news kadaba desk

ರಜೆ ನೀಡಿದ ಜಿಲ್ಲಾಧಿಕಾರಿಗೆ ಮಕ್ಕಳಿಂದ ಅಭಿನಂದನೆ – ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 27. ದ.ಕ ಜಿಲ್ಲೆಯಲ್ಲಿ ಎಡೆ ಬಿಡದೆ ಬೀಳುತ್ತಿರುವ ಭಾರೀ ಗಾಳಿ ಮಳೆಗೆ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲ್ಲೈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರಂತರವಾಗಿ ಶಾಲೆ ರಜೆ ನೀಡುತ್ತಿದ್ದು, ಇದೀಗ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವಿದ್ಯಾರ್ಥಿಯೋರ್ವ ತನ್ನ ಕಚೇರಿಯೊಂದರಲ್ಲಿ ದ.ಕ ಜಿಲ್ಲಾಧಿಕಾರಿಯ ಫೋಟೋಗಳನ್ನು ಅಂಟಿಸಿ ಕೂತಿದ್ದು, ಆತನ ಬಳಿ ಇನ್ನೋರ್ವ ಬಂದು ಇದು ಯಾರ ಫೋಟೋ ಇಷ್ಟೋಂದು ಅಂಟಿಸಿದ್ದೀಯಾ ಎಂದು […]

ರಜೆ ನೀಡಿದ ಜಿಲ್ಲಾಧಿಕಾರಿಗೆ ಮಕ್ಕಳಿಂದ ಅಭಿನಂದನೆ – ವಿಡಿಯೋ ವೈರಲ್ Read More »

ಕರಾವಳಿ

100 ರೂಪಾಯಿಗಾಗಿ ಮಗನನ್ನೇ ಕುಡಿದ ಮತ್ತಿನಲ್ಲಿ ಕೊಂದ ಪಾಪಿ ತಂದೆ

(ನ್ಯೂಸ್ ಕಡಬ)newskadaba.com ಸಮಸ್ತಿಪುರ, ಜು.27. ಕುಡಿದ ಅಮಲಿನಲ್ಲಿ ತಂದೆಯೊಬ್ಬ ತನ್ನ ಅಮಾಯಕ ಮಗನನ್ನೇ ಕತ್ತು ಸೀಳಿ ಕೊಂದಿದ್ದಾನೆ. ಬಿಹಾರದ ಸಮಸ್ತಿಪುರ ಜಿಲ್ಲೆಯಿಂದ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮೊಹಿಯುದ್ದೀನ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾದಯ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಭದಯ್ಯ ಗ್ರಾಮದಲ್ಲಿ ತಂದೆ ತನ್ನ ಮೂರು ವರ್ಷದ ಅಮಾಯಕ ಮಗನ ಕುತ್ತಿಗೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಗಲಾಟೆ ನಡೆದ ನಂತರ ಸುತ್ತಮುತ್ತಲಿನ

100 ರೂಪಾಯಿಗಾಗಿ ಮಗನನ್ನೇ ಕುಡಿದ ಮತ್ತಿನಲ್ಲಿ ಕೊಂದ ಪಾಪಿ ತಂದೆ Read More »

ರಾಷ್ಟ್ರೀಯ ನ್ಯೂಸ್

ರೈಲು ಹಳಿಯ ಮೇಲೆ ಕುಸಿದು ಬಿದ್ದ ಮಣ್ಣು – 2 ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ)newskadaba.com ಬೆಳಗಾವಿ, ಜು.27. ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ದೂಧ್ ಸಾಗರ್ ಫಾಲ್ಸ್ ಬಳಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತಗೊಂಡು ರೈಲು ಹಳಿಯ ಮೇಲೆ ಬಿದ್ದಿರುವ ಪರಿಣಾಮ ರೈಲು ಸಂಚಾರದಲ್ಲಿ ಎರಡು ದಿನಗಳ ಕಾಲ ವ್ಯತ್ಯಯವಾಗಲಿದೆ. ನಿರಂತರ ಮಳೆಯಿಂದಾಗಿ ಭೂಕುಸಿತವಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಗೋವಾ-ಕರ್ನಾಟಕ ಮಾರ್ಗ ಮಧ್ಯೆ ರೈಲ್ವೆ ಸಂಚಾರ ಸ್ಥಗಿತವಾಗಿತ್ತು. ಕಾರ್ಯಾಚರಣೆ ನಡೆಸಿ ರೈಲ್ವೆ ಹಳಿ ಮೇಲೆ ಬಿದ್ದಿರುವ ಕಲ್ಲು ಹಾಗೂ ಮರಗಳನ್ನು ಕಾರ್ಯಾಚರಣೆ ನಡೆಯುತ್ತಿರುವುದರಿಂದ ದೂಧ್ ಸಾಗರ್ ಬಳಿ ರೈಲ್ವೆ ಸಿಬ್ಬಂದಿ ಹೊರತುಪಡಿಸಿ ಅನ್ಯ

ರೈಲು ಹಳಿಯ ಮೇಲೆ ಕುಸಿದು ಬಿದ್ದ ಮಣ್ಣು – 2 ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ Read More »

ಕರ್ನಾಟಕ

ಮಠ, ದೇವಸ್ಥಾನಗಳಿಗೆ ಸಿಎಂ ಸಿದ್ದರಾಮಯ್ಯ 20 ಕೋಟಿ ರೂ. ಅನುದಾನ ಘೋಷಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. 2023-24 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ಮಠ, ದೇವಸ್ಥಾನಗಳಿಗೆ 20 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ದೇವಸ್ಥಾನಗಳ ಜೊತೆಗೆ ಮಠಗಳಿಗೂ ಅನುದಾನ ನೀಡಲು ಮುಂದಾಗಿದ್ದಾರೆ. ತಮ್ಮ ಹಿಂದಿನ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಮಠಗಳಿಗೆ ಅನುದಾನ ನೀಡುತ್ತಿರಲಿಲ್ಲ. ಈ ಬಾರಿ ಮಠಗಳಿಗೂ ಅನುದಾನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಜ್ಯದ ಪ್ರಮುಖ ಮಠಗಳಾದ ಆದಿಚುಂಚನಗಿರಿ, ಸಿದ್ದಗಂಗಾ ಹಾಗೂ ಕಾಗಿನೆಲೆ ಕನಕ

ಮಠ, ದೇವಸ್ಥಾನಗಳಿಗೆ ಸಿಎಂ ಸಿದ್ದರಾಮಯ್ಯ 20 ಕೋಟಿ ರೂ. ಅನುದಾನ ಘೋಷಣೆ Read More »

ಕರ್ನಾಟಕ

ರೈತರಿಗೆ ಗುಡ್ ನ್ಯೂಸ್ – ಪಿಎಂ ಕಿಸಾನ್ ಸಮ್ಮಾನ್ ಹಣ ಖಾತೆಗೆ ಜಮಾ

(ನ್ಯೂಸ್ ಕಡಬ)newskadaba.com ನವದೆಹಲಿ, ಜು.27. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 27, 2023 ರ ಇಂದು 8.5 ಕೋಟಿಗೂ ಹೆಚ್ಚು ರೈತರಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪಿಎಂ ಕಿಸಾನ್ 14ನೇ ಕಂತಿನ ಹಣವನ್ನು ಅನ್ನದಾತರ ಬ್ಯಾಂಕ್ ಖಾತೆಗೆ ಜುಲೈ 28ರಂದು ಜಮಾ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದೆ. ಈ ಯೋಜನೆಯು ಭೂ ಹಿಡುವಳಿದಾರ ರೈತ ಕುಟುಂಬಗಳಿಗೆ

ರೈತರಿಗೆ ಗುಡ್ ನ್ಯೂಸ್ – ಪಿಎಂ ಕಿಸಾನ್ ಸಮ್ಮಾನ್ ಹಣ ಖಾತೆಗೆ ಜಮಾ Read More »

ರಾಷ್ಟ್ರೀಯ ನ್ಯೂಸ್

ಅನುಮತಿ ಇಲ್ಲದೇ ಡಿಜೆ; ವಿಜಯೋತ್ಸವ – ಪುತ್ತಿಲ ಪರಿವಾರ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ)newskadaba.com ಪುತ್ತೂರು, ಜು.27. ಅನುಮತಿ ಇಲ್ಲದೆ ವಿಜಯೋತ್ಸವ ಮತ್ತು ಡಿಜೆ ಸೌಂಡ್ ಬಳಕೆ ಮಾಡಿದಕ್ಕಾಗಿ ಪುತ್ತಿಲ ಪರಿವಾರ ಸಂಘಟಣೆ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಆರ್ಯಾಪು ಗ್ರಾ.ಪಂ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಗಳಿಸಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೌಧದಿಂದ ಮುಕ್ರಂಪಾಡಿ ತನಕ ಅನುಮತಿ ಇಲ್ಲದೇ ಪುತ್ತಿಲ ಪರಿವಾರ ನಡೆಸಿದ ವಿಜಯೋತ್ಸವದಲ್ಲಿ ಡಿ.ಜೆ ಸೌಂಡ್ ಬಳಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿ, ಪುತ್ತಿಲ ಪರಿವಾರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ

ಅನುಮತಿ ಇಲ್ಲದೇ ಡಿಜೆ; ವಿಜಯೋತ್ಸವ – ಪುತ್ತಿಲ ಪರಿವಾರ ವಿರುದ್ದ ದೂರು ದಾಖಲು Read More »

ಕರಾವಳಿ

ಹೊಸ ಕಾನೂನು ಜಾರಿ; ಲಿಂಗ ಬದಲಾಯಿಸುವಂತಿಲ್ಲ – ರಷ್ಯಾ ಆರೋಗ್ಯ ಸಚಿವಾಲಯ ಸ್ಪಷ್ಟನೆ

(ನ್ಯೂಸ್ ಕಡಬ)newskadaba.com ರಷ್ಯಾ, ಜು.27. ಲಿಂಗ ಪರಿವರ್ತನೆಗೆ ಶಸ್ತಚಿಕಿತ್ಸೆ ಮಾಡಿಸುವುದನ್ನು ನಿಷೇಧಿಸುವ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಲಿಂಗ ಪರಿವರ್ತನೆಗೆ ಸಂಬಂಧಿಸಿದಂತೆ ವೈದ್ಯಕೀಯ ಚಿಕಿತ್ಸೆಗಳನ್ನು ಕಾನೂನುಬಾಹಿರಗೊಳಿಸುವ ಕಾನೂನಿಗೆ ಇದು ಪೂರಕವಾಗಿದೆ. ಮಕ್ಕಳ ಅಸಮರ್ಪಕ ಬೆಳವಣಿಗೆ ಮತ್ತು ಜನ್ಮ ದೋಷಗಳನ್ನು ಬಗೆಹರಿಸಲು ಬಳಸುವ ವೈದ್ಯಕೀಯ ವಿಧಾನಗಳಿಗೆ ನಿರ್ಬಂಧವು ಅನ್ವಯಿಸುವುದಿಲ್ಲ. ಹಾಗೇಯೇ ಲೈಂಗಿಕ ವ್ಯತ್ಯಾಸದ ಬಾಲ್ಯದ ಅಸ್ವಸ್ಥತೆಗಳಿಗೆ ಅನುವಂಶಿಕ ಮತ್ತು ಅಂತಃಸ್ರಾವಕ ಸಮಸ್ಯೆಗಳಿಗೆ ಅನ್ವಯಿಸುವುದಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಹೊಸ ಕಾನೂನು ಜಾರಿ; ಲಿಂಗ ಬದಲಾಯಿಸುವಂತಿಲ್ಲ – ರಷ್ಯಾ ಆರೋಗ್ಯ ಸಚಿವಾಲಯ ಸ್ಪಷ್ಟನೆ Read More »

ರಾಷ್ಟ್ರೀಯ ನ್ಯೂಸ್

3000 ಕಾರುಗಳಿದ್ದ ಹಡಗಿದ ಆಕಸ್ಮಿಕ ಬೆಂಕಿ – ಭಾರತೀಯ ನಾವಿಕ ಮೃತ್ಯು

(ನ್ಯೂಸ್ ಕಡಬ)newskadaba.com ಅಮೆಲ್ಯಾಂಡ್‌, ಜು.27. ಉತ್ತರ ಸಮುದ್ರದಲ್ಲಿ ಸುಮಾರು 3,000 ಕಾರುಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಹಡಗೊಂದು ಬೆಂಕಿಗೆ ಆಹುತಿಯಾಗಿದ್ದು, ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಬೆಂಕಿಯನ್ನು ನಂದಿಸಲು ವಿಫಲವಾದ ಕಾರಣ 23 ಸಿಬ್ಬಂದಿಯನ್ನು ಹಡಗಿನಿಂದ ಇಳಿಸಲು ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಸೇವೆಗೆ ಗಳುಹಿಸಲಾಯಿತು. ಬೆಂಕಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ ಮತ್ತು ಓರ್ವ ಭಾರತೀಯ ನಾವಿಕ ಹೇಗೆ ಮೃತಪಟ್ಟಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

3000 ಕಾರುಗಳಿದ್ದ ಹಡಗಿದ ಆಕಸ್ಮಿಕ ಬೆಂಕಿ – ಭಾರತೀಯ ನಾವಿಕ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಚಾಕು ತೋರಿಸಿ ಸುಲಿಗೆ ಪ್ರಕರಣ – 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಜು.27. ಸುಲಿಗೆ ಪ್ರಕರಣಕ್ಕೆ ಸಂಬಂದಿಸಿದಂತೆ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಉಳ್ಳಾಲ ನಿವಾಸಿ ಆರೋಪಿ ಬಶೀರ್ ಎಂದು ಗುರುತಿಸಲಾಗಿದೆ. 2000ರಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ಆರೋಪಿಗಳು ಚೂರಿ ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಸಿದು ಸುಲಿಗೆ ಮಾಡಿ ಪರಾರಿಯಗಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹುಸೇನ್ @ ಮೊಹಮ್ಮದ್ ಹುಸೇನ್ ಬಶೀರ್ ಮತ್ತು ಮೊಯ್ದೀನ್ ಕುದ್ರೋಳಿ

ಚಾಕು ತೋರಿಸಿ ಸುಲಿಗೆ ಪ್ರಕರಣ – 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ

ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಾಯಿಗೆ ವಿಷ ಹಾಕಿದ ವ್ಯಕ್ತಿ – ದೂರು ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಜು.27. ಪೂರ್ವ ದ್ವೇಷದ ಹಿನ್ನೆಲೆ ನೆರೆಮನೆಯ ವ್ಯಕ್ತಿ ಡಾಬರ್ ಮ್ಯಾನ್ ಸಾಕುವ ನಾಯಿಯನ್ನು ವಿಷ ಹಾಕಿ ಕೊಂದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಕುರಿತಾಗಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಾಪಿಕಾಡ್ ಕ್ರಾಸ್ನಲ್ಲಿದ್ದ ವ್ಯಕ್ತಿಯೊಬ್ಬರ 2ವರ್ಷದ ಡಾಬರ್ ನಾಯಿ ಸಾಕುತ್ತಿದ್ದರು. ನೆರೆಯನೆಯ ಭೀಮಯ್ಯ ದ್ವೇಷದ ಹಿನ್ನೆಲೆಯಲ್ಲಿ ನಾಯಿಗೆ ವಿಷ ಪದಾರ್ಥ ಹಾಕಿದ್ದಾರೆ ಎಂದು ತಿಳಿಸಲಾಗಿದೆ.

ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಾಯಿಗೆ ವಿಷ ಹಾಕಿದ ವ್ಯಕ್ತಿ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top