Ashitha Soodlu

ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತ ➤ ನಾಲ್ವರು ನಾಪತ್ತೆ.!!

(ನ್ಯೂಸ್ ಕಡಬ) newskadaba.com ಕೊಡಗು, ಆ.06:  ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ಕಳೆದ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ತಲಕಾವೇರಿಯ ದೇವಾಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಕುಸಿದು ಬಿದ್ದಿದೆ.   ಪರಿಣಾಮ ಮನೆಯಲ್ಲಿದ್ದ ನಾಲ್ವರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಘಟನ ಸ್ಥಳಕ್ಕೆ ಎನ್‍ಡಿ ಆರ್ ಎಫ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಚರಣೆ ನಡೆಸುತ್ತಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವವರನ್ನ ರಕ್ಷಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ಅಪಾಯಕಾರಿ ಸ್ಥಳಗಳಲ್ಲಿ ಇರುವುದನ್ನು […]

ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತ ➤ ನಾಲ್ವರು ನಾಪತ್ತೆ.!! Read More »

ಕರಾವಳಿ, ಕರ್ನಾಟಕ

ಚಾರ್ಮಾಡಿ ಘಾಟ್ ಹೆದ್ದಾರಿಗೆ ಬಂಡೆ ಕುಸಿತ ತೆರವು ಕಾರ್ಯಚರಣೆ ಯಶಸ್ವಿ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ, ಆ.6: ಮಂಗಳೂರು – ಚಿಕ್ಕಮಗಳೂರು ರಸ್ತೆಯ ಚಾರ್ಮಾಡಿ ಘಾಟ್ 2 ,3 ನೇ ಮತ್ತು 6ನೇ ತಿರುವಿನಲ್ಲಿ ಭೂ ಕುಸಿತದಿಂದಾಗಿ ಬುಧವಾರ ಸಂಜೆ ಬೃಹದಾಕಾರದ ಎರಡು ಬಂಡೆಗಳು ಕುಸಿದು ಬಿದ್ದಿದೆ. ತಕ್ಷಣ ಕಾರ್ಯಪ್ರವೃತರಾದ ಅಧಿಕಾರಿಗಳು, ಬುಧವಾರ ಸಂಜೆ ಏಳರ ಬಳಿಕ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ರಾತ್ರಿ ಜೆಸಿಬಿ ಮುಖಾಂತರ ತೆರವು ಕಾರ್ಯ ನಡೆಸಿದ್ದಾರೆ. ಸದ್ಯ ಒಂದು ವಾಹನ ಸಾಗುವಷ್ಟು ದಾರಿ ತೆರವು ಮಾಡಲಾಗಿದೆ. ಯಾವುದೇ ಅಪಾಯ, ಹಾನಿ

ಚಾರ್ಮಾಡಿ ಘಾಟ್ ಹೆದ್ದಾರಿಗೆ ಬಂಡೆ ಕುಸಿತ ತೆರವು ಕಾರ್ಯಚರಣೆ ಯಶಸ್ವಿ Read More »

ಕರಾವಳಿ

ಶಾಸಕ ಹರೀಶ್ ಪೂಂಜ ರವರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.06:  ಬೆಳ್ತಂಗಡಿಯ ಯುವ ಶಾಸಕ ಹರೀಶ್ ಪೂಂಜಾ ರಿಗೆ ಕೊರೋನಾ ಪಾಸಿಟಿವ್ ದೃಡವಾಗಿದೆ. ಕೋವಿಡ್ 19 ಪರೀಕ್ಷೆಯಲ್ಲಿ ಹರೀಶ್ ಪೂಂಜಾರಿಗೆ ಪಾಸಿಟಿವ್ ಎಂದು ವರದಿ ಬಂದಿದೆ.   ಸಣ್ಣ ಮಟ್ಟಿನ ಜ್ವರ ಹೊರತುಪಡಿಸಿ ಬೇರೆ ಯಾವುದೇ ಲಕ್ಷಣಗಳಿಲ್ಲದೆ ಇರುವುದರಿಂದ ಶಾಸಕ ಹರೀಶ್ ಪೂಂಜಾ ರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಇಚ್ಚಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಶಾಸಕ ಹರೀಶ್ ಪೂಂಜಾ ಫೇಸ್ಬುಕ್

ಶಾಸಕ ಹರೀಶ್ ಪೂಂಜ ರವರಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ

ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಅವಘಡ ➤ ಎಂಟು ರೋಗಿಗಳು ಸಜೀವ ದಹನ

(ನ್ಯೂಸ್ ಕಡಬ) newskadaba.com ಕಡಬ, ಆ.06:  ಅಹಮದಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟು ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಗುರುವಾರ ತಿಳಿಸಿದ್ದಾರೆ. ಮೃತರಲ್ಲಿ ಐವರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದಾರೆ. ಅವರು ಅಹಮದಾಬಾದ್‌ನ ನವರಂಗಪುರ ಪ್ರದೇಶದ ನಿಗದಿಪಡಿಸಿದ ಕೋವಿಡ್-19 ಶ್ರೇಯ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.   ಗುರುವಾರ ಮುಂಜಾನೆ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 40 ಕೋವಿಡ್-19 ರೋಗಿಗಳನ್ನು

ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಅವಘಡ ➤ ಎಂಟು ರೋಗಿಗಳು ಸಜೀವ ದಹನ Read More »

ರಾಷ್ಟ್ರೀಯ ನ್ಯೂಸ್

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ➤ ಬಿಳಿನೆಲೆಯಲ್ಲಿ ವಿಶೇಷ ಪೂಜೆ , ಕೈಕಂಬದಲ್ಲಿ ಅಶ್ವತ್ಥ ಗಿಡ ನೆಟ್ಟ ಯುವಕರು

 (ನ್ಯೂಸ್ ಕಡಬ) newskadaba.com ಕಡಬ, ಆ.05: ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡಲು ಕೊನೆಗೂ ಸಮಯ ಕೂಡಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಗೆ ತೆರಳಿ, ರಾಮ ಮಂದಿರ ನಿರ್ಮಾಣ ಮಾಡಲು ಶಿಲಾನ್ಯಸ ನೆರವೇರಿಸಿದ್ದಾರೆ. ಅನೇಕ ಸಾಧು-ಸಂತರು, ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದರು. ಕಡಬ ವಲಯದ ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನ ನೆರವೇರಿಸಿದ್ದಾರೆ.   ಕಡಬ ತಾಲೂಕಿನ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.  ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಯುವಕರ ತಂಡವೊಂದು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ➤ ಬಿಳಿನೆಲೆಯಲ್ಲಿ ವಿಶೇಷ ಪೂಜೆ , ಕೈಕಂಬದಲ್ಲಿ ಅಶ್ವತ್ಥ ಗಿಡ ನೆಟ್ಟ ಯುವಕರು Read More »

ಕರಾವಳಿ, ಕರ್ನಾಟಕ

ಅಯೋಧ್ಯೆ ರಾಮಮಂದಿರ ಶಂಕು ಸ್ಥಾಪನೆ ➤1990 ರಲ್ಲಿ ಅಯೋಧ್ಯೆಗೆ ತೆರಳಿದ್ದ ಕಡಬದ ರಾಮ ಭಕ್ತರು

(ನ್ಯೂಸ್ ಕಡಬ) newskadaba.com ಕಡಬ, ಆ.05:  ಕೋಟ್ಯಾಂತರ ಭಾರತೀಯರ ಕನಸಾಗಿರುವ ಅಯೋಧ್ಯೆ ರಾಮ ಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಲಕ್ಷಾಂತರ ರಾಮ ಭಕ್ತರ ಐದು ದಶಕಗಳ ಕನಸು ನನಸಾಗುವ ಶುಭದಿನ ಇದೀಗ ಬಂದಿದೆ.   ಕಡಬ ತಾಲೂಕಿನ ಕೊಂಬಾರಿನಲ್ಲಿ ‘ಅಯೋಧ್ಯೆದಾರ್’ ಎಂದೇ ಗೌರವಪೂರ್ವಕವಾಗಿ ಎಲ್ಲರಿಂದಲೂ ಕರೆಯಲ್ಪಡುತ್ತಿದ್ದವರು ಶ್ರೀಯುತ ಮಾಯಿಲಪ್ಪ. 1990 ರಲ್ಲಿ ಆಯೋಧ್ಯೆಗೆ ತೆರಳಿ ರಾಮ ಮಂದಿರ ಕನಸು ಕಂಡ ರಾಮ ಭಕ್ತ ಕೊಂಬಾರು ಗದ್ದೆ ಶ್ರೀ ಮಾಯಿಲಪ್ಪ ಗೌಡರು. ಇವರು ಈಗ ರಾಮ

ಅಯೋಧ್ಯೆ ರಾಮಮಂದಿರ ಶಂಕು ಸ್ಥಾಪನೆ ➤1990 ರಲ್ಲಿ ಅಯೋಧ್ಯೆಗೆ ತೆರಳಿದ್ದ ಕಡಬದ ರಾಮ ಭಕ್ತರು Read More »

ಕರಾವಳಿ, ಕರ್ನಾಟಕ

ನಾಳೆ ಕಡಬ,ನೆಲ್ಯಾಡಿ,ಸುಬ್ರಹ್ಮಣ್ಯದಲ್ಲಿ ವಿದ್ಯುತ್ ಕಡಿತ

(ನ್ಯೂಸ್ ಕಡಬ) newskadaba.com.ಕಡಬ,ಆ.5: 33 ಕೆ.ವಿ ಪುತ್ತೂರು ಕಡಬ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ನಡೆಯುತ್ತಿರುವುದರಿಂದಾಗಿ ನಾಳೆ ಬೆಳಗ್ಗೆ  10 ರಿಂದ  ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಹಾಗಾಗಿ 33/11 ಕೆವಿ ಕಡಬ, ನೆಲ್ಯಾಡಿ ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದ್ದಾರೆ.

ನಾಳೆ ಕಡಬ,ನೆಲ್ಯಾಡಿ,ಸುಬ್ರಹ್ಮಣ್ಯದಲ್ಲಿ ವಿದ್ಯುತ್ ಕಡಿತ Read More »

ಕರಾವಳಿ

ಪತ್ನಿಯನ್ನು ಕೊಲೆಮಾಡಿ ಪತಿ ಪರಾರಿ➤ ಅನಾಥವಾದ ಕಂದಮ್ಮಗಳು

(ನ್ಯೂಸ್ ಕಡಬ) newskadaba.com.ಬೆಂಗಳೂರು,ಆ.5: ತಡರಾತ್ರಿ ಪತ್ನಿಯನ್ನು ಕೊಂದು ಪತಿಯೊಬ್ಬ ಪರಾರಿಯಾಗಿದ್ದು. ಅವರ ಇಬ್ಬರು ಮಕ್ಕಳು ಅಮ್ಮನ ಶವದ ಜತೆಯೇ ರಾತ್ರಿಯಿಡೀ ಕಳೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾರತಹಳ್ಳಿಯ ಮುನೇಕೊಳಲು ಸಮೀಪದ 26 ವರ್ಷದ ಸಂಧ್ಯಾ ಎನ್ನುವವರು ಕೊಲೆಯಾದವರು. ತಡರಾತ್ರಿ ಸಂಧ್ಯಾ ಅವರು ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ ನಾಗೇಶ್‌ ಅವರನ್ನು ಕೊಲೆ ಮಾಡಿದ್ದ. ತಮ್ಮ ತಾಯಿ ಸತ್ತಿದ್ದಾಳೆ ಎಂಬ ಅರಿವೂ ಇಲ್ಲದ ಇಬ್ಬರು ಮಕ್ಕಳು ಅಲ್ಲಿಯೇ ರಾತ್ರಿಯಿಡೀ ಕಳೆದಿದ್ದಾರೆ. ಬೆಳಗ್ಗೆ ಮೂರು ವರ್ಷದ ಮಗು ಎದ್ದಾಗ ತಾಯಿ ರಕ್ತದ

ಪತ್ನಿಯನ್ನು ಕೊಲೆಮಾಡಿ ಪತಿ ಪರಾರಿ➤ ಅನಾಥವಾದ ಕಂದಮ್ಮಗಳು Read More »

ಕರ್ನಾಟಕ

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಭೂಮಿ ಪೂಜೆ ಹಿನ್ನಲೆ ➤ ಅಭಯ ಆಂಜನೇಯ ಸನ್ನಿಧಾನದಲ್ಲಿ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಆ.05:  ಅಯೋಧ್ಯೆಯಲ್ಲಿ ಇಂದು ಶ್ರೀ ರಾಮ ಮಂದಿರದ ಭೂಮಿ ಪೂಜೆ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಭ್ರಹ್ಮಣ್ಯದಲ್ಲಿನ ಅಭಯ ಆಂಜನೇಯ ಸ್ವಾಮಿ ಸನ್ನಿಧಾನದಲ್ಲಿ 108 ಬಾರಿ ಶ್ರೀ ರಾಮ ಜೈ ರಾಮ್ ಮಂತ್ರ ಹೇಳುವ ಮೂಲಕ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು.

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಭೂಮಿ ಪೂಜೆ ಹಿನ್ನಲೆ ➤ ಅಭಯ ಆಂಜನೇಯ ಸನ್ನಿಧಾನದಲ್ಲಿ ವಿಶೇಷ ಪೂಜೆ Read More »

ಕರಾವಳಿ

ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆ ➤ ನಿರ್ವಿಘ್ನವಾಗಿ ನಡೆಯಲು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com.ಬಂಟ್ವಾಳ ,ಆ.5: ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿಪೂಜೆ ನೆರವೇರಿಸಲಿದ್ದು. ಈ ಕಾರ್ಯಕ್ರಮ ಯಶಸ್ವಿಯಾಗಲಿ ಮುಂದೆ ಮಂದಿರ ನಿರ್ಮಾಣ ಕಾರ್ಯವು ಕೂಡ ಸೂಸುತ್ರವಾಗಿ ನಡೆಯಲೆಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ಬಂಟ್ವಾಳ ವತಿಯಿಂದ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಅಯೋಧ್ಯೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕರವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್

ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆ ➤ ನಿರ್ವಿಘ್ನವಾಗಿ ನಡೆಯಲು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ Read More »

ಕರಾವಳಿ
Scroll to Top