news kadaba desk

ಬೈಕ್ ಅಪಘಾತ ➤ ವೈದ್ಯ ವಿದ್ಯಾರ್ಥಿ ದುರ್ಮರಣ 

(ನ್ಯೂಸ್ ಕಡಬ) newskadaba.com  ಉಳ್ಳಾಲ, ಡಿ. 13.  ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿಯೋರ್ವ ಮೃತಪಟ್ಟು, ಸಹಸವಾರ ಗಾಯಗೊಂಡ ಘಟನೆ ಕುತ್ತಾರು ಮದಕ ಕ್ವಾಟ್ರಗುತ್ತು ಎಂಬಲ್ಲಿ ಸಂಭವಿಸಿದೆ.   ಮೃತಪಟ್ಟವರನ್ನು ಬೆಂಗಳೂರು ಯಶವಂತಪುರ ನಿವಾಸಿ ಶಿಕ್ಷಕ ಸಿದ್ದರಾಜುರವರ ಪುತ್ರ ನಿಶಾಂತ್ (22) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಬೀದರ್ ನಿವಾಸಿ ಶಕೀಬ್ ಎಂದು ತಿಳಿದುಬಂದಿದೆ. ಇವರಿಬ್ಬರೂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟರ್ನ್ ಶಿಪ್ ನಡೆಸುತ್ತಿದ್ದು, ಕುತ್ತಾರು ಸಿಲಿಕೋನಿಯಾ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ ಇವರು ರಾತ್ರಿ ಬೈಕಿನಲ್ಲಿ […]

ಬೈಕ್ ಅಪಘಾತ ➤ ವೈದ್ಯ ವಿದ್ಯಾರ್ಥಿ ದುರ್ಮರಣ  Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ನೋಟಿನ ಕಂತೆ ಪತ್ತೆ ಪ್ರಕರಣ ➤ ವಾರಸುದಾರ ಠಾಣೆಗೆ ಹಾಜರು..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13. ಪಂಪ್‌ವೆಲ್‌ನಲ್ಲಿ ಪತ್ತೆಯಾಗಿದ್ದ ನೋಟಿನ ಬಂಡಲ್‌ನ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎನ್ನಲಾಗಿದೆ.   ತಾನು ಅಡಿಕೆ ವ್ಯಾಪಾರಿಯಾಗಿದ್ದು, ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕೈಯಿಂದ ಬಿದ್ದಿದ್ದು, ಅದರಲ್ಲಿ ಒಟ್ಟು 10 ಲಕ್ಷ ರೂ. ಇತ್ತು ಎಂದು ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ನ್ಯಾಯಾಲಯದಲ್ಲಿಯೇ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ವ್ಯಕ್ತಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ. ನ. 26ರಂದು ತುಕಾರಾಂ ಹಾಗೂ

ಮಂಗಳೂರು: ನೋಟಿನ ಕಂತೆ ಪತ್ತೆ ಪ್ರಕರಣ ➤ ವಾರಸುದಾರ ಠಾಣೆಗೆ ಹಾಜರು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವೃದ್ದನೋರ್ವನನ್ನು ವಿಚಾರಣೆ ನೆಪದಲ್ಲಿ ವಿನಾಕಾರಣ ಅಲೆದಾಡಿಸಿದ ಪೊಲೀಸ್ ಸಿಬ್ಬಂದಿಗಳು ➤ಪೊಲೀಸರ ವರ್ತನೆಯಿಂದ ಬೇಸರ ವ್ಯಕ್ತಪಡಿಸಿದ ವೃದ್ದ 

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.13 ‘ಬಂದೂಕು ಕಳ್ಳತನವಾಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂಬುದಾಗಿ ದೂರು ನೀಡಲು ಹೋಗಿದ್ದ ವೃದ್ಧನನ್ನು ಹಲವು ಕಾರಣ ನೀಡಿ ಅಲೆದಾಡಿಸಿದ್ದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬಿಇಎಲ್ ನಿವೃತ್ತ ಯೋಜನಾ ಅಧಿಕಾರಿ ಭೈರೇಗೌಡ(72) ಅವರು ಜಕ್ಕೂರಿನಲ್ಲಿ ನೆಲೆಸಿದ್ದು, 30 ವರ್ಷಗಳ ಹಿಂದೆ ಖರೀದಿಸಿದ್ದ ಬಂದೂಕಿಗೆ ಪೊಲೀಸರಿಂದಲೂ  ಪರವಾನಗಿ ಪಡೆದಿದ್ದರು ಎಂದು ತಿಳಿದುಬಂದಿದೆ. ಬಂದೂಕು ಕಳ್ಳತನದ ಬಗ್ಗೆ ದೂರು ನೀಡಲು ಅಮೃತಹಳ್ಳಿ ಹೋಗಿದ್ದು ಎಲ್ಲಾ ದಾಖಲೆ ಸಮೇತ ದೂರು ನೀಡಿದರೂ

ವೃದ್ದನೋರ್ವನನ್ನು ವಿಚಾರಣೆ ನೆಪದಲ್ಲಿ ವಿನಾಕಾರಣ ಅಲೆದಾಡಿಸಿದ ಪೊಲೀಸ್ ಸಿಬ್ಬಂದಿಗಳು ➤ಪೊಲೀಸರ ವರ್ತನೆಯಿಂದ ಬೇಸರ ವ್ಯಕ್ತಪಡಿಸಿದ ವೃದ್ದ  Read More »

ಕರ್ನಾಟಕ

ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ರೈತರು

(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಡಿ12 ಮಲೆನಾಡಿನಲ್ಲೀಗ ಕೃಷಿ ಚಟುವಟಿಕೆಗಳು ಬಿರುಸಾಗಿ ನಡೆಯುವ ಕಾಲವಾಗಿದ್ದು, ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿ ಹಾಕಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಮ್ಯಾಂಡೋಸ್‌ ಚಂಡಮಾರುತದಿಂದಾಗಿ ಧಾರಾಕಾರ ಮಳೆಯಾಗಿದ್ದು, ಇಡೀ ದಿನ ಮೋಡ ಮುಸುಕಿದ ವಾತಾವರಣವಿತ್ತು ಎನ್ನಲಾಗಿದೆ. ಕನಿಷ್ಠ ತಾಪಮಾನವು 19.9 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದ್ದು, 2 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವರ್ಷಪೂರ್ತಿ ಮಳೆಗಾಲ ಹಾಗೂ ಚಂಡಮಾರುತಗಳ ಕಾರಣದಿಂದಾಗಿ ನಿರಂತರ ಮಳೆ ಸುರಿಯುತ್ತಲೇ ಇದ್ದು, ಕೆರೆ, ನದಿ,

ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ರೈತರು Read More »

ಕರ್ನಾಟಕ

ಬಸ್ ಸೌಲಭ್ಯಕ್ಕೆ ಒತ್ತಾಯಿಸಿ-ಹುಬ್ಬಳ್ಳಿ-ವಿಜಯಪುರ ಗ್ರಾಮಸ್ಥರಿಂದ ಪ್ರತಿಭಟನೆ ➤ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು 

 (ನ್ಯೂಸ್ ಕಡಬ) newskadaba.com  ಧಾರವಾಡ, ಡಿ.12  ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ನವಲಗುಂದ ತಾಲೂಕಿನ ಬಲ್ಲರವಾಡ, ಮೊರಬ,‌ಶಿರಕೋಳ ಹಾಗೂ ಮುಂತಾದ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಕರ್ಯ ಸಿಗದಿರುವುದಕ್ಕೆ ಗ್ರಾಮಸ್ಥರು ಸೋಮವಾರದಂದು ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದರು ಎನ್ನಲಾಗಿದೆ. ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ ಅವರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಸರಿಯಾಗಿ ಬಸ್ ಇಲ್ಲದೇ ಸಾಕಷ್ಟು ತೊಂದರೆ

ಬಸ್ ಸೌಲಭ್ಯಕ್ಕೆ ಒತ್ತಾಯಿಸಿ-ಹುಬ್ಬಳ್ಳಿ-ವಿಜಯಪುರ ಗ್ರಾಮಸ್ಥರಿಂದ ಪ್ರತಿಭಟನೆ ➤ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು  Read More »

ಕರ್ನಾಟಕ

ವೃಧ್ಧನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ➤ವೃದ್ಧನನ್ನು ಹೊಡೆದು ಕೊಂದ ಕುಟುಂಬಸ್ಥರು

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.12  16 ವರ್ಷದ ಅಪ್ರಾಪ್ತ ಬಾಲಕಿಗೆ ಜ್ಯೂಸ್‌ನಲ್ಲಿ ಆಲ್ಕೋಹಾಲ್‌ ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರ ಮಾಡಿದ್ದ, ವೃದ್ಧ ಕುಪ್ಪಣ್ಣ (73)ನನ್ನು ಬಾಲಕಿಯ ಸಂಬಂಧಿಕರು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಬಳಿ ಸಂಭವಿಸಿದೆ. ಹೆಣ್ಣೂರಿನ ಬಾಬುಬಸಾಬ್‌ ಪಾಳ್ಯದಲ್ಲಿ  ಹಲವು ವರ್ಷಗಳಿಂದ ವಾಸವಿದ್ದ ತಮಿಳುನಾಡು ಮೂಲದ ಕುಪ್ಪಣ್ಣ ತನಗೆ 4 ವರ್ಷದಿಂದ ಪರಿಚಯವಿದ್ದ ಬಾಲಕಿಯನ್ನು ಜ್ಯೂಸ್‌  ಕೊಡುವುದಾಗಿ ಮನೆಗೆ ಕರೆದಿದ್ದಾನೆ ಎನ್ನಲಾಗಿದೆ. ವೃದ್ಧನನ್ನು ನಂಬಿಕೊಂಡು ಜ್ಯೂಸ್‌ ಕುಡಿಯಲು ಹೋದ ಬಾಲಕಿಗೆ ಜ್ಯೂಸ್‌ನಲ್ಲಿ ಮಧ್ಯವನ್ನು

ವೃಧ್ಧನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ➤ವೃದ್ಧನನ್ನು ಹೊಡೆದು ಕೊಂದ ಕುಟುಂಬಸ್ಥರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸತತ ಮಳೆಯಿಂದಾಗಿ ಧರೆಗುರುಳಿದ ಬೃಹತ್ ಮರ

 (ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.12– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸತತ ಮೂರುದಿನಗಳಿಂದ ಸುರಿಯುತ್ತಿರುವ ಗಾಳಿ ಸಹಿತ ಮಳೆಗೆ ಎರಡು ಬೃಹತ್ ಮರಗಳು ಧರೆಗೆ ಉರುಳಿದ್ದು, ನಗರದ ಯಲಹಂಕದ ಕೆಂಪೇಗೌಡ ವಾರ್ಡಿನಲ್ಲಿ ಒಂದು ಬೃಹತ್ ಮರ ಮಳೆಗೆ ಕೆಳಗೆ ಬಿದ್ದಿದೆ. ಅದೇ ರೀತಿ, ಅನೇಪಾಳ್ಯ ಸಿಗ್ನಲ್ ಬಳಿಯೂ ಮತ್ತೊಂದು ದೊಡ್ಡ ಮರವೊಂದು ನೆಲಕ್ಕೆ ಉರುಳಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವಡೆ ಮರದ ರೆಂಬೆಗಳು ರಸ್ತೆಗೆ ಬಿದ್ದಿರುವ ದೂರುಗಳು ಕೇಳಿಬಂದಿದ್ದು, ಈ ಸಂಬಂಧ ವಾರ್ಡ್‌ವಾರು ಅಧಿಕಾರಿಗಳು

ಸತತ ಮಳೆಯಿಂದಾಗಿ ಧರೆಗುರುಳಿದ ಬೃಹತ್ ಮರ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ಬಕೇಟ್ ನಲ್ಲಿ ಮುಳುಗಿ ಮಗು ಮೃತ್ಯು

 (ನ್ಯೂಸ್ ಕಡಬ) newskadaba.com  ಜಗಳೂರು, ಡಿ.12  ಬಚ್ಚಲು ಮನೆಯಲ್ಲಿ ತುಂಬಿದ್ದ ಬಕೇಟ್ ನಲ್ಲಿ ಮುಳುಗಿ ಮಗು ಮೃತಪಟ್ಟಿರುವ ಘಟನೆ ಬಿಸ್ತುವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಮೃತ ಮಗುವನ್ನು ಮಂಜುನಾಥರವರ ದ್ವಿತೀಯ ಪುತ್ರಿ ಅನುಸಾವ್ಯ (1) ಎಂದು ತಿಳಿದುಬಂದಿದೆ. ಕೂಲಿ ಕೆಲಸಕ್ಕೆ ಹೋಗಿದ್ದ ಮೃತ ಮಗುವಿನ ತಂದೆ  ಮಂಜುನಾಥ್ ಸಂಜೆ ವಾಪಾಸ್ ಬಂದು ಸ್ನಾನದ ಮನೆಗೆ ಹೋಗಿ ಸ್ನಾನ ಮುಗಿಸಿ ಬಾಗಿಲು ಹಾಕದೇ ಬಂದಿದ್ದಾರೆ. ಆಟವಾಡುತ್ತಾ ಸ್ನಾನದ ಕೊಠಡಿಗೆ ಹೋದ ಮಗು ನೀರು ತುಂಬಿದ ಬಕೆಟ್‍ನಲ್ಲಿ ಬಿದ್ದಿದೆ.ಇತ್ತ ಮಗು ಕಾಣದೇ

➤ಬಕೇಟ್ ನಲ್ಲಿ ಮುಳುಗಿ ಮಗು ಮೃತ್ಯು Read More »

ಕರ್ನಾಟಕ

ಆನೆಯ ದಂತ ಮಾರಟಕ್ಕೆ ಯತ್ನ !!! ➤ಐವರು ಆರೋಪಿಗಳ ಬಂಧನ

 (ನ್ಯೂಸ್ ಕಡಬ) newskadaba.com  ಚಾಮರಾಜನಗರ, ಡಿ.12 ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಸವಾಪುರ ಗ್ರಾಮದ ಸಮೀಪ ಬಳಿ ಸಂಭವಿಸಿದೆ. ಆರೋಪಿಗಳನ್ನು ತಮಿಳುನಾಡು ಮೂಲದ ರಂಗಸ್ವಾಮಿ (35), ಸಂಜೀವ ಕುಮಾರ್ (41), ಎನ್.ವಿನೋದ್ (36), ಕದಿರೇಸನ್ (45), ಸೆಲ್ವನಾಯಗಂ (44) ಎಂದು ಗುರುತಿಸಲಾಗಿದೆ. ಈ ಐವರು ಆನೆದಂತ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಡೀಪುರ ಅರಣ್ಯಾಧಿಕಾರಿಗಳು ದಾಳಿ ನಡೆಸಿ

ಆನೆಯ ದಂತ ಮಾರಟಕ್ಕೆ ಯತ್ನ !!! ➤ಐವರು ಆರೋಪಿಗಳ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ➤ಪರಾರಿಯಾಗಿದ್ದ ಆರೋಪಿಯ ಸೆರೆ

 (ನ್ಯೂಸ್ ಕಡಬ) newskadaba.com  ಬಂಟ್ವಾಳ, ಡಿ.12  ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನನ್ನು ಟ್ರಾಫಿಕ್ ಪೋಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮೆಲ್ಕಾರ್ ನಲ್ಲಿ ನಡೆದಿದೆ. ಪ್ರಕರಣದ ಆರೋಪಿಯನ್ನು ಮುಹಮ್ಮದ್ ಶೇಕ್ ಫೈಝಿಲ್ ಎಂದು ಗುರುತಿಸಲಾಗಿದೆ. ತಲಪಾಡಿ ಎಂಬಲ್ಲಿ ಬಿಸಿರೋಡಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ಪುರುಷೋತ್ತಮ ಹಾಗೂ ಪ್ರಯಾಣಿಕ ಹೃತಿಕ ಎಂಬರಿಗೆ ಗಾಯವಾಗಿದ್ದು, ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಳುಗಳು

ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ➤ಪರಾರಿಯಾಗಿದ್ದ ಆರೋಪಿಯ ಸೆರೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top