Ashitha Soodlu

ಮಂಗಳೂರು: ಪಾದಾಚಾರಿಗಳಿಗೆ ಗುದ್ದಿ ಎಸ್ಕೇಪ್ : ಇಬ್ಬರು ದಾರುಣ ಸಾವು

(ನ್ಯೂಸ್ ಕಡಬ)newskadaba.com   ಮಂಗಳೂರು, ನ.25:  ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರೊಂದು ಪಾದಾಚಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗುದ್ದಿ ಪರಾರಿಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ರಸ್ತೆ ಮೇಲೆ ಅಷ್ಟೇನು ಟ್ರಾಫಿಕ್ ಇಲ್ಲದ ರಸ್ತೆಯಲ್ಲಿ ರಸ್ತೆದಾಟಲು ಇಬ್ಬರು ವ್ಯಕ್ತಿಗಳು ನಿಂತಿದ್ದು, ಈ ವೇಳೆ ಲಾರಿ ಮುಂದಕ್ಕೆ ಹೋಗಿದೆ. ಇದೇ ಸಂದರ್ಭದಲ್ಲಿ ಫುಟ್ ಪಾತ್ ಮೇಲೆ ನಿಂತಿದ್ದ ವ್ಯಕ್ತಿಗಳ ಮೇಲೆ ಏಕಾಏಕಿ ಕಪ್ಪುಬಣ್ಣದ ಕಾರೊಂದು ವೇಗವಾಗಿ ಬಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ರಭಸಕ್ಕೆ ಇಬ್ಬರು ವ್ಯಕ್ತಿಗಳು […]

ಮಂಗಳೂರು: ಪಾದಾಚಾರಿಗಳಿಗೆ ಗುದ್ದಿ ಎಸ್ಕೇಪ್ : ಇಬ್ಬರು ದಾರುಣ ಸಾವು Read More »

ಕರಾವಳಿ

ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ: ಗೆಲುವಿನ ಬಳಿಕ ಸಿಪಿ ಯೋಗೇಶ್ವರ್

(ನ್ಯೂಸ್ ಕಡಬ)newskadaba.com   ಬೆಂಗಳೂರು, ನ.22:  ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ಇಂದು  ಪ್ರಕಟವಾಗಿದ್ದು, ಎಲ್ಲಾ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೂ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಗೆಲುವು ದಾಖಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ, ಕೇಂದ್ರ ಸಚಿವ ಎಚ್ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಹ್ಯಾಟ್ರಿಕ್ ಸೋಲಾಗಿದೆ.ಚನ್ನಪಟ್ಟಣದಲ್ಲಿ ಗೆಲುವಿನ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಪಿ ಯೋಗೇಶ್ವರ್ ಅವರು, ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ

ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ: ಗೆಲುವಿನ ಬಳಿಕ ಸಿಪಿ ಯೋಗೇಶ್ವರ್ Read More »

ಕರ್ನಾಟಕ

ವಂದೇಬಾರತ್ ರೈಲಿಗೆ ಕಲ್ಲು ತೂರಾಟ: ಇಬ್ಬರು ಅರೆಸ್ಟ್

(ನ್ಯೂಸ್ ಕಡಬ)newskadaba.com   ಪಟ್ನಾ, ನ.22: ವಂದೇ ಭಾರತ್‌ ರೈಲಿಗೆ ಮತ್ತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎಂದು ರೈಲ್ವೆ ರಕ್ಷಣಾ ಪಡೆ  ಅಧಿಕಾರಿಗಳು ತಿಳಿಸಿದ್ದಾರೆ. ಕಲ್ಲು ತೂರಿದ ಪರಿಣಾಮ ರೈಲಿನ ಕಿಟಕಿ ಗಾಜುಗಳು ಬಿರುಕು ಬಿಟ್ಟಿವೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಗಯಾ ಆರ್‌ಪಿಎಫ್‌ ತಂಡವು ವಿಶೇಷ ತಂಡವೊಂದನ್ನು ರಚಿಸಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಆರೋಪಿಗಳನ್ನು ಪತ್ತೆ

ವಂದೇಬಾರತ್ ರೈಲಿಗೆ ಕಲ್ಲು ತೂರಾಟ: ಇಬ್ಬರು ಅರೆಸ್ಟ್ Read More »

ಕರ್ನಾಟಕ

‘ಬಿಜೆಪಿಯವರು 3 ಕ್ಷೇತ್ರಗಳಲ್ಲಿ ಗೆಲ್ಲುವ ಹಗಲುಗನಸು ಕಾಣುತ್ತಿದ್ದರು’- ಎಂ.ಬಿ ಪಾಟೀಲ್

(ನ್ಯೂಸ್ ಕಡಬ)newskadaba.com   ಬೆಂಗಳೂರು, ನ.22: ಬಿಜೆಪಿಯವರು 3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದರು. ಇದೀಗ ಜನರು ಅವರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆಯಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ 18 ಸಾವಿರ ಲೀಡ್ ಇದೆ. ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಈ 3 ಕ್ಷೇತ್ರದಲ್ಲಿಯೂ ನಾವು ಗೆಲ್ಲುತ್ತೇವೆ ಎಮದು ವಿಶ್ವಾಸ ವ್ಯಕ್ತಪಡಿಸಿದರು. ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,. ಬೊಮ್ಮಾಯಿ ವಿರುದ್ದ ಅಲ್ಪಸಂಖ್ಯಾತ ಅಭ್ಯರ್ಥಿ ಇದ್ದಾರೆ

‘ಬಿಜೆಪಿಯವರು 3 ಕ್ಷೇತ್ರಗಳಲ್ಲಿ ಗೆಲ್ಲುವ ಹಗಲುಗನಸು ಕಾಣುತ್ತಿದ್ದರು’- ಎಂ.ಬಿ ಪಾಟೀಲ್ Read More »

ಕರ್ನಾಟಕ

ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ದಾಸ್ತಾನು ಕಡ್ಡಾಯ: ಈಶ್ವರ ಖಂಡ್ರೆ

(ನ್ಯೂಸ್ ಕಡಬ)newskadaba.com   ಬೆಂಗಳೂರು, ನ.23: ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ವಿಷ ನಿವಾರಕ ಚುಚ್ಚುಮದ್ದು ಸಾಕಷ್ಟು ದಾಸ್ತಾನು ಇರುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು. ಪಶ್ಚಿಮ ಘಟ್ಟಕ್ಕೆ ಸ್ಥಳೀಯವಾಗಿರುವ ನಾಲ್ಕು ಹೊಸಕಾಳಿಂಗ ಸರ್ಪ ಪ್ರಭೇದಗಳ ಆವಿಷ್ಕಾರದ ಘೋಷಣೆಯನ್ನು ಉದ್ಘಾಟಿಸಿ ಮಾತನಾಡಿದ ಖಂಡ್ರೆ, ಆಸ್ಪತ್ರೆಗಳಲ್ಲಿ ವಿಷ ನಿವಾರಕಗಳು ಲಭ್ಯವಿದ್ದರೂ, ಜನರಲ್ಲಿ ಅವುಗಳ ಬಳಕೆ ಮತ್ತು ಮಾಹಿತಿಯ ಬಗ್ಗೆ ಅರಿವು ಸೀಮಿತವಾಗಿದೆ.

ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ದಾಸ್ತಾನು ಕಡ್ಡಾಯ: ಈಶ್ವರ ಖಂಡ್ರೆ Read More »

ಕರಾವಳಿ

ಕೋವಿಡ್ ವರದಿ ಬಗ್ಗೆ ವಿವಾದಾತ್ಮಕ ಹೇಳಿಕೆ; ನ್ಯಾಯಮೂರ್ತಿಗಳಿಗೆ ಕ್ಷಮೆ ಕೋರಿದ ಸಚಿವ ಪ್ರಹ್ಲಾದ್ ಜೋಶಿ!*

(ನ್ಯೂಸ್ ಕಡಬ)newskadaba.com   ನವದೆಹಲಿ, ನ.22: ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟ ವರದಿ ಬಗ್ಗೆ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರಿಗೆ ನೇರವಾಗಿ ಪತ್ರ ಬರೆದು ಕ್ಷಮೆ ಕೋರಿದ್ದಾರೆ. ಈ ಹಿಂದೆ ರಾಜ್ಯ ವಿಧಾನಸಭೆ ಉಪ ಚುನಾವಣೆ ವೇಳೆ ಸಚಿವರು ಪ್ರಚಾರ ಭಾಷಣದಲ್ಲಿ ‘ಬಿಜೆಪಿ ಸರ್ಕಾರದ ಅವಧೀಲಿ ಕೋವಿಡ್ ಹಗರಣ ನಡೆದಿದೆ’ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸುವಾಗ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ವರದಿ ಬಗ್ಗೆ ಪ್ರಸ್ತಾಪಿಸಿದ್ದು ವಿವಾದ ಹುಟ್ಟು

ಕೋವಿಡ್ ವರದಿ ಬಗ್ಗೆ ವಿವಾದಾತ್ಮಕ ಹೇಳಿಕೆ; ನ್ಯಾಯಮೂರ್ತಿಗಳಿಗೆ ಕ್ಷಮೆ ಕೋರಿದ ಸಚಿವ ಪ್ರಹ್ಲಾದ್ ಜೋಶಿ!* Read More »

ಕರ್ನಾಟಕ

ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧನ

(ನ್ಯೂಸ್ ಕಡಬ)newskadaba.com   ಮುಂಬೈ, ನ.22: ಕುಖ್ಯಾತ ರೌಡಿಶೀಟರ್ ದಾವೂದ್  ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನ.22ರಂದು ಬಂಧಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್, ಬಂಧಿತ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿಯಾಗಿದ್ದಾನೆ. ಈತ ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದ ವೆಳೆ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ದಾವೂದ್ ನನ್ನು ಬಂಧಿಸಲು ಮುಂದಾಗಿದೆ. ಕಾರ್ಯಾಚರಣೆ ವೇಳೆ ದಾವೂದ್

ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧನ Read More »

ಕರಾವಳಿ

ರಾಮಕುಂಜ: ಕೆರೆ ನೀರಿಗೆ ಬಿದ್ದ ಕಾಡುಕೋಣ..!

(ನ್ಯೂಸ್ ಕಡಬ) newskadaba.com ರಾಮಕುಂಜ, ಡಿ. 13. ಕಾಡುಕೋಣವೊಂದು ಕೆರೆ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಘಟನೆ ವರದಿಯಾಗಿದೆ.   ಕೆರೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಕಾಡುಕೋಣವನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದು, ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಕೆರೆಯ ಒಂದು ಭಾಗದ ಮಣ್ಣು ಜರಿದು ಕಾಡುಕೋಣ ಮೇಲಕ್ಕೆ ಬರಲು ದಾರಿಮಾಡಿಕೊಟ್ಟರು. ಮೇಲೆ ಬಂದ ಕಾಡುಕೋಣ ತೋಟದ ಮಧ್ಯೆ ಓಡಿ ಕಾಡಿನತ್ತ ತೆರಳಿದೆ ಎಂದೆನ್ನಲಾಗಿದೆ.

ರಾಮಕುಂಜ: ಕೆರೆ ನೀರಿಗೆ ಬಿದ್ದ ಕಾಡುಕೋಣ..! Read More »

ಕರಾವಳಿ, ಕರ್ನಾಟಕ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ ➤ ಆರೋಪಿ ಪೊಲೀಸ್ ಬಲೆಗೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 13. ತೆಂಗಿನಕಾಯಿ ಕೀಳಲೆಂದು ಬಂದವ ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   ಬಂಧಿತನನ್ನು ಮಂಜನಾಡಿ ನಿವಾಸಿ ಬಶೀರ್(28) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ತೆಂಗಿನಕಾಯಿ ಕೀಳುವ ಕೆಲಸ ಮಾಡುತ್ತಿದ್ದ ಈತ, ಬಾಲಕಿಯ ಮನೆಮಂದಿಗೆ ಪರಿಚಿತ. ಈತ ಸೋಮವಾರದಂದು ಮಧ್ಯಾಹ್ನದ ವೇಳೆ ತೆಂಗಿನಕಾಯಿ ತೆಗೆಯುವುದಾಗಿ ಹೇಳಿಕೊಂಡು ಬಂದಿದ್ದು, ಈ ವೇಳೆ ಬಾಲಕಿ ಒಂಟಿಯಾಗಿರುವುದನ್ನು ಕಂಡು

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ ➤ ಆರೋಪಿ ಪೊಲೀಸ್ ಬಲೆಗೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

‘ಅಮೃತ ಸಿರಿ’ ಯೋಜನೆಯಡಿ ಕೊಯ್ಲದ ಜಾನುವಾರು ತಳಿ ಸಂವರ್ಧನಾ ಕೇಂದ್ರದಲ್ಲಿ ಕರು ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13. “ಅಮೃತ ಸಿರಿ” ಯೋಜನೆಯಡಿ ಕೊಯ್ಲದ  ಜಾನುವಾರು ತಳಿ ಸಂವರ್ಧನಾ ಕೇಂದ್ರದಲ್ಲಿ ಲಭ್ಯವಿರುವ 75 ಹೆಣ್ಣು ಕರು ಹಾಗೂ ಗಡಸುಗಳನ್ನು ಅಂದಾಜು 375ರಿಂದ 625 ರೂ.ಗಳಿಗೆ ರೈತರಿಗೆ,  ದೇವದಾಸಿಯರಿಗೆ, ವಿಧವೆಯರಿಗೆ, ವಾರ್ ವಿಡೋಸ್ ಹಾಗೂ ಶವಸಂಸ್ಕಾರ ಕಾರ್ಮಿಕರಿಗೆ ವಿತರಿಸಲಾಗುತ್ತದೆ.   ಇದಕ್ಕೆ ಸಂಬಂಧಿಸಿದ ತಾಲೂಕು ಪಶು ಆಸ್ಪತ್ರೆಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಇದೇ ಡಿ.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಬಂಟ್ವಾಳ

‘ಅಮೃತ ಸಿರಿ’ ಯೋಜನೆಯಡಿ ಕೊಯ್ಲದ ಜಾನುವಾರು ತಳಿ ಸಂವರ್ಧನಾ ಕೇಂದ್ರದಲ್ಲಿ ಕರು ವಿತರಣೆ Read More »

ಕರಾವಳಿ, ಕರ್ನಾಟಕ
Scroll to Top