸಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕಣ್ಣೂರು ತಲುಪಲಿದ್ದಾರೆ. ನಂತರ ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ದುರಂತದಲ್ಲಿ ಬದುಕುಳಿದವರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಧಿಕಾರಿಗಳು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳ ಪ್ರಯತ್ನ ಹಾಗೂ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಅವರಿಗೆ ತಿಳಿಸುತ್ತೇವೆ ಎಂದು

ಇಂದು(ಆ.10)ವಯನಾಡಿನ ಭೂಕುಸಿತ ಪ್ರದೇಶಕ್ಕೆ ಪ್ರಧಾನಿ ಭೇಟಿ..! Read More »

ರಾಷ್ಟ್ರೀಯ ನ್ಯೂಸ್

ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಅಮನ್ ಸೆಹ್ರಾವತ್..!

(ನ್ಯೂಸ್ ಕಡಬ)newskadaba.com ಮಂಗಳೂರು, ಆ.10. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಹೊಸ ಇತಿಹಾಸ ನಿರ್ಮಿಸಿದ್ದು. 21ನೇ ವಯಸ್ಸಿವರಾದ ಅಮನ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. 57 ಕೆಜಿ ಪುರುಷರ ಫ್ರಿ ಸ್ಟೈಲ್‌ ವಿಭಾಗದಲ್ಲಿ ಅಮನ್‌ ನಿಗದಿತ ಸಮಯದಲ್ಲಿ 13-5 ಅಂಕಗಳಿಂದ ಪೋರ್ಟೊ ರಿಕೊದ ಡೇರಿಯನ್ ಡೋಯಿ ಕ್ರೂಜ್ ಅವರನ್ನು ಮಣಿಸಿದರು. ಈ ಮೂಲಕ ಭಾರತ ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಆರನೇ ಪದಕವನ್ನು ತನ್ನದಾಗಿಸಿಕೊಂಡಿದೆ. ಅಮನ್‌ ಈ ಬಾರಿಯ

ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಅಮನ್ ಸೆಹ್ರಾವತ್..! Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮತ್ತೇ ರೈಲು ಮಾರ್ಗದಲ್ಲಿ ಭೂಕುಸಿತ..! ಬೆಂಗಳೂರು- ಮಂಗಳೂರು ರೈಲು ಸಂಚಾರ ರದ್ದು      

(ನ್ಯೂಸ್ ಕಡಬ)newskadaba.com ಮಂಗಳೂರು, ಆ.10. ಎರಡು ದಿನದ ಹಿಂದಷ್ಟೇ ಆರಂಭಗೊಂಡ ಬೆಂಗಳೂರು-ಮಂಗಳೂರು ರೈಲು ಸೇವೆ ತಾತ್ಕಾಲಿಕವಾಗಿ ಮತ್ತೆ ರದ್ದುಗೊಳಿಸಿದ್ದು, ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತವಾಗಿದ ಪರಿಣಾಮ ರೈಲುಗಳ ಸಂಚಾರ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ. ಶನಿವಾರ ಮುಂಜಾನೆ ಸಕಲೇಶಪುರ ಹಾಗೂ ಬಾಳ್ಳುಪೇಟೆ ರೈಲು ಮಾರ್ಗ ಮಧ್ಯೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಶುಕ್ರವಾರ(ಆ.09) ದಂದು ಹೊರಟಿದ್ದ ಬೆಂಗಳೂರು-ಕಣ್ಣೂರು (ಕಣ್ಣೂರು ಎಕ್ಸ್ ಪ್ರೆಸ್) ಮತ್ತು ಬೆಂಗಳೂರು-ಮುರ್ಡೇಶ್ವರ (ಮುರ್ಡೇಶ್ವರ ಎಕ್ಸ್ ಪ್ರೆಸ್) ರೈಲುಗಳು ಆಲೂರು ಹಾಗೂ ಹಾಸನದಲ್ಲಿ ಸ್ಥಗಿತಗೊಂಡಿದೆ ಎಂದು ವರದಿ ತಿಳಿಸಿದೆ.

ಮತ್ತೇ ರೈಲು ಮಾರ್ಗದಲ್ಲಿ ಭೂಕುಸಿತ..! ಬೆಂಗಳೂರು- ಮಂಗಳೂರು ರೈಲು ಸಂಚಾರ ರದ್ದು       Read More »

ಕರ್ನಾಟಕ

ಉರುಳಿಗೆ ಸಿಲುಕಿ ಮೃತಪಟ್ಟ ಚಿರತೆ..! 

(ನ್ಯೂಸ್ ಕಡಬ)newskadaba.com ಕಾಸರಗೋಡು, ಆ.10. ಚಿರತೆಯೊಂದು ಉರುಳಿಗೆ ಸಿಲುಕಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ಅಣ್ಣಪ್ಪ ನಾಯ್ಕ್ ಎಂಬವರ ರಬ್ಬರ್ ತೋಟದಲ್ಲಿ ಉರುಳಿಗೆ ಸಿಲುಕಿದ ಸ್ಥಿತಿಯಲ್ಲಿ ಚಿರತೆ ಬೆಳಿಗ್ಗೆ ಪತ್ತೆಯಾಗಿತ್ತು. ಬೊಬ್ಬೆ ಕೇಳಿ ಸ್ಥಳೀಯರು ಗಮನಿಸಿದಾಗ ಚಿರತೆ ಸಿಲುಕಿರುವುದು ಕಂಡು ಬಂದಿದ್ದು, ಅರಣ್ಯಾಧಿಕಾರಿ ನೇತೃತ್ವದ ತಂಡವು ಸ್ಥಳಕ್ಕಾಗಮಿಸಿತ್ತು. ಚಿರತೆಯ ಸೊಂಟಕ್ಕೆ ಉರುಳು ಬಿದ್ದಿರುವುದರಿಂದ ಸಮೀಪಕ್ಕೆ ತೆರಳಲು ಸಾಧ್ಯವಾಗಲಿಲ್ಲ . ಇದರಿಂದ ಪ್ರಜ್ಞೆ ತಪ್ಪಿಸಿ ರಕ್ಷಿಸಲು ವಯನಾಡಿನ ತಂಡದ ನೆರವು ಕೋರಲಾಗಿತ್ತು. ಆದರೆ ತಂಡವು ಆಗಮಿಸುವ ಮೊದಲೇ ಸಂಜೆ

ಉರುಳಿಗೆ ಸಿಲುಕಿ ಮೃತಪಟ್ಟ ಚಿರತೆ..!  Read More »

ಕರಾವಳಿ

‘ಸಿದ್ದರಾಮಯ್ಯ ಮನೆಗೆ ಹೋಗೋ ಕಾಲ ಹತ್ತಿರವಾಗಿದೆ’            ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ        

(ನ್ಯೂಸ್ ಕಡಬ)newskadaba.com ಮೈಸೂರು, ಆ.09. ಪಾಪ ಅವರು ನಿವೃತ್ತಿ ತಗೊಂಡು ಮನೆಗೆ ಹೋಗುವಾಗ ಇನ್ನೊಬ್ಬರ ಬಗ್ಗೆ ಹೇಳೋದು ಸ್ವಾಭಾವಿಕ. ಯಾರು ನಿವೃತ್ತಿಯಾಗ್ತಾರೆ, ಏನಾಗ್ತಾರೆ ಅಂತಾ ಮುಂದೆ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಅವರು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಮುಡಾದಲ್ಲಿ ನಡೆದ ಅಕ್ರಮ ಹಗರಣ ಖಂಡಿಸಿ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಭಾಗಿಯಾಗಲು ಮೈಸೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚಾಮುಂಡೇಶ್ವರಿ ದರ್ಶನ ಪಡೆದರು ಎಂದು ವರದಿಯಾಗಿದೆ.

‘ಸಿದ್ದರಾಮಯ್ಯ ಮನೆಗೆ ಹೋಗೋ ಕಾಲ ಹತ್ತಿರವಾಗಿದೆ’            ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ         Read More »

ಕರ್ನಾಟಕ

ಕುಸುಮ್ ಯೋಜನೆಯಡಿ ಶೇ. 80 ಸಬ್ಸಿಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್  ಸಚಿವ ಕೆ. ಜೆ ಜಾರ್ಜ್                      

(ನ್ಯೂಸ್ ಕಡಬ)newskadaba.com ಚಿಕ್ಕಾಬಳ್ಳಾಪುರ, ಆ.09. ಕೊಳವೆಬಾವಿ ಮತ್ತು ನೀರು ಹೊಂದಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಕುಸುಮ್ ಯೋಜನೆಯಡಿ ಶೇಕಡ 80 ಸಬ್ಸಿಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್, ಮೋಟರ್, ಪ್ಯಾನಲ್ ಬೋರ್ಡ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಡಿ ಜಾರಿ ಮಾಡಿರುವ ಕೃಷಿ ಪಂಪ್

ಕುಸುಮ್ ಯೋಜನೆಯಡಿ ಶೇ. 80 ಸಬ್ಸಿಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್  ಸಚಿವ ಕೆ. ಜೆ ಜಾರ್ಜ್                       Read More »

ಕರ್ನಾಟಕ

ಟೊಮೇಟೊ ಬೆಲೆ ಕುಸಿತ ಆಕ್ರೋಶ ವ್ಯಕ್ತಪಡಿಸಿದ ರೈತರು

(ನ್ಯೂಸ್ ಕಡಬ)newskadaba.com ಗದಗ, ಆ.09. ಟೊಮೆಟೋ ಬೆಳೆಗೆ ದಿಢೀರನೆ ಬೆಲೆ ಕುಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸಗಟು ಮಾರುಕಟ್ಟೆಗೆ ಹೋಗುವ ರಸ್ತೆಗಳಲ್ಲಿ ಟೊಮೆಟೋ ಸುರಿದ ರೈತರು, ವರ್ತಕರ ಮೇಲೆ ಆಕ್ರೋಶಗೊಂಡ ವ್ಯಕ್ತಪಡಿಸಿದರು ಎನ್ನಲಾಗಿದೆ. ಲಾಭದ ನಿರೀಕ್ಷೆಯಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಸಮೀಪದ ಇತರೆ ಗ್ರಾಮಗಳ ಅನೇಕ ರೈತರು ಬೆಳಗ್ಗೆಯೇ ಮಾರುಕಟ್ಟೆಗೆ ಟೊಮೆಟೊ ತಂದಿದ್ದರು. ಆದರೆ, ಒಂದು ಕ್ರೇಟ್ ಟೊಮೇಟೊ ಬೆಲೆ 20 ರಿಂದ 30 ರೂ.ವರೆಗೆ ಇದೆ ಎಂದು ವ್ಯಾಪಾರಿಗಳು ಹೇಳಿದಾಗ, ಆಘಾತಕ್ಕೊಳಗಾದರು ಎಂ ವರದಿ

ಟೊಮೇಟೊ ಬೆಲೆ ಕುಸಿತ ಆಕ್ರೋಶ ವ್ಯಕ್ತಪಡಿಸಿದ ರೈತರು Read More »

ಕರ್ನಾಟಕ

ದಕ್ಷಿಣ ಕನ್ನಡಜಿಲ್ಲೆಯ ವಸಂತ ಅಮೀನ್‌ ಸೇರಿ 93 ಮಂದಿಗೆ ನಾಟಕ‌ ಅಕಾಡೆಮಿ ಪ್ರಶಸ್ತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಕರ್ನಾಟಕ ನಾಟಕ ಅಕಾಡೆಮಿಯು ಮೂರು ವರ್ಷಗಳ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ನಟಿ ಉಮಾಶ್ರೀ , ನಾಟಕಕಾರರಾದ ಎಚ್.ಎಸ್. ಶಿವಪ್ರಕಾಶ್ ಹಾಗೂ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ‘ಜೀವಮಾನ ಸಾಧನೆ ಪ್ರಶಸ್ತಿ’ಗೆ (ಗೌರವ ಪ್ರಶಸ್ತಿ) ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಸಂತ್‌ ಅಮೀನ್‌ ಗೂ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ಸುದ್ದಿಗೋಷ್ಠಿಯಲ್ಲಿ 93 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.‘ಜೀವಮಾನ ಸಾಧನೆ ಪ್ರಶಸ್ತಿ’ಯು ತಲಾ 50

ದಕ್ಷಿಣ ಕನ್ನಡಜಿಲ್ಲೆಯ ವಸಂತ ಅಮೀನ್‌ ಸೇರಿ 93 ಮಂದಿಗೆ ನಾಟಕ‌ ಅಕಾಡೆಮಿ ಪ್ರಶಸ್ತಿ Read More »

ಕರ್ನಾಟಕ

ಪಕ್ಷ, ಸರ್ಕಾರ ಒಂದಾಗಿ ಸಿದ್ದರಾಮಯ್ಯ ಪರಗಿ ನಿಂತಿದೆ   ಡಿಸಿಎಂ ಡಿ.ಕೆ. ಶಿವಕುಮಾರ್ 

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.09.  “ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೆ ಬಿಜೆಪಿ ಹಾಗೂ ಜೆಡಿಎಸ್ ಅವರ ತೇಜೋವಧೆ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಇಡೀ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಪರವಾಗಿ ನಿಲ್ಲಲಿದೆ” ಎಂದು ಡಿಸಿಎಂ. ಡಿ.ಕೆ. ಶಿವಕುಮಾರ್ ತಿಳಿಸಿದರು. ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಮಾವೇಶದ ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ತೇಜೋವಧೆಗೆ ಉಭಯ ಪಕ್ಷಗಳು ಮುಂದಾಗಿವೆ ಎಂದು ವರದಿಯಾಗಿದೆ.

ಪಕ್ಷ, ಸರ್ಕಾರ ಒಂದಾಗಿ ಸಿದ್ದರಾಮಯ್ಯ ಪರಗಿ ನಿಂತಿದೆ   ಡಿಸಿಎಂ ಡಿ.ಕೆ. ಶಿವಕುಮಾರ್  Read More »

ಕರಾವಳಿ
Scroll to Top