Ashitha Soodlu

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ನವದೆಹಲಿ . ಆ,24:  ಶ್ವಾಸಕೋಶ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಸಚಿವ ರಾಮ್ ವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಭಾನುವಾರ ದೆಹಲಿಯ ಪೋರ್ಟಿಸ್ ಹೃದಯ ಆಸ್ಪತ್ರೆಗೆ ದಾಖಲಿಸಲಾಗಿದೆ.   ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ 2017ರಲ್ಲಿ ಲಂಡನ್​ನಲ್ಲಿ ಆಪರೇಷನ್​ ಮಾಡಲಾಗಿತ್ತು. ನಿನ್ನೆ ಆಸ್ಪತ್ರೆಗೆ ದಾಖಲಾಗಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕೂ ಮೊದಲು ಅವರು ಆ್ಯಂಜಿಯೋಪ್ಲಾಸ್ಟಿಗೆ […]

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲು Read More »

ರಾಷ್ಟ್ರೀಯ ನ್ಯೂಸ್

• ಬೆಳ್ತಂಗಡಿ: ಕಳೆದ ವರ್ಷದ ಪ್ರವಾಹ ಸಂದರ್ಭ ಸಂಗ್ರಹವಾದ ಹಣದ ಲೆಕ್ಕ ನೀಡುವಂತೆ ಕಾಂಗ್ರೆಸ್ ಒತ್ತಾಯ – ಹರೀಶ್ ಪೂಂಜಾ ಕಛೇರಿ ಎದುರು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 24.  ಶಾಸಕ ಹರೀಶ್ ಪೂಂಜ ಅವರು ಕಳೆದ ವರ್ಷ ಉಂಟಾಗಿದ್ದ ಪ್ರವಾಹದ ಸಂದರ್ಭದಲ್ಲಿ ‘ಕಾಳಜಿ ಫಂಡ್’ ಎಂಬ ಹೆಸರಿನಲ್ಲಿ ಸಂಗ್ರಹಿಸಲಾಗಿದ್ದ ಹಣದ ಲೆಕ್ಕ ಕೊಡಿ ಎಂದು ಬೆಳ್ತಂಗಡಿಯಲ್ಲಿ ಶಾಸಕರ ಕಚೇರಿ ಮುಂದೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಮೊದಲು ಮಾಜಿ ಶಾಸಕ ವಸಂತ ಬಂಗೇರ ಅವರ ಕಚೇರಿಯ ಮುಂಭಾಗದಲ್ಲಿ ಜಮಾವಣೆಗೊಂಡು ಪ್ರತಿಭಟನೆಯನ್ನ ನಡೆಸಿದ ಬಳಿಕ, ಶಾಸಕರ ಸರಕಾರಿ ಕಚೇರಿಯ ಎದುರು ಮೆರವಣಿಗೆಯಲ್ಲಿ ತೆರಳಲು ಪ್ರಯತ್ನಿಸಿದ ವೇಳೆ ಪೊಲೀಸರು ಅವರನ್ನು

• ಬೆಳ್ತಂಗಡಿ: ಕಳೆದ ವರ್ಷದ ಪ್ರವಾಹ ಸಂದರ್ಭ ಸಂಗ್ರಹವಾದ ಹಣದ ಲೆಕ್ಕ ನೀಡುವಂತೆ ಕಾಂಗ್ರೆಸ್ ಒತ್ತಾಯ – ಹರೀಶ್ ಪೂಂಜಾ ಕಛೇರಿ ಎದುರು ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಕಡಬದಲ್ಲಿ ಆಗಸ್ಟ್ 27 ಮತ್ತು 28 ರಂದು ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಆ. 24.  ಆಗಸ್ಟ್ 27 ಮತ್ತು 28 ರಂದು ಕಡಬದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ಉಚಿತವಾಗಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ. ಈ ಕಾರ್ಯಕ್ರಮವು ಬೆಳಿಗ್ಗೆ 8.30 ರಿಂದ ಸಂಜೆ 5.00ರ ತನಕ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು  ಶಾಸಕ ಎಸ್. ಅಂಗಾರ ನಡೆಸಲಿದ್ದಾರೆ. ಆಸಕ್ತ ಸಾರ್ವಜನಿಕರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತರಬೇಕಾಗಿ ಬಿಜೆಪಿ ಮಂಡಲ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಡಬದಲ್ಲಿ ಆಗಸ್ಟ್ 27 ಮತ್ತು 28 ರಂದು ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ Read More »

ಕರಾವಳಿ, ಕರ್ನಾಟಕ

ಕಾಲುವೆ ಬಿದ್ದ ವೃದ್ದೆಯನ್ನ ರಕ್ಷಿಸಿದ ಯುವಕ ➤ ಯುವಕನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

(ನ್ಯೂಸ್ ಕಡಬ) newskadaba.com ಬಳ್ಳಾರಿ. ಆ,24:  ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನು ಯುವಕನೊಬ್ಬ ತನ್ನ ಪ್ರಾಣದ ಹಂಗುತೊರೆದು ರಕ್ಷಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಆರ್​ಟಿಓ ಕಚೇರಿಯ ಮುಂಭಾಗದ ಹೆಚ್​ಎಲ್​ಸಿ ಕಾಲುವೆಯಲ್ಲಿ ನಡೆದಿದೆ.     ಅಜಯ್​ ಎಂಬ ಯುವಕ ಅಜ್ಜಿಯನ್ನು ರಕ್ಷಿಸಿದ್ದಾನೆ.ಕಾಲುವೆಗೆ ಇಳಿದು ಮುಖ ತೊಳೆಯಲು ಹೋದ 70 ವರ್ಷದ ವೃದ್ಧೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸುಮಾರು 300 ಮೀಟರ್​ ದೂರ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು. ಅದನ್ನು ಕೆಲವು

ಕಾಲುವೆ ಬಿದ್ದ ವೃದ್ದೆಯನ್ನ ರಕ್ಷಿಸಿದ ಯುವಕ ➤ ಯುವಕನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ Read More »

ಕರ್ನಾಟಕ

ಪಂಜ: ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) ಪಂಜ, ಆ. 24.  ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅನುಷ್ ಎಣ್ಣೆಮಜಲು ಹಾಗೂ  ಅತ್ಯುತ್ತಮ ಶ್ರೇಣಿ ಅಂಕಗಳೊಂದಿಗೆ ಉತ್ತೀರ್ಣರಾದ ಕು|ಆಶಿತಾ ಬಿಟ್ಟಂಗಿಲ ಇವರನ್ನು  ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್  ವತಿಯಿಂದ ಸನ್ಮಾನಿಸಲಾಯಿತು.   ಸ್ಪೋರ್ಟ್ಸ್ ಕ್ಲಬ್ ನ  ಅಧ್ಯಕ್ಷ  ವಿಜಯ್ ಕುಮಾರ್ ಕಾಂಜಿ ಅವರ ನೇತೃತ್ವದಲ್ಲಿ ಹಿರಿಯರಾದ ಧರ್ಮಪಾಲ ಗೌಡ ಸಂಪ್ಯಾಡಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ನ  ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪಂಜ: ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನ Read More »

ಕರಾವಳಿ, ಕರ್ನಾಟಕ

ಕಡಬ: ಪೆರಾಬೆ ಒತ್ತುವರಿ ಸರಕಾರಿ ಭೂಮಿ ತೆರವುಗೊಳಿಸುವಂತೆ ದಲಿತ್ ಸೇವಾ ಸಮಿತಿಯಿಂದ ಆಗ್ರಹ

(ನ್ಯೂಸ್ ಕಡಬ) ಕಡಬ, ಆ. 24.  ಪೆರಾಬೆಯಲ್ಲಿ ಬಾಲಕೃಷ್ಣ ಪೂಜಾರಿ ಎಂಬುವವರು ಒತ್ತುವರಿ ಮಾಡಿಕೊಂಡ ಸರಕಾರಿ ಜಾಗವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ದಲಿತ್ ಸೇವಾ ಸಮಿತಿಯ ವತಿಯಿಂದ ಕಡಬ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಈಗಾಗಲೇ ಈ ಭೂಮಿಗೆ ಸಂಬಂಧಿಸಿದಂತೆ ಎ.ಸಿ.ಯವರು ಯಥಾಸ್ಥಿತಿಯ ಆದೇಶ ನೀಡಿದ್ದಾರಾದರೂ ಇಲ್ಲಿ ಆದೇಶ ಪಾಲನೆಯಾಗುತ್ತಿಲ್ಲ,. ಒಂದು ವಾರದ ಒಳಗೆ ಈ ಸರಕಾರಿ ಭೂಮಿಯನ್ನು ಕಂದಾಯ ಇಲಾಖೆಯ ಸ್ವಾಧೀನಕ್ಕೆ

ಕಡಬ: ಪೆರಾಬೆ ಒತ್ತುವರಿ ಸರಕಾರಿ ಭೂಮಿ ತೆರವುಗೊಳಿಸುವಂತೆ ದಲಿತ್ ಸೇವಾ ಸಮಿತಿಯಿಂದ ಆಗ್ರಹ Read More »

ಕರಾವಳಿ, ಕರ್ನಾಟಕ

ಕಿರಿಮಂಜೇಶ್ವರ ಕೊಡೆರಿಯಲ್ಲಿ ದೋಣಿ ದುರಂತ ➤ ಮೃತಪಟ್ಟ 4 ಮೀನುಗಾರರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿ.ಎಂ

(ನ್ಯೂಸ್ ಕಡಬ) newskadaba.com ಬೈಂದೂರು. ಆ,24:  ಕಿರಿಮಂಜೇಶ್ವರ ಕೊಡೆರಿಯಲ್ಲಿ ದೋಣಿ ದುರಂತದಲ್ಲಿ ಮೃತಪಟ್ಟ ನಾಲ್ಕು ಮೀನುಗಾರರ ಕುಟುಂಬಗಳಿಗೆ ತಲಾ 6 ಲಕ್ಷ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.     ಪರಿಹಾರದ ಆದೇಶದ ಪ್ರತಿಯನ್ನು ಸಂತ್ರಸ್ತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ತಿಳಿಸಿದ್ದಾರೆ. ಇಂದು ಸಚಿವರು ಶಾಸಕ ಬಿ ಎಂ ಸುಕುಮಾರ್ ಶೆಟ್ಟಿ ಅವರೊಂದಿಗೆ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಆಗಸ್ಟ್ 16

ಕಿರಿಮಂಜೇಶ್ವರ ಕೊಡೆರಿಯಲ್ಲಿ ದೋಣಿ ದುರಂತ ➤ ಮೃತಪಟ್ಟ 4 ಮೀನುಗಾರರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿ.ಎಂ Read More »

ಕರಾವಳಿ, ಕರ್ನಾಟಕ

ಕೊಂಕಣಿ ನಾಟಕಕಾರ ‘ಬೆನ್ನ ರುಜೈ’ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಕೊಂಕಣಿ ರಂಗಭೂಮಿ ಪ್ರಿಯರಿಗೆ “ಬೆನ್ನ ರುಜೈ” ಎಂದೇ ಜನಪ್ರಿಯವಾಗಿರುವ ಕೊಂಕಣಿ ನಾಟಕ ಕಾರ್ಯಕರ್ತ ಮತ್ತು ನಾಟಕಕಾರ ಬೆನೆಡಿಕ್ಟ್ ಮಿರಾಂದ ಇಂದು ನಿಧನರಾದರು. ಮಾರ್ಚ್ 21, 1946 ರಂದು ಜನಿಸಿದ ಇವರು, ಪ್ರಸಿದ್ಧ ನಾಟಕಕಾರ ಹಾಗೂ ಪತ್ರಕರ್ತರೂ ಹೌದು. ಅವರು ಕಳೆದ 5 ದಶಕಗಳಿಂದ ಹಲವಾರು ಕೊಂಕಣಿ ಜನಪ್ರಿಯ ನಾಟಕಗಳಲ್ಲಿ ನಟಿಸಿದ್ದಾರೆ. ನಾಟಕಕಾರನಾಗಿ ಅವರು ಅನೇಕ ಸಾಮಾಜಿಕ ಮತ್ತು ಧಾರ್ಮಿಕ ನಾಟಕಗಳನ್ನು ಬರೆದು ಪ್ರದರ್ಶಿಸಿದ್ದಾರೆ. ಅವರು ಒಟ್ಟು ಐದು ಸಾಮಾಜಿಕ

ಕೊಂಕಣಿ ನಾಟಕಕಾರ ‘ಬೆನ್ನ ರುಜೈ’ ನಿಧನ Read More »

ಕರಾವಳಿ, ಕರ್ನಾಟಕ

ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿ, ಸವಾರೆ ತಂದೆ ಮೃತ್ಯು ➤ ಮದುವೆ ಮನೆಯಲ್ಲಿ ಸೂತಕದ ಛಾಯೆ

(ನ್ಯೂಸ್ ಕಡಬ) newskadaba.com ಕಡಬ. ಆ,24:  ಅವರು ಮನೆಯ ಹಿರಿಯ ಮಗಳ ಮದುವೆ ತಯಾರಿಯಲ್ಲಿದ್ದರು.  ದೇವಸ್ಥಾನಕ್ಕೆ ತೆರಳಿ ಹಿಂತಿರುತ್ತಿದ್ದವರಿಗೆ ಅಲ್ಲಿ ಆಗಿದ್ದೇ ಬೇರೆ,  ನಾಯಿಯೊಂದು ಅಡ್ಡ ಬಂದ ಪರಿಣಾಮ ಹೋಂಡಾ ಆಕ್ಟಿವಾ ಪಲ್ಟಿಯಾಗಿ ಹಿಂಬದಿ ಸವಾರ ಮೃತಪಟ್ಟ ಘಟನೆ ಇಂದು ಮಾಣಿ -ಮೈಸೂರು ಹೆದ್ದಾರಿಯ ಕೌಡಿಚ್ಚಾರು ಸಮೀಪದ ಸೇತುವೆ ಬಳಿ ಕಳೆದ ದಿನ ನಡೆದಿದೆ. ಮದುವೆ ಮನೆಯಲ್ಲಿಗೆ ಸೂತಕದ ಛಾಯೆ ಆವರಿಸಿದೆ.  ಮೃತಪಟ್ಟವರನ್ನು ಮಾಡ್ನೂರು ಗ್ರಾಮದ ಸಸ್ಪೇಟಿ ನಿವಾಸಿ 53 ವರ್ಷದ ಕೃಷ್ಣಪ್ಪ ನಾಯ್ಕ ಎಂದು ಗುರುತಿಸಲಾಗಿದೆ.

ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿ, ಸವಾರೆ ತಂದೆ ಮೃತ್ಯು ➤ ಮದುವೆ ಮನೆಯಲ್ಲಿ ಸೂತಕದ ಛಾಯೆ Read More »

ಕರ್ನಾಟಕ

ಮಂಗಳೂರು: ಕುಟುಂಬಿಕರಿಂದ ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಯಿತ್ತಿದ್ದ ವೇಳೆ ಏಕಾಏಕಿ ಕೋಮಾದಿಂದ ಎದ್ದ ವೃದ್ದೆ

(ನ್ಯೂಸ್ ಕಡಬ) ಮೂಡುಬಿದಿರೆ, ಆ. 24. ಕಳೆದ ಹಲವು ದಿನಗಳಿಂದ ಕೋಮಾ ಸ್ಥಿತಿಗೆ ಜಾರಿದ್ದ ವೃದ್ದೆಯೋರ್ವರು ಇನ್ನು ಬದುಕುವುದು ಕಷ್ಟಸಾಧ್ಯ ಎಂದು ವೈದ್ಯರು ಹೇಳಿದ್ದರಿಂದ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕುತೂಹಲಕಾರಿ ಘಟನೆಯೊಂದು ಸಂಭವಿಸಿದೆ. ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಪಟ್ಟೆಮನೆಯ ಹೇಮಾವತಿ ರೈ (80) ಎಂಬವರು  ಕೋಮಾಕ್ಕೆ ಜಾರಿ ಮರಣಾವಸ್ಥೆಯಲ್ಲಿದ್ದ ಇವರು ಇನ್ನು ಬದುಕುವುದು ಕಷ್ಟವೆಂದು ವೈದ್ಯರು ಹೇಳಿ ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದರು. ಆಕೆಯ ಸಂಬಂಧಿಕರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ  ಕೊನೆಗಳಿಗೆಯಲ್ಲಿ ಆಂಬುಲೆನ್ಸ್‌ ಮೂಲಕ

ಮಂಗಳೂರು: ಕುಟುಂಬಿಕರಿಂದ ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಯಿತ್ತಿದ್ದ ವೇಳೆ ಏಕಾಏಕಿ ಕೋಮಾದಿಂದ ಎದ್ದ ವೃದ್ದೆ Read More »

ಕರಾವಳಿ
Scroll to Top