Ashitha Soodlu

ಬಿಳಿನೆಲೆ: ಅಕ್ರಮ ಶೆಡ್ ವಿವಾದಕ್ಕೆ ತೆರೆ

(ನ್ಯೂಸ್‌ ಕಡಬ) newskadaba.com ಕಡಬ, ಆ.20. ಬಿಳಿನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಅಕ್ರಮ ಶೆಡ್ ನಿರ್ಮಾಣದ ವಿವಾದಕ್ಕೆ ಕೊನೆಗೂ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ 20 ಅನಧಿಕೃತ ಅಂಗಡಿಗಳಿಗೆ ಇಂದು ಬೀಗ ಜಡಿದಿದ್ದಾರೆ. ಈ ಮೂಲಕ ಕಾಂಗ್ರೇಸ್ – ಬಿಜೆಪಿ ಪಕ್ಷಗಳ ಗುದ್ದಾಟಕ್ಕೆ ತೆರೆ ಬಿದ್ದಂತಾಗಿದೆ. ಅಕ್ರಮ ಶೆಡ್ ತೆರವಿಗಾಗಿ ಹಲವು ದಿನಗಳಿಂದ ಬಿಳಿನೆಲೆ ಪಂಚಾಯತ್ ಮುಂಭಾಗದಲ್ಲಿ ಅಂಗಡಿ ಮಾಲಕಿ ಅನ್ನಪೂರ್ಣ ಕುಟುಂಬ ಪ್ರತಿಭಟನೆ ಮುಂದುವರಿಸುತ್ತಲೇ ಬಂದಿದ್ದರು. ಇದು ಪ್ರತಿಭಟನೆ ಸೇರಿದಂತೆ […]

ಬಿಳಿನೆಲೆ: ಅಕ್ರಮ ಶೆಡ್ ವಿವಾದಕ್ಕೆ ತೆರೆ Read More »

ಕರಾವಳಿ, ಕರ್ನಾಟಕ

ಸುಳ್ಯ: ಮಹಡಿಯಿಂದ ಜಿಗಿದು ಯುವಕ ಮೃತ್ಯು

(ನ್ಯೂಸ್‌ ಕಡಬ) newskadaba.com ಸುಳ್ಯ, ಆ. ೨೦. ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರು ನಾಲ್ಕನೇ ಮಹಡಿಯಿಂದ ಕೆಳಕ್ಕೆ ಜಿಗಿದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೊಲ್ಲಮೊಗ್ರದ ಸತ್ತಾರ್ (೩೫ ವರ್ಷ) ಎಂದು ತಿಳಿದು ಬಂದಿದೆ. ಮಾನಸಿಕ ಅಸ್ವಸ್ಥರಾಗಿದ್ದ ಇವರು, ಎರಡು ದಿನಗಳ ಹಿಂದೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಸಂಜೆ ೪.೩೦ರ ವೇಳೆಗೆ ಇವರು ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡ

ಸುಳ್ಯ: ಮಹಡಿಯಿಂದ ಜಿಗಿದು ಯುವಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com ಪುತ್ತೂರು, ಆ. 20. ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ನಡೆದಿದೆ. ಮೃತರನ್ನು ಅಮ್ಚಿನಡ್ಕ ದಿ.ಮುತ್ತಪ್ಪ ಗೌಡ ಅವರ ಪತ್ನಿ ಸಾವಿತ್ರಿ(೭೪ವ) ಎಂದು ಗುರುತಿಸಲಾಗಿದೆ. ಅವರು ಅವರು ಹುಲ್ಲು ತರಲೆಂದು ತೋಟಕ್ಕೆ ಹೋದವರು ತೋಟದಲ್ಲಿರುವ ಕೆರೆಗೆ ಬಿದ್ದ ವಿಚಾರ ತಿಳಿದು ಸಂಬಂಧಿಕರು ಸ್ಥಳೀಯರು ಸೇರಿ ಇವರನ್ನು ಕೆರೆಯಿಂದ ಮೇಲಕ್ಕೆತ್ತಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ರರು. ಅಲ್ಲಿ ವೈದ್ಯರ ಪರೀಕ್ಷೆ ನಂತರ ಆಕೆ ಮೃತಪಟ್ಟಿರುವ ಕುರಿತು ತಿಳಿಸಿದ್ದರು. ಸಾವಿತ್ರಿಯವರು

ಪುತ್ತೂರು: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕೊರೊನಾ ಎಫೆಕ್ಟ್: ಸಂಕಷ್ಟದಲ್ಲಿ ಬಿಸಿಯೂಟ ನೌಕರರು! ಉದ್ಯೋಗ ಇಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಹಿಳೆಯರು

(ನ್ಯೂಸ್‌ ಕಡಬ) newskadaba.com ಸುಬ್ರಹ್ಮಣ್ಯ, ಆ.20. ಜಗತ್ತಿನಾದ್ಯಂತ ಕೊರೋನಾ ಅಬ್ಬರದಿಂದಾಗಿ ಆರ್ಥಿಕವಾಗಿ ಎಲ್ಲರೂ ಕುಗ್ಗಿ ಹೋಗಿದ್ದಾರೆ. ಸರಕಾರ ಕೆಲವರಿಗೆ ಪರಿಹಾರ ನೀಡಿದರೆ, ಕೆಲವರಿಗೆ ಇನ್ನೂ ಸಿಕ್ಕಿಲ್ಲ. ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಮದ್ಯಾಹ್ನ ಅನ್ನ ಹಾಕುವ ಕೈಗಳು ಪರಿಹಾರದ ನಿರೀಕ್ಷೆಯಲ್ಲಿದ್ದು, ಇದೀಗ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೋವಿಡ್ 19 ಕೊರೊನಾ ಸೋಂಕಿನಿಂದಾಗಿ ಇಡೀ ದೇಶವನ್ನೇ ಸುಮಾರು ಎರಡೂವರೆ ತಿಂಗಳ ಕಾಲ ಲಾಕ್‍ಡೌನ್ ಮಾಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ವರ್ಗದ ಜನತೆ ತೀರಾ ಸಂಕಷ್ಟವನ್ನು ಅನುಭವಿಸಿದ್ದರು. ಸರಕಾರ ಕೆಲ

ಕೊರೊನಾ ಎಫೆಕ್ಟ್: ಸಂಕಷ್ಟದಲ್ಲಿ ಬಿಸಿಯೂಟ ನೌಕರರು! ಉದ್ಯೋಗ ಇಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಹಿಳೆಯರು Read More »

ಕರಾವಳಿ

ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಡಬ ಕಾಂಗ್ರೇಸ್‍ ವತಿಯಿಂದ ತನಿಖೆಗೆ ಆಗ್ರಹ

(ನ್ಯೂಸ್‌ ಕಡಬ) newskadaba.com ಆ. 20. ರಾಜ್ಯ ಸರಕಾರ ಜಾರಿಗೆ ತಂದಿರುವ ʼರೈತ ವಿರೋಧಿ ಭೂಸುಧಾರಣಾ ಕಾಯ್ದೆʼಯ ತಿದ್ದುಪಡಿ , ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಯ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಕೊರೋನಾ ನಿಯಂತ್ರಣದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ತನಿಖೆಯನ್ನು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಅಗ್ರಹಿಸಿ ಗುರುವಾರ ಕಡಬ ಬ್ಲಾಕ್ ಕಾಂಗ್ರೇಸ್ ವತಿಯಿಂದ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು. ಕಡಬ ತಹಶೀಲ್ದಾರ್ ಕಛೇರಿ ಎದುರು ಸೇರಿದ ಕಾಂಗ್ರೇಸ್ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕಡಬ

ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಡಬ ಕಾಂಗ್ರೇಸ್‍ ವತಿಯಿಂದ ತನಿಖೆಗೆ ಆಗ್ರಹ Read More »

ಕರಾವಳಿ, ಕರ್ನಾಟಕ

ಮಳೆಗೆ ಮನೆಯ ಮೇಲ್ಛಾವಣಿ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ಎಂಟು ಮಂದಿ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,20:  ಮಳೆಯ ಅವಾಂತರಕ್ಕೆ ಈಗಾಗಲೇ ಕರಾವಳಿ ನುಗಿದೆ. ಕಳೆದ ದಿನ ಸುರಿದ ಭಾರಿ ಗಾಳಿ ಮಳೆಗೆ ಮಂಗಳೂರಿನ ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಇಂದು ಮುಂಜಾನೆ 6 ಗಂಟೆಗೆ ಮನೆಯೊಂದು ಕುಸಿದು ತೀವ್ರ ಮಟ್ಟದ ಹಾನಿಯಾಗಿದೆ.     ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಇಂದು ಮುಂಜಾಣೆ ಮಳೆರಾಯನ ಅವಾಂತರಕ್ಕೆ ಮನೆಯೊಂದು ನೆಲಕಚ್ಚಿದೆ. ನರೇಕಳದ ಕೊರಗಪ್ಪ ಮೂಲ್ಯ ಎಂಬುವರ ಮನೆಯ ಮೇಲ್ಛಾವಣಿ ಏಕಾಏಕಿಯಾಗಿ ಕುಸಿದು ಬಿದ್ದಿದೆ. ಈ ಘಟನೆ ನಡೆದ ವೇಳೆ

ಮಳೆಗೆ ಮನೆಯ ಮೇಲ್ಛಾವಣಿ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ಎಂಟು ಮಂದಿ Read More »

ಕರಾವಳಿ, ಕರ್ನಾಟಕ

ಸುಳ್ಯ: ತಾಲೂಕು ಕಛೇರಿಯಲ್ಲಿ ದೇವರಾಜು ಅರಸುರವರ 105 ನೇ ಜನ್ಮ ದಿನಾಚಾಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 20: ಹಿಂದುಳಿದ ವರ್ಗಗಳ ನೇತಾರ ಹಾಗೂ ದಕ್ಷ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ 105 ನೇ ಜನ್ಮ ದಿನಾಚರಣೆಯನ್ನು ತಾಲೂಕು ಕಛೇರಿ ಸುಳ್ಯದಲ್ಲಿ ಇಂದು ಆಚರಿಸಲಾಯಿತು.   ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸುಳ್ಯ ಇದರ ವಿಸ್ತರಣಾಧಿಕಾರಿಗಳಾದ ವಿಜಯ್‌ ಎಂ.ಪಿ. ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಳ್ಯ: ತಾಲೂಕು ಕಛೇರಿಯಲ್ಲಿ ದೇವರಾಜು ಅರಸುರವರ 105 ನೇ ಜನ್ಮ ದಿನಾಚಾಚರಣೆ Read More »

ಕರಾವಳಿ, ಕರ್ನಾಟಕ

ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಠಿಕಾಣಿ ಹೂಡಿದ ಬೀದಿನಾಯಿಗಳು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 20. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದ್ದ ಬಸ್‌ ಗಳ ಒಳಗೆ ಬೀದಿನಾಯಿಗಳು ಮಲಗಿಕೊಂಡಿರುವುದು  ಕಂಡುಬಂದಿದೆ. ಪ್ರಯಾಣಿಕರೋರ್ವರು ಬಸ್‌ಗೆ ಹತ್ತುವ ವೇಳೆ ನಾಯಿಗಳು ಬಸ್ ಒಳಗಡೆ ಮಲಗಿರುವ ದೃಶ್ಯ ಕಂಡು ಬಂದಿದ್ದು, ಬಸ್ ‌ಬಳಿ ಬಂದ ಪ್ರಯಾಣಿಕರನ್ನು ನಾಯಿಗಳು ಕಚ್ಚಲು ಮುಂದಾಗಿವೆ. ಬಸ್ಸಿನ ಬಾಗಿಲುಗಳನ್ನು ಸರಿಯಾಗಿ ಮುಚ್ಚದಿರುವುದೇ ಬೀದಿ ನಾಯಿಗಳು ಬಸ್ ಏರಿ ಕುಳಿತುಕೊಳ್ಳಲು ಕಾರಣ ಎನ್ನಲಾಗಿದೆ.

ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಠಿಕಾಣಿ ಹೂಡಿದ ಬೀದಿನಾಯಿಗಳು Read More »

ಕರಾವಳಿ

ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ “ಇಂದೋರ್” ಮೊದಲ‌ ಸ್ಥಾನ ➤ ಮೈಸೂರಿಗೆ ತಪ್ಪಿದ ಸ್ವಚ್ಛತಾ ನಗರಿ ಎಂಬ ಗರಿ

(ನ್ಯೂಸ್ ಕಡಬ) newskadaba.com ನವದೆಹಲಿ. ಆ,20:  2016ರಲ್ಲಿ ಆರಂಭವಾದ ಮೊದಲ ಸ್ವಚ್ಛತಾ ಸಮೀಕ್ಷೆಯಲ್ಲಿ ಇಡೀ‌ ದೇಶದಲ್ಲೇ ಸ್ವಚ್ಚತಾ ನಗರ ಎಂಬ ಪ್ರಶಸ್ತಿಗೆ ಭಾಜನವಾಗಿದ್ದ ರಾಜ್ಯದ ಸಾಂಸ್ಕೃತಿಕ ನಗರ ಮತ್ತು ಮೂರನೇ ಅತಿದೊಡ್ಡ ನಗರ ಮೈಸೂರಿಗೆ ಈ ಬಾರಿ ‘ಸ್ವಚ್ಛ ನಗರ’ ಎಂಬ ಹಿರಿಮೆ ಕೈತಪ್ಪಿದೆ.   ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ‌ ಸ್ಥಾನ ಗಳಿಸಿದೆ. ಗುಜರಾತಿನ ಸೂರತ್

ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ “ಇಂದೋರ್” ಮೊದಲ‌ ಸ್ಥಾನ ➤ ಮೈಸೂರಿಗೆ ತಪ್ಪಿದ ಸ್ವಚ್ಛತಾ ನಗರಿ ಎಂಬ ಗರಿ Read More »

ರಾಷ್ಟ್ರೀಯ ನ್ಯೂಸ್

ಹಲ್ಲು ಕಿತ್ತ ಬಳಿಕ ಹೊಲಿಗೆ ಅನಿವಾರ್ಯವೇ?

(ನ್ಯೂಸ್ ಕಡಬ) newskadaba.com  ಹಲ್ಲು ಕೀಳುವುದು ದಂತ ವೈದ್ಯಕೀಯ ಕ್ಷೇತ್ರದ ಒಂದು ಚಿಕಿತ್ಸಾ ವಿಧಾನವಾಗಿದ್ದು, ಹಲ್ಲು ಹುಳುಕಾಗಿ ಪೂರ್ತಿಯಾಗಿ ಹಾಳಾಗಿ ಹೋಗಿದ್ದಲ್ಲಿ ಅಂತಹ ಹಲ್ಲುಗಳನ್ನು ಸ್ಥಳೀಯ ಅರಿವಳಿಕೆ ಚುಚ್ಚುಮದ್ದು ನೀಡಿ ಕೀಳಲಾಗುತ್ತದೆ. ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇ ಬೇಕು ಎಂಬ ಲಿಖಿತವಾದ ನಿಯಮವಿಲ್ಲ. ಆದರೆ ಹಲ್ಲು ಕಿತ್ತ ಬಳಿಕ ಉಂಟಾದ ರಕ್ತಸ್ರಾವ, ರೋಗಿಯ ದೇಹಸ್ಥಿತಿ, ಮನೋಸ್ಥಿತಿ ಮತ್ತು ಹಲ್ಲು ಕಿತ್ತ ವಿಧಾನ ಇವೆಲ್ಲವನ್ನು ದಂತ ವೈದ್ಯರು ಪರಾಮರ್ಶಿಸಿ ಹೊಲಿಗೆ ಹಾಕಬೇಕೇ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ. ಯಾವಾಗ

ಹಲ್ಲು ಕಿತ್ತ ಬಳಿಕ ಹೊಲಿಗೆ ಅನಿವಾರ್ಯವೇ? Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
Scroll to Top